ಮಾಸ್ತಿ ಕನ್ನಡದ ಆಸ್ತಿ

ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಸಮೃದ್ಧ ಬರಹಗಾರರೊಬ್ಬರು, ಮೂಲತಃ ತಮಿಳಿನವರಾಗಿದ್ದು, ಇಂಗ್ಲಿಷ್ ಪದವೀಧರರಾಗಿದ್ದು, ಕನ್ನಡಮ್ಮನ ಕಿರೀಟಕ್ಕೆ ಜ್ಞಾನ ಪೀಠದ ಗರಿಯನ್ನ ಜೋಡಿಸಿದ ಮೇರು ಸಾಹಿತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ರವರ ಬಗ್ಗೆ ಈಗ ಒಂದು ವಾರದಿಂದ ಬಹಳ ಓದುತ್ತಿದ್ದೇನೆ. ರಂಗಾಯಣದ ‘ಕಾಕನಕೋಟೆ’ ನಾಟಕದ ಬಗ್ಗೆ ಕೇಳಿದಾಗಲಿನಿಂದ, ಕಪಾಟಿನಲ್ಲಿ ಗಮ್ಮನೆ ಕೂತಿದ್ದ ಅವರ ಮತ್ತು ಅವರ ಬಗೆಗಿನ ಪುಸ್ತಕಗಳನ್ನು ಮತ್ತೆ ಹೊರತೆಗೆದಿದ್ದೇನೆ.

ಎಂತಹ ವಿಚಿತ್ರ ಅಲ್ವ?! ಮಾತೃ ಭಾಷೆ ತಮಿಳು, ಓದಿದ್ದು ಆಂಗ್ಲ ಭಾಷಾ ಪದವಿ, ಆದರೆ ಪ್ರೀತಿಸಿದ್ದು, ಸಾಹಿತ್ಯ ಕೃಷಿ ಮಾಡಿದ್ದು ಕನ್ನಡವನ್ನ.. ಅಲ್ಲಿಗೆ, ಕನ್ನಡ ಭಾಷೆ, ಎಷ್ಟು ಶಕ್ತಿಶಾಲಿ ಎಂಬುದನ್ನ ಕಂಡುಕೊಳ್ಳಬಹುದು..

ಸಾಂಪ್ರದಾಯಿಕ ವಿಷಯಗಳನ್ನು ಆಧುನಿಕ ತಂತ್ರಗಳೊಂದಿಗೆ ಬೆರೆಸಿ, ಆಕರ್ಷಣೀಯ ಮತ್ತು ಚಿಂತನೆಗೆ ಪ್ರೇರೇಪಿಸುವ ಕೃತಿಗಳನ್ನು ರಚಿಸುವಲ್ಲಿ ಮಾಸ್ತಿ ನಿಪುಣರಾಗಿದ್ದರು ಎಂಬುದು ಅವರ ಬರವಣಿಗೆಗಳಲ್ಲಿ ಸಾಬೀತಾಗಿದೆ. ಅವರ ಬರವಣಿಗೆಯ ಆಕರ್ಷಕ ಮತ್ತು ಅನನ್ಯ ಶೈಲಿ, ಭಾಷಾ ನೈಪುಣ್ಯ, ಸಹಜವಾದ ಕಥಾಹಂದರ, ಸಮಾಜಮುಖಿ ವಿಷಯಗಳು ಅವರನ್ನು ಸಾರ್ವಕಾಲಿಕ ಬರಹಗಾರರಲ್ಲಿ ಒಬ್ಬರನ್ನಾಗಿ ಮಾಡಿತು.

ಈಗಿನ ಯುವಪೀಳಿಗೆ ಓದಲೇ ಬೇಕಾದ ಸಾಹಿತ್ಯ ಮಾಸ್ತಿಯವರದ್ದು.. ಸುಖಾಸುಮನೆ ಅವರನ್ನ ‘ಕನ್ನಡದ ಆಸ್ತಿ’ ಎಂದು ಕರೆದಿಲ್ಲ ಅಲ್ವ…?! ಈಗಿನ ಪೀಳಿಗೆಯ ಎಷ್ಟೋ ಬರಹಗಾರರು, ಒಂದು ಎರಡು ಪುಸ್ತಕಗಳನ್ನು ಬರೆದು ‘ಸಾಹಿತಿ’ಯೆಂಬ ಹಣೆಪಟ್ಟಿ ಹೊತ್ತು ತಿರುಗುತ್ತಾರೆ. ಅಂತಹದರಲ್ಲಿ, ಸಾಹಿತ್ಯದ ಸಾಂಪ್ರದಾಯಿಕ ರೂಢಿಗಳನ್ನು ಸವಾಲು ಮಾಡುವ ಹೊಸ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಪರಿಚಯಿಸಿದ ಮೇರು ಸಾಹಿತಿಯೊಬ್ಬರನ್ನು ಪರಿಚಯಿಸಿಕೊಳ್ಳುವುದು, ಒಂದು ಸಾಹಿತ್ಯಿಕ ವಿಶ್ವಕೋಶದ ಓದಿನಂತೆ ಭಾಸವಾಗುತ್ತಿದೆ.

ಮಹಾಕಾವ್ಯಗಳು

ಶ್ರೀರಾಮ ಪಟ್ಟಾಭಿಷೇಕ (ಶ್ರೀರಾಮನ ಪಟ್ಟಾಭಿಷೇಕ)
ಕಾದಂಬರಿಗಳು
ಚಿಕವೀರ ರಾಜೇಂದ್ರ
ಸುಬ್ಬಣ್ಣ
ಶೇಷಮ್ಮ
ಚನ್ನಬಸವ ನಾಯಕ

ಕಥೆಗಳು ಮತ್ತು ಸಂಕಲನಗಳು

ಕೆಲವು ಸಣ್ಣ ಕಥೆಗಳು (ಕೆಲವು ಸಣ್ಣ ಕಥೆಗಳು)
ಹಲವಾರು ಸಂಪುಟಗಳಲ್ಲಿ 100 ಸಣ್ಣ ಕಥೆಗಳು
ರಂಗನ ಮದುವೆ
ವೆಂಕಟಶಾಮಿಯ ಪ್ರೇಮ ಪ್ರಸಂಗ
ನಾಟಕಗಳು
ಕಾಕನಕೋಟೆ
ಯಶೋಧರ
ಪುರಂದರದಾಸರು
ಭಟ್ಟರ ಮಗಳು
ಶಾಂತಾ
ಮಂಜುಳೆ

ಆತ್ಮಚರಿತ್ರೆ

ಭಾವ (ಮೂರು ಸಂಪುಟಗಳು)

ಇತರೆ

ಶಾಂತಾ (1923)
ಅರುಣ್ (1924)
ಸುಬ್ಬಣ್ಣ (1928)
ತಾಳಿಕೋಟಿ (1929)
ಕನ್ನಡದ ಸೇವೆ (1930)
ತಾವರೆ (1930)
ಯಶೋಧರ (1933)
ಸಂಕ್ರಾಂತಿ (1969)
ಶೇಷಮ್ಮ (1976)

Thanks to Ramanatha S for reintroducing him to ಕನ್ನಡಿಗರಿಗೆ in the right way 😇🙏

ಕಾಕನಕೋಟೆಯಲ್ಲಿ ಭೇಟಿಯಾಗುವ!

😍😇🙏

Related Posts