ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಯಲ್ಲಿ ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?. -ಚಾಣಕ್ಯ
ಮಹಾಭಾರತದಲ್ಲಿ ಗರುಡಗರುಡ ಪಕ್ಷಿಗಳ ರಾಜ. ಗರುಡನ ಶಕ್ತಿ ಸಾಮರ್ಥ್ಯವನ್ನು ಮೆಚ್ಚಿದ ಮಹಾವಿಷ್ಣು ಅದನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಶಿಲ್ಪಕಲೆಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ವಿಗ್ರಹಗಳನ್ನು ಹಲವು ವೈಷ್ಣವ ದೇವಾಲಯಗಳಲ್ಲಿ ಕಾಣಬಹುದು.
ಸುಮಾರು 48 ಸೆಂಮೀ. ಉದ್ದದ ಸುಂದರವಾದ ಹಕ್ಕಿಯಿದು. …
ಗರುಡ ಸಾಮಾನ್ಯವಾಗಿ ನದಿ, ಕೊಳ, ಝರಿ, ಸಮುದ್ರ ತೀರ, ನೀರು ತುಂಬಿದ ಗದ್ದೆಗಳು, ಬಂದರು, ಅಣೆಕಟ್ಟುಗಳಿರುವ ಪ್ರದೇಶಗಳಲ್ಲಿ ಒಂಟೊಂಟಿಯಾಗಿ ಕಂಡು ಬರುತ್ತವೆ. …
ಇದರ ಬಳಿ ಅಗಲ ಹಾಗೂ ದುಂಡಗಿನ ಮೂಗಿನ ಹೊಳ್ಳೆಗಳಿವೆ. …
ಕಾಲು ಮತ್ತು ಪಾದಗಳು ಬೂದು ಮಿಶ್ರಿತ ಇಲ್ಲವೆ ಹಸಿರು ಮಿಶ್ರಿತವಾದ ಹಳದಿಬಣ್ಣದಿಂದ ಕೂಡಿವೆ.
ಗರುಡ (ಹಕ್ಕಿ) ಫಾಲ್ಕನಿ ಫಾರ್ಮೀಸ್ ಗಣದ ಆಕ್ಸಿಪಿಟ್ರಿಡೀ ಕುಟುಂಬದ ಬ್ಯೂಟಿಯಾನಿನೀ ಉಪಕುಟುಂಬಕ್ಕೆ ಸೇರಿದ ಒಂದು ಹಕ್ಕಿ. ಹದ್ದು, ಗಿಡುಗ, ಡೇಗೆ, ರಣಹದ್ದು, ಗೂಬೆ ಮುಂತಾದವುಗಳ ಹತ್ತಿರ ಸಂಬಂಧಿ. ಹ್ಯಾಲಿಯಾಸ್ಟರ್ ಇಂಡಸ್ ಇದರ ವೈಜ್ಞಾನಿಕನಾಮ. ಬ್ರಾಹ್ಮಣಿ ಕೈಟ್ ಎಂಬುದು ಇಂಗ್ಲಿಷಿನಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಹೆಸರು.