*ಪರಿಪೂರ್ಣತೆ ಎಂದರೇನು?*
ಆದಿ ಶಂಕರಾಚಾರ್ಯರಿಂದ…

1.ಮತ್ತೊಬ್ಬರನ್ನು ಬದಲಾಯಿಸುವ
ಪ್ರಯತ್ನ ಬಿಟ್ಟು…
ನೀನು ಬದಲಾದರೆ..    
ಅದು ಪರಿಪೂರ್ಣತೆ .

2.ಜನ ಹೇಗಿದ್ದಾರೋ..
ಹಾಗೆಯೇ ಸ್ವೀಕರಿಸಿದರೆ….                              ಅದು ಪರಿಪೂರ್ಣತೆ  .

3.ಪ್ರತಿಯೊಬ್ಬರೂ…ಅವರ ದಾರಿಯಲ್ಲಿ ಅವರು ಸರಿಯಿದ್ದಾರೆ…ಎಂದು  ತಿಳಿದರೆ…
ಅದು ಪರಿಪೂರ್ಣತೆ.

4.ಎಲ್ಲರೊಂದಿಗೂ ಹೊಂದಾಣಿಕೆಯಿಂದ
ನೀನೂ ಹೊರಟರೆ…
ಅದು ಪರಿಪೂರ್ಣತೆ .

5.ಬೇರೆಯವರಿಂದ ನೀನು ಅಪೇಕ್ಷಿಸುವುದನ್ನು ಬಿಟ್ಟರೆ..  ಅದು ಪರಿಪೂರ್ಣತೆ.

6.ನೀನು ಮಾಡುತ್ತಿರುವ ಕೆಲಸದಿಂದ ನಿನಗೆ ಆತ್ಮವಿಶ್ವಾಸ ಮತ್ತು ಶಾಂತಿ ಸಿಕ್ಕರೆ….
ಅದು ಪರಿಪೂರ್ಣತೆ.

7.ನಿನ್ನ ಜಾಣ್ಮೆ ಹಾಗೂ ಶಕ್ತಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದರೆ…
ಅದು ಪರಿಪೂರ್ಣತೆ .

8.ಮತ್ತೊಬ್ಬರು ನಿನ್ನನ್ನು ತೆಗಳಿದಾಗ ಸ್ವೀಕರಿಸುವ ಗುಣವಿದ್ದರೆ….
ಅದು ಪರಿಪೂರ್ಣತೆ.

9.ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟರೆ….
ಅದು  ಪರಿಪೂರ್ಣತೆ .       
    
10.ನಿನ್ನಲ್ಲಿ ನಿನಗೆ ಭರವಸೆ ಇದ್ದು
ಶಾಂತನಾಗಿ ಇರಲು ಸಾಧ್ಯ ವಾದರೆ ….
ಅದು  ಪರಿಪೂರ್ಣತೆ  .

11.ನೀನು ನಿನ್ನ ಜೀವನದ ಅವಶ್ಯಕತೆ ಮತ್ತು ಬೇಕು” ಗಳನ್ನು ಬೇರ್ಪಡಿಸಿ ನೋಡಲು ಶಕ್ತನಾಗಿ “ಬೇಕು”ಗಳನ್ನು ತ್ಯಾಗ ಮಾಡಿದರೆ….
ಅದು  ಪರಿಪೂರ್ಣತೆ  .

ಇನ್ನೊಂದು ಪ್ರಮುಖ ಅಂಶ

12.ಪ್ರತಿಯೊಂದು ವಸ್ತು ,ವ್ಯಕ್ತಿ, ವಿಷಯಗಳಿಂದಲೇ
ಸುಖ-ಸಂತೋಷ ಸಿಗುವುದೆಂದು ನಂಬುವುದನ್ನು ಬಿಟ್ಟರೆ….
ಅದು ಪರಿಪೂರ್ಣತೆ.

ನಮ್ಮೆಲ್ಲರಿಗೂ ಪರಿಪೂರ್ಣ ಜೀವನ ಸಿಗಲಿ ಅಂತ ಹಾರೈಕೆ.

Related Posts

Leave a Reply

Your email address will not be published. Required fields are marked *