“ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳೊಂದಿಗೆ ನಿಮಗರ್ಪಿಸುತಿರುವೆ ವರ್ಷದ ಪ್ರಥಮ ಕಾವ್ಯಪ್ರಣತೆ. ನಮ್ಮೀ ಅಕ್ಷರಬಂಧ ವರ್ಷವೆಲ್ಲ ನಿರಂತರವಾಗಿರಲಿ. ಈ ಅಕ್ಕರೆ-ಅನುಬಂಧ, ಕಾವ್ಯದೊಲುಮೆ-ನಲುಮೆ ಚಿರಂತನವಾಗಿರಲಿ. ಹೊಸ ವರ್ಷ ನಿಮ್ಮೆಲ್ಲ ಕನಸುಗಳ ಸಾಕಾರವಾಗಿಸಲಿ. ಇಷ್ಟಾರ್ಥಗಳ ಸಿದ್ಧಿಸುತ ಬಾಳು ಬಂಗಾರವಾಗಿಸಲಿ. ಸದಾಶಯಗಳೊಂದಿಗೆ ವರ್ಷದ ಪ್ರಪ್ರಥಮ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ.” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


ಪ್ರಥಮ ಕಾವ್ಯಪ್ರಣತೆ.!

ಹೊಸ ವರುಷದ ಮೊದ ಮೊದಲ ಕವಿತೆ
ಹೊಸ ಕನಸು ಕಾಮನೆಗಳ ಪ್ರಾಂಜಲ ಪ್ರಣತೆ
ನವ ಸ್ಫೂರ್ತಿ ಸದಾಶಯಗಳ ಭಾವದೊರತೆ
ವರ್ಷದಾರಂಭದ ದಿನ ಹಚ್ಚಿದ ಹೃದ್ಯಹಣತೆ.!

ಧರೆಯ ಬೆಳಗಲಿ ನವನೇಸರನ ಹೊಂಗಿರಣ
ಚೈತನ್ಯವಿಟ್ಟು ಹರಸುತ ಚರಾಚರಗಳ ಕಣಕಣ
ಕಾಲಕಾಲಕ್ಕೆ ವರ್ಷಧಾರೆ ಕರುಣಿಸಲಿ ವರುಣ
ತೊಡಿಸುತಲಿ ಇಳೆಗೆ ಸುಗ್ಗಿ ಸಮೃದ್ಧಿ ತೋರಣ.!

ಹಿಗ್ಗಿ ಹರಿಯುತ ಕೆರೆ ತೊರೆ ನಾಲೆ ಹೊನಲು
ತಣಿಸಿ ಸಂಪ್ರೀತವಾಗಿಸಲಿ ಪ್ರತಿ ಜೀವಿಯೊಡಲು
ನಳನಳಿಸುತ ಹೊಲ ಗದ್ದೆ ತೋಟದಿ ಫಸಲು
ಮೂಡಲಿ ಎಲ್ಲೆಡೆ ಸುಭಿಕ್ಷೆ ಸಮಷ್ಟಿಯ ಟಿಸಿಲು.!

ದೂರಾಗಿಸುತ ಸಾಂಕ್ರಾಮಿಕಗಳ ರುಜಿನ ಯಾದಿ
ಬೆಳಕಾಗಿಸಲಿ ಕೀರ್ತಿ ಸಾಧನೆ ಪ್ರಗತಿಯ ಹಾದಿ
ನುಡಿಸುತ ಮಧುಮಧುರ ಭಾವೈಕ್ಯತೆಯ ಸನಾದಿ
ನೆಲೆಯಾಗಿಸಲಿ ಸೌಹಾರ್ದ ಸಾಮರಸ್ಯದ ಶರಧಿ.!

ದಮನಿಸುತ ದ್ವೇಷಾಸೂಯೆ ಮತ್ಸರಗಳ ಸಂತತಿ
ಮೊಳಗಿಸಲಿ ಏಕತೆ ಐಕ್ಯತೆ ಸಮತೆಗಳ ಸಂಕ್ರಾಂತಿ
ಪ್ರಜ್ವಲಿಸುತ ನೀತಿ ಸಂಸ್ಕೃತಿ ಸಂಸ್ಕಾರಗಳ ನಿಯತಿ
ಪಸರಿಸಲಿ ಸಹನೆ ಸಹಿಷ್ಣು ಸನ್ಮತಿ ಸ್ನೇಹ ಸಂಪ್ರೀತಿ.!

ಮಮತೆ ವಾತ್ಸಲ್ಯದಿ ಮನೆ-ಮನೆಯಾಗಲಿ ನಂದನ
ಪ್ರೀತಿ ಬಾಂಧವ್ಯದಿ ಎದೆಯೆದೆಯಾಗಲಿ ಬೃಂದಾವನ
ಕರುಣೆ ಮಮಕಾರ ಸೆಲೆಯಾಗಲಿ ಸಕಲರ ಹೃನ್ಮನ
ಶಾಂತಿ ಹೂಬನವಾಗಲಿ ಜಗದೆಲ್ಲ ಜೀವ-ಜೀವನ.!

ಎ.ಎನ್.ರಮೇಶ್.ಗುಬ್ಬಿ.
ಹೊಸವರ್ಷವೆಂಬುದು ಸಂತೋಷಕೂಟ,

ಕ್ಯಾಲೆಂಡರ್ ಬದಲಾವಣೆಗಷ್ಟೇ ಸೀಮಿತವಾಗದೆ, ಬದುಕಿನ ಹಾದಿಗೊಂದು ಹೊಸದಿಕ್ಕು, ಬಾಳನಡೆಗೊಂದು ನವಹುರುಪು, ಹೊಸ ಸಂಕಲ್ಪ, ನವೋಲ್ಲಾಸಗಳಿಗೆ ನಾಂದಿಯಾದರೆ ಅರ್ಥಪೂರ್ಣ. ಏಕೆಂದರೆ ಪ್ರತಿ ಹೊಸವರ್ಷವೂ ನಮ್ಮನ್ನು ನಮ್ಮ ಬದುಕಿನಂತ್ಯಕ್ಕೆ ಒಂದೊಂದು ಹೆಜ್ಜೆ ಹತ್ತಿರವಾಗಿಸುತ್ತದೆ. ಹಾಗಾಗಿ ಪ್ರತಿ ಹೊಸವರ್ಷಕ್ಕೆ ನಾವು ಬದಲಾಗಬೇಕು. ಬಾಳು ಮಾಗಬೇಕು. ಆಗಲೇ ಜೀವನಕ್ಕೊಂದು ಅರ್ಥ. ಜೀವ ಸಾರ್ಥ. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಸಂಕಲ್ಪ..!

ಮನೆಯ ಗೋಡೆಯಿಂದ ಹಳೆಯ
ಕ್ಯಾಲೆಂಡರ್ ತೆಗೆದು ಹಾಕಬಹುದು..
ಮನದ ಗೋಡೆಯಿಂದ ಹಳೆಯ
ನೆನಪುಗಳ ನೋವು ನಲಿವುಗಳ,
ಇಂದಿಗೆ ತೆಗೆದು ಹಾಕಬಲ್ಲೆವೇ?

ಬದಲಾಗುವುದು ಬರೀ ಕ್ಯಾಲೆಂಡರಷ್ಟೆ..
ನೆರೆಹೊರೆ ಬಂಧು ಬಾಂಧವರು,
ಪರಿಸ್ಥಿತಿ ಪರಿಸರ ಸ್ಥಿತಿಗತಿಗಳು,
ಸುತ್ತಮುತ್ತಲಿನ ಮನಸ್ಥಿತಿಗಳು,
ಬದಲಾದೀತೆ.? ಬದಲಾಯಿಸಬಲ್ಲೆವೇ?

ಹೇಳಲಿಕ್ಕಷ್ಟೇ ಹೊಸ ಇಸವಿ..
ನವ ವರ್ಷ ಹೊಸ ಕಾಲಮಾನ.!
ವಾಸ್ತವದಿ ಮತ್ತದೇ ಬದುಕಿನ
ಏರು ತಗ್ಗುಗಳ ಸ್ಥಾನಮಾನ .!
ಬವಣೆ ಜಂಜಡಗಳ ದಿನಮಾನ.!

ಹೊಸ ವರ್ಷವೆಂದರೆ ಏನೋ,
ಅಸಂಭವಗಳ ಸಂಭವವಲ್ಲ..
ಹೊಸತುಗಳ ಭ್ರಮೆ ಬ್ರಾಂತಿಯಲ್ಲ..
ನವ ಸಂಕಲ್ಪಗಳ ಭೂಮಿಕೆ.!
ಚಿಂತನೆ ಚೈತನ್ಯಗಳ ದೀಪಿಕೆ.!

ಹೊಸ ಉತ್ಸಾಹ ಉಮೇದಿಯಿಂದ,
ಒಳಗಿಂದ ಬದಲಾಗಬೇಕಿದೆ ನಾವು.!
ಹುರುಪಾಗಬೇಕಿದೆ ನಮ್ಮೊಳಗಿನ ತಾವು.!
ಬದುಕೆಂದರೆ ವರ್ಷಗಳ ಮೊತ್ತ.!
ಸಾಫಲ್ಯವಾದರಷ್ಟೇ ಜೀವ ಸಾರ್ಥ.!!

ಎ . ಎನ್ . ರಮೇಶ್ . ಗುಬ್ಬಿ.

“ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳೊಂದಿಗೆ ನಿಮಗರ್ಪಿಸುತಿರುವೆ ವರ್ಷದ ಪ್ರಥಮ ಕಾವ್ಯಪ್ರಣತೆ. ನಮ್ಮೀ ಅಕ್ಷರಬಂಧ ವರ್ಷವೆಲ್ಲ ನಿರಂತರವಾಗಿರಲಿ. ಈ ಅಕ್ಕರೆ-ಅನುಬಂಧ, ಕಾವ್ಯದೊಲುಮೆ-ನಲುಮೆ ಚಿರಂತನವಾಗಿರಲಿ. ಹೊಸ ವರ್ಷ ನಿಮ್ಮೆಲ್ಲ ಕನಸುಗಳ ಸಾಕಾರವಾಗಿಸಲಿ. ಇಷ್ಟಾರ್ಥಗಳ ಸಿದ್ಧಿಸುತ ಬಾಳು ಬಂಗಾರವಾಗಿಸಲಿ. ಸದಾಶಯಗಳೊಂದಿಗೆ ವರ್ಷದ ಪ್ರಪ್ರಥಮ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ.” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಪ್ರಥಮ ಕಾವ್ಯಪ್ರಣತೆ.!

ಹೊಸ ವರುಷದ ಮೊದ ಮೊದಲ ಕವಿತೆ
ಹೊಸ ಕನಸು ಕಾಮನೆಗಳ ಪ್ರಾಂಜಲ ಪ್ರಣತೆ
ನವ ಸ್ಫೂರ್ತಿ ಸದಾಶಯಗಳ ಭಾವದೊರತೆ
ವರ್ಷದಾರಂಭದ ದಿನ ಹಚ್ಚಿದ ಹೃದ್ಯಹಣತೆ.!

ಧರೆಯ ಬೆಳಗಲಿ ನವನೇಸರನ ಹೊಂಗಿರಣ
ಚೈತನ್ಯವಿಟ್ಟು ಹರಸುತ ಚರಾಚರಗಳ ಕಣಕಣ
ಕಾಲಕಾಲಕ್ಕೆ ವರ್ಷಧಾರೆ ಕರುಣಿಸಲಿ ವರುಣ
ತೊಡಿಸುತಲಿ ಇಳೆಗೆ ಸುಗ್ಗಿ ಸಮೃದ್ಧಿ ತೋರಣ.!

ಹಿಗ್ಗಿ ಹರಿಯುತ ಕೆರೆ ತೊರೆ ನಾಲೆ ಹೊನಲು
ತಣಿಸಿ ಸಂಪ್ರೀತವಾಗಿಸಲಿ ಪ್ರತಿ ಜೀವಿಯೊಡಲು
ನಳನಳಿಸುತ ಹೊಲ ಗದ್ದೆ ತೋಟದಿ ಫಸಲು
ಮೂಡಲಿ ಎಲ್ಲೆಡೆ ಸುಭಿಕ್ಷೆ ಸಮಷ್ಟಿಯ ಟಿಸಿಲು.!

ದೂರಾಗಿಸುತ ಸಾಂಕ್ರಾಮಿಕಗಳ ರುಜಿನ ಯಾದಿ
ಬೆಳಕಾಗಿಸಲಿ ಕೀರ್ತಿ ಸಾಧನೆ ಪ್ರಗತಿಯ ಹಾದಿ
ನುಡಿಸುತ ಮಧುಮಧುರ ಭಾವೈಕ್ಯತೆಯ ಸನಾದಿ
ನೆಲೆಯಾಗಿಸಲಿ ಸೌಹಾರ್ದ ಸಾಮರಸ್ಯದ ಶರಧಿ.!

ದಮನಿಸುತ ದ್ವೇಷಾಸೂಯೆ ಮತ್ಸರಗಳ ಸಂತತಿ
ಮೊಳಗಿಸಲಿ ಏಕತೆ ಐಕ್ಯತೆ ಸಮತೆಗಳ ಸಂಕ್ರಾಂತಿ
ಪ್ರಜ್ವಲಿಸುತ ನೀತಿ ಸಂಸ್ಕೃತಿ ಸಂಸ್ಕಾರಗಳ ನಿಯತಿ
ಪಸರಿಸಲಿ ಸಹನೆ ಸಹಿಷ್ಣು ಸನ್ಮತಿ ಸ್ನೇಹ ಸಂಪ್ರೀತಿ.!

ಮಮತೆ ವಾತ್ಸಲ್ಯದಿ ಮನೆ-ಮನೆಯಾಗಲಿ ನಂದನ
ಪ್ರೀತಿ ಬಾಂಧವ್ಯದಿ ಎದೆಯೆದೆಯಾಗಲಿ ಬೃಂದಾವನ
ಕರುಣೆ ಮಮಕಾರ ಸೆಲೆಯಾಗಲಿ ಸಕಲರ ಹೃನ್ಮನ
ಶಾಂತಿ ಹೂಬನವಾಗಲಿ ಜಗದೆಲ್ಲ ಜೀವ-ಜೀವನ.!

ಹೊಸವರ್ಷವೆಂಬುದು ಸಂತೋಷಕೂಟ, ಕ್ಯಾಲೆಂಡರ್ ಬದಲಾವಣೆಗಷ್ಟೇ ಸೀಮಿತವಾಗದೆ, ಬದುಕಿನ ಹಾದಿಗೊಂದು ಹೊಸದಿಕ್ಕು, ಬಾಳನಡೆಗೊಂದು ನವಹುರುಪು, ಹೊಸ ಸಂಕಲ್ಪ, ನವೋಲ್ಲಾಸಗಳಿಗೆ ನಾಂದಿಯಾದರೆ ಅರ್ಥಪೂರ್ಣ. ಏಕೆಂದರೆ ಪ್ರತಿ ಹೊಸವರ್ಷವೂ ನಮ್ಮನ್ನು ನಮ್ಮ ಬದುಕಿನಂತ್ಯಕ್ಕೆ ಒಂದೊಂದು ಹೆಜ್ಜೆ ಹತ್ತಿರವಾಗಿಸುತ್ತದೆ. ಹಾಗಾಗಿ ಪ್ರತಿ ಹೊಸವರ್ಷಕ್ಕೆ ನಾವು ಬದಲಾಗಬೇಕು. ಬಾಳು ಮಾಗಬೇಕು. ಆಗಲೇ ಜೀವನಕ್ಕೊಂದು ಅರ್ಥ. ಜೀವ ಸಾರ್ಥ. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಸಂಕಲ್ಪ..!

ಮನೆಯ ಗೋಡೆಯಿಂದ ಹಳೆಯ
ಕ್ಯಾಲೆಂಡರ್ ತೆಗೆದು ಹಾಕಬಹುದು..
ಮನದ ಗೋಡೆಯಿಂದ ಹಳೆಯ
ನೆನಪುಗಳ ನೋವು ನಲಿವುಗಳ,
ಇಂದಿಗೆ ತೆಗೆದು ಹಾಕಬಲ್ಲೆವೇ?

ಬದಲಾಗುವುದು ಬರೀ ಕ್ಯಾಲೆಂಡರಷ್ಟೆ..
ನೆರೆಹೊರೆ ಬಂಧು ಬಾಂಧವರು,
ಪರಿಸ್ಥಿತಿ ಪರಿಸರ ಸ್ಥಿತಿಗತಿಗಳು,
ಸುತ್ತಮುತ್ತಲಿನ ಮನಸ್ಥಿತಿಗಳು,
ಬದಲಾದೀತೆ.? ಬದಲಾಯಿಸಬಲ್ಲೆವೇ?

ಹೇಳಲಿಕ್ಕಷ್ಟೇ ಹೊಸ ಇಸವಿ..
ನವ ವರ್ಷ ಹೊಸ ಕಾಲಮಾನ.!
ವಾಸ್ತವದಿ ಮತ್ತದೇ ಬದುಕಿನ
ಏರು ತಗ್ಗುಗಳ ಸ್ಥಾನಮಾನ .!
ಬವಣೆ ಜಂಜಡಗಳ ದಿನಮಾನ.!

ಹೊಸ ವರ್ಷವೆಂದರೆ ಏನೋ,
ಅಸಂಭವಗಳ ಸಂಭವವಲ್ಲ..
ಹೊಸತುಗಳ ಭ್ರಮೆ ಬ್ರಾಂತಿಯಲ್ಲ..
ನವ ಸಂಕಲ್ಪಗಳ ಭೂಮಿಕೆ.!
ಚಿಂತನೆ ಚೈತನ್ಯಗಳ ದೀಪಿಕೆ.!

ಹೊಸ ಉತ್ಸಾಹ ಉಮೇದಿಯಿಂದ,
ಒಳಗಿಂದ ಬದಲಾಗಬೇಕಿದೆ ನಾವು.!
ಹುರುಪಾಗಬೇಕಿದೆ ನಮ್ಮೊಳಗಿನ ತಾವು.!
ಬದುಕೆಂದರೆ ವರ್ಷಗಳ ಮೊತ್ತ.!
ಸಾಫಲ್ಯವಾದರಷ್ಟೇ ಜೀವ ಸಾರ್ಥ.!!

ಎ . ಎನ್ . ರಮೇಶ್ . ಗುಬ್ಬಿ.

Related Posts