ವಿಜ್ಞಾನದೆಡೆಗೆ ನಮ್ಮ ನಡಿಗೆ

ದಿನಾಂಕ 17.01.2025ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ: ವಿಜ್ಞಾನದೆಡೆಗೆ ನಮ್ಮ ನಡಿಗೆ

ಡಾ. ಹೆಚ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವದ ಮುಂದುವರೆದ ಕಾರ್ಯಕ್ರಮ ಬೆಂಗಳೂರಿನಿಂದ ಹೆಚ್ ನರಸಿಂಹಯ್ಯ ಅವರ ಹುಟ್ಟೂರು ಗೌರಿಬಿದನೂರು ತಾಲ್ಲೂಕಿನ ಹೊಸೂರಿಗೆ ಪಾದಯಾತ್ರೆ

ಸ್ವಾತಂತ್ರ್ಯ ಹೋರಾಟಗಾರ, ವಿಚಾರವಾದಿ, ಗಾಂಧಿವಾದಿ, ಚಿಂತಕ ಡಾ. ಹೆಚ್. ನರಸಿಂಹಯ್ಯ ಅವರ ಜನ್ಮ ಕತಮಾನೋತ್ಸವದ ಸಂದರ್ಭದಲ್ಲಿ ಕರ್ನಾಟಕ, ಇಂದಿನ ಸಮಿತಿ ಮನೆ ಮನೆಗೆ ಹೆಚ್ಚಿನ್, ಶಾಲೆ-ಕಾಲೇಜುಗಳಿಗೆ ಹಟೈನ್ ಎಂಬ ಶೀರ್ಷಿಕೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದೆ. ಇದರ ಮೂಲಕ ಜನರಲ್ಲಿ ಪ್ರಶ್ನಿಸುವ ಮನೋಭಾದ, ವೈಜ್ಞಾನಿಕ ಚಿಂತನೆ ಬೆಳೆಸುವ ಪ್ರಯತ್ನ ಮಾಡಲಾಗಿದೆ. ಡಾ. ಹೆಚ್ಚಿನ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದವರು. ಮೈಸೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದವರು. ಸ್ವಾತಂತ್ರ್ಯಾ ನಂತರ ನ್ಯಾಷನಲ್ ಕಾಲೇಜಿನ ಪ್ರಾಚಾರ್ಯರಾಗಿ, ಅಧ್ಯಕ್ಷರಾಗಿ, ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿಗಳಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಕ್ಷತೆ, ಪ್ರಾಮಾಣಿಕತೆಯಿಂದ ದುಡಿದಿದ್ದಾರೆ.

ಡಾ. ಹೆಚ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವದ ಮುಂದುವರೆದ ಭಾಗವಾಗಿ ಬೆಂಗಳೂರಿನಿಂದ ಡಾ. ಎಚೈನ್ ಅವರ ಹುಟ್ಟೂರು ಹೊಸೂರಿಗೆ ಪಾದಯಾತ್ರೆ ಕೈಗೊಳ್ಳಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉದ್ದೇಶಿಸಿದೆ. ಇದಕ್ಕಾಗಿ ಚಿಂತಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಗೌರವಾಧ್ಯಕ್ಷರಾಗಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯಾಧ್ಯಕ್ಷರಾದ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರಾದ ಶ್ರೀ ಸತೀಶ್ ಜಾರಕೀಹೊಳಿ ಅವರು ಗೌರವ ಸಲಹೆಗಾರರಾಗಿದ್ದಾರೆ. ಪಾದಯಾತ್ರೆ ಮಾರ್ಗದ ಎಲ್ಲ ಶಾಸಕರನ್ನೂ ಈ ಸ್ವಾಗತ ಸಮಿತಿಯಲ್ಲಿರುವಂತೆ ಮನವಿ ಮಾಡಿದೆ. ಜೊತೆಗೆ ಮಾನವ ಬಂಧುತ್ವ ವೇದಿಕೆ. ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್, ಡಾ. ಎಚ್ಚೆನ್ ಸಾಂಸ್ಕೃತಿಕ ಸಾಮಾಜಿಕ ಟ್ರಸ್ಟ್, ಹೊಸೂರಿನ ಹಳೆ ವಿದ್ಯಾರ್ಥಿಗಳ ಸಂಘ, ನ್ಯಾಷನಲ್ ಎಜುಕೇಶನ್ ಸೊಸೈಟಿ, ಬೆಂಗಳೂರು ವಿಜ್ಞಾನ ವೇದಿಕೆ, ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ವೇದಿಕೆ, ದಲಿತ ಸಂಘರ್ಷ ಸಮಿತಿ, ರೈತ ಸಂಘ ಮುಂತಾದ ಸಂಘಟನೆಗಳು ಈ ಸ್ವಾಗತ ಸಮಿತಿಯಲ್ಲಿದ್ದು ಸಹಕಾರ ನೀಡುತ್ತಿವೆ.

ದಿನಾಂಕ 27.01.2025ರ ಸೋಮವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ ಉದ್ಘಾಟನೆಯಾಗುವ ಈ ಪಾದಯಾತ್ರೆಯು ಮುಂದೆ ಹೆಬ್ಬಾಳು, ಯಲಹಂಕ, ರಾಜಾನುಕುಂಟೆ, ದೊಡ್ಡಬಳ್ಳಾಪುರ, ತೊಂಡೇಬಾವಿ, ಗೌರಿಬಿದನೂರು ಮಾರ್ಗವಾಗಿ ಜನವರಿ 31 ರಂದು ಹೊಸೂರು ತಲುಪಿ ಅಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಪಾದಯಾತ್ರೆಯ ತಂಡದ ಜೊತೆಗೆ ವೈಜ್ಞಾನಿಕ ಮನೋಭಾವ ಮೂಡಿಸುವ ಬೀದಿ ನಾಟಕ, ಪವಾಡಗಳ ರಹಸ್ಯ ಬಯಲು ಚಟುವಟಿಕೆ, ಜನ ಸಂವಾದ ಹಾಗೂ ಹೆಚ್ಚಿನ್ ಪರಿಚಯಿಸುವ ಪುಸ್ತಕಗಳ ಮಾರಾಟದ ವ್ಯವಸ್ಥೆ ಮಾಡಲಾಗುತ್ತದೆ. ಪಾದಯಾತ್ರೆಯಲ್ಲಿ ಐದೂ ದಿನಗಳ ಕಾಲ ನೂರು ಜನರು ಭಾಗವಹಿಸಲಿದ್ದು ಅದಲ್ಲದೇ ಒಂದು, ಎರಡು ದಿನಗಳ ಅವಧಿಗೂ ಕೆಲವರು ಭಾಗಿಯಾಗಲಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪಾದಯಾತ್ರಿಗಳು ಆಗಮಿಸುವುದರ ಜೊತೆಗೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೂ ವಿಜ್ಞಾನ ಸಂಘಟನೆಗಳ ಬೆಳವಣಿಗೆಗೆ, ವೈಜ್ಞಾನಿಕ ಚಿಂತನೆ ಮೂಡಿಸುವ ಕಾರ್ಯಕ್ರಮಗಳಲ್ಲಿ ಡಾ. ಹೆಚ್ಚಿನ್ ಅವರು ಭಾಗವಹಿಸಿದ್ದು ಆ ರಾಜ್ಯಗಳಿಂದಲೂ ಪಾದಯಾತ್ರಿಗಳು ಭಾಗವಹಿಸಲಿದ್ದಾರೆ. ಪ್ರತಿದಿನ ರಾತ್ರಿ ವಸತಿ ಮಾಡುವ ಸ್ಥಳದಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ.

ವಿಜ್ಞಾನವನ್ನು ಪ್ರೀತಿಸುವ ಆನೇಕರು ವೈಜ್ಞಾನಿಕ ಚಿಂತನೆಯಲ್ಲಿ ಹಿಂದೆ ಬೀಳುವುದನ್ನು ನೋಡುತ್ತಿದ್ದೇವೆ. ಉಪಗ್ರಹಗಳ ಉಡಾವಣೆಗೆ ಮುನ್ನ ತಿರುಪತಿಗೆ ಹೋಗಿ ಪೂಜೆ ಮಾಡಿಸಲಾಗುತ್ತದೆ! ರಾಹುದೇ ಇಲ್ಲದ ಮೇಲೆ ರಾಹುಕಾಲ ಎಲ್ಲಿ ಬಂತಪ್ಪ ಎಂದು ಡಾ. ಹೆಚ್ಚೆನ್ ಹೇಳುತ್ತಿದ್ದರು. ಆದರೆ ರಾಹುಕಾಲ, ಗುಳಿಕಕಾಲ, ಕೆಟ್ಟ ಕಾಲ, ಒಳ್ಳೆ ಕಾಲ, ಗ್ರಹ ದೋಶ, ಭವಿಷ್ಯ, ವಾಸ್ತು ದೋಶ ಇವುಗಳ ಮೂಲಕ ಜನರನ್ನು ಮತ್ತಷ್ಟು ಹಿಂದೆ ಕೊಂಡೊಯ್ಯಲಾಗುತ್ತಿದೆ. ಮೌಡ್ಯಾಚರಣೆಯ ಹೆಸರಿನಲ್ಲಿ ಜನರ ಹಣವನ್ನು ದೋಚಲಾಗುತ್ತಿದೆ ಕೆಲವೊಮ್ಮೆ ಪ್ರಾಣ ಹಾನಿಯೂ ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಲಭ್ಯವಾಗುವ ಎಲ್ಲ ಸಂದರ್ಭಗಳನ್ನು ಬಳಸಿಕೊಂಡು ವೈಜ್ಞಾನಿಕ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿದೆ. ವಿಜ್ಞಾನದೆಡೆಗೆ ನಮ್ಮ ನಡಿಗೆ ಪಾದಯಾತ್ರೆಯ ಮೂಲಕ ವೈಜ್ಞಾನಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಐದೂ ದಿನಗಳು ಭಾಗವಹಿಸುವ ಪಾದಯಾತ್ರಿಗಳಿಗೆ ಊಟ, ವಸತಿ ಏರ್ಪಾಟು, ಟೀ ಶರ್ಟ್, ಗಾಂಧಿ ಟೊಪ್ಪಿಗೆ, ಬ್ಯಾಗ್, ನೆನಪಿನ ಕಾಣಿಕೆ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು. ಐದೂ ದಿನಗಳು ಭಾಗವಹಿಸಲು ಸಾಧ್ಯವಾಗದವರು ಒಂದು. ಎರಡು, ಮೂರು ದಿನ ತಮಗೆ ಅನುಕೂಲವಾದ ದಿನದಂದು ಭಾಗವಹಿಸಬಹುದು. ವೈಜ್ಞಾನಿಕ ಜಾಗೃತಿಗಾಗಿ ನಡೆಯುತ್ತಿರುವ ಈ ವಿಶೇಷವಾದ ಪಾದಯಾತ್ರೆಯಲ್ಲಿ ನಾಡಿನ ಆಸಕ್ತರು ಭಾಗವಹಿಸಲು

ಮನವಿ ಮಾಡಿದೆ. ಭಾಗವಹಿಸಲು ಆಸಕ್ತಿಯುಳ್ಳವರು ಸಂಪರ್ಕಿಸಲು ಮನವಿ.

ಈ. ಬಸವರಾಜು

: 9448957666

ಹೆಚ್.ಕೆ. ವಿವೇಕಾನಂದ

: 9844013068

ಯುವರಾಜ್

: 8050802019

ಕೆ.ಎಂ. ರೆಡ್ಡೆಪ್ಪ

: 9036251758

Related Posts

Leave a Reply

Your email address will not be published. Required fields are marked *