ಭೀಮ್ ಕೊರರೇಗಾಂವ್ ವಿಜಯೋತ್ಸವ 2025

ಭೀಮ ಬಂಧುಗಳೆ,

ಜನವರಿ-01: ಈ ದಿನವು ಬ್ರಿಟೀಷರ ಅಳ್ವಿಕೆಯ ಬಳುವಳಿಯಾಗಿ ನೂರಾರು ವರ್ಷಗಳಿಂದ ಭಾರತೀಯರ ಪಾಲಿನ ಮೋಜಿ ಮಸ್ತಿಗಳು

ದಿನವಾಗಿ ಆಚರಿಸಲ್ಪಡುತ್ತಿದೆ.ಆದರೆ ಜಗತ್ತಿನ ಶ್ರೇಷ್ಠ ಇತಿಹಾಸ ಪರಿಣಿತರಾದ ಬಾಬಾಸಾಹೇಬ್‌ ಡಾ.ಬಿ.ಆ‌ರ್. ಅಂಬೇಡ್ಕ‌ರ್ ಅವರು ಭಾರತೀಯ ಪಾಲಿಗೆ ಇದೊಂದು ಚರಿತ್ರಾರ್ಹ ದಿನವೆಂದು ಘೋಷಿಸಿದ್ದರು. ಡಾ. ಬಿ.ಆರ್.ಅಂಬೇಡ್ಕರ್ ಅವರು ಲಂಡನ್‌ ಗ್ರಂಥಾಲಯದಲ್ಲಿ ಇತಿಹಾಸ ಮಗ್ನರಾಗಿ ಓದುತ್ತಿರುವಾಗ ಬ್ರಿಟೀಷರು ಭಾರತದಲ್ಲಿ ನಿರ್ಮಿಸಿದ ಸ್ಮಾರಕ ಸಾಕ್ಷಿಗಳ ಕುರಿತು ಪುಸ್ತಕವೊಂದರಲ್ಲಿ ಇತಿಹಾಸ ಗರ್ಭದಲ್ಲಿ ಹೂತು ಹೋಗಿದ್ದ ಸತ್ಯವೊಂದನ್ನು ಹೆಕ್ಕಿ ತೆಗೆದರು. ಬ್ರಿಟೀಷ್ ಇಸ್ಟ್ ಇಂಡಿಯಾ ಕಂಪನಿಯ ದೇಶದಲ್ಲಿನ ರ ಅನೇಕ ಸಾಮಂತ ರಾಜರ ಸಂಸ್ಥಾನಗಳ ವಿರುದ್ಧ ಯುದ್ಧ ಮಾಡಿ ಗೆದ್ದುಕೊಂಡಿ ದ್ದ ಮಾಡಿ ಗೆದ್ದುಕೊಂಡಿದ್ದರೂ ಪೂನಾದ ಜಾತಿವಾದಿ : ದಿ ಪೇಳ್ವೆ ಸಂಸ್ಥಾನದ ವಿರುದ್ಧ ಗೆಲ್ಲಲಾಗಿರಲಿಲ್ಲ. ಜಾತಿ ದೌರ್ಜನ್ಯದಿಂದ ಜರ್ಜರಿತರಾಗಿದ್ದ ಮಹ‌ರ್ ಸೈನಿಕರ ಪಡೆಯನ್ನು ತಮ್ಮತ್ತ ಸೆಳೆದ ಬ್ರಿಟೀಷರು 3ನೇ ಬಾರಿ ಯುದ್ಧ ಸಾರಿದಾಗ ಕೇವಲ 500 ಮಹರ್ ಸೈನಿಕರು 28000 ಪೇಶ್ವ ಸೈನಿಕರನ್ನು ಕೇವಲ 12 ಗಂಟೆಗಳಲ್ಲ ಹಿಮ್ಮೆಟ್ಟಿಸಿ ರಾಜ ಬಾಜೀರಾಯನನ್ನು ಯುದ್ಧಭೂಮಿಯಿಂದ ಓಡಿಸಿ ವಿಜಯಪತಾಕೆಯನ್ನು ಹಾರಿಸಿದ ಸತ್ಯವು ಅದಾಗಿತ್ತು. ಆ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಮಹರ್ ವೀರಸೇನಾನಿ ಸಿದ್ಧನಾಕನೂ ಸೇರಿದಂತೆ 26 ಸೈನಿಕರ ಹೆಸರನ್ನು ಕೆತ್ತಿರುವ ಭೀಮಾ-ಕೊರೇಗಾಂವ್‌ ಯುದ್ಧಸ್ಮಾರಕ ನಿರ್ಮಾಣದ ದಾಖಲೆಯನ್ನು ಅಂಬೇಡ್ಕ‌ರ್ ಅವರು ಭಾರತಕ್ಕೆ ಬಂದು ಬಿಡುಗಡೆ ಮಾಡಿದ್ದರು. ಪ್ರತಿ ಜನವರಿ 01 ರಂದು ಅಲ್ಲಿಗೆ ಹೋಗಿ ನಮನ ಸಲ್ಲಿಸುವ ಮೂಲಕ ಅಸ್ಪೃಶ್ಯ ಜನಾಂಗಗಳ ವೀರಗಾಥೆಯ ಪಾಠವನ್ನು ಪ್ರತಿ ಭಾರತೀಯರಿಗೂ ಮತ್ತು ಜಗತ್ತಿನ ಜನತೆಗೆಲ್ಲ ತಿಳಿಸಿಕೊಟ್ಟರು. ಗುಲಾಮಗಿರಿಯೇ ತಮ್ಮ ಇತಿಹಾಸ ಎಂದು ಭಾವಿಸಿದ್ದ ಈ ದೇಶದ ಅಸ್ಪೃಶ್ಯ ಜನಾಂಗಗಳು ಮೂಲದಲ್ಲಿ ಈ ದೇಶವನ್ನು ಕಟ್ಟ ಮೆಟ್ಟದ ರಕ್ಷಕ ಮಹಾಶೂರರ ವಂಶದವರು ಎಂದು ಹೇಳುವ ಮೂಲಕ ಇತಿಹಾಸದಲ್ಲಿ ಕಳೆದುಹೋಗಿದ್ದವರ ಇತಿಹಾಸವನ್ನು ಮರುಸೃಷ್ಠಿಸಿದವರಾದರು.

ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳನ್ನು ಗುರ್ತಿಸುವುದರಲ್ಲಿ ಮೊದಲ ಹೆಸರು ಭೀಮಸೇನಾನಿ ಡಾ.ಎಂ.ವೆಂಕಟಸ್ವಾಮಿ ಅವರು ಸ್ಪಷ್ಟ ನಿದರ್ಶನವಾಗಿದ್ದಾರೆ. ದಲಿತ ಚಳವಳಿಯಲ್ಲಿ ಪಳಗಿ ಭೀಮ ಚಳವಳಿಯನ್ನು ಅಂಬೇಡ್ಕರ್‌ರರೇ ಸಂಸ್ಥಾಪಿಸಿದ ಸಮತಾ ಸೈನಿಕ ದಳದ ಮೂಲಕ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸಿದ ಮತ್ತು ದಲಿತ ಚಳವಳಿಗೆ ಭೀಮಸ್ಪರ್ಶ ನೀಡಿದ ಮೊದಲ ಫಂಕ್ತಿಯ ನಾಯಕರಿವರು.

ಸಮತಾ ಸೈನಿಕ ದಳದ ಸಮವಸ್ತ್ರಧಾರಿ ಸೈನಿಕರ ದಂಡನ್ನು ತಪ್ಪದೇ ಪ್ರತಿ ವರ್ಷವೂ ಭೀಮಾ ಕೊರೇಗಾಂವ್‌ ಸ್ಮಾರಕಕ್ಕೆ ಕರೆದೊಯ್ದ ಅಲ್ಲ ಭೀಮ ನಮನ ಸಲ್ಲಿಸುತ್ತಾ ಬಂದಿರುವ ಶ್ರೇಯಸ್ಸು ಡಾ.ಎಂ.ವೆಂಕಟಸ್ವಾಮಿ ಅವರಿಗೆ ಸಲ್ಲುತ್ತದೆ. ಹಾಗೆಯೇ ಬೆಂಗಳೂರಿನ ನಾಗಸೇನ ಬುದ್ಧವಿಹಾರ ಸೇರಿದಂತೆ ನಾಡಿನ ನಾನಾ ಭಾಗಗಳಲ್ಲಿ ಪ್ರತಿ ಜನವರಿ 01 ರಂದು ಭೀಮಾ ಕೊರೇಗಾಂವ್‌ ವಿಜಯೋತ್ಸವಗಳನ್ನು ಆಚರಿಸಿ ‘ಚಿರಸ್ಥಾಯಿ ” ಅಭಿಯಾನವನ್ನು ಇಂದಿಗೂ 8 ಮುನ್ನಡೆಸಿದ್ದಾರೆ. .ಇದೇ ಡಿಸೆಂಬರ್ 31ರ ಸಂಜೆ ತೆ 6ರಿಂದ ರಾತ್ರಿ 12-30 ರವರೆಗೆ ಬೆಂಗಳೂರಿನ ನಾಗಸೇನ ವಿದ್ಯಾಲಯ ಮೈದಾನದಲ್ಲಿ ಚರಿತ್ರೆಯ ಸಿಂಹಾವಲೋಕನದ ವಿಚಾರಗೋಷ್ಠಿಗಳು ಮತ್ತು ಕಲಾತಂಡದಿಂದ ಹೊನಲುಬೆಳಕಿನಲ್ಲ ಭೀಮ ಗಾಯನದ ಅದ್ಭುತ ಕಲಾ ಪ್ರದರ್ಶನ ನಡೆಸಿ ಜನವರಿ 01 ಆರಂಭದ ಕ್ಷಣಕ್ಕೆ ಶುಭಕೋರಲಾಗುವುದು. ಬೆಂಗಳೂರು ನಗರದಲ್ಲಿ ನೆಲೆಸಿರುವ ಭೀಮ ಅಭಿಮಾನಿಗಳು ಈ ಐತಿಹಾಸಿಕ ಶೌರ್ಯ ಸ್ಮರಣೆಯ ದಿನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇನೆ. ಭೀಮ ನಮನ’

ಜನವರಿ 01 – ನಮ್ಮ ಜನಾಂಗಗಳ ವೀರಾವೇಷದ ಚರಿತ್ರೆಯನ್ನು ಸ್ಮರಿಸುವ ಚರಿತ್ರಾರ್ಹ ದಿನವಾಗಲೆಂದು ನಾವೆಲ್ಲರೂ ಆಶಿಸೋಣ. ತಮ್ಮ ಒಡನಾಡಿಗಳು, ಕುಟುಂಬಸ್ತರು, ಮಕ್ಕಳು ಬಂಧು ಬಳಗದೊಂದಿಗೆ ಭಾಗಿಯಾಗೋಣ, ತಪ್ಪದೆ ಬನ್ನಿ,

28-12-2024ರಂದು ಸಮತಾ ಸೈನಿಕ ದಳ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆ :

ಮಾನ್ಯರೆ,

ದೇಶದ ಶ್ರೇಷ್ಠ ಆರ್ಥಿಕ ತಜ್ಞ ಮತ್ತು ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಮತಾ ಸೈನಿಕ ದಳವು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಇವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ.

ಡಿಸೆಂಬರ್ 31: ಜನವರಿ 1ರ ಭೀಮ-ಕೊರೇಗಾಂವ್ ವಿಜಯೋತ್ಸವಕ್ಕೆ ಚಾಲನೆ

ಪ್ರತಿವರ್ಷವೂ ಆಚರಿಸಿತ್ತಿರುವಂತೆ ಮುಂದಿನ ಜನವರಿ 01ರಂದು ಭೀಮ- ಕೊರೇಗಾಂವ್ ವಿಜಯೋತ್ಸವವನ್ನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ದೇಶದಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಎಲ್ಲಾ ಜಿಲ್ಲೆಗಳಲ್ಲೂ ಈ ವಿಜಯೋತ್ಸವವನ್ನು ಸಮತಾ ಸೈನಿಕ ದಳವು ಆಚರಿಸುತ್ತಿದೆ. ಅಸ್ಪೃಶ್ಯ ಜನಾಂಗಗಳು ಕೇವಲ ಗುಲಾಮರೆಂದು ಬಿಂಬಿಸುತ್ತಿದ್ದ ಜಾತಿವಾದಿ ಶಕ್ತಿಗಳಿಗೆ ಪಾಠಕಲಿಸುವ ಭೀಮ-ಕೊರೇಗಾಂವ್ ಯುದ್ಧದ 2 1-1-181800 ನಡೆದು ಈ ದೇಶದ ಹೊಸ ಚರಿತ್ರೆ ಬರೆಯಲ್ಪಟ್ಟಿತು. ಮಹರ್ ಜನಾಂಗದ 500 ಸೈನಿಕರ ಪಡೆಯು ಪೂನಾದ ಪೇಶ್ವ ಸಂಸ್ಥಾನದ 28000 ಸೈನಿಕರನ್ನು ಕೇವಲ 24 ಗಂಟೆಗಳಲ್ಲಿ ಸದೆಬಡೆದು 2ನೇ ಬಾಜಿರಾಯನನ್ನು ಯುದ್ಧ ಭೂಮಿಯಿಂದ ಓಡಿಸಿದ ಇತಿಹಾಸ ಗರ್ಭದಲ್ಲಿ ಹುದುಗಿದ್ದ ವಿಷಯವು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನದಿಂದ ಗೊತ್ತಾಗಿ ಇಂದಿನ ದೇಶದ ಆಸ್ಪೃಶ್ಯ ಜನಾಂಗಗಳಲ್ಲಿ ಹೊಸ ಚಿಂತನೆಯೊಂದರ ಸಂಚಲನ ಉಂಟುಮಾಡಿದೆ. ಪ್ರತಿ ವರ್ಷವೂ ಜನವರಿ 01ರಂದು ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭೀಮಾಕೊರೇಗಾಂವ್‌ಗೆ ಹೋಗಿ ವೀರಯೋಧರ ವಿಜಯ ಸ್ಥಂಭದ ಸ್ಮಾರಕಕ್ಕೆ ನಮನ ಸಲ್ಲಿಸಿ ಬರುತ್ತಿರುವ ಕೋಟ್ಯಾಂತರ ಜನತೆಯ ಭೆಟ್ಟಿಯು ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದಿದೆ. ಸಮತಾ ಸೈನಿಕ ದಳವು ಕಳೆದ 30ವರ್ಷಗಳಿಂದ ಈ ವಿಜಯೋತ್ಸವದ ಪ್ರವಾಸದಲ್ಲಿ ಭಾಗಿಯಾಗಿ ಕಾರ್ಯ ಕರ್ತರಿಗೆ ಭೀಮಾಸ್ಫೂರ್ತಿಯನ್ನು ನೀಡುತ್ತಾ ಬಂದಿದೆ. 2017ರಲ್ಲಿ ಭೀಮ- ಕೊರೇಗಾಂವ್‌ನಲ್ಲಿ ನಡೆದ ಜಾತಿ ಗಲಭೆಯಿಂದ ರೋಚಕ ತಿರುವು ಪಡೆದುಕೊಂಡು ದಲಿತ ಜನಾಂಗಗಳ ಇತಿಹಾಸದ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಅಂದಿನಿಂದ
ಸಮತಾ ಸೈನಿಕ ದಳವು ಪ್ರತಿ ಡಿಸೆಂಬರ 31ರ ರಾತ್ರಿ ದಲಿತ ಜನಾಂಗಗಳ ವಿರೋಚಿತ ಹೋರಾಟಗಳ ಮೆಲುಕುಹಾಕುವ ಸಿಂಹಾವಲೋಕನದ ಸಂವಾದದ ಸಭೆಯನ್ನು ನಡೆಸಿ ರಾತ್ರಿ 12 ಗಂಟೆಗೆ ವಿಜಯೋತ್ಸವಗಳಿಗೆಗೆ ಚಾಲನೆ ನೀಡುವ ಸಂಭ್ರಮಾಚರಣೆಯನ್ನು ಆಯೋಜಿಸುತ್ತಾ ಬಂದಿದೆ. ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ರಾತ್ರಿ 11.300 ಈ ಪೂರಕವಾಗಿ ಚರಿತ್ರೆಯ ಸಿಂಹಾವಲೋಕನದ ಚರ್ಚೆ ಸಂವಾದಗಳನ್ನು ನಡೆಸಿ. ಮದ್ಯರಾತ್ರಿ 12ಗಂಟೆಗೆ ವೀರಯೋಧ ಸಿದ್ಧನಾಕನ ವೇಷಧಾರಿಗಳಿಂದ ಹೊನಲುಬೆಳಕಿನ ಯುದ್ಧ ಪ್ರದರ್ಶನದ ಸಾಮೂಹಿಕ ನೃತ್ಯದ ಹಾಡಿನೊಂದಿಗೆ ಜನವರಿ 1ರ ಭೀಮಾಕೋರೇಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಲಾಗುವುದು.

ಈ ಕಾರ್ಯಕ್ರಮವು ಎಸ್.ಎಸ್.ಡಿ.ಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂವಾದದ ವಿವಿಧ ಗೋಷ್ಠಿಗಳನ್ನು ಇತಿಹಾಸ ತಜ್ಞರಿಂದ, ಹಿರಿಯ ಹೋರಾಟಗಾರರಿಂದ ಮತ್ತು ಹಿರಿಯ ಅಧಿಕಾರಿ ವರ್ಗದಿಂದ ನಡೆಸಲಾಗುವುದು. ಪ್ರತಿ ಅಂಬೇಡ್ಕರ್ ಅಭಿಮಾನಿಯು ಡಿಸೆಂಬರ್ 13ರ ಸಂಜೆ 6ಗಂಟೆಗೆ ಬೆಂಗಳೂರಿನ ನಾಗಸೇನ ಬುದ್ಧ ವಿಹಾರದ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಂವಾದ ಮತ್ತು ರಾತ್ರಿ ನಡೆಯುವ ವಿಜಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ.

ವಂದನೆಗಳೊಂದಿಗೆ,

(అంబరిషో.డి.ఎం)

ರಾಜ್ಯ ಸಂಚಾಲಕರು,

(ಲಯನ್ ಮಂಜುನಾಥ್)

ರಾಜ್ಯ ಪ್ರಧಾನ ಕಾರ್ಯದರ್ಶಿ

(ಪ್ರಶಾಂತ್. ಜಿ.ಪಿ)
1

Related Posts

Leave a Reply

Your email address will not be published. Required fields are marked *