ಉತ್ತಮ ನಾಯಕತ್ವ ಹೇಗಿರುತ್ತದೆ? ಇಲ್ಲಿದೆ 10 ಅಗತ್ಯ ನಾಯಕತ್ವದ ಲಕ್ಷಣಗಳು
ಸಮಗ್ರತೆ
ನಿಯೋಗ
ಸಂವಹನ
ಸ್ವಯಂ ಅರಿವು
ಕೃತಜ್ಞತೆ
ಕಲಿಕೆಯ ಚುರುಕುತನ
ಪ್ರಭಾವ
ಸಹಾನುಭೂತಿ
ಧೈರ್ಯ
ಗೌರವ
1. ಸಮಗ್ರತೆ (Integrity)
ಒಬ್ಬ ವ್ಯಕ್ತಿ ಒಬಂಟಿಯಾಗಿ ಯಾವತ್ತು ನಾಯಕನಾಗಲು ಸಾಧ್ಯವಿಲ್ಲ, ನಾಯಕ ಎಂದರೆ ಆತನ ಜೊತೆ ಆತನನ್ನು ನಂಬಿ ಮುನ್ನಡೆಯುವ ಹಲವಾರು ಜನರು ಜೊತೆಗಿರುತ್ತಾರೆ. ಸಮಗ್ರತೆಯು ವ್ಯಕ್ತಿ ಮತ್ತು ಸಂಸ್ಥೆಗೆ ಒಂದು ಪ್ರಮುಖ ನಾಯಕತ್ವದ ಲಕ್ಷಣ. ಸಂಸ್ಥೆಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದೂ ನೋಡುವುದರ ಜೊತೆಗೆ ಲೆಕ್ಕವಿಲ್ಲದಷ್ಟು ಇತರ ಮಹತ್ವದ ನಿರ್ಧಾರಗಳನ್ನು ಮಾಡುವ ಉನ್ನತ ಮಟ್ಟದ ಕಾರ್ಯನಿರ್ವಾಹಕರಿಗೆ ಇದು ಮುಖ್ಯವಾಗಿರುತ್ತದೆ. ಸಮಗ್ರತೆಯನ್ನು ಅಳಿಯಲು ಸಾಧ್ಯವಿಲ್ಲ, ಹಲವು ಸಂಸ್ಥೆಗಳಲ್ಲಿ ಸಮಗ್ರತೆಗೆ ಹೆಚ್ಚು ಒಟ್ಟು ಕೊಡದೆ ಇರಬಹುದು. ಆದರೆ ಒಬ್ಬ ಒಳ್ಳೆಯ ನಾಯಕನಿರುವ ಸಂಸ್ಥೆಯ ಬೆಳವಣಿಗೆಯಲ್ಲಿ ಸಮಗ್ರತೆ ಸಂಸ್ಥೆಯ ಮುಖ್ಯ ಭಾಗವಾಗಿರುತ್ತದೆ.

ತಾಜಾ ಸುದ್ದಿ
ಚುನಾವಣೆ
ರಾಜ್ಯ
ಕ್ರಿಕೆಟ್
ಶಾರ್ಟ್ಸ್
ಸಿನಿಮಾ
ವೆಬ್ಸ್ಟೋರಿ
ಫೋಟೋಗ್ಯಾಲರಿ
ವೈರಲ್
ವಿಡಿಯೋ
ದೇಶ
ವಿದೇಶ
ವಾಣಿಜ್ಯ
ಜ್ಯೋತಿಷ್ಯ
ಕ್ರೈಂ
#ಎಸ್ಎಂ ಕೃಷ್ಣ ನಿಧನ#ಬೆಳಗಾವಿ ಅಧಿವೇಶನ#ದರ್ಶನ್ ಕೇಸ್#ಪುಷ್ಪ 2#ಬೆಂಗಳೂರು ಸುದ್ದಿ#ಬಿಗ್ಬಾಸ್ಕನ್ನಡಜೀವನಶೈಲಿಆರೋಗ್ಯರಾಜಕೀಯಅಟೋಮೊಬೈಲ್ಉದ್ಯೋಗ
Kannada News  Lifestyle  10 important Leadership Qualities
Leadership Qualities: ಉತ್ತಮ ನಾಯಕನ 10 ಗುಣಲಕ್ಷಣಗಳು
Digi Tech Desk | Updated on: Feb 09, 2023 | 6:31 PM
ನಮ್ಮ ಸಮಾಜವು ಸಾಮಾನ್ಯವಾಗಿ ಕೆಟ್ಟ ನಾಯಕನನ್ನು ತ್ವರಿತವಾಗಿ ಗುರುತಿಸುತ್ತದೆ, ಆದರೆ ನೀವು ಒಳ್ಳೆಯವರನ್ನು ಹೇಗೆ ಗುರುತಿಸಬಹುದು? ಉತ್ತಮ ನಾಯಕ ಎಂದು ಜನರು ಗುರುತಿಸುವಂತಾಗುವುದು ಹೇಗೆ?

Leadership Qualities: ಉತ್ತಮ ನಾಯಕನ 10 ಗುಣಲಕ್ಷಣಗಳು
ಉತ್ತಮ ನಾಯಕನ 10 ಗುಣಲಕ್ಷಣಗಳು
Image Credit source: iEduNote
Follow us on
social
Twitter
facebook
linkedin
instagram
youtube
ಒಬ್ಬ ಉತ್ತಮ ನಾಯಕನು ಸಮಗ್ರತೆ, ಸ್ವಯಂ-ಅರಿವು, ಧೈರ್ಯ, ಗೌರವ, ಸಹಾನುಭೂತಿ ಮತ್ತು ಕೃತಜ್ಞತೆಯನ್ನು ಹೊಂದಿರಬೇಕು. ಪರಿಣಾಮಕಾರಿಯಾಗಿ ಸಂವಹನ ನಿರ್ವಹಿಸುವಾಗ ಚುರುಕುತನ ಬಹಳ ಮುಖ್ಯ. ಒಬ್ಬ ಒಳ್ಳೆ ನಾಯಕನ ಮಾತು ಕೇಳುಗರಲ್ಲಿ ಬಹಳಷ್ಟು ಪರಿಣಾಮ ಬೀರುತ್ತದೆ. ನಾಯಕರು ನಮ್ಮ ರಾಷ್ಟ್ರ, ಸಮುದಾಯ ಮತ್ತು ಸಂಸ್ಥೆಗಳನ್ನು ರೂಪಿಸುತ್ತಾರೆ. ನಮಗೆ ಮಾರ್ಗದರ್ಶನ ನೀಡಲು, ದೊಡ್ಡ-ಪ್ರಮಾಣದ ನಿರ್ಧಾರಗಳನ್ನು ಮಾಡಿ ಜಗತ್ತನ್ನು ಸಾಗಿಸಲು ನಮಗೆ ಉತ್ತಮ ನಾಯಕರ ಅಗತ್ಯವಿದೆ. ನಿಮ್ಮ ಸಂಸ್ಥೆಯ ಉನ್ನತ ಸ್ಥಾನಕ್ಕೇರಲು ಈ ಪ್ರಮುಖ ನಾಯಕತ್ವದ ಗುಣಗಳನ್ನು ಹೇಗೆ ಕಲಿಯಬಹುದು ಎಂಬುದನ್ನು ನೋಡಿ,


ನಮ್ಮ ಸಮಾಜವು ಸಾಮಾನ್ಯವಾಗಿ ಕೆಟ್ಟ ನಾಯಕನನ್ನು ತ್ವರಿತವಾಗಿ ಗುರುತಿಸುತ್ತದೆ, ಆದರೆ ನೀವು ಒಳ್ಳೆಯವರನ್ನು ಹೇಗೆ ಗುರುತಿಸಬಹುದು? ಉತ್ತಮ ನಾಯಕ ಎಂದು ಜನರು ಗುರುತಿಸುವಂತಾಗುವುದು ಹೇಗೆ?

ಉತ್ತಮ ನಾಯಕತ್ವ ಹೇಗಿರುತ್ತದೆ? ಇಲ್ಲಿದೆ 10 ಅಗತ್ಯ ನಾಯಕತ್ವದ ಲಕ್ಷಣಗಳು
ಸಮಗ್ರತೆ
ನಿಯೋಗ
ಸಂವಹನ
ಸ್ವಯಂ ಅರಿವು
ಕೃತಜ್ಞತೆ
ಕಲಿಕೆಯ ಚುರುಕುತನ
ಪ್ರಭಾವ
ಸಹಾನುಭೂತಿ
ಧೈರ್ಯ
ಗೌರವ
1. ಸಮಗ್ರತೆ (Integrity)
ಒಬ್ಬ ವ್ಯಕ್ತಿ ಒಬಂಟಿಯಾಗಿ ಯಾವತ್ತು ನಾಯಕನಾಗಲು ಸಾಧ್ಯವಿಲ್ಲ, ನಾಯಕ ಎಂದರೆ ಆತನ ಜೊತೆ ಆತನನ್ನು ನಂಬಿ ಮುನ್ನಡೆಯುವ ಹಲವಾರು ಜನರು ಜೊತೆಗಿರುತ್ತಾರೆ. ಸಮಗ್ರತೆಯು ವ್ಯಕ್ತಿ ಮತ್ತು ಸಂಸ್ಥೆಗೆ ಒಂದು ಪ್ರಮುಖ ನಾಯಕತ್ವದ ಲಕ್ಷಣ. ಸಂಸ್ಥೆಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದೂ ನೋಡುವುದರ ಜೊತೆಗೆ ಲೆಕ್ಕವಿಲ್ಲದಷ್ಟು ಇತರ ಮಹತ್ವದ ನಿರ್ಧಾರಗಳನ್ನು ಮಾಡುವ ಉನ್ನತ ಮಟ್ಟದ ಕಾರ್ಯನಿರ್ವಾಹಕರಿಗೆ ಇದು ಮುಖ್ಯವಾಗಿರುತ್ತದೆ. ಸಮಗ್ರತೆಯನ್ನು ಅಳಿಯಲು ಸಾಧ್ಯವಿಲ್ಲ, ಹಲವು ಸಂಸ್ಥೆಗಳಲ್ಲಿ ಸಮಗ್ರತೆಗೆ ಹೆಚ್ಚು ಒಟ್ಟು ಕೊಡದೆ ಇರಬಹುದು. ಆದರೆ ಒಬ್ಬ ಒಳ್ಳೆಯ ನಾಯಕನಿರುವ ಸಂಸ್ಥೆಯ ಬೆಳವಣಿಗೆಯಲ್ಲಿ ಸಮಗ್ರತೆ ಸಂಸ್ಥೆಯ ಮುಖ್ಯ ಭಾಗವಾಗಿರುತ್ತದೆ.


2. ನಿಯೋಜಿತ ನಾಯಕತ್ವ (Delegated Leadership)
ನಿಯೋಜಿತ ನಾಯಕತ್ವ ನಾಯಕನಿಗೆ ಕಡಿಮೆ ಕಾರ್ಯ ಮತ್ತು ಜವಾಬ್ದಾರಿಗಳನ್ನು ನೀಡುತ್ತದೆ ಆದರೆ, ಅಲ್ಲಿ ಒಬ್ಬ ನಾಯಕನು ಸ್ವಾಯತ್ತತೆಯನ್ನು ಚಲಾಯಿಸಲು ಒಬ್ಬ ವ್ಯಕ್ತಿಗೆ ಅಧಿಕಾರ ನೀಡುತ್ತಾನೆ. ನಾಯಕನಿಗೆ ನಿಯೋಜಿತ ಗುಣವಿದ್ದರೆ ಕ್ಷಣ ಕ್ಷಣಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳುವುದಕ್ಕಿಂತ ಒಂದು ಸಂಸ್ಥೆಯ ಭವಿಷ್ಯದ ದೊಡ್ಡ ಚಿತ್ರಣವನ್ನು ಒದಗಿಸುವುದರಲ್ಲಿ ಸಹಕಾರಿಯಾಗುತ್ತದೆ. ನಾಯಕನ ನಿಯೋಜಿತ ಪ್ರಜ್ಞೆ ತನ್ನ ಸಂಸ್ಥೆಯ ತಂಡದಲ್ಲಿ ನಂಬಿಕೆಯನ್ನು ಬೆಳೆಸುತ್ತದೆ.

3. ಸಂವಹನ (Communication)
ಪರಿಣಾಮಕಾರಿ ನಾಯಕತ್ವ ಮತ್ತು ಪರಿಣಾಮಕಾರಿ ಸಂವಹನ ಎರಡೂ ಒಂದಕ್ಕೊಂದು ಹೆಣೆದುಕೊಂಡಿವೆ. ಉತ್ತಮ ನಾಯಕರು ನುರಿತ ಸಂವಹನಕಾರರಾಗಿದ್ದು, ಮಾಹಿತಿಯನ್ನು ರವಾನಿಸುವುದರಿಂದ ಹಿಡಿದು ಇತರರನ್ನು ಪ್ರೇರೇಪಿಸುವವರೆಗೆ, ನೇರ ವರದಿಗಳನ್ನು ತರಬೇತುಗೊಳಿಸಿ ವಿವಿಧ ರೀತಿಯಲ್ಲಿ ಸಂವಹನ ನಡೆಸಲು ಕಲಿತಿರುತ್ತಾರೆ. ವಿಶ್ವದಾದ್ಯಂತ ಜಾತೀ, ಧಾರ್ಮ, ವರ್ಗ, ಏನನ್ನೂ ಲೆಕ್ಕಿಸದೆ ಎಲ್ಲರ ಜೊತೆಯಲ್ಲಿ ಸಂವಹನ ಮಾಡಲು ಕಲಿತಿರುತ್ತಾರೆ. ನಿಮ್ಮ ಸಂಸ್ಥೆಯಾದ್ಯಂತ ನಾಯಕರ ನಡುವಿನ ಸಂವಹನದ ಗುಣಮಟ್ಟ ಮತ್ತು ಪರಿಣಾಮಕಾರಿತ್ವವು ನಿಮ್ಮ ವ್ಯಾಪಾರ ತಂತ್ರದ ಯಶಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪರಿಣಾಮಕಾರಿ ಸಂವಹನ ಮತ್ತು ಉತ್ತಮ ಸಂಭಾಷಣೆಗಳನ್ನು ಮಾಡಲು ಸೂಕ್ಷ್ಮವಾಗಿ ಕೇಳುವುದು ಮುಖ್ಯವಾಗಿರುತ್ತದೆ.

4. ಸ್ವಯಂ ಅರಿವು (Self-Awareness)
ಇದು ಹೆಚ್ಚು ಆಂತರಿಕವಾಗಿ ಕೇಂದ್ರೀಕೃತ ಲಕ್ಷಣವಾಗಿದ್ದರೂ, ಸ್ವಯಂ-ಅರಿವು ಮತ್ತು ನಮ್ರತೆ ನಾಯಕತ್ವಕ್ಕೆ ಬಹು ಮುಖ್ಯ ಅಂಶ. ನಿಮ್ಮನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡು ನಿಮ್ಮ ಸ್ವಂತ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿದರೆ, ನೀವು ನಾಯಕರಾಗಿ ಹೆಚ್ಚು ಪರಿಣಾಮಕಾರಿಯಾಗಬಹುದು. ಇತರರು ನಿಮ್ಮನ್ನು ಹೇಗೆ ನೋಡುತ್ತಾರೆ ಅಥವಾ ನೀವು ಕೆಲಸದಲ್ಲಿ ಹೇಗೆ ಕಾಣಿಸಿಕೊಳ್ಳುತ್ತೀರಿ ಎಂದು ನಿಮಗೆ ತಿಳಿದಿದೆಯೇ? ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. ಆಗ ಮಾತ್ರ ನಿಮ್ಮ ದರ್ಬಲ ತಿಳಿದುಕೊಂಡು ಅದನ್ನು ತಿದ್ದಿ ಮುನ್ನಡೆಯಲು ಸಾಧ್ಯ.

5. ಕೃತಜ್ಞತೆ (Gratitude)
ಕೃತಜ್ಞರಾಗಿರುವುದರಿಂದ ಸ್ವಾಭಿಮಾನ ಹೆಚ್ಚುತ್ತದೆ, ಕಡಿಮೆ ಖಿನ್ನತೆ, ಆತಂಕ ಮತ್ತು ಉತ್ತಮ ನಿದ್ರೆ ಬರಲು ಕಾರಣವಾಗಬಹುದು. ಕೃತಜ್ಞತೆಯು ನಿಮ್ಮನ್ನು ಉತ್ತಮ ನಾಯಕನನ್ನಾಗಿ ಮಾಡಬಹುದು. ಹೆಚ್ಚಿನ ಜನರು ಬಾಸ್‌ನಿಂದ ಮೆಚ್ಚುಗೆ ಪಡೆಯಲು ಕೆಲಸ ಮಾಡುತ್ತಾರೆ ಎಂದು ಹೇಳುವುದನ್ನು ನೇವು ಕೇಳಿರಬಹುದು. ಜನರಿಗೆ ಹೆಚ್ಚು ಕೆಲಸ, ಮತ್ತು ನಿಷ್ಠೆಯಿಂದ ಕೆಲಸ ಮಾಡಲು ಇದು ಪ್ರೇರಣೆ ನೇಡುತ್ತದೆ. ಕೆಲಸದ ಸ್ಥಳದಲ್ಲಿ ಕೃತಜ್ಞತೆಯನ್ನು ಹೇಗೆ ತೋರಿಸಬೇಕೆಂದು ಉತ್ತಮ ನಾಯಕರಿಗೆ ತಿಳಿದಿದೆ.

6. ಕಲಿಕೆಯ ಚುರುಕುತನ (Learning Agility)
ಕಲಿಕೆಯ ಚುರುಕುತನ ಎಂದರೆ ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲದಿದ್ದಾಗ ಏನು ಮಾಡಬೇಕೆಂದು ತಿಳಿಯುವ ಸಾಮರ್ಥ್ಯ. ನೀವು ಊಹಿಸಿರದ ಸಂದರ್ಭಗಳಲ್ಲಿ ಉತ್ತಮ ತಿಳುವಳಿಕೆ ತೋರಲು ಸಾಧ್ಯವಾಗಿದ್ದರೆ, ನೀವು ಈಗಾಗಲೇ ಚುರುಕಾಗಿ ಜೀವನ ಮಾಡುವುದನ್ನು ಕಲಿಯುತ್ತಿರಬಹುದು.ಯಾರು ಬೇಕಾದರು ಅಭ್ಯಾಸ, ಅನುಭವ ಮತ್ತು ಪ್ರಯತ್ನದ ಮೂಲಕ ಕಲಿಕೆಯ ಚುರುಕುತನವನ್ನು ಬೆಳೆಸಬಹುದು ಮತ್ತು ಹೆಚ್ಚಿಸಬಹುದು. ನಿಜವಾಗಿ ಹೇಳುವುದಾದರೆ ನಿತ್ಯ ಕಲಿಯುವವರೇ ನಿಜವಾದ ನಾಯಕರು.

7. ಪ್ರಭಾವ (Influence)
ಕೆಲವರಿಗೆ, ಪ್ರಭಾವ ಒಂದು ಕೆಟ್ಟ ಪದದಂತೆ ಭಾಸವಾಗುತ್ತದೆ. ಆದರೆ ತಾರ್ಕಿಕ, ಭಾವನಾತ್ಮಕ ಅಥವಾ ಸಹಕಾರಿ ಮಾನದಂಡಗಳ ಮೂಲಕ ಜನರನ್ನು ಮನವೊಲಿಸಲು ಸಾಧ್ಯವಾಗುವುದು ಸ್ಪೂರ್ತಿದಾಯಕ ಹಾಗು ಪರಿಣಾಮಕಾರಿ. ಇಧೊಂದು ಒಳ್ಳೆಯ ನಾಯಕರ ಪ್ರಮುಖ ಲಕ್ಷಣವಾಗಿದೆ. ತೋರಿಕೆಗಾಗಿ ಏನನ್ನೂ ಮಾಡಬಾರದು. ಕುಶಲತೆಯಿಂದ ಅಧಿಕೃತವಾಗಿ ಮತ್ತು ಪಾರದರ್ಶಕವಾಗಿ ಜನರ ಮೇಲೆ ಪ್ರಭಾವ ಭೀರಬೇಕು. ಇದಕ್ಕೆ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ನಂಬಿಕೆಯ ಅಗತ್ಯವಿರುತ್ತದೆ.

8. ಪರಾನುಭೂತಿ (Empathy)
ಪರಾನುಭೂತಿ ಮತ್ತು ನೀವು ಮಾಡುವ ಕೆಲಸ ಪರಸ್ಪರ ಸಂಬಂಧ ಹೊಂದಿದೆ. ಭಾವನಾತ್ಮಕ ಬುದ್ಧಿವಂತಿಕೆ ನಿಮ್ನಿಮನ್ರ್ಣಾನು ಒಳ್ಳೆಯ ನಾಯಕನನ್ನಾಗಿ ಮಾಡಲು ಸಾಧ್ಯ. ನಿಮ್ಮ ನೇರ ವರದಿಗಳಲ್ಲಿ ನಿಮ್ಮ ನಾಯಕತ್ವ ಮತ್ತು ಸಹಾನುಭೂತಿ ನಡವಳಿಕೆಯನ್ನು ನಿಮ್ಮ ಬಾಸ್‌ ಹುಡುಕುತ್ತಾರೆ. ಜೊತೆಗೆ, ನಿಮ್ಮ ಸಹಾನುಭೂತಿ ನಿಮ್ಮನ್ನು ಒಳ್ಳೆಯ ನಾಯಕನನ್ನಾಗಿ ಮಾತ್ರ ಮಾಡುವುದಲ್ಲದೆ ನಿಮ್ಮ ಸುತ್ತಲಿನ ವಾತಾವರಣವನ್ನೂ ಸುಧಾರಿಸುತ್ತದೆ.

9. ಧೈರ್ಯ (Courage)
ಧೈರ್ಯವು ಉತ್ತಮ ನಾಯಕರ ಪ್ರಮುಖ ಲಕ್ಷಣವಾಗಿದೆ. ಸಮಸ್ಯೆಗಳನ್ನು ತಪ್ಪಿಸುವ ಬದಲು ಅಥವಾ ಜಗಳಗಳು ಶುರುವಾಗುವುದಕ್ಕೆ ಅವಕಾಶ ನೀಡುವ ಬದಲು, ಧೈರ್ಯವು ನಾಯಕರನ್ನು ಹೆಜ್ಜೆ ಹಾಕಲು ಮತ್ತು ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ ಮಾಡುತ್ತದೆ. ಉನ್ನತ ಮಟ್ಟದ ಮಾನಸಿಕ ಸುರಕ್ಷತೆಯ ಮೇಲೆ ಗಮನ ಹರಿಸುವ ಸಂಸ್ಥೆ ಅಥವಾ ಸಂಸ್ಥೆಯಾದ್ಯಂತ ಬಲವಾದ ಸಂಭಾಷಣಾ ಕೌಶಲ್ಯಗಳನ್ನು ಹೊಂದಿರುವ ಕೆಲಸವಿದ್ದರೆ ಧೈರ್ಯ ಮತ್ತು ಸತ್ಯ-ಹೇಳುವಿಕೆಯನ್ನು ಬೆಂಬಲಿಸುವ ಸಂಸ್ಕೃತಿಯನ್ನು ಆ ಸಂಸ್ಥೆ ಬೆಳೆಸುತ್ತದೆ.

10. ಗೌರವ (Respect)
ಪ್ರತಿನಿತ್ಯ ಜನರನ್ನು ಗೌರವದಿಂದ ನಡೆಸಿಕೊಳ್ಳುವುದು ಒಬ್ಬ ನಾಯಕ ಮಾಡಬಹುದಾದ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ. ಇದು ಉದ್ವಿಗ್ನತೆ ಮತ್ತು ಸಂಘರ್ಷವನ್ನು ಸರಾಗಗೊಳಿಸುತ್ತದೆ, ನಂಬಿಕೆಯನ್ನು ಸೃಷ್ಟಿಸುತ್ತದೆ ಮತ್ತು ನೆಮ್ಮದಿಯನ್ನು ನೀಡುತ್ತದೆ. ಸಂಸ್ಥೆಯಲ್ಲಿ ಗೌರವದ ಸಂಸ್ಕೃತಿಯನ್ನು ಬೆಳೆಸುವುದು ಬಹಳ ಮುಖ್ಯ. ಗೌರವಾನ್ವಿತತೆಯನ್ನು ವಿವಿಧ ರೀತಿಯಲ್ಲಿ ತೋರಿಸಬಹುದು, ಆದರೆ ಇದು ಸಾಮಾನ್ಯವಾಗಿ ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಉತ್ತಮ ಕೇಳುಗನಾಗಿ ಪ್ರಾರಂಭವಾಗುತ್ತದೆ.



Published On – 6:20 pm, Thu, 9 February 23



ಕರ್ನಾಟಕ
ಬಾಗಲಕೋಟೆ
ಬಳ್ಳಾರಿ
ಬೆಳಗಾವಿ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಬೀದರ್
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಚಿತ್ರದುರ್ಗ
ದಕ್ಷಿಣ ಕನ್ನಡ
ದಾವವಣಗೆರೆ
ಧಾರವಾಡ
ಗದಗ
ಹಾಸನ
ಹಾವೇರಿ
ಕಲಬುರಗಿ
ಕೊಡಗು
ಕೋಲಾರ
ಕೊಪ್ಪಳ
ಮಂಡ್ಯ
ಮೈಸೂರು
ರಾಯಚೂರು
ರಾಮನಗರ
ಶಿವಮೊಗ್ಗ
ತುಮಕೂರು
ಉಡುಪಿ
ಉತ್ತರ ಕನ್ನಡ
ವಿಜಯಪುರ
ಯಾದಗಿರಿ
ಮನರಂಜನೆ
ವಿದೇಶ
ಕ್ರೀಡೆ
ಇತರ
Follow us
Copyright © 2024 TV9 Kannada. All rights reserved.


Related Posts

Leave a Reply

Your email address will not be published. Required fields are marked *