ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನಿನ್ನ ಚಪ್ಪಲಿಯನ್ನು ಸಹ ಬಿಡಬೇಡ
– ಸ್ವಾಮಿ ವಿವೇಕಾನಂದ ಎಂತಹ ಅದ್ಭುತ ಮಾತು…ನಮ್ಮ ಬಗ್ಗೆ ನಮಗೆ ಮೊದಲು ಗೌರವ ಇರಬೇಕು, ನಂಬಿಕೆ ಇರಬೇಕು ಅನ್ನೋದು ವಿವೇಕಾನಂದರ ಮಾತಿನರ್ಥ…ಹಾಗೆಂದು ಅಹಂಕಾರಿಗಳಾಗೋದಲ್ಲ, ನಮ್ಮತನ ಬಿಡಬಾರದು. ನಮಗೆ ಮರ್ಯಾದೆ ಸಿಗಬೇಕೆಂದರೆ ಏನ್ ಮಾಡೋದು? ಕೊಟ್ಟು ಪಡೆಯೋದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಆತ ಭಿಕ್ಷುಕನಿರಲಿ, ಲಕ್ಷಾಧಿಪತಿ ಇರಲಿ, ಗೌರವ ಕೊಟ್ಟು ವ್ಯವಹರಿಸೋದನ್ನು ಕಲಿಯೋಣ. ಆತನಲ್ಲಿ ಬಡತನ ಇರಬಹುದು, ಹಾಗೆಂದು ತಿರಸ್ಕಾರ ಭಾವದಿಂದ ಮಾತನಾಡಿಸೋದಲ್ಲ. ಹಾಗೆಯೇ ನಾವು ಜನರನ್ನು ಗೌರವಿಸಿದರೆ ಮರಳಿ ಗೌರವ ಸಿಗುತ್ತದೆ ಎನ್ನುವುದು ನೆನಪಿರಲಿ.ಹಾಗೆಂದು ವಿನಾಕಾರಣ ನಮ್ಮ ಮರ್ಯಾದೆಗೆ ಕುತ್ತು ತರುವ ಕೆಲಸ ನಡೆದರೆ ಅಲ್ಲಿ ಒಂದು ಕ್ಷಣವೂ ಇರಬಾರದು. ಆತ್ಮಗೌರವ ಎಲ್ಲಕ್ಕಿಂತ ಮಿಗಿಲು. ಮರ್ಯಾದೆ ಯಾರದ್ದೋ ಪದತಲದಲ್ಲಿರಿಸಿ ಬದುಕುವಂತಹ ಸ್ಥಿತಿಗೆ ನಾವು ಬರದಂತೆ ಎಚ್ಚರ ವಹಿಸಲೇಬೇಕು. ಇದೇ ಸ್ವಾಮಿ ವಿವೇಕಾನಂದರ ಮಾತಿನ ಒಳಾರ್ಥ..ನೆನಪಿರಲಿ,
ನಮಗೆ ನಾವೇ ಹೀರೋ… #ನಾವುನಾವಾಗಿರೋಣ