ಪ್ರಯಾಗರಾಜ್ ಮಹಾಕುಂಭಮೇಳ
ಇದು 12 ವರ್ಷಕ್ಕೊಮ್ಮೆ ನಡೆಯೋ ಕುಂಭಮೇಳವಲ್ಲ,
ಮನುಷ್ಯನ ಏಳೂ ಜನ್ಮಗಳ ಪಾಪಗಳನ್ನೆಲ್ಲಾ ಒಂದೇ ಸಲಕ್ಕೆ ತೊಳೆಯಬಲ್ಲಂತಹ, ಶತಮಾನಗಳಿಗೊಮ್ಮೆ ಘಟಿಸೋ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ…
ಈ ಬಾರಿ ಪ್ರಯಾಗರಾಜ್..
ಇದೇ ಸಂಕ್ರಾಂತಿಯಿಂದ ಇಂತಾದ್ದೊಂದು ಮಹಾ ಅದ್ಭುತಕ್ಕೆ ತೆರೆದುಕೊಳ್ಳುತ್ತಿದೆ.
ಅದ್ಯಾವ್ ಜನ್ಮದಲ್ ಅದೇನ್ ಪುಣ್ಯ ಮಾಡಿದ್ವೋ ನಾವೆಲ್ಲಾ….
ಮನುಷ್ಯನಿಗೆ ಏಳು ಜನ್ಮಕ್ಕೊಮ್ಮೆ ಮಾತ್ರ ಪ್ರಾಪ್ತಿಯಾಗೋ ಪುಣ್ಯವೆನ್ನಲಾಗುವ, ಬರೋಬ್ಬರಿ 144ವರ್ಷಕ್ಕೊಮ್ಮೆ ಘಟಿಸೋ ಮಹಾಕುಂಭಮೇಳಕ್ಕೆ ಇದೇ ಜನವರಿ 13ರ ಪುಷ್ಯ ಹುಣ್ಣಿಮೆಯಂದು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ…
ಇದೇ ಸಂಕ್ರಾಂತಿಯಿಂದ…
ಶುರುವಾಗೋ ಪ್ರಯಾಗರಾಜ್ ಮಹಾಕುಂಭಮೇಳವು ಫೆಬ್ರವರಿ 26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ.
ಕುಂಭಮೇಳದ ಕೆಲವೊಂದು ವಿಶೇಷ ಸ್ನಾನಗಳು.
ಜನವರಿ 13 : ಪುಷ್ಯಹುಣ್ಣಿಮೆ
ಜನವರಿ 14 : ಮಕರಸಂಕ್ರಾಂತಿ.
ಜನವರಿ 29 : ಮೌನಿ ಅಮವಾಸ್ಯೆ
ಫೆಬ್ರವರಿ 03 : ವಸಂತಪಂಚಮಿ.
ಫೆಬ್ರವರಿ 12 : ಮಾಘಹುಣ್ಣಿಮೆ. ಹಾಗೂ,
ಫೆಬ್ರವರಿ 26 : ಮಹಾಶಿವರಾತ್ರಿ.
ಕುಂಭಮೇಳದಲ್ಲಿ ಮೂರು ವಿಧ…
1. ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸೋದು ಪೂರ್ಣ ಕುಂಭಮೇಳ.
ಇದನ್ನು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ.
2. ಈ ಪೂರ್ಣಕುಂಭ ಮೇಳವು 12 ಬಾರಿ ನಡೆದು ಒಂದು ವೃತ್ತ ಪೂರ್ಣವಾದಾಗ (12×12 = 144) ಅಂದರೆ 144ವರ್ಷಗಳಿಗೊಮ್ಮೆ ನಡೆಯೋದು ಮಹಾಕುಂಭಮೇಳ.
ಈ ಬಾರಿ ನಡೀತಿರೋದು ಕೂಡಾ ಇದೇ…
3. ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭದ ಹೆಸರಲ್ಲಿ ಕುಂಭಮೇಳದ ಆಯೋಜನೆಯಾಗುತ್ತದೆ. ಆದರೆ ಇದು ಪ್ರಯಾಗರಾಜ್ ಹಾಗೂ ಹರಿದ್ವಾರದಲ್ಲಿ ಮಾತ್ರ ಆಚರಿಸಲಾಗುತ್ತದೆ.
ನಾಲ್ಕು ವರ್ಷಕ್ಕೊಮ್ಮೆ ಕುಂಭಮೇಳವಾಗುವುದಿಲ್ಲ, ಇದು ತಪ್ಪುಮಾಹಿತಿ.
ನಾಲ್ಕೂ ಕುಂಭಮೇಳಗಳೂ ಪ್ರತ್ಯೇಕ ವರ್ಷಗಳಲ್ಲಿ ( ಪ್ರಯಾಗ್ ರಾಜ್ ಹಾಗೂ ಹರಿದ್ವಾರ ಒಂದೇ ವರ್ಷ ಅಥವಾ ಒಂದು ವರ್ಷದ ಆಸುಪಾಸಲ್ಲಿ ಬಂದ್ರೆ, ನಾಸಿಕ್ ಹಾಗೂ ಉಜ್ಜೈನಿಯು ಇದಾದ ಒಂದೆರಡು ವರ್ಷದ ನಂತರ ಒಟ್ಟಿಗೇ ಅಥವಾ ಒಂದುವರ್ಷದ ಆಜೂಬಾಜಲ್ಲಿ ಬರುತ್ತವೆ) ಅದರದ್ದೇ ಆದ ಘಳಿಗೆಗಳಲ್ಲಿಯೇ ನಡೆಯೋ ಹಾಗೂ ಅವುಗಳ ನಡುವಲ್ಲಿ ಎರಡು ಅರ್ಧ ಕುಂಭಮೇಳಗಳು ಕೂಡಾ ಬಂದುಹೋಗೋ ಕಾರಣ ಹೆಚ್ಚೂಕಡಿಮೆ ಮೂರು ವರ್ಷಗಳಿಗೊಮ್ಮೆ ಈ ನಾಲ್ಕು ಕ್ಷೇತ್ರಗಳಲ್ಲಿ ಯಾವುದಾದರೂ ಒಂದೆಡೆ ಕುಂಭಮೇಳ ಬರ್ತಿರೋ ಫೀಲ್ ಕೊಡುತ್ತೆ…
ಕುಂಭಮೇಳವು…
ಈ ನಾಲ್ಕು ಜಾಗಗಳಲ್ಲೇ ಯಾಕೆ ಎಂದರೆ,
ಅಮೃತಕ್ಕಾಗಿ ಸಮುದ್ರಮಂಥನವಾದ ಜಾಗವೇ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮಕ್ಷೇತ್ರ ಪ್ರಯಾಗ್ ರಾಜ್.
ಅಮೃತಕ್ಕಾಗಿ ಕಿತ್ತಾಟ ನಡೆದಾಗ ಮೋಹಿನಿ ಅವತಾರವೆತ್ತೋ ಮಹಾವಿಷ್ಣು ಆ ಅಮೃತ ತುಂಬಿದ್ದ ಕುಂಭವನ್ನು ಹೊತ್ತೊಯ್ಯುವಾಗ ಅದರ ನಾಲ್ಕು ಹನಿಗಳು ಭೂಮಿಯ ನಾಲ್ಕು ಕಡೆ ಬಿದ್ದವಂತೆ. ಆ ನಾಲ್ಕು ಹನಿಗಳು ಬಿದ್ದ ಜಾಗವೇ ಈ ನಾಲ್ಕು ಪುಣ್ಯಕ್ಷೇತ್ರಗಳು…
ಕುಂಭಮೇಳಕ್ಕೆ ಹೋಗೋದ್ ಹೇಗೆ?…
ವಿಮಾನದಲ್ಲಿ ಹೋಗೋದಾದಲ್ಲಿ…
1. ಬೆಂಗಳೂರಿಂದ ವಾರಣಾಸಿಗೆ ಹೋಗಿ,
ಅಲ್ಲಿಂದ ಪ್ರಯಾಗ್ ರಾಜ್ ಜಸ್ಟ್ 2-3 ಗಂಟೆ ದಾರಿ.
ವಾರಣಾಸಿಯಿಂದ ಪ್ರಯಾಗ್ ರಾಜ್‌ಗೆ ಟ್ರೈನು, ಬಸ್ಸು, ಟ್ಯಾಕ್ಸಿ, ಶೇರಿಂಗ್ ಟ್ಯಾಕ್ಸಿ, ಬಾಡಿಗೆಗ್ ಸೆಲ್ಫ್ ಡ್ರೈವ್ ಕಾರ್ ಬೈಕ್ ಹೀಗೇ ಎಲ್ಲಾ ತರಹದ ಸಾರಿಗೆಗಳೂ ಲಭ್ಯವಿದೆ.
2. ಬೆಂಗಳೂರಿಂದ ಅಯೋಧ್ಯಾ ತಲುಪಿದರೆ,
ಅಲ್ಲಿಂದ ಪ್ರಯಾಗರಾಜ್ 3-4 ಗಂಟೆಗಳ ಪ್ರಯಾಣ…
3. ಬೆಂಗಳೂರಿಂದ ಲಕ್ನೋಗ್ ಹೋದರೆ,
ಅಲ್ಲಿಂದ ಪ್ರಯಾಗ್ ರಾಜ್ 4-5 hr ರಸ್ತೆಮಾರ್ಗ.
4. ಬೆಂಗಳೂರಿಂದ ದೆಹಲಿ ಹೋದರೆ,
ಅಲ್ಲಿಂದ ಬೆಳಗಿನಜಾವ ಆರುಗಂಟೆಗೆ ವಂದೇ ಭಾರತ್ ರೈಲಿನಿಂದ ಶುರುವಾಗಿ ಇಡೀದಿನ ಹಲವಾರು ಎಕ್ಸ್‌ಪ್ರೆಸ್ ರೈಲುಗಳು ಲಭ್ಯವಿದೆ. ಕೇವಲ ಆರುಗಂಟೆಗಳ ದಾರಿ…
ಈ ಮೇಲಿನ ಜಾಗಗಳಲ್ಲಿ…
ಎಲ್ಲಿಗೇ ಹೋದರೂ ಕೂಡಾ ಎಲ್ಲಾ ಊರಿಂದಾನೂ ದಿನದ 24ಗಂಟೆಯೂ ಸರ್ಕಾರಿ ಹಾಗೂ ಪ್ರೈವೇಟು ಬಸ್ಸುಗಳೂ, ರೈಲು ಹಾಗೂ ಟ್ಯಾಕ್ಸಿಗಳೂ ಲಭ್ಯ ಪ್ರಯಾಗ್‌ರಾಜ್ ಗೆ..
ಇನ್ನು ರೈಲಿನಲ್ಲಿ ಹೋಗೋದಾದಲ್ಲಿ…
ಪ್ರಯಾಗರಾಜಿಗೆ ಬೆಂಗಳೂರಿಂದ ಪ್ರತೀದಿನ ಹಲವಾರು ಡೈರೆಕ್ಟ್ ರೈಲುಗಳು ಲಭ್ಯವಿದ್ದು,
ಹುಬ್ಬಳ್ಳಿಯಿಂದಲೂ ಪ್ರತೀ ಶುಕ್ರವಾರ ಡೈರೆಕ್ಟ್ ರೈಲು ಲಭ್ಯವಿದೆ.
ಊಟ ವಸತಿಗೆಲ್ಲಾ ಏನ್ಮಾಡೋದು?..
ಪ್ರಯಾಗರಾಜ್ ಲ್ಲಿ ಕುಂಭ ಮೇಳ ನಡೆಯುತ್ತಿರೋ ಸಂಗಮದ ಬಳಿಯಲ್ಲಿ ಕಿಲೋಮೀಟರುಗಳ ಸುತ್ತಳತೆಯಲ್ಲಿ ಹೊಸದಾಗಿ ತಾತ್ಕಾಲಿಕ ನಗರವೊಂದನ್ನೇ ನಿರ್ಮಾಣ ಮಾಡಲಾಗಿದ್ದು, ಸಾವಿರಾರು ಟೆಂಟ್ ಹೌಸು, ಬೋಟ್ ಹೌಸು, ಶಿಬಿರಗಳು ಇತ್ಯಾದಿಗಳ ನಿರ್ಮಾಣ ಮಾಡಲಾಗಿದೆ.
ನಮ್ಮ ಹಣಕಾಸಿನ ಅನುಕೂಲಕ್ಕೆ ತಕ್ಕಂತೆ ಎಲ್ಲಿಯು ಉಳಿದುಕೊಳ್ಳಬಹುದು.
ಇದಲ್ಲದೆ ನಗರ ಮಧ್ಯದಲ್ಲಿರೋ ಸಿವಿಲ್ ಲೈನ್ ( ನಮ್ಮಲ್ಲಿರೋ ಎಮ್ ಜಿ ರೋಡ್ ಇದ್ದಂಗೆ ) ಅನ್ನೋ ಏರಿಯಾ ಕಡೆ ಹೋದಲ್ಲಿ ನೂರಾರು ಹೋಟೆಲ್ಲುಗಳಿದಾವೆ.
ಊಟಕ್ಕೆ ಸಂಗಮದ ಬಳಿ ಹೆಜ್ಜೆಗೊಂದು ಉಚಿತ ಅನ್ನದಾನಕೇಂದ್ರಗಳ ಆಯೋಜನೆಯಾಗಿರೋದ್ರಿಂದಾಗಿ ಅದಕ್ಕೂ ಯಾವುದೇ ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ.
ಇನ್ನೊಂದು ವಿಚಾರವೆಂದರೆ…
ದಿನಗಟ್ಟಲೇ ಕುಂಭಮೇಳದಲ್ಲೇ ಕಳೆಯೋ ಯೋಚನೆಯಿಲ್ಲದಿದ್ದಲ್ಲಿ ತೀರಾ ದುಬಾರಿ ಹಣತೆತ್ತು ಪ್ರಯಾಗರಾಜ್ ಲ್ಲಿ ಉಳಿದುಕೊಳ್ಳೋ ಅಗತ್ಯವೇ ಇಲ್ಲ.
ಮೊದಲು ಸೀದಾ ವಾರಣಾಸಿಗೆ ಹೋಗಿ,
ಅಲ್ಲಿ ರೂಮ್ ಮಾಡಿ, ಕಾಶಿವಿಶ್ವನಾಥ ಗಂಗಾರತಿ ನೋಡಿಕೊಂಡು ಮರುದಿನ ಬೆಳ್ ಬೆಳಿಗ್ಗೆ ಪ್ರಯಾಗರಾಜ್ ಕಡೆ ಹೋದಲ್ಲಿ,
ಇಡೀ ದಿನ ಸುತ್ತಾಡಿ ಸ್ನಾನ ಪೂಜಾದಿಗಳನ್ನು ಮುಗಿಸಿ, ಮರಳಿ ರಾತ್ರಿಯೊಳಗೆ ವಾರಣಾಸಿಗೆ ಬಂದು ತಂಗಬಹುದಾಗಿದೆ.
ಕೊನೆಯದಾಗಿ :
ಸನಾತನಧರ್ಮದ ಸರ್ವನಾಶಕ್ಕೆಂದೇ ಹುಟ್ಟಿಬಂದವರಂತೆ ಭಾರತಕ್ಕೆ ಕಾಲಿಟ್ಟ ಮೊಘಲರು,
ಅಯೋಧ್ಯೆಯ ರಾಮ, ಮಥುರೆಯ ಕೃಷ್ಣ, ಕಾಶಿಯ ಶಿವ ವಿಷ್ಣು, ಜ್ಯೋತಿರ್ಲಿಂಗಗಳು ಹೀಗೆ ಹಿಂದೂ ಧರ್ಮದ ಅಸ್ತಿತ್ತ್ವಗಳನ್ನೇ ನೆಲಸಮ ಮಾಡಿದೆವೆಂದು ಬೀಗಿದರೂ ಕೂಡಾ…
ಮುನ್ನೂರಕ್ಕೂ ಅಧಿಕ ವರ್ಷಗಳ ಕಾಲ ಮುಘಲರ ಹತ್ತಾರು ತಲೆಮಾರುಗಳೇ ಬಂದು ಹೋದರೂ,ಕೊನೆಗೆ ಅವರೇ ಸರ್ವನಾಶವಾದರೇ ಹೊರತು,
ಅಷ್ಟೂ ವರ್ಷಗಳಲ್ಲಿ ಒಬ್ಬನೇ ಒಬ್ಬನ ಕೈಲೂ, ಒಂದೇ ಒಂದು ಕುಂಭಮೇಳವನ್ನು ತಡೆಯೋದಿರಲಿ, ಕುಂಭಮೇಳಕ್ಕೆ ಆಗಮಿಸೋ ಒಂದೇ ಒಂದು ಸಾಧುಗಳನ್ನು ಬರದಂತೆ ತಡೆದು ನಿಲ್ಲಿಸೋದು ಕೂಡಾ ಸಾಧ್ಯವಾಗಲಿಲ್ಲ ಅಂದ್ರೆ ಅದಿನ್ನೆಂತಾ ಪವರ್ಫುಲ್ ಇರಬಹುದೋ ಕುಂಭಮೇಳ ತಾಕತ್ತು ಜಸ್ಟ್ ಇಮ್ಯಾಜಿನ್….!!