🌞🌞🌞🌞🌞🌞
ಕಾಲವೆಂಬುದು ಎಲ್ಲಕ್ಕೂ ಮೀರಿದ್ದು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದುಕಿರುವಷ್ಟು ದಿನ, ಸಮಯ ಉತ್ತಮ ಕೆಲಸವನ್ನು ಮಾಡಬೇಕು. ಅವುಗಳು ಮಾತ್ರವೇ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ. ಗಳಿಸಿದ ವಸ್ತುಗಳಾವುವು ನಮ್ಮೊಡನೆ ಬರಲಾರವು.

ಹುಟ್ಟಿದಾಗ ನೀ ಅಳುತ್ತಿದ್ದೆ, ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು, ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

ಹುಟ್ಟಿದಾಗ ಹುಡುಕುವರು ನಿನಗೆ ನೂರೆಂಟು ನಾಮ, ಮಡಿದಮೇಲೆ ಶವ ಎಂದೇ ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ ಮಡಿದಾಗ ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..ಮಡಿದಾಗ ಮಣ್ಣಲ್ಲಿ ಮರಳಾಗಿ ಹೊಗುವ ನೀನು ನಿನ್ನದು ಎನ್ನಲು ನಿನಗೇನಿದೆ,

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?
ಚಿಂತಿಸುವವನಿಗೆ ದೃಷ್ಟಾಂತವಿದೆ

“ಬದುಕಿನಲ್ಲಿ ಈ ಏಳು ಸಂಗತಿಗಳನ್ನು ಯಾವತ್ತೂ ಮರೆಯಬೇಡಿ”

  1. ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ,
    ಯಾಕೆಂದರೆ ಅಲ್ಲೊಬ್ಬನಿಗೆ ಮಾತನಾಡಲೇ ಬರುವುದಿಲ್ಲ.
  2. ಆಹಾರದ ರುಚಿಯ ಬಗ್ಗೆ ದೂರಬೇಡಿ,
    ಕೆಲವರಿಗೆ ಒಂದು ಹೊತ್ತಿನ ಊಟವೂ ಸಿಗುವುದಿಲ್ಲ.
  3. ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳದಿರಿ,
    ನಿನ್ನೆಯಷ್ಟೇ ಒಬ್ಬ ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾನೆ.
  4. ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ,
    ಅಲ್ಲೊಬ್ಬನ ತಲೆಯ ಮೇಲೆ ಸೂರೇ ಇಲ್ಲ.
  5. ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ,
    ಅವೆಷ್ಟೋ ದಂಪತಿಗಳಿಗೆ ತಂದೆ ತಾಯಿಯಾಗುವ ಭಾಗ್ಯವೇ ಇರುವುದಿಲ್ಲ.
  6. ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ,
    ಅಲ್ಲೊಬ್ಬ ಯುವಕನಿಗೆ ಓದಿದ್ದರೂ ಕೆಲಸವೇ ಸಿಕ್ಕಿಲ್ಲ.
  7. ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ,
    ಎಷ್ಟೋ ಮಂದಿ ಯೌವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ. ‘ಜೀವನವೆಂಬುದು ಸುಂದರವಾದ ಉಡುಗೊರೆ. ವ್ಯರ್ಥಾಲಾಪದಲ್ಲಿ ಅದನ್ನು ಹಾಳು ಮಾಡಿಕೊಳ್ಳಬೇಡಿ’

ಬದುಕಿನಲ್ಲಿ ಏನೋ ಸರಿಯಿಲ್ಲ ಎನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ???
ಈ ಸೃಷ್ಟಿಯಲ್ಲಿ ಸಾಕಷ್ಟು ಅಂಗವಿಕಲರು ಕೂಡ ಸಾಧಿಸಿ ತೋರಿಸುತ್ತಿದ್ದಾರೆ ಇಂದಿನಿಂದಲೇ ನಿಮ್ಮ ಕುಂದು ಕೊರತೆ ನೆಪಗಳನ್ನು ಹೇಳುವುದನ್ನು ಬಿಟ್ಟು ನಿಮ್ಮ ಬಲವನ್ನು ಸದೃಢಗೊಳಿಸಿ, ನೀವು ಸಾಧಿಸಿ
HAVE A SUCCESSFUL DAY🙏🏻

💐💐🤝🏻🤝🏻🤝🏻💐💐