ಪ್ಲಾಯಿಂಗ್ ಆಫೀಸರ ಪ್ರಣತಿ ಸದಾನಂದ ಬರ್ಗಿ.

ಫೈಯಿಂಗ್ ಆಫೀಸರ್ ಆದ ಅಂಕೋಲಾದ ಪ್ರಣತಿ



ಭಾರತೀಯ
ವಾಯುಸೇನೆಯ ಪ್ರೈಯಿಂಗ್ ಅಧಿಕಾರಿಯಾಗಿ ಪ್ರಣತಿ ಬರ್ಗಿ ನಿಯೋಜನೆಗೊಂಡಿದ್ದಾರೆ ವಾಯುಸೇನಾ ಅಕಾಡೆಮಿಯವರು ಆಯೋಜಿಸಿದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥಸಿಂಗ್ ಸೇರಿದಂತೆ ಗಣ್ಯಾತೀಗಣ್ಯರ ‘ಸಮ್ಮುಖದಲ್ಲಿ ಪ್ಲಾಯಿಂಗ್ ಆಫೀಸರ್ ಆಗಿ ನೇಮಿಸಲ್ಪಟ್ಟಿದ್ದಾಳೆ.

ದೇಶದ ರಕ್ಷಣಾ ಸೇವೆಯ ಸಂಕಲ್ಪ

ಮಹಾರಾಷ್ಟ್ರದ ಠಾಣಾದಲ್ಲಿ ವಾಸಿಸುತ್ತಿರುವ ಪ್ರಣತಿಯವರ ತಂದೆ ಮೂಲತಃ ಕುಮಟಾ ತಾಲೂಕಿನ ಬರ್ಗಿ ಗ್ರಾಮದವರು.ಶ್ರೀಮತಿ ಸಂಧ್ಯಾ ಮತ್ತು ಸದಾನಂದ ಗಣಪತ್‌ ರಾವ್ ಬರ್ಗಿ ದಂಪತಿಗಳ ಸುಪುತ್ರಿಯಾಗಿರುವ ಪ್ರಣತಿ ತುಂಬಾ ಚುರುಕಿನ ವಿದ್ಯಾರ್ಥಿನಿ.

ಬಾಲ್ಯದಿಂದಲೇ ದೇಶಾಭಿಮಾನವನ್ನು ಮೈಗೂಡಿಸಿಕೊಂಡಿದ್ದ ಪ್ರಣತಿ ಬರ್ಗಿ ಭಾರತೀಯ ನಾಗರಿಕ ಸೇವೆ ಅಥವಾ ಭಾರತೀಯ ರಕ್ಷಣಾ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಸಂಕಲ್ಪಿಸಿಕೊಂಡವಳು.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ, ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ಪರೀಕ್ಷೆ ಪೂರ್ಣಗೊಳಿಸಿರುವ ಪ್ರಣತಿ ದೆಹಲಿಯ ಪ್ರತಿಷ್ಠಿತ ವಾಜಿರಾಮ್ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದರು. ಕ್ರೀಡಾಪಟುವಾಗಿರುವ ಪ್ರಣತಿ ಬರ್ಗಿ ಉತ್ತಮ ಓಟಗಾರ್ತಿ, ಕಠಿಣ ಸವಾಲುಗಳನ್ನು ಸ್ವೀಕರಿಸಿ ಸಾಧನೆ ತೋರುವ ವಿಶಿಷ್ಟ ವ್ಯಕ್ತಿತ್ವದ ಪ್ರಣತಿ ರಾಷ್ಟ್ರಮಟ್ಟದ ಕ್ರೀಡಾಕೂಡದಲ್ಲಿ ನಾಲ್ಕು ಪದಕಗಳನ್ನು ಪಡೆದುಕೊಳ್ಳುವುದರೊಂದಿಗೆ ಅತ್ಯುತ್ತಮ ಕ್ರೀಡಾಪಟು ಎಂಬುದನ್ನು ಸಾಭೀತುಪಡಿಸಿದವರು.

ಪ್ಲಾಯಿಂಗ್ ಆಫೀಸರ್ ವೈಶ್ಯ ಸಮಾಜದ ಪ್ರಥಮ ಯುವತಿ

ದೇಶದ ರಕ್ಷಣಾ ಸೇವೆಯ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಸಿಡಿಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಳು. ಭಾರತೀಯ ವಾಯುಸೇನೆಯ ಅಧಿಕಾರಿಗಳ ಆಯ್ಕೆ ಕೈಗೊಳ್ಳುವ ಆಪ್ ಕಾಟ್

ಪರೀಕ್ಷೆಯನ್ನು ಪೂರ್ಣಗೊಳಿಸಿರುವ ಪ್ರಣತಿ ವಾಯುಸೇನೆಯ ಅಧಿಕಾರಿಯಾಗಿ ಭರ್ತಿ ಹೊಂದಿದ್ದಾರೆ. ಕಳೆದ 6 ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ರಕ್ಷಣಾ ಸಚಿವಾಲಯದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದೌಪತಿ ಮುರ್ಮು ಅವರು ಪ್ರಣತಿ ಬರ್ಗಿಯವರ ವ್ಯಕ್ತಪಡಿಸಿದ ಅನಿಸಿಕೆ- ಅಭಿಪ್ರಾಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿರುವುದನ್ನಿ ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ಲಾಯಿಂಗ್ ಆಫೀಸರ್ ಆಗಿ ನಿಯೋಜನೆಗೊಂಡಿರುವ ಪ್ರಣತಿ ಬರ್ಗಿ ಇವರು ವೈಶ್ಯ ಸಮಾಜದ ಪ್ರಥಮ ಯುವತಿಯಾಗಿ ಗುರುತಿಸಿಕೊಂಡಿದ್ದಾಳೆ.

ರಕ್ಷಣಾ ಸಚಿವ ರಾಜನಾಥಸಿಂಗ್‌ ಸಮ್ಮುಖದಲ್ಲಿ ನಿಯೋಜನೆ

ಹೈದರಾಬಾದನಲ್ಲಿ ವಾಯುಸೇನಾ ಅಕಾಡೆಮಿಯವರು ಡಿಸೆಂಬರ 17 ರ ರವಿವಾರದಂದು ಆಯೋಜಿಸಿರುವ ಪಾಸಿಂಗ್ ಔಟ್ ಪರೇಡ್‌ನ ಭವ್ಯ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥಸಿಂಗ್, ವಾಯುಸೇನೆಯ ಮಹಾದಂಡನಾಯಕ ತಿವಾರಿ ಸೇರಿದಂತೆ ಗಣ್ಯಾತೀಗಣ್ಯರ ಸಮ್ಮುಖದಲ್ಲಿ ಪ್ರಣತಿ ಬರ್ಗಿ ಪ್ಲಾಯಿಂಗ್ ಅಧಿಕಾರಿಯಾಗಿ ನಿಯೋಜನೆಗೊಂಡಿರುವುದು ಜಿಲ್ಲೆಗೆ ಹಿರಿಮೆಗೆ ಗರಿಮೂಡಿಸಿದಂತಾಗಿದೆ.

https://www.facebook.com/reel/293714499805998?mibextid=9drbnH

Related Posts