ತುಳಸಿ ಗಬ್ಬಾರ್ಡ್, ಈಗ ಯುಎಸ್ನ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಅವರ ಹಿಂದೂ ಹೆಸರು ಈಗ ಜಾಗತಿಕವಾಗಿ ಹೆಡ್ಲೈನ್ ಆಗಿ ಮೂಡಿ ಬರುತ್ತಿದೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದನ್ನು ಇಡೀ ಜಗತ್ತು ನಿಬ್ಬೆರಗಾಗಿ ನೋಡಿತ್ತು. ಅದು ಅಲ್ಲದೇ ಅವರು ಯುಎಸ್ ಹೌಸ್ನ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಮೊದಲ ಹಿಂದೂ ಅಮೆರಿಕನ್ ಅವರು ಎನ್ನಲಾಗುತ್ತಿದೆ.

ತಮ್ಮ ಹದಿಹರೆಯದ ವಯಸ್ಸಿನಿಂದಲೂ ತುಳಸಿ ಹಿಂದೂ ತತ್ವಗಳನ್ನು ತಮ್ಮ ಬದುಕಿನಲ್ಲಿ ಹಾಗೂ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡವರು.ಅನೇಕ ಬಾರಿ ಅವರ ಭಗವದ್ಗೀತೆ ನನ್ನ ಬದುಕಿನ ಮೌಲ್ಯಗಳನ್ನ ಹಾಗೂ ಬದುಕಿನ ಕ್ರಮಗಳನ್ನು ಬದಲಾಯಿಸಿದ ಪುಸ್ತಕ ಎಂದು ಹೇಳಿಕೊಂಡಿದ್ದಾರೆ