ಜಗನ್ನಾಥ ರಹಸ್ಯ. ವಿಶ್ಮಯ ಸುದರ್ಶನ ಚಕ್ರ ವಿಶಿಷ್ಟ ರಚನೆ ಮತ್ತು ಶಕ್ತಿ ಹೊಂದಿದೆ. ಪ್ರಾಚೀನ ಸಂಗ್ರಹ…….

# **ಜಗನ್ನಾಥ ರಹಸ್ಯ❗** # ಪುರಿಯ ಜಗನ್ನಾಥ ದೇವಾಲಯವು ಯಾವುದೇ ವೈಜ್ಞಾನಿಕ ವಿವರಣೆಯ ತನಿಖೆಗೆ ಒಳಗಾಗದೆ, ಇಂದಿಗೂ ಕೆಲವು ರಹಸ್ಯಗಳನ್ನು ಒಳಗೊಂಡಿದೆ. ಈ ರಹಸ್ಯಗಳು ಭಗವಾನ್ ಜಗನ್ನಾಥನ ಪವಾಡ ಎಂದು ಜನರು ನಂಬುತ್ತಾರೆ. ಈ ಪ್ರಸಿದ್ಧ ಕ್ಷೇತ್ರವನ್ನು ಒಮ್ಮೆ ನೋಡುವುದರ ಮೂಲಕ ಅಥವಾ ದೇವರ ದರ್ಶನವನ್ನು ಪಡೆಯುವುದರ ಮೂಲಕ ಮುಕ್ತಿಯನ್ನು ಪಡೆಯಬಹುದು. 1. **ದೇವಾಲಯದ ಮೇಲಿರುವ ಧ್ವಜ: **ಈ ಪವಿತ್ರ ದೇವಾಲಯದ ಮೇಲೆ ಪುರಾತ

ಕಾಲದಿಂದಲೂ ಇರುವ ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಒಂದು ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿ ಇದೆ ಎನ್ನುವುದನ್ನು ತಿಳಿಸುತ್ತದೆ. 1. **ಸುದರ್ಶನ ಚಕ್ರ: **ದೇವಸ್ಥಾನದಲ್ಲಿ ಇರುವ ಸುದರ್ಶನ ಚಕ್ರವು ೨೦ ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಎಂದರೆ, ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುವುದು. ಅಲ್ಲದೆ ಈ ಚಕ್ರವನ್ನು ನೀವು ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರುವಂತೆ ತೋರುವುದು. ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಈ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಕೀಟಗಳು ಹಾಗೂ ವಿಮಾನಗಳು ಹಾರುವುದಿಲ್ಲ. ಅದು ಚಕ್ರದ ಒಂದು ದೈವ ಶಕ್ತಿಯ ಪ್ರಭಾವ ಎಂದು ಪರಿಗಣಿಸಲಾಗಿದೆ. ಈ ನಿಗೂಢ ವಿದ್ಯಮಾನಗಳಿಗೆ ಕಾರಣ ಏನು ಎನ್ನುವುದನ್ನು ಇದುವರೆಗೂ ಕಂಡುಹಿಡಿಯಲಾಗಿಲ್ಲ. 1. **ದೇವಾಲಯದ ರಚನೆ: **ಈ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೆ ಇರುವುದು. ಈ ದೇವಾಲಯದ ಒಳಗೆ ಹಾಗೂ ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದೊಂದು ಪ್ರಕೃತಿಯ ಪವಾಡ ಹಾಗೂ ದೈವ ಶಕ್ತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. 1. **ಪ್ರವೇಶ ದ್ವಾರಗಳ ವಿಶೇಷ: **ಈ ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತಗಳ ತರಂಗ ಕೇಳುವುದು. ಈ ದೇವಾಲಯದ ಒಳ ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿವೆ. ಇದರ ಮುಖ್ಯ ದ್ವಾರಕ್ಕೆ ಸಿಂಗದ್ವಾರ ಎಂದು ಕರೆಯುತ್ತಾರೆ. ಇಲ್ಲಿಂದ ಒಳಗೆ ದೇವರ ದರ್ಶನಕ್ಕೆ ತೆರಳುವಾಗ ಶಬ್ದಗಳ ತರಂಗಗಳು ಅಥವಾ ಧ್ವನಿಯು ಕೇಳುತ್ತವೆ. ಅದೇ ದ್ವಾರದ ಮೂಲಕ ನೀವು ಹಿಂತಿರುಗಿ ಬರುವಾಗ ಕೇಳುವುದಿಲ್ಲ. ಅಂತೆಯೇ ದೇವಸ್ಥಾನದ ಒಳಗೆ ಹೋದ ನಂತರ ದೀರ್ಘ ಸಮಯಗಳ ಕಾಲವೂ ಈ ಶಬ್ದಗಳು ಕೇಳುವುದಿಲ್ಲ. 1. **ಸಮುದ್ರದ ಗಾಳಿ ರಹಸ್ಯ: **ಪ್ರಪಂಚದ ಯಾವುದೇ ಸಮುದ್ರ ಪ್ರದೇಶಗಳಿಗೆ ಹೋದರೆ, ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿ ಗಾಳಿಗಳು ಸಮುದ್ರದಿಂದ ಭೂಮಿಯೆಡೆಗೆ ಬೀಸುತ್ತವೆ. ಅಂತೆಯೇ ಸಂಜೆಯ ಹೊತ್ತಾದಂತೆ ಭೂಮಿಯಿಂದ ಸಮುದ್ರದ ಕಡೆಗೆ ಗಾಳಿ ಬೀಸುವುದು. ಆದರೆ ಈ ಪ್ರಕೃತಿಯ ನಿಯಮಗಳು ಪುರಿ ಜಗನ್ನಾಥ ದೇವಾಲಯದ ಬಳಿ ಇರುವ ಸಮುದ್ರದಲ್ಲಿ ತದ್ವಿರುದ್ಧವಾದ ನಿಯಮದಲ್ಲಿ ಉಂಟಾಗುವು. 1. **1800 ವರ್ಷಗಳ ಹಳೆಯ ಆಚರಣೆ: **ಈ ದೇವಾಲಯದಲ್ಲಿ ಪ್ರತಿದಿನ ಅರ್ಚಕರು ೪೫ ಮಹಡಿಯನ್ನು ಹೊಂದಿರುವ ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲ್ಪಡುತ್ತದೆ ಎಂದು ಹೇಳಲಾಗುವುದು.(ಮಾಹಿತಿ ಸಂಗ್ರಹ) 📖 *ನಮೋ ರಾಷ್ಟ್ರಭಕ್ತರು* ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺 !!!!Jai HINDUTWA!!!🚩🚩🚩 ⛳ ” *ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ* ” ⛳

Related Posts