ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಬೆಂಗಳೂರಿನ ಬಸವೇಶ್ವರ ನಗರ ದಲ್ಲಿರುವ ಪುಣ್ಯ ಹಾಸ್ಪಿಟಲ್ ಆವರಣದಲ್ಲಿ ದಿನಾಂಕ 07/11/2021 ಡಾ.MP.Manjunath ಸಮಾಜ ಚಿಂತಕರು, ಸಮಾಜ ಸೇವೆಕರು, ಮಹಾದಾನಿಗಳು ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಔಷದಿ, ಉಚಿತವಾಗಿ ಆಹಾರ ಸಾಮಗ್ರಿಗಳ ವಿತರಣೆ, ಬಡವರಿಗೆ ಧನಸಹಾಯ ಮಾಡಿ ಜನಾನುರಾಗಿರುವರ ಅಧ್ಯಕ್ಷರು, ಅಖಿಲ ಕರ್ನಾಟಕ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಹಿಳಾ ಘಟಕ, ಪುಣ್ಯ ಹಾಸ್ಪಿಟಲ್ ಮತ್ತು ಭಾರತೀಯ ರೆಡ್ ಕ್ರಾಸ್ ರಕ್ತನಿಧಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಅಬಕಾರಿ ಸಚಿವರಾದ ಶ್ರೀಯುತ ಕೆ.ಗೋಪಾಲಯ್ಯನವರು ನೆರವೇರಿಸಿದರು. ಕಾರ್ಯಕ್ರಮದ ಆಯೋಜಕರು, ರೂವಾರಿಗಳಾದ ಡಾ. ಎಂ.ಪಿ.ಮಂಜುನಾಥ್ ರವರು ಆಗಮಿಸಿದ ಅತಿಥಿಗಳಿಗೆ ಆತ್ಮೀಯ ಸ್ವಾಗತ ಕೋರಿ ಮಾತನಾಡಿದ ಇವರು ಪುನೀತ್ ರಾಜ್ ಈ ದಿನ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಡಿದ್ದು, ಈ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿರುವುದು ಸಂತಸದ ಸಂಗತಿ.ಒಬ್ಬರ ರಕ್ತದಾನ 4 ಜನರಿಗೆ ಜೀವದಾನ ದಯವಿಟ್ಟು ಪ್ರತಿಯೊಬ್ಬರೂ ರಕ್ತದಾನ ಮಾಡಿ. ಇದರಿಂದ ನಿಮ್ಮಲ್ಲಿ ಹೊಸ ರಕ್ತ ಉತ್ಪನ್ನವಾಗಿ ಆರೋಗ್ಯ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾನ್ಯ ಅಬಕಾರಿ ಸಚಿವರಾದ ಶ್ರೀಯುತ ಕೆ.ಗೋಪಾಲಯ್ಯನವರು ಮಾತನಾಡಿ, ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಈ ದಿನ ಪುಣ್ಯ ಹಾಸ್ಪಿಟಲ್ ನಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ. ಪುನೀತ್ ರವರ ಅಕಾಲಿಕ ಮರಣ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಇವರ ನೆನಪು ಅಮರ. ಈ ಪುಣ್ಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಪುಣ್ಯವೆಂದೆ ಭಾವಿಸುವೆ ಎಂದರು. ತದನಂತರ ಮಾತನಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಪುನೀತ್ ರವರ ಸಾವು ನೋವಿನ ಸಂಗತಿಯಾಗಿದ್ದು ಅವರ ಸ್ಮರಣೆಯ ಪ್ರಯುಕ್ತ ಈ ದಿನ ಪುಣ್ಯ ಹಾಸ್ಪಿಟಲ್ ನಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ಮಹಿಳೆಯರು ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ದಾನಿಗಳಿಗೆ ಧನ್ಯವಾದಗಳು. ಕಾರ್ಯಕ್ರಮದ ಆಯೋಜಕರಾದ ಡಾ.ಎಂ.ಪಿ.ಮಂಜುನಾಥ್ ರವರ ಸೇವೆ ಸಮಾಜಕ್ಕೆ ಅಪಾರವಾಗಿದೆ. ಕೊರೋನ ಸಂದರ್ಭದಲ್ಲಿ ಸಾವಿರಾರು ಜನರಿಗೆ ಅನ್ನದಾನ ಮಾಡಿದ ಪುಣ್ಯ ಇವರದು. ಇವರ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದ್ದರು. ಎಲ್ಲರೂ ರಕ್ತದಾನ ಮಾಡಿ ಇನ್ನೋರ್ವ ಜೀವ ಉಳಿವಿಗೆ ಕಾರಣರಾಗಿ ಎಂದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸದಸ್ಯರು ಮತ್ತು ಪದಾಧಿಕಾರಿಗಳು ಮತ್ತು ಅಖಿಲ ಕರ್ನಾಟಕ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ರಕ್ತದಾನ ಮಾಡಿ ಮಾದರಿಯಾದರು. ಡಾ.ಪುಣ್ಯವತಿ ನಾಗರಾಜ್ ರವರು ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ದಯವಿಟ್ಟು ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕೆಂದು ಮನವಿ ಮಾಡಿದರು. ಈ ಸುಂದರ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಶಿವಕುಮಾರ್ ನಾಗರ ನವಿಲೆ, ಡಾ. ನಾಗರಾಜ್. ಪುಟ್ಟಸ್ವಾಮಿ, ಧನುಶ್ರೀ, ರವಿಕುಮಾರ್, ರವಿ ಸಂತು,ಸೌಭಾಗ್ಯ ಹಾಗೂ ರಾಜು ಚಂದ್ರಶೇಖರ್ ಉಪಸ್ಥಿತರಿದ್ದರು. ವರದಿ : ವಿನಯಕುಮಾರ