ಡಾ.ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ
Dr.Ram Manohar Lohia Thinkers Forum
ರಾಷ್ಟ್ರೀಯ ಜಾತಿಗಣತಿ ಒತ್ತಾಯಿಸಿ ರಾಜ್ಯ ಜಾಥಾ
ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಕೋವಿಡ್-19 ಸಾಂಕ್ರಾಮಿಕದ ಕಾರಣ ನಡೆಸಲಾಗಲಿಲ್ಲ. ಇದನ್ನು 2025ರಲ್ಲಿ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಈ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಕಲಂ ಸೇರಿಸಿ, ದೇಶಾದ್ಯಂತ ಎಲ್ಲ ಪಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕೆನ್ನುವುದು ನಮ್ಮ ಒತ್ತಾಯ. ರಾಜ್ಯ ಸರ್ಕಾರ ಈ ಕುರಿತು ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕೆನ್ನುವುದು ನಮ್ಮ ಬೇಡಿಕೆ, ಇದನ್ನು ಸಾಧಿಸಲು ನಾವು ಪ್ರತಿ ಜಿಲ್ಲೆಯಲ್ಲಿ ಜಾತಿ ಜನಗಣತಿ ಜಾಥಾ ಆಯೋಜಿಸಲು ನಿರ್ಧರಿಸಿದ್ದೇವೆ.
ಕಳೆದ ಸಾರಿ ದೇಶದಲ್ಲಿ ಜಾತಿಗಣತಿ ನಡೆದಿದ್ದು 1931ರಲ್ಲಿ ಈ 94 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ 100 ಕೋಟಿಗಿಂತಲೂ ಹೆಚ್ಚು ವಿರಿದ್ದು, ನೂರಾರು ಅತಿ ಹಿಂದುಳಿದ ಸಮುದಾಯಗಳ ವಿವರ ದೊರೆಯದೆ ಅವುಗಳು ಅವಕಾಶ ವಂಚಿತವಾಗಿವೆ.
ಈ ಹಿಂದುಳಿದ ಸಮುದಾಯಗಳ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ, ಇವುಗಳಿಗೆ ಸೇರಿದ ಮುಕ್ಕಾಲು ಪಾಲು ಜನರು ಪ್ರೌಢಶಿಕ್ಷಣ ಪಡೆದುಕೊಳ್ಳಲಾಗಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ 102 ಜಾತಿಗಳನ್ನು ಹಿಂದುಳಿದ ಸಮುದಾಯಗಳ ಪಟ್ಟಿಯ ಪವರ್ಗ -1ರಲ್ಲಿ ಸೇರಿಸಲಾಗಿದೆ. ಇನ್ನುಳಿದ 95 ಜಾತಿಗಳು ಪ್ರವರ್ಗ 2(ಎ)ರಲ್ಲಿ ಒಳಗೊಂಡಿವೆ. ಅಧ್ಯಯನವೊಂದರ ಪ್ರಕಾರ ಇವುಗಳಲ್ಲಿ 97 ಜಾತಿಗಳಿಗೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿಯೂ ಸರ್ಕಾರದಲ್ಲಿ ಅಟೆಂಡರ್ ಹುದ್ದೆ ಕೂಡಾ ಪಡೆದುಕೊಳ್ಳಲು ಆಗಿಲ್ಲ.
ಹಿಂದುಳಿದ ಸಮುದಾಯಕ್ಕೆ ಸೇರಿದ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 54ರಷ್ಟಿದ್ದರೂ, ಅವುಗಳಿಗೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗಬೇಕಾದ ಅವಕಾಶ ಸಿಕ್ಕಿಲ್ಲ ಈ ಬಗೆಯ ಶಾರತಮ್ಯದಿಂದ ಜನತಂತ್ರದ ಮೂಲ ಆಶಯವಾದ ಸಮಸಮಾಜದ ನಿರ್ಮಾಣ ಅಸಾಧ್ಯ, ಜಾತಿ, ಉಪಜಾತಿಗಳ
ಸಮೀಕ್ಷೆ ನಡೆಸಿ, ಅವುಗಳ ಸ್ಥಿತಿಗತಿಗಳಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸುವುದೇ ಈ ಸಮಸ್ಯೆಗೆ ಪರಿಹಾರ. ಇದನ್ನು ಮನಗಂಡ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 2015ರಲ್ಲಿ ಜಾತಿಗಣತಿ ನಡೆಸುವ ಕಾರ್ಯವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಿತ್ತು ಆ ಮೂಲಕ ಕರ್ನಾಟಕ, ಜಾತಿಗಣತಿ ಕೈಗೆತ್ತಿಕೊಂಡ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ
ತಾಂತ್ರಿಕ ಕಾರಣಗಳಿಂದಾಗಿ ಎಚ್ ಕಾಂತರಾಜ್ ನೇತೃತ್ವದ ಆಯೋಗ 2018ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ. ಆನಂತರ ಬಂದ ಸರ್ಕಾರಗಳು ವಿವಿಧ ಕಾರಣಗಳಿಗಾಗಿ ವರದಿಯನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ಪ್ರಯತ್ನ ನಡೆಸಿದ ಫಲವಾಗಿ ಕೆ. ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ವರ ವರದಿಯನ್ನು 2024ರ ಫೆಬ್ರವರಿಯಲ್ಲಿ ಸಲ್ಲಿಸಿತು.
ಆದರೆ, ವರದಿಯು ಸುಮಾರು ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ದತ್ತಾಂಶ ಪ್ರಸ್ತುತ ಜನಸಂಖ್ಯೆಗೆ ಅಪ್ರಸ್ತುತವಾಗಿದೆ.. ಇದೇ ವೇಳೆ, ಕೇಂದ್ರ ಸರ್ಕಾರ ಜನಗಣತಿಗೆ ಸಜ್ಜಾಗಿದೆ. ಈ ಗಣತಿಯನ್ನು ಜಾತಿಗಣತಿಯಾಗಿ ಪರಿವರ್ತಿಸುವುದೇ ಈಗಿನ ಸಮಸ್ಯೆಗೆ ಸೂಕ್ತ ಪರಿಹಾರ.
ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಅಂಶವನ್ನು ಸೇರಿಸಬೇಕೆಂದು ಕೇಂದ್ರ ಸರ್ಕಾರರವನ್ನು ಒತ್ತಾಯಿಸುವುದರೊಂದಿಗೆ ನಾವು ರಾಜ್ಯ ಸರ್ಕಾರವನ್ನು ಈ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಒತ್ತಾಯಿಸುತ್ತೇವೆ. ನಿರ್ಣಯವನ್ನು ರಾಜ್ಯ ಸಂಪುಟ ಮತ್ತು ಉಭಯ ಶಾಸನ ಸಭೆಗಳಲ್ಲಿ ಅಂಗೀಕರಿಸಬೇಕು.
ಮಾರ್ಚ್‌ನಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದ ವೇಳೆ ನಿರ್ಣಯವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ಅಂಗೀಕರಿಸಬೇಕು. ಅಧಿವೇಶನದ ಅಂತ್ಯದವರೆಗೂ ಕಾದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಾವು ಜಾತಿ ಜನಗಣತಿ ಜಾಥಾ ಹಮ್ಮಿಕೊಳ್ಳುತ್ತೇವೆ.
ಅಲ್ಲದೆ, ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲಾ ಶಾಸಕರು ಪಕ್ಷಾತೀತವಾಗಿ ನಮ್ಮ ಜೊತೆ ಕೈ ಜೋಡಿಸಿ ಹೋರಾಟವನ್ನು
ಬಲಪಡಿಸಬೇಕೆಂದು ಅವರಿಗೆ ನಮ್ಮ ಕರೆ. ಕೆಲವು ಸಮುದಾಯಗಳಿಗೆ ರಾಜ್ಯದ ಜಾತಿಗಣತಿ ಕುರಿತು ಕೆಲವು ಆತಂಕಗಳಿವೆ. ವರದಿಯ ವಿವರಗಳು ಅಧಿಕೃತವಾಗಿ
ಪ್ರಕಟವಾಗದಿರುವಾಗ ಆತಂಕಕ್ಕೆ ಕಾರಣವಿಲ್ಲ.
ಅಲ್ಲದೆ, ಕೇಂದ್ರದ ಜನಗಣತಿ ಜಾತಿಗಣತಿಯಾದರೆ ಪ್ರಸ್ತುತ ಜನಸಂಖ್ಯೆಗೆ ಅನುಸಾರವಾಗಿ ಹೊಸ ದತ್ತಾಂಶ ದೊರೆತು ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗಾಗಿ, ಆತಂಕಿತ ಸಮುದಾಯಗಳು ಮತ್ತು ಇತರ ಎಲ್ಲಾ ಸಮುದಾಯಗಳು ನವ ಹೋರಾಟದಲ್ಲಿ ಜತೆಯಾಗಬೇಕೆಂದು ಮನವಿ,
Rone
ಬಿ.ಎಸ್.ಶಿವಣ್ಣ
ಡಾ.ಬಂಜಗೆರೆ ಜಯಪ್ರಕಾಶ್
ಅಧ್ಯಕ್ಷರು
సమాజవాది జంవరరు
ಡಾ.ಕೃಷ್ಣರಾಜ್.
ರಕ್ಷಾ ರಾಮಯ್ಯ ಯುವನಾಯಕರು
ಲೋಹಿಯ ವಿಚಾರ ವೇದಿಕೆ
ಆರ್ಥಿಕ ತಜ್ಞರು
No.24/8, 1 Main, Dollors Colony, RMV 1″ Stage, Bengaluru-5600
Mobile No: +91 9448417379