ಕುಡಿಯುವ ನೀರಿನ ಸಮಸ್ಯೆಗೆ ಹೊಸ ಅಸ್ತ್ರ. 1916  ಮಾಹಿತಿ ಕೇಂದ್ರ

Consumer News
Bangalore Water Problem| ಕುಡಿಯುವ ನೀರಿನ ಸಮಸ್ಯೆಗೆ ಹೊಸ ಅಸ್ತ್ರ , ನೀರು ದುರ್ಬಳಕೆ ಮಾಡಿದರೆ ಎಷ್ಟು ದಂಡ ಕಟ್ಟಬೇಕು ಗೊತ್ತಾ.?

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಈ ಸಮಸ್ಯೆಗೆ  ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಲಮಂಡಳಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಒಂದು ವೇಳೆ ಆ ನಿಯಮ ಉಲ್ಲಂಘಿಸಿದರೆ ಸಾವಿರಾರು ರೂಪಾಯಿ ದಂಡ ಕಟ್ಟಲೇಬೇಕು.

Water Crisis | ನೀರು ಪೂರೈಕೆ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ,
KRS ನಲ್ಲಿ ಎಷ್ಟಿದೆ
ಬೆಂಗಳೂರಿನಲ್ಲಿ ಬೇಸಿಗೆ ಆರಂಭದಲ್ಲೇ ಜಲಕ್ಷಾಮ ಉಂಟಾಗಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಇದರ ಮುಂದುವರೆದ ಭಾಗವಾಗಿ ಜಲಮಂಡಳಿ ನೀರನ್ನು ದುರ್ಬಳಕೆ ಮಾಡುವವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ. ಒಂದು ವೇಳೆ ಕುಡಿಯುವ ನೀರನ್ನ ದುರ್ಬಳಕೆ ಮಾಡಿಕೊಂಡರೆ ದಂಡದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಸಾರ್ವಜನಿಕರು ಕುಡಿಯುವ ನೀರು ಮಿತವಾಗಿ ಬಳಕೆ ಮಾಡಬೇಕು ಹಾಗೆನೇ ಕುಡಿಯೋ ನೀರನ್ನ ವಾಹನಗಳ ಸ್ವಚ್ಛತೆಗೆ, ಕೈದೋಟ, ಕಟ್ಟಡ ನಿರ್ಮಾಣ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ ಹಾಗೂ ಸಿನಿಮಾ‌ ಥಿಯೇಟರ್, ಮಾಲುಗಳಲ್ಲಿ ಬಳಸದಂತೆ ಮನವಿ ಮಾಡಿದೆ. ಒಂದು ವೇಳೆ ಇದನ್ನ ಮೀರಿ ಬಳಕೆ ಮಾಡಿದ್ದೇ ಆದರೆ 5 ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

ದಂಡ ವಿಧಿಸುವ ನಿಟ್ಟಿನಲ್ಲಿ ಜಲಮಂಡಳಿ ಕಾಯ್ದೆ 194 ಕಲಂ 109 ರಂತೆ  5 ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ. ಮೊದಲ ಬಾರಿಗೆ ಉಲ್ಲಂಘನೆ ಕಂಡು ಬಂದರೆ 5 ಸಾವಿರ ದಂಡ ಪದೆ ಪದೇ ತಪ್ಪು ಮಾಡಿದರೆ ದಿನಪ್ರತಿ 500 ರೂಪಾಯಿ ಹೆಚ್ಚುವರಿ ದಂಡ ವಸೂಲಿ ಮಾಡಲಾಗುತ್ತೆ ಅಂತ ಎಚ್ಚರಿಕೆಯನ್ನೂ ನೀಡಿದೆ.

ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರು ಉಲ್ಲಂಘನೆ ಮಾಡವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916 ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.
cccnewspress.com

Related Posts