ಮಂತ್ರ ಹೇಳದೇ, ಜಗತ್ತನ್ನು ಮಧುರವಾಗಿಸಿದಿರಿ..
ಕಾವಿ ತೊಡದೇ, ಜೀವನವನ್ನು ಕಾವ್ಯಮಯವಾಗಿಸಿದಿರಿ..
ತಂತ್ರ ಮಾಡದೇ, ತತ್ವಜ್ಞಾನಿಯಾದಿರಿ..
ಭವಿಷ್ಯ ಹೇಳದೇ, ಭಾರತದ ಭವಿಷ್ಯ ಬರೆದಿರಿ..
ಕಮಂಡಲ ಹಿಡಿಯದೇ, ಭೂಮಂಡಲಕೆ ಬೆಳಕಾದಿರಿ..
ಚೀಟಿ ಕಟ್ಟದೆ, ಭಕ್ತರಿಗೆ ಚಿರಂಜೀವಿಯಾದಿರಿ..
ಆಡಂಬರವಿಲ್ಲದೇ, ಅಧ್ಯಾತ್ಮಕೆ ಪರಮಾತ್ಮನಾದಿರಿ..
ಆತ್ಮ ತೃಪ್ತಿಯ ನಡಿಗೆ ಹೊರಟಿರಿ..
ಓ ಶ್ವೇತವಸ್ತ್ರಧಾರಿ ಸಂತ..
ಕೋಟಿ ಕೋಟಿ ನಮನ..
“ನಡೆದಾಡುವ ದೇವರು ಶತಮಾನದ ಸಂತ”
ಪರಮಾಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ..
ನಿಜಸಂತನಿಲ್ಲದ ಒಂದನೇ ವರ್ಷದ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ಪ್ರಣಾಮಗಳು..🙏🙏🌺🌺