ಒಳ್ಳೆಯ ನಗು ಆರೋಗ್ಯದ ಆಸ್ತಿ.

*”ಅಮೂಲ್ಯ ಆಸ್ತಿಗಳು”*
ಒಳ್ಳೆಯ ನಡತೆ ಮನುಷ್ಯನ ಆಸ್ತಿ.
ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.
ಒಳ್ಳೆಯ ಗುಣ ಮನಸ್ಸಿನ ಆಸ್ತಿ.
ಒಳ್ಳೆಯ ಸಂಬಂಧ ಜೀವನದ ಆಸ್ತಿ.
ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.*
ಒಳ್ಳೆಯ ಪ್ರೀತಿ ಹೃದಯದ ಆಸ್ತಿ.
ಒಳ್ಳೆಯ ಆಹಾರ ದೇಹದ ಆಸ್ತಿ.
ಒಳ್ಳೆಯ ಪುಸ್ತಕ ಜ್ಞಾನದ ಆಸ್ತಿ.
ಒಳ್ಳೆಯ ಗುರು ವಿಶ್ವದ ಆಸ್ತಿ.
ಒಳ್ಳೆಯ ನಗು ಆರೋಗ್ಯದ ಆಸ್ತಿ.
ಒಳ್ಳೆಯ ಮಾನವೀಯತೆ ಸಮಾಜದ ಆಸ್ತಿ.
*ಶುಭೋದಯ* 🙏

*ಸೃಷ್ಟಿ*

ಸೃಷ್ಟಿಯನು ಯಾರೂ
ಸೃಷ್ಟಿ ಮಾಡಲಿಲ್ಲ
ಸೃಷ್ಟಿಯನು ಸೃಷ್ಟಿಸಿದ ಮತ್ತಾವ
ದೈವ ಶಕ್ತಿಯೂ ಇಲ್ಲಿಲ್ಲ.

ಸೃಷ್ಟಿ ಎಲ್ಲದಕ್ಕೂ ತಾನೇ
ಮೂಲ ಶಕ್ತಿಯೇ ಆಗಿಹುದಲ್ಲ
ಸೃಷ್ಟಿ ತಾನೆ ಎಲ್ಲವನ್ನೂ
ಕರುಣಿಸಿಹುದಂತೂ ಸುಳ್ಳಲ್ಲ.

ಸೃಷ್ಟಿ ಇರುವುದರಿಂದಲೇ
ಭೂಮಿಯಲ್ಲಿ ಜನ್ಮಿಸಿವೆ ಜೀವಿಗಳೆಲ್ಲ
ಸೃಷ್ಟಿಯನ್ನೇ ಪ್ರಶ್ನಿಸುವ
ಹಕ್ಕು ಕೂಡ ನಮಗಿಲ್ಲ .

ಸೃಷ್ಟಿಯಿಂದಲೆ ಸಮಷ್ಟಿಯು
ಬದುಕಿಗೆ ಅನ್ಯ ಮಾರ್ಗವಿಲ್ಲ
ಸೃಷ್ಟಿಯೊಡನೆ ಹೊಂದಿಕೊಂಡು
ನಡೆಯದೇ ವಿಧಿಯಿಲ್ಲ.

ಸೃಷ್ಟಿ ತಾ ಅನಂತವು
ಅಂತ್ಯ ಎಂಬುದು ಇದಕ್ಕಿಲ್ಲ
ಸೃಷ್ಟಿಯೊಳು ಜನಿಸಿ ಕೆಲಕಾಲ
ಕಾಲವಾಗುವ ಕುಳಗಳು ನಾವೆಲ್ಲ .

ಸೃಷ್ಟಿಯೊಳು ಮೂಕ ಜೀವಿಗಳ
ಬದುಕು ನಾವು ಕಲಿಯಬೇಕಲ್ಲ
ಸೃಷ್ಟಿಯಲ್ಲಿ ಕಳೆಯುವಷ್ಟು ದಿನ
ಅವುಗಳಂತೆ ತೆಪ್ಪಗಿದ್ದರೆ ಒಳಿತೆಲ್ಲ.

✍️ ಡಾ. ಮಹೇಂದ್ರ ಕುರ್ಡಿ

Related Posts