ಜನರಿಗೆ ವಾಹನಗಳ ಚಾಲನೆಯನ್ನು ಕಲಿಯಬೇಕು ಎಂಬ ಹಂಬಲ ಇರುತ್ತದೆ. ಈಗ ವಾಹನ ಚಾಲನಾ ತರಬೇತಿಯನ್ನು ಪಡೆಯಬೇಕು ಎನ್ನುವವರಿಗೆ ಕಹಿಯಾಗುವ ಹಾಗೂ ಜೇಬಿಗೆ ಕತ್ತರಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಹೌದು, ರಾಜ್ಯದಲ್ಲಿರುವ ಡ್ರೖೆವಿಂಗ್ ಸ್ಕೂಲ್ ಗಳಲ್ಲಿ (driving training: ) ತರಬೇತಿ ಶುಲ್ಕವನ್ನು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ; ಪಿಎಂ ವಿಶ್ವಕರ್ಮ ಯೋಜನೆ; ಈ ಯೋಜನೆಯಲ್ಲಿ ಸಿಗುತ್ತೆ 15 ಸಾವಿರ ಸಹಾಯಧನ; ಯಾರೆಲ್ಲಾ ಈ ಯೋಜನೆಗೆ ಅರ್ಹರು, ಅರ್ಹತೆಗಳೇನು; ಸವಲತ್ತು ಪಡೆಯಲು ಹೀಗೆ ನೋಂದಣಿ ಮಾಡಿಕೊಳ್ಳಿ
10 ವರ್ಷಗಳ ನಂತರ ದರ ಹೆಚ್ಚಿಸಲು ಅನುಮತಿ:
ಚಾಲನಾ ತರಬೇತಿ ಶಾಲೆಗಳ ನಿರಂತರ ಹೋರಾಟದಿಂದಾಗಿ 10 ವರ್ಷಗಳ ನಂತರ ದರ ಹೆಚ್ಚಿಸಲು ಅನುಮತಿ ಸಿಕ್ಕಿದೆ. ಇನ್ನು ವಾಹನ ಚಾಲನಾ ತರಬೇತಿ 2024 ರ ಜನವರಿ 01 ರಿಂದ ದುಬಾರಿಯಾಗಲಿದೆ.
4 ವರ್ಗದಲ್ಲಿ ಶುಲ್ಕ ನಿಗದಿ:
ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ.
ಇದನ್ನೂ ಓದಿ; ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್; ಡಿಪ್ಲೋಮಾ, ಪದವೀಧರರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ಇನ್ನು ಮುಂದೆ ಕಾರು ಕಲಿಯಲು ಪಾವತಿಸಬೇಕಾದ ಹಣವೆಷ್ಟು?:
ಇನ್ನು ಮುಂದೆ ಎಲ್.ಎ.ಎಲ್ (lal) ಗೆ 350 ರೂ. ಹಾಗೂ ಡಿಎಲ್ (dl) ಗೆ 1,000 ರೂ. ಪ್ರತ್ಯೇಕವಾಗಿ ಆರ್ಟಿಒ ಕಚೇರಿಗೆ ಪಾವತಿಸಬೇಕು. ಅಂದರೆ ಒಬ್ಬ ಅಭ್ಯರ್ಥಿ ಡ್ರೖೆವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
Driving Training: ಇನ್ಮುಂದೆ ವಾಹನ ಚಾಲನಾ ತರಬೇತಿ ದುಬಾರಿ
driving training: ಇನ್ಮುಂದೆ ವಾಹನ ಚಾಲನಾ ತರಬೇತಿ ದುಬಾರಿ
ಪ್ರಸ್ತುತ ಕಾರು ಡ್ರೖೆವಿಂಗ್ ಟ್ರೖೆನಿಂಗ್ ಗೆ (driving training: ) 4 ಸಾವಿರ ರೂಪಾಯಿ ಶುಲ್ಕ ಇದೆ. ಎಲ್.ಎಲ್, ಡಿಎಲ್ ಎಲ್ಲವೂ ತಾವೇ ಮಾಡಿಸಿಕೊಡುವುದಾಗಿ ಡ್ರೖೆವಿಂಗ್ ಸ್ಕೂಲ್ ಗಳು (driving training: ) 8 ಸಾವಿರ ರೂಪಾಯಿಗಳವರೆಗೆ ಅಭ್ಯರ್ಥಿಯಿಂದ ಪಡೆಯುತ್ತಿರುವ ಬಗ್ಗೆ ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದರೆ ಹೆಚ್ಚುವರಿಯಾಗಿ 4 ಸಾವಿರ ರೂ. ಸ್ವೀಕರಿಸುತ್ತಿದ್ದಾರೆ.
ಇದನ್ನೂ ಓದಿ; ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ; 1,25,000ರ ವರೆಗೆ ಮಾಸಿಕ ವೇತನ; ನೇರ ಸಂದರ್ಶನದ ಮೂಲಕ ಆಯ್ಕೆ
ಹಾಗಾದರೆ ಶುಲ್ಕ ಏರಿಕೆ ಯಾಕೆ?:
ಡ್ರೖೆವಿಂಗ್ ಸ್ಕೂಲ್ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಸುರೆನ್ಸ್, ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಪರಿಗಣಿಸಿ ತರಬೇತಿ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ತಯಾರಿಸಿ 2 ವರ್ಷಗಳ ಹಿಂದೆಯೇ ಇಲಾಖೆಗೆ ಸಲ್ಲಿಸಿತ್ತು. ಈಗ ವರದಿ ಅಂಗೀಕರಿಸಿ ಇದೀಗ ಶುಲ್ಕ ಜಾಸ್ತಿ ಮಾಡಲಾಗಿ
ಎಷ್ಟು ಶುಲ್ಕ ಪರಿಷ್ಕರಣೆ ಆಗಿದೆ?:
ಮೋಟಾರು ಸೈಕಲ್:
2,200 ಯಿಂದ 3,000 ಆಗಿರುತ್ತದೆ.
ಆಟೋ ರಿಕ್ಷಾ:
3,000 ಯಿಂದ 4,000 ಆಗಿರುತ್ತದೆ.
ಕಾರು:
4,000 ಯಿಂದ 7,000 ಆಗಿರುತ್ತದೆ.
ಸಾರಿಗೆ ವಾಹನ:
6,000 ಯಿಂದ 9,000 ಆಗಿರುತ್ತದೆ.
ಇದನ್ನೂ ಓದಿ; 25 ಸಾವಿರ ರೂ ಟಾಟಾ ಕಂಪನಿಯಿಂದ ವಿದ್ಯಾರ್ಥಿವೇತನ; ಯಾರು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು; ಹೇಗೆ ಅರ್ಜಿ ಸಲ್ಲಿಸುವುದು, ದಾಖಲೆಗಳು ಯಾವುದು?
ವಾಹನ ತರಬೇತಿ ಸ್ಕೂಲ್ ಗಳಿಗೆ ನಿಬಂಧನೆ ಏನು?:
* ಪಠ್ಯಸೂಚಿಯಂತೆ ಅಭ್ಯರ್ಥಿ ಪೂರ್ಣ ತರಬೇತಿ ಪಡೆದಾಗಲೇ ನಮೂನೆ 5 ರಲ್ಲಿ ಪತ್ರ ನೀಡಬೇಕು.
* ಅಭ್ಯರ್ಥಿ ವಾಹನ ಚಾಲನೆ ಮಾಡಿದ ಸಮಯವನ್ನು ನಮೂನೆ-15 ರಲ್ಲಿ ನಮೂದಿಸಬೇಕು.
* ಅಧಿಕಾರಿಗಳು ಶಾಲೆಗೆ ತಪಾಸಣೆಗೆ ಬಂದಾಗ ಎಲ್ಲ ದಾಖಲೆಗಳನ್ನು ತಪ್ಪದೇ ಒದಗಿಸಬೇಕು.
* ಶಾಲೆಯ ಪ್ರತಿನಿಧಿ ಆರ್ಟಿಒಗೆ (rto) ಬಂದಾಗ ಸಮವಸ್ತ್ರದಲ್ಲಿರಬೇಕು. ನಾಮಫಲಕ ಧರಿಸಿರಬೇಕು.
* ಶಾಲೆಯ ಪ್ರತಿನಿಧಿ ಅಭ್ಯರ್ಥಿಯ/ಇನ್ನಿತರರ ಪರವಾಗಿ ಮಧ್ಯವರ್ತಿಯಾಗಿ ವರ್ತಿಸುವಂತಿಲ್ಲ.
* ನಿಬಂಧನೆ ಉಲ್ಲಂಘಿಸಿದಲ್ಲಿ ಶಾಲೆಯ ಅನುಜ್ಞಾ ಪತ್ರ ಅಮಾನತು ಅಥವಾ ರದ್ದುಗೊಳ್ಳುತ್ತದೆ ಎಂದು ಹೇಳಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಿ
1