ನಮ್ಮ ಮೆಟ್ರೋ ‘ನೀಲಿ ಮಾರ್ಗ’ದಲ್ಲಿ ತೆಲೆ ಎತ್ತಲಿದೆ ಅತೀ ಎತ್ತರದ ಮೆಟ್ರೋ ನಿಲ್ದಾಣ, ಕಾಮಗಾರಿ ಅಪ್ಡೇಟ್

ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ (Namma Metro Blue Line) ನೀಲಿ ಮಾರ್ಗದಲ್ಲಿ ಕಾಮಗಾರಿ ಬರದಿಂದ ಸಾಗಿದೆ. ಉತ್ತರದಿಂದ ದಕ್ಷಿಣ ಭಾಗಗಳಲ್ಲಿ ಸಂಪರ್ಕ ಸಾಧಿಸುವ ಈ ನೀಲಿ ಮಾರ್ಗದಲ್ಲಿ ಅತೀ ಎತ್ತರದ ಮೆಟ್ರೋ ನಿಲ್ದಾಣದ ರೂಫ್ ಟ್ರಸ್ ಸಾಮಗ್ರಿ ಅಳವಡಿಕೆ ಮಾಡಲಾಗುತ್ತಿದೆ. ನೀಲಿ ಮಾರ್ಗದಲ್ಲಿನ ಎಲ್ಲ ನಿಲ್ದಾಣಗಳ ಈ ನಿಲ್ದಾಣವೇ ರೂಫ್ ಟ್ರಸ್ ಅಳವಡಿಕೆಯಲ್ಲಿ ಮೊದಲನೇಯದ್ದು ಎಂದು ಹೇಳಲಾಗುತ್ತಿದೆ.

ನಮ್ಮ ಮೆಟ್ರೋ ಯೋಜನೆಯ ಪೈಕಿ 2ಎ ಮತ್ತು 2ಬಿ ಅಡಿ ಎರಡು ಹಂತಗಳಲ್ಲಿ ಔಟರ್ ರಿಂಗ್ ರೋಡ್‌ (ORR) ಈ ನೀಲಿ ಮಾರ್ಗದ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್.ಪುರಂ ಮತ್ತು ಕೆ.ಆರ್.ಪುರಂ ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಎರಡು ಹಂತಗಳಲ್ಲಿ ನೀಲಿ ಮಾರ್ಗವು ತಲೆ ಎತ್ತಲಿದೆ. ಒಟ್ಟು 56 ಕಿ.ಮೀ. ಉದ್ದವಿರುವ ಈ ಮಾರ್ಗದಲ್ಲಿ, 30 ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗುತ್ತಿವೆ.

ಈ ಎಲ್ಲ ಮೆಟ್ರೋ ನಿಲ್ದಾಣಗಳ ಪೈಕಿ ORR ವ್ಯಾಪ್ತಿಯಲ್ಲಿ ಬರುವ ಸರಸ್ವತಿ ನಗರ ಮೆಟ್ರೋ ನಿಲ್ದಾಣವು ಪರಿಪೂರ್ಣವಾಗಿ ಸಿದ್ಧವಾಗುವ ಮೊದಲ ನಿಲ್ದಾಣವಾಗಲಿದೆ. ರೂಫ್ ಟ್ರಸ್ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ. ಈ ಕಾರ್ಯ ಆರಂಭಿಸುತ್ತಿರುವ ಎಲ್ಲ ನಿಲ್ದಾಣಗಳಲ್ಲಿ ಮೊದಲನೆಯದು ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಮಾಹಿತಿ ಹಂಚಿಕೊಂಡಿದ್ದಾರೆ.

ನೀಲಿ ಮಾರ್ಗದಲ್ಲಿ ಬರುವ ಈ ಸರಸ್ವತಿ ನಗರವು ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋದ ನೀಲಿ ಮಾರ್ಗದಲ್ಲಿ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಕಟ್ಟಲಾಗುತ್ತಿರುವ ಅತೀ ಎತ್ತರದ ಮೆಟ್ರೋ ನಿಲ್ದಾಣವಾಗಿದೆ. ಈ ಮೆಟ್ರೋ ನಿಲ್ದಾಣವು ಮುಖ್ಯವಾಗಿ ಲೌರಿ ಸ್ಮಾರಕ ಶಿಕ್ಷಣ ಸಂಸ್ಥೆಗಳಿಗೆ, ಹುಂಡೈ, ಎಂಜಿ (ಮೋರಿಸ್ ಗ್ಯಾರೇಜಸ್), ಟಾಟಾ ಮೋಟಾರ್ಸ್, ರೆನಾಲ್ಟ್ ಮತ್ತು ಹೋಂಡಾ ಮೋಟಾರ್ಸ್‌ನಂತಹ ಕೆಲವು ಆಟೋಮೋಟಿವ್ ಕಂಪನಿಗಳ ನೌಕರರಿಗೆ, ಈ ಭಾಗದ ಜನರಿಗೆ ಸೇವೆ ಸಲ್ಲಿಸುತ್ತದೆ.

SNC ಯಿಂದ ಸರಸ್ವತಿ ನಗರ ಮೆಟ್ರೋ ನಿಲ್ದಾಣ ನಿರ್ಮಾಣ

ಇನ್ನೂ ಈ ಸರಸ್ವತಿ ನಗರ ವ್ಯಾಪ್ತಿಯಲ್ಲಿ ಕೆ.ಆರ್.ಪುರಂ, ಮಹಾದೇವಪುರ ಮತ್ತು ವೈಟ್‌ಫೀಲ್ಡ್‌, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕಬೋರ್ಡ್ ಕಡೆಗಿಂತನ ಓಡಾಡುವವರಿಗೆ ಪ್ರಮುಖ ಸ್ಥಳವು ಆಗಿದೆ. ಈ ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳು 2026 ರ ಜೂನ್ ನಲ್ಲಿ ಕಾರ್ಯಾರಂಭಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ಲಾನ್ ಮಾಡಿಕೊಂಡಿದೆ

Related Posts