ಒಳಮೀಸಲಾತಿ ಜಾರಿಗಾಗಿ
ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಏನ್ ಮೂರ್ತಿ ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಿದ್ದರು
ಮನುವಾದಿ ವ್ಯವಸ್ಥೆಯಿಂದ ಶೋಷಣೆಗೆ ಒಳಪಟ್ಟು ಸ್ವತಂತ್ರ ಭಾರತದಲ್ಲಿ ಪರಮಪೂಜ್ಯ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿದಾನದ ಪೀಠಿಕೆಯಲ್ಲಿ ಪ್ರಥಮವಾಗಿ ಎಲ್ಲರಿಗೂ ನ್ಯಾಯ ಸಿಗಬೇಕೆನ್ನುವ ಆಶಯವನ್ನು ಆಳವಡಿಸಿದ್ದಾರೆ. ಇದರ ಅನುಷ್ಠಾನಕ್ಕಾಗಿ ಸಂವಿಧಾನದ 15. 16 ಅನುಚ್ಛೇದದಲ್ಲಿ ಪರಿಶಿತ್ತ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮೂಲಭೂತ ಹಕ್ಕನ್ನು ನೀಡಿದ್ದರೂ ಕಳೆದ 77 ವರುಷ ಗಳಿಂದಲೂ ಕರ್ನಾಟಕ ಮಾದಿಗ ಸಮಾಗರ ಡೋಹಾರ ಮಚ್ಚಗಾರ ಜಾತಿಗೆ ಮೀಸಲಾತಿಯಲ್ಲಿ ಸಿಗಬೇಕಾದ ನ್ಯಾಯಯುತವಾದ ಪಾಲು ಸಿಗಲಿಲ್ಲ ಎಂದು ತಮ್ಮ ಅನುಭವದಿಂದತಿಳಿದು ಕಳೆದ 30 ವರ್ಷಗಳಿಂದಲೂ ಈ ಸಮಾಜ ಸತತವಾಗಿ ಹೋರಾಡುತ್ತಾ ಬಂದಿದೆ.
ಇವರ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ 2005 ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚನೆ ಮಾಡಿತು ಈ ಆಯೋಗವು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದ 96 60 ಲಕ್ಷ ಜನರ ಇದರಲ್ಲಿ 158 ಲಕ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿದಂತೆ) ಮನೆ-ಮನೆ ಸಮೀಕ್ಷೆಯ ಮೂಲಕ ಅವರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ, ನಾಲ್ಕು ಗುಂಪುಗಳಿಗೆ ಮೀಸಲಾತಿ ಸೌಲಭ್ಯಗಳ ಹಂಚಿಕೆಗೆ ಶಿಫಾರನ್ನು ಮಾಡಿದರು. ಈ ಮಾಹಿತಿಯನ್ನು ಸಂಗ್ರಹಿಸಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಅವರು ಸುಮಾರು 7 ವರ್ಷಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ವಿವಿಧ ಪರಿಶಿಷ್ಟ ಜಾತಿಯ ಸಂಘ ಸಂಸ್ಥೆಗಳು, ಆದರ ಮುಖಂಡರನ್ನು ಭೇಟಿ ಮಾಡಿ ಅವರ ಮನವಿಗಳನ್ನು ಸ್ವೀಕರಿಸಿ, ಅದನ್ನು ಅಧ್ಯಯನ ಮಾಡಿದ ಆಯೋಗವು ತಮ್ಮ ವರದಿಯನ್ನು 2012ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಸದಾನಂದ ಗೌಡ ಅವರಿಗೆ ಸಲ್ಲಿಸಿತು ಆದರೆ ಅಂದಿನ ಬಿಜೆಪಿ ಸರ್ಕಾರ ಈ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ.
ವಚನಭ್ರಷ್ಟ ಕಾಂಗ್ರೇಸ್, ಬಿಜೆಪಿ ಜೆಡಿಎಸ್ ಸರ್ಕಾರಗಳು ಜನತಾದಳ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರ
ಮಾಡುವುದಾಗಿ ಹೇಳಿ ಗೆದ್ದ ಮೇಲೆ ಜಾರಿ ಮಾಡದೆ ವಚನಭ್ರಷ್ಟರಾಗಿ ರಾಜ್ಯದ ಮಾದಿಗ, ಸಮಗಾರ, ಡೋಹರ, ಮಚಿಗಾರ ಸಮಾಜಕ್ಕೆ ಘೋರ ಅನ್ಯಾಯವನ್ನು ಮಾಡಿ, ಸಂವಿಧಾನದ ಆಶಯಗಳಾದ ಮೂಲಭೂತ ಹಕ್ಕುಗಳನ್ನು, ನ್ಯಾಯವನ್ನು ನಿರಾಕರಣೆ ಮುಂದುವರೆಸುತ್ತಾ ಬಂದಿವೆ. 2023 ರಲ್ಲಿ ಕಾಂಗ್ರೆಸ್ ದೊಡ್ಡ ಸಮಾವೇಶ ಮಾಡಿ ತಾನು ಅಧಿಕಾರಕ್ಕೆ ಬಂದರೇ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಆದರೇ ಅವರ ಪ್ರಣಾಳಿಕೆಯಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಬಿಜೆಪಿ ಸರ್ಕಾರದ ಮಂತ್ರಿ ಮಾದುಸ್ವಾಮಿ ಸಮಿತಿ ಅವೈಜ್ಞಾನಿಕ ವರದಿ: ಮಾದಿಗರ ಮುಂದುವರೆದ ಹೋರಾಟಗಳಿಂದ 2023 ಚುನಾವಣಾ ಸಮೀಪದಲ್ಲಿ ಬಿಜೆಪಿ ಸರ್ಕಾರದ ಮಂತ್ರಿ ಮಾದುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದರು. ಈ ಸಮಿತಿ ಯಾವುದೇ ಅಧ್ಯಯನ ನಡೆಸದೆ ತನ್ನ ವಿವೇಚನೆಯಿಂದ ಅಂಕಿ ಅಂಶಗಳನ್ನು ಕಲೆಹಾಕಿ ಮಾದಿಗ, ಸಮಗಾರ, ಡೋಹರ, ಮಚಿಗಾರ ಜಾತಿಗಳಿಗೆ 6%, ಹೊಲೆಯ ಮತ್ತು ನಂಬಂಧಿತ ಜಾತಿಗಳಿಗೆ 5.5%, ಭೋವಿ, ಕೊರಚ ಲಮಾಣಿ ದೃಶ್ಯ ಜಾತಿಗಳಿಗೆ 4.5% ಅಲೆಮಾರಿಗಳಿಗೆ 1% ಮೀಸಲಾತಿಯನ್ನು ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕೈ ತೊಳೆದುಕೊಂಡರು.
ಸುಪ್ರೀಂಕೋರ್ಟ್ ನಲ್ಲಿ ಮಾದಿಗೆ ಹೋರಾಟಕ್ಕೆ ಸಂದ ಜಯ ಮಾನ್ಯ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವುದು ಸಂವಿಧಾನ ಬದ್ಧವಾಗಿದೆ ಎಂದು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ ದಿನಾಂಕ: 1-8-2024 ರಂದು ಆದೇಶ ನೀಡಿತು. ಆದರೆ ಕರ್ನಾಟಕ ಸರ್ಕಾರ ಈ ಆದೇಶವನ್ನು ಜಾರಿ ಮಾಡುವ ಬದಲು ದತ್ತಾಂಶ ಸಂಗ್ರಹಿಸಿ 3 ತಿಂಗಳ ಒಳಗೆ ತಮ್ಮ ಶಿಫಾರಸ್ಸು ನೀಡುವಂತೆ ಆದೇಶಿಸಿ ಮತ್ತೊಂದು ಆಯೋಗವನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಮಾಡಿದೆ. ಆದರೆ, ರಾಜ್ಯದ ಬೃಹತ್ ಪರಿಶಿಷ್ಟ ಜಾತಿಯ ಜನಸಂಖ್ಯೆಯನ್ನು ಸಂಪರ್ಕಿಸಿ ಮೂರು ತಿಂಗಳ ಒಳಗೆ ದತ್ತಾಂಶ ಸಂಗ್ರಹ ಮಾಡುವುದು ಅಸಾಧ್ಯ.
ವೈಜ್ಞಾನಿಕವಾಗಿ ದತ್ತಾಂಶ ಹೊಂದಿರುವ ಸದಾಶಿವ ಆಯೋಗದ ವರದಿ ಅಪ್ರಸ್ತುತಗೊಳಿಸದೆ ಸಚಿವ ಸಂಪುಟ ಅಥವಾ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲು ಆಗ್ರಹ:
ಸದಾಶಿವ ಆಯೋಗವನ್ನು ರೂ. 14 ಕೋಟಿ ವೆಚ್ಚ ಮಾಡಿ ಕೇವಲ 6% ವ್ಯತ್ಯಾಸ ಇರಬಹುದಾದ ನಿಖರವಾದ ದತ್ತಾಂಶವನ್ನು ಅಧ್ಯಯನ ಮಾಡಿ ತಯಾರಿಸಿರುವ ವರದಿಯನ್ನು ಯಾವುದೇ ಒತ್ತಡಕ್ಕೆ ಮಣಿದು ಅಪ್ರಸ್ತುತಗೊಳಿಸಬಾರದೆಂದು ಒತ್ತಾಯಿಸಿದ್ದರು