ಶುಭ ಆದಿತ್ಯವಾರ ಶುಭೋದಯ ಬೇವು ಬೆಲ್ಲ

ಎಲ್ಲಾ ಸ್ನೇಹಿತರಿಗೆ

ಬೇವು ಬೆಲ್ಲದ ಸವಿ ಸಾರುವ ಯುಗಾದಿ ಪರ್ವದಲ್ಲಿ ಬೇವಿನ ಬಗ್ಗೆ ಒಂದಿಷ್ಟು ಮಾಹಿತಿ

ಬೇವಿನಲ್ಲಿ ಐದು ಪ್ರಭೇದಗಳು ಇವೆ ೧ ಬೇವು ೨ ಕರಿಬೇವು ೩ ನೆಲ ಬೇವು ೪ ಹೆಬ್ಬೀವು ೫ ಅರಬೇವು ಇದರಲ್ಲಿ ಮೂರು ಬೇವುಗಳು ಸಂಪೂರ್ಣ ಔಷಧೀಯ ಗುಣಗಳನ್ನು ಹೊಂದಿದೆ
( ೧ (ಬೇವು ( ಸಿಹಿಹೇವು )

ಹಿಂದೂ ಪುರಾಣಗಳ ಪ್ರಕಾರ ಪ್ರಕೃತಿ ಮಾತೆಯಾದ ಪಾರ್ವತಿಯ ವಾಸಸ್ಥಾನ ಈ ಬೇವಿನ ವೃಕ್ಷ ಬೇವಿನ ವೃಕ್ಷ ಕ್ಕೆ ಪೂಜ್ಯನಿಯ ಸ್ಥಾನವನ್ನು ನೀಡಲಾಗಿದೆ
ಬೇವಿನ ಮರವನ್ನು ಪೂಜಿಸುವುದರಿಂದ ಇಷ್ಟಾರ್ಥ ಕಾಮ್ಯ ನೆರವೇರುತ್ತದೆ ಎಂಬ ನಂಬಿಕೆ ಇದೆ
ಹಾಗೂ ಬೇವಿನ ವೃಕ್ಷದಕೆಳಗಡೆ ಬೇವಿನ ತೈಲದಿಂದ ಮಣ್ಣಿನ ಹಣತೆಯಲ್ಲಿ ದಕ್ಷಿಣಾಭಿಮುಖವಾಗಿ ದೀಪಹಚ್ಚಿ ಪ್ರದಕ್ಷಣೆ ಮಾಡುವುದರಿಂದ ಶತ್ರು ಬಾಧೆ ನಿವಾರಣೆಯಾಗುತ್ತದೆ ಎಂದು ತಂತ್ರ ಶಾಸ್ತ್ರ ಹೇಳುತ್ತದೆ

ಮತ್ತು . ‘ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ// ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಂ//’ ಎಂದು ಆಯುರ್ವೇದವು ಬೇವಿನ ಮಹಿಮೆಯನ್ನು ಸಾರಿದೆ.

ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೇವಿನ ಗಿಡಕ್ಕೆ ಬಹಳ ವಿಶೇಷ ಸ್ಥಾನ ಒದಗಿಸಲಾಗಿದೆ. ಅದರಲ್ಲಿರುವ ಉತ್ತಮ ಔಷಧೀಯ ಗುಣಗಳಿಂದ ಎಲ್ಲರಲ್ಲೂ ಪೂಜನೀಯ ಭಾವನೆ ಉಂಟಾಗುತ್ತದೆ. ಅದಕ್ಕೆ ಕಾರಣ ಬೇವಿನ ಪ್ರತಿಯೊಂದು ಭಾಗವೂ ಸಹ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಬೇವಿನ ಎಲೆಗಳು, ಬೇವಿನ ಚಕ್ಕೆ, ಬೇವಿನ ಮರದ ಬೇರು, ಬೇವಿನ ಕಡ್ಡಿ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ. ಚರ್ಮ ರೋಗಗಳು ಕೂದಲಿನ ಸಮಸ್ಯೆಗಳು ಮತ್ತು ದೇಹದ ಆಂತರಿಕ ಆರೋಗ್ಯ ಸಮಸ್ಯೆಗಳು ಬೇವಿನಿಂದ ಗುಣ ಕಾಣುತ್ತವೆ.
​ಸರ್ವಾಂಗಕ್ಕೂ ಮನೆ ಮದ್ದು ಎಂದರೆ ಅದು ಬೇವು

ಬೇವಿನ ಅಂಶದಲ್ಲಿ ಇರುವ ಅನೇಕ ಆರೋಗ್ಯ ಪ್ರಯೋಜನಗಳು ಮನುಷ್ಯನ ದೇಹದ ಒಳಗಿನ ಅಂಗಗಳಿಗೆ ಮತ್ತು ಅವುಗಳಿಗೆ ಇದ್ದಕ್ಕಿದಂತೆ ಎದುರಾಗುವ ಆರೋಗ್ಯ ತೊಂದರೆಗಳಿಗೆ ಬಹಳಷ್ಟು ಸಹಕಾರಿ. ಕಣ್ಣಿನ ಸಮಸ್ಯೆಗಳು, ಚಿಕ್ಕ ಮಕ್ಕಳಲ್ಲಿ ಎದುರಾಗುವ ಮೂಗಿನಲ್ಲಿ ರಕ್ತ ಸ್ರಾವದ ತೊಂದರೆ, ಲೆಪ್ರಸಿ, ಚರ್ಮದ ಅಲ್ಸರ್, ಹೃದಯದ ಮತ್ತು ಹೃದಯ ರಕ್ತನಾಳದ ತೊಂದರೆಗಳು, ಜ್ವರ, ಮಧುಮೇಹ, ಹಲ್ಲು ಮತ್ತು ವಸಡಿನ ತೊಂದರೆ, ಲಿವರ್ ಸಮಸ್ಯೆ ಮತ್ತು ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆ ಹೀಗೆ ಬಹಳಷ್ಟು ಮತ್ತು ಬಹುತೇಕ ಮನುಷ್ಯನ ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗಳಿಗೂ ಬೇವು ಉಪಯೋಗಕ್ಕೆ ಬರುತ್ತದೆ. ಬೇವಿನಲ್ಲಿನ ಈ ವಿಶಿಷ್ಟ ಗುಣ ಲಕ್ಷಣಗಳಿಂದ ಬಹಳ ಹಿಂದಿನ ಕಾಲದಿಂದಲೂ ನಮ್ಮ ಭಾರತ ದೇಶದ ಆಯುರ್ವೇದ ಪದ್ದತಿಯಿಂದ ಹಿಡಿದು ಬೇರೆ ದೇಶಗಳ ಪಂಡಿತೋತ್ತಮರು ಬೇವಿನ ಉಪಯೋಗ ಮಾಡುತ್ತಾ ಬಂದಿದ್ದಾರೆ. ಕಹಿಯಾದ ಬೇವಿನ ಸದ್ಗುಣಗಳ ಬಗ್ಗೆ ಇಂನ್ನಷ್ಟು ನೀವು ತಿಳಿಯಬೇಕಾದರೆ ಈ ಲೇಖನವನ್ನು ಪೂರ್ತಿ ಓದಬೇಕು

ಬೇವಿನ ಜ್ಯೂಸ್ ರಕ್ತ ಶುದ್ಧೀಕರಣದಲ್ಲಿ ಸಹಾಯಕ

ಹೌದು. ಬೇವಿನ ಎಲೆಗಳಿಂದ ಪಡೆದ ಬೇವಿನ ರಸ ಮನುಷ್ಯನ ದೇಹದ ರಕ್ತವನ್ನು ಶುದ್ಧಗೊಳಿಸಿ ಒಂದು ಔಷಧಿಯ ರೂಪದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವೆಂದು ಪರಿಗಣಿಸಿದ ‘ ಎಲ್ ಡಿ ಎಲ್ ‘ ಅಥವಾ ‘ ಲೋ ಡೆನ್ಸಿಟಿ ಲಿಪೊಪ್ರೋಟೀನ್ ‘ ಅನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಇದರಿಂದ ಹೃದಯದ ತೊಂದರೆಗಳು ದೂರಾಗುತ್ತವೆ. ರಕ್ತ ಶುದ್ಧಿ ಆಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಕೂಡ ಉತ್ತಮಗೊಂಡು ದೇಹದ ಇನ್ನಿತರ ಭಾಗಗಳಿಗೂ ಸರಾಗವಾಗಿ ರಕ್ತ ಹರಿಯುತ್ತದೆ. ರಕ್ತದ ಒತ್ತಡ ಸಹ ನಿಯಂತ್ರಣಕ್ಕೆ ಬರುತ್ತದೆ.

​ಮಲೇರಿಯಾ ಮತ್ತು ಜಾಂಡೀಸ್ ಗೆ ರಾಮಬಾಣ

ಬೇವಿನ ಎಲೆಗಳಿಂದ ಹೊರ ತೆಗೆದ ಬೇವಿನ ರಸ ಮಲೇರಿಯಾ ಜ್ವರ ಮತ್ತು ಜಾಂಡಿಸ್ ಸಮಸ್ಯೆಯಿಂದ ಬಳಲುತ್ತಿರುವ ಎಷ್ಟೋ ಜನರಿಗೆ ಬಹಳ ಉಪಯುಕ್ತವಾದ ರೀತಿಯಲ್ಲಿ ಕೆಲಸ ಮಾಡಿದೆ. ಇದರಲ್ಲಿರುವ ಆಂಟಿ – ಬ್ಯಾಕ್ಟರಿಯಲ್ ಗುಣ ಲಕ್ಷಣಗಳು ಮಲೇರಿಯಾ ಜ್ವರಕ್ಕೆ ಕಾರಣವಾದ ವೈರಸ್ ನ ಬೆಳವಣಿಗೆಯನ್ನು ಕುಂಠಿತಗೊಳಿಸಿ ಮನುಷ್ಯನ ದೇಹದ ಲಿವರ್ ಅಂಗಾಂಗವನ್ನು ಬಲವಾಗಿಸುತ್ತದೆ. ಇದೇ ರೀತಿ ಜಾಂಡಿಸ್ ಹೊಂದಿರುವ ರೋಗಿಗಳು ಬೇವಿನ ಎಲೆಗಳ ರಸದೊಂದಿಗೆ ಹಸಿ ಜೇನು ತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ಬಹಳ ಬೇಗನೆ ಪ್ರತಿಫಲ ಕಾಣಬಹುದು.

​ಬೇವಿನ ಕಹಿ ಕಣ್ಣುಗಳಿಗೆ ಸಿಹಿ

ಇತ್ತೀಚಿನ ಕಾಲಮಾನದಲ್ಲಿ ಯುವಜನತೆಯಲ್ಲಿ ಹೆಚ್ಚಾದ ಮೊಬೈಲ್ ಬಳಕೆ ಮತ್ತು ಕಂಪ್ಯೂಟರ್ ಬಳಕೆಯಿಂದ ಅತಿ ಹೆಚ್ಚಾಗಿ ಹೊರ ಸೂಸುವ ನೀಲಿ ಬೆಳಕಿನ ಪ್ರಮಾಣದಿಂದ ಬಹಳ ಬೇಗನೆ ಕಣ್ಣುಗಳು ಹಾಳಾಗಿ ದೃಷ್ಠಿಯ ಸಮಸ್ಯೆ ಎದುರಿಸುತ್ತಾರೆ. ಯಾರಲ್ಲೂ ರಾತ್ರಿ ಮಲಗಿದ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವವರಿಗೆ ಈ ಸಮಸ್ಯೆ ಬಹಳ ಹೆಚ್ಚು. ಕಾಂಜುಂಕ್ಟಿವಿಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಯಾರೇ ಆದರೂ ಬೇವಿನ ನೀರಿನ ಉಪಯೋಗದಿಂದ ಗುಣ ಕಾಣಬಹುದು.

​ಸಕ್ಕರೆ ಕಾಯಿಲೆಯಿಂದ ಮಹತ್ವದ ರಕ್ಷಣೆ

ಇತ್ತೀಚಿಗಂತೂ ಮೂರರಲ್ಲಿ ಒಬ್ಬರಿಗೆ ಬಿಟ್ಟೂ ಬಿಡದಂತೆ 40 ವರ್ಷ ವಯಸ್ಸಾದ ನಂತರ ಕಾಡುವ ಆರೋಗ್ಯ ಸಮಸ್ಯೆ ಎಂದರೆ ಅದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್. ಮನುಷ್ಯನ ಜೀವನ ಶೈಲಿಯ ವಿಚಿತ್ರ ಬದಲಾವಣೆಯಿಂದ ಇಂತಹ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡಿ ಮಧುಮೇಹಕ್ಕೆ ಕಾರಣವಾಗುತ್ತಿದೆ. ಸಾಮಾನ್ಯ ಜನರು ಪ್ರತಿ ದಿನ ಬೇವಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿನ ಸಕ್ಕರೆ ಪ್ರಮಾಣ ಸೀಮಿತ ಸ್ಥಿತಿ ಕಾಯ್ದುಕೊಂಡು ಮುಂಬರುವ ದಿನಗಳಲ್ಲಿ ಡಯಾಬಿಟಿಸ್ ನಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಇನ್ನು ಡಯಾಬಿಟಿಸ್ ನಿಂದ ಈಗಾಗಲೇ ಬಳಲುತ್ತಿರುವವರು ಪ್ರತಿ ದಿನ ಬೇವಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯ ಸ್ಥಿತಿಗೆ ತಂದು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

​ಹಲ್ಲುಗಳು ಮತ್ತು ವಸಡುಗಳು

ವಸಡುಗಳ ರಕ್ತ ಸೋರಿಕೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಒಂದು ಟಿಪ್ಸ್ ಅನುಸರಿಸಬಹುದು. ಏನಂದರೆ ಬೇವಿನ ಚಕ್ಕೆ ಅಥವಾ ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆ ಹಾಕಿ, ಸ್ವಲ್ಪ ಹೊತ್ತಿನ ನಂತರ ಅದನ್ನು ಚೆನ್ನಾಗಿ ರುಬ್ಬಿಕೊಂಡು ವಸಡುಗಳಿಗೆ ಲೇಪನ ಮಾಡಿದರೆ ಹಲ್ಲುಗಳ ಸಂದುಗಳಿಂದ ಮತ್ತು ವಸಡುಗಳಿಂದ ರಕ್ತ ಸೋರಿಕೆ ಆಗುವುದು ನಿಲ್ಲುತ್ತದೆ. ಇನ್ನು ಹಲ್ಲುಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರು ಬೇವಿನ ಮರದ ಹೂವುಗಳ ಡಿಕಾಕ್ಷನ್ ಮಾಡಿ ಕುಡಿಯುವುದರಿಂದ ತಮ್ಮ ಸಮಸ್ಯೆಗಳಿಂದ ಪಾರಾಗಬಹುದು. ಹಲ್ಲುಗಳಲ್ಲಿರುವ ಕೀಟಾಣುಗಳನ್ನು ನಾಶ ಪಡಿಸಲು ಪ್ರತಿ ದಿನ ಬೇವಿನ ಕಡ್ಡಿಗಳಿಂದ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಬೇಕು. ಒಟ್ಟಾಗಿ ಹೇಳುವುದಾದರೆ, ಬೇವಿನ ಪ್ರತಿಯೊಂದು ವಸ್ತುವೂ ಕೂಡ ಹಲ್ಲುಗಳಿಗೆ ಮತ್ತು ವಸಡುಗಳಿಗೆ ಬಹಳಷ್ಟು ಸಹಕಾರಿಯಾಗಿದೆ.

​ಗರ್ಭಾವಸ್ಥೆಯ ನೋವು ನಿವಾರಕ

ಗರ್ಭಿಣಿಯರಿಗೆ ತಮ್ಮ ಗರ್ಭಾವಸ್ಥೆಯ ದಿನಗಳಲ್ಲಿ ಕಾಡುವ ವಿಪರೀತ ನೋವನ್ನು ಬೇವಿನಿಂದ ನಿಯಂತ್ರಣ ಮಾಡಿಕೊಳ್ಳಬಹುದು. ಹೆರಿಗೆಯ ಸಮಯದಲ್ಲಿ ಬೇವಿನ ಜ್ಯೂಸ್ ನಿಂದ ನಯವಾಗಿ ಮಸಾಜ್ ಮಾಡುವುದರಿಂದ ಹೆರಿಗೆಯ ನೋವು ಕಡಿಮೆಯಾಗುತ್ತದೆ. ಹೆರಿಗೆಯ ನಂತರದ ದಿನಗಳಲ್ಲಿ ಬಾಣಂತಿಯರಿಗೆ ಬೇವಿನ ನೀರನ್ನು ಕೊಡುವುದರಿಂದ ಸೋಂಕು ಉಂಟಾಗುವುದು ತಪ್ಪುತ್ತದೆ.

​ಮೊಡವೆಗಳ ಸಮಸ್ಯೆ ಇದ್ದರೆ

ಬೇವಿನ ನೀರು ಮುಖದ ಮೇಲಿನ ಮೊಡವೆಗಳನ್ನು ನಿವಾರಣೆ ಮಾಡುವಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬಹಳ ದಿನಗಳಿಂದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಿರುವವರು ಬೇವಿನ ಎಲೆಗಳ ರಸವನ್ನು ಮುಖದ ಮೇಲೆ ಮೊಡವೆಗಳಿರುವ ಜಾಗಕ್ಕೆ ಹಚ್ಚಿ ಮೊಡವೆಗಳಿಂದ ಗುಣ ಕಾಣಬಹುದು. ಬೇವಿನ ನೀರಿನಿಂದ ಮುಖವನ್ನು ಮಸಾಜ್ ಮಾಡಿದರೆ, ಮುಖದಲ್ಲಿರುವ ತೇವಾಂಶ ಹಾಗೆ ಉಳಿದು ಚರ್ಮದ ಮೃದುತ್ವ ಮತ್ತು ಕಾಂತಿ ಹೆಚ್ಚಾಗುತ್ತದೆ.

​ಪುಟ್ಟ ಮಕ್ಕಳ ಅಮ್ಮನಿಗೇ ಅಮ್ಮ ಬೇವು –

ನಿಮಗೆ ನೆನಪಿರಬಹುದು. ನಾವು ಚಿಕ್ಕವರಾಗಿದ್ದಾಗ, ನಮಗೆ ದೇಹದ ಮೇಲೆಲ್ಲಾ ಅಲ್ಲಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಉಂಟಾಗುತ್ತಿದ್ದವು. ಅವುಗಳನ್ನು ನೋಡಿ ದೊಡ್ಡವರು ಮಗುವಿಗೆ ಅಮ್ಮ ಆಗಿದೆ ಬೇವಿನ ಲೇಪನ ಮಾಡಿ ಎಂದು ಹೇಳುತ್ತಿದ್ದರು. ಆಗ ಬೇವಿನ ಎಲೆಗಳನ್ನು ಚೆನ್ನಾಗಿ ಅರೆದು ಬೇವಿನ ಪೇಸ್ಟ್ ತಯಾರು ಮಾಡಿಕೊಂಡು ನಮ್ಮ ಇಡೀ ದೇಹಕ್ಕೆ ಹಚ್ಚುತ್ತಿದ್ದರು. ಬಂದ ಸಮಸ್ಯೆ ಮಿಂಚಿನಂತೆ ಮಾಯವಾಗುತ್ತಿತ್ತು. ಇದೆ ಅಲ್ಲವೇ ಬೇವಿನ ಚಮತ್ಕಾರ ಎಂದರೆ!!

ಕ್ಯಾನ್ಸರ್ ವಿರುದ್ಧ ಬೇವಿನ ಉಪಯೋಗಗಳು
ಪ್ರತಿದಿನವೂ ಬೇವಿನ ಎಲೆಯನ್ನು ಸೇವಿಸುತ್ತಿದ್ದರೆ ಕ್ಯಾನ್ಸರ್ ಜೀವಕೋಶಗಳು ಒಂದು ನಿರ್ದಿಷ್ಟ ಮಿತಿಯೊಳಗಿರುತ್ತವೆ
ಬೇವಿಗೆ ಅತ್ಯದ್ಭುತವಾದ ಔಷಧೀಯ ಗುಣಗಳಿವೆ. ಅದರಲ್ಲಿ ಅತ್ಯಂತ ಪ್ರಮುಖವಾದುದೆಂದರೆ, ಅದು ಕ್ಯಾನ್ಸರ್ ಜೀವಕೋಶಗಳನ್ನು ಸಂಹರಿಸುತ್ತದೆ. ಪ್ರತಿಯೋರ್ವರಲ್ಲಿಯೂ ಕ್ಯಾನ್ಸರ್ ಜೀವಕೋಶಗಳಿವೆ. ಆದರೆ, ಸಾಮಾನ್ಯವಾಗಿ ಅವು ಅವ್ಯವಸ್ಥಿತ ರೀತಿಯಲ್ಲಿರುತ್ತವೆ. ಆದರೆ ನೀವು ಒಂದು ರೀತಿಯ ಸನ್ನಿವೇಶವನ್ನು ದೇಹದೊಳಗೆ ರೂಪಿಸಿಕೊಂಡರೆ, ಅವು ವ್ಯವಸ್ಥಿತಗೊಳ್ಳುವುವು. ಅವು ತಮ್ಮ ಪಾಡಿಗೆ ತಾವು ಸುಮ್ಮನೆ ದೇಹದಲ್ಲಿ ಸುತ್ತಾಡುತ್ತಿರುವವರೆಗೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅವೆಲ್ಲವೂ ಒಟ್ಟಾಗಿ ಒಂದೇ ಕಡೆಯಲ್ಲಿ ಸೇರಿ ಒಂದಕ್ಕೊಂದು ಸಂಪರ್ಕಕ್ಕೆ ಬಂದಾಗ, ಆಗ ಸಮಸ್ಯೆಯು ಉದ್ಭವಿಸುತ್ತದೆ. ಇದು ಸಣ್ಣಪುಟ್ಟ ಅಪರಾಧಗಳಿಂದ, ಒಂದು ವ್ಯವಸ್ಥಿತ ಜಾಲಕ್ಕೆ ಬದಲಾಗುವಂತೆ. ಆಗ ಅದೊಂದು ಗಂಭೀರವಾದ ಸಮಸ್ಯೆಯಾಗುತ್ತದೆ. ನೀವು ಪ್ರತಿನಿತ್ಯವೂ ಬೇವಿನ ಎಲೆಗಳನ್ನು ಸೇವಿಸುತ್ತಿದ್ದರೆ, ಅವು ಶರೀರದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಒಂದು ನಿರ್ದಿಷ್ಟ ಮಿತಿಯೊಳಗೆ ಇರಿಸುತ್ತವೆ. ಆದ್ದರಿಂದ ಅವು ನಿಮ್ಮ ಶರೀರದ ವಿರುದ್ಧ ಗುಂಪುಕಟ್ಟಿ ಒಂದಾಗುವುದಿಲ್ಲ.

2 ಬೇವಿನ ಬ್ಯಾಕ್ಟೀರಿಯಾ-ಮಾರಕ ಗುಣ

ಪ್ರಪಂಚವು ಬ್ಯಾಕ್ಟೀರಿಯಾಗಳಿಂದ ತುಂಬಿದೆ. ಶರೀರವೂ ಹಾಗೆಯೇ. ನೀವು ಕಲ್ಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಸೂಕ್ಷ್ಮಜೀವಿಗಳು ನಿಮ್ಮೊಳಗೆ ವಾಸಿಸುತ್ತಿವೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಿಮಗೆ ಸಹಾಯಕಾರಿ; ಅವುಗಳಿಲ್ಲದೆ ನೀವು ಏನನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ನಿಜಾಂಶವೆಂದರೆ ಅವುಗಳಿಲ್ಲದೆ ನೀವು ಜೀವಿಸಲಾರಿರಿ. ಆದರೆ ಕೆಲವು ಬ್ಯಾಕ್ಟೀರಿಯಾಗಳು ನಿಮಗೆ ತೊಂದರೆಯನ್ನುಂಟುಮಾಡಬಹುದು. ಈ ಬ್ಯಾಕ್ಟೀರಿಯಾಗಳನ್ನು ನಿರ್ವಹಿಸಲು ನಿಮ್ಮ ಶರೀರವು ನಿರಂತರವಾಗಿ ಶಕ್ತಿಯನ್ನು ವ್ಯಯಿಸುತ್ತದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಲು ಇದ್ದರೆ ನೀವು ಶಕ್ತಿ ಹೀನತೆಯನ್ನು ಅನುಭವಿಸುವಿರಿ. ಏಕೆಂದರೆ ನಿಮ್ಮ ರಕ್ಷಣಾ ವ್ಯವಸ್ಥೆಯು ಅವುಗಳೊಡನೆ ಹೋರಾಡಲು ಅಧಿಕ ಪ್ರಮಾಣದಲ್ಲಿ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಬೇವನ್ನು ಶರೀರದೊಳಗಡೆ ಮತ್ತು ಹೊರಗಡೆ ಬಳಸಿದಾಗ, ಈ ಬ್ಯಾಕ್ಟೀರಿಯಾಗಳು ಅಧಿಕವಾಗಿ ವೃದ್ಧಿಗೊಳ್ಳದಂತೆ ನಿಯಂತ್ರಿಸಬಹುದು. ಹೀಗಾದಾಗ ಶರೀರವು ಅವುಗಳೊಡನೆ ಹೋರಾಡಲು ಅಧಿಕ ಶಕ್ತಿಯನ್ನು ವ್ಯಯಿಸಬೇಕಾಗಿರುವುದಿಲ್ಲ. ನೀವು ಒಂದು ನಿರ್ದಿಷ್ಟ ಪ್ರಮಾಣದ ಬೇವನ್ನು ಪ್ರತಿನಿತ್ಯವೂ ಸೇವಿಸುತ್ತಿದ್ದರೆ, ಅದು ನಿಮ್ಮ ಕರುಳಿನಲ್ಲಿ ತೊಂದರೆ ನೀಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದು, ಮತ್ತು ದೊಡ್ಡ ಕರಳು ಸ್ವಚ್ಛವಾಗಿದ್ದು, ಯಾವುದೇ ಸೋಂಕಿಲ್ಲದೆ ಇರುತ್ತದೆ.

ಶರೀರದ ಒಳಗಡೆ ಮತ್ತು ಹೊರಗಡೆ ಬೇವನ್ನು ಬಳಸಿದಾಗ, ಬ್ಯಾಕ್ಟೀರಿಯಾಗಳು ಅಧಿಕವಾಗಿ ವೃದ್ಧಿಗೊಳ್ಳುವುದನ್ನು ತಡೆಯಬಹುದು
ಶರೀರದ ನಿರ್ದಿಷ್ಟ ಪ್ರದೇಶಗಳಲ್ಲಿ ಸ್ವಲ್ಪ ವಾಸನೆ ಇದ್ದರೆ, ಬ್ಯಾಕ್ಟೀರಿಯಾಗಳು ಸ್ವಲ್ಪ ಹೆಚ್ಚು ಚಟುವಟಿಕೆಯಿಂದ ಕೂಡಿವೆ ಎಂದರ್ಥ. ಹೆಚ್ಚು ಕಡಿಮೆ ಪ್ರತಿಯೋರ್ವರಿಗೂ ಚರ್ಮದ ಕೆಲವು ಸಣ್ಣ ಸಮಸ್ಯೆಗಳಿರುತ್ತವೆ, ಅದರೆ ನೀವು ಬೇವಿನಿಂದ ಶರೀರವನ್ನು ತೊಳೆಯುತ್ತಿದ್ದರೆ ಅದು ಹೆಚ್ಚು ಶುದ್ಧವಾಗಿರುತ್ತದೆ ಹಾಗೂ ಹೊಳಪಿನಿಂದ ಕೂಡಿರುತ್ತದೆ. ನೀವು ಸ್ವಲ್ಪ ಬೇವನ್ನು ಅರೆದು ಪೇಸ್ಟ್ ಮಾಡಿಕೊಂಡು ಅದನ್ನು ಸ್ನಾನಕ್ಕಿಂತ ಮೊದಲು ಶರೀರಕ್ಕೆ ಲೇಪಿಸಿಕೊಂಡು ಸ್ವಲ್ಪ ಒಣಗಲು ಬಿಟ್ಟು ನಂತರ ಚೆನ್ನಾಗಿ ನೀರಿನಿಂದ ತೊಳೆದುಕೊಂಡರೆ, ಅದು ಬ್ಯಾಕ್ಟೀರಿಯಾಗಳ ವಿರುದ್ಧ ಶುದ್ಧಿಕಾರಕದಂತೆ ಕೆಲಸ ಮಾಡುತ್ತದೆ. ಮತ್ತೊಂದು ರೀತಿಯೆಂದರೆ, ರಾತ್ರಿಯಲ್ಲಿ ಕೆಲವು ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಆ ನೀರಿನಿಂದ ಸ್ನಾನ ಮಾಡುವುದು.

3 ಯೋಗ ಸಾಧನೆಯಲ್ಲಿ ಬೇವು

ಎಲ್ಲದಕ್ಕಿಂತ ಹೆಚ್ಚಾಗಿ, ಬೇವು ಶರೀರದಲ್ಲಿ ಶಾಖವನ್ನುಂಟು ಮಾಡುತ್ತದೆ. ಅಂಗ ವ್ಯವಸ್ಥೆಯೊಳಗೆ ತೀವ್ರತರವಾದ ವಿವಿಧ ಶಕ್ತಿಗಳನ್ನು ಉತ್ಪಾದಿಸಲು, ಬೇವಿನಿಂದ ಉಂಟಾದ ಶಾಖವು ನೆರವಾಗುತ್ತದೆ. ವಿವಿಧ ಗುಣಗಳು ಶರೀರದಲ್ಲಿ ಪ್ರಧಾನವಾಗಿರಬಹುದು. ಅವುಗಳಲ್ಲಿ ಎರಡನ್ನು ಸಾಂಪ್ರದಾಯಿಕವಾಗಿ ಶೀತ ಮತ್ತು ಉಷ್ಣ ಎನ್ನಲಾಗಿದೆ. ಶೀತಕ್ಕೆ ಇಂಗ್ಲೀಷ್‌ನಲ್ಲಿ ಬಹಳ ಹತ್ತಿವಾಗಿರುವ ಶಬ್ದ “cold”, ಆದರೆ ಅದು ವಾಸ್ತವವಾಗಿ ಅದೇ ಅಲ್ಲ. ನಿಮ್ಮ ಶರೀರ ವ್ಯವಸ್ಥೆಯು ಶೀತದ ಕಡೆಗೆ ಸಾಗಿದರೆ, ಶರೀರದಲ್ಲಿ ಕಫದ ಮಟ್ಟವು ಅಧಿಕವಾಗುವುದು. ಶರೀರದಲ್ಲಿನ ಹೆಚ್ಚಿನ ಕಫವು ಅನೇಕ ತೊಂದರೆಗಳನ್ನು ಉಂಟುಮಾಡಬಹುದು. ಸಾಮಾನ್ಯ ನೆಗಡಿ ಮತ್ತು ಸೈನಸೈಟಿಸ್ ಹಿಡಿದು ಬೇರೆ ತೊಂದರೆಗಳೂ ಆಗಬಹುದು.

ಬೇವು ಶರೀರದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಇದು ಶರೀರದಲ್ಲಿ ತೀವ್ರತರನಾದ ವಿವಿಧ ಶಕ್ತಿಗಳನ್ನು ಹುಟ್ಟು ಹಾಕುತ್ತದೆ
ಒಬ್ಬ ಹಠಯೋಗಿಗೆ ಬೇವು ವಿಶೇಷವಾಗಿ ಪ್ರಮುಖವಾಗಿದೆ. ಏಕೆಂದರೆ ಅದು ಶರೀರವನ್ನು ಸ್ವಲ್ಪ ಉಷ್ಣದೆಡೆಗೆ ನೆಲೆಗೊಳಿಸುತ್ತದೆ. ’ಉಷ್ಣ’ ಎಂದರೆ ನಿಮ್ಮಲ್ಲಿ ಸ್ವಲ್ಪ ಅಧಿಕ ಇಂಧನ ಇದೆ ಎಂದರ್ಥ. ಅರಿಯದ ಆಯಾಮವನ್ನು ಅರಸುವ ಸಾಧಕನಿಗೆ ಅಧಿಕ ಪ್ರಮಾಣದ ಇಂಧನವನ್ನು ಹೊಂದಿರುವುದು ಕ್ಷೇಮಕರವಾಗಿದೆ, ಏಕೆಂದರೆ ಶರೀರಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದಾಗ ಅದರ ಪೂರೈಕೆಗಾಗಿ ಸಾಧಾರಣ ಮಟ್ಟದ ಅವಶ್ಯಕತೆಗಿಂತಲೂ ಸ್ವಲ್ಪ ಹೆಚ್ಚಿನ ಅಗ್ನಿಯನ್ನು ಧಾರಣೆಮಾಡಬೇಕಾಗುತ್ತದೆ. ನಿಮ್ಮ ದೇಹವು ಶೀತದ ಸ್ಥಿತಿಯಲ್ಲಿದ್ದರೆ ಅತಿ ಹೆಚ್ಚಿನ ಚಟುವಟಿಕೆಗಳನ್ನು ಮಾಡಲಾಗುವುದಿಲ್ಲ. ಆದರೆ ನಿಮ್ಮ ಶರೀರವನ್ನು ಅಗತ್ಯಕ್ಕಿಂತಲೂ ಸ್ವಲ್ಪ ಹೆಚ್ಚಿನ ಉಷ್ಣ ಸ್ಥಿತಿಯಲ್ಲಿಟ್ಟರೆ, ನೀವು ಪ್ರಯಾಣ ಮಾಡಿದರೂ ಸಹ, ಹೊರಗಡೆ ತಿಂದರೆ ಅಥವಾ ಬೇರೆ ಇನ್ಯಾವುದಕ್ಕೋ ಗುರಿಪಡಿಸಿಕೊಂಡರೆ ನಿಮ್ಮಲ್ಲಿನ ಹೆಚ್ಚಿನ ಅಗ್ನಿಯನ್ನು ನೀವು ವ್ಯಯಿಸಿ, ಬಾಹ್ಯ ಪ್ರಭಾವಗಳನ್ನು ನಿರ್ವಹಿಸುವಿರಿ. ಬೇವು ಈ ದಿಕ್ಕಿನಲ್ಲಿ ಒಳ್ಳೆಯ ಬೆಂಬಲವನ್ನು ನೀಡುವುದು.

ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಅತ್ಯಧಿಕವಾಗಿ ಸೇವಿಸಿದಾಗ ಬೇವು ವೀರ್ಯಾಣುಗಳನ್ನು ನಾಶಪಡಿಸುತ್ತದೆ. ಗರ್ಭವತಿಯರು ಗರ್ಭಧರಿಸಿದ ಮೊದಲ ನಾಲ್ಕರಿಂದ ಐದು ತಿಂಗಳವರೆಗೆ ಭ್ರೂಣವು ಬೆಳೆಯುತ್ತಿರುವಾಗ ಬೇವನ್ನು ಸೇವಿಸಬಾರದು. ಬೇವು ಅಂಡಾಣುಗಳಿಗೆ ಯಾವುದೇ ಹಾನಿ ಉಂಟುಮಾಡದೇ ಇದ್ದರೂ, ಅಧಿಕವಾದ ಶಾಖವನ್ನು ಉತ್ಪತ್ತಿ ಮಾಡುತ್ತದೆ. ಸ್ತ್ರೀಯು ಆಗತಾನೆ ಗರ್ಭಧಾರಣೆ ಮಾಡಿದ್ದರೆ, ಶರೀರದಲ್ಲಿನ ಅತಿಯಾದ ಶಾಖದಿಂದ ಆಕೆಯ ಭ್ರೂಣವನ್ನು ಕಳೆದುಕೊಳ್ಳಬಹುದು. ಸ್ತ್ರೀಯು ಗರ್ಭಧರಿಸುವ ಯೋಚನೆಯನ್ನು ಹೊಂದಿದ್ದರೆ, ಆಕೆಯು ಬೇವನ್ನು ಸೇವಿಸಬಾರದು. ಏಕೆಂದರೆ ಅಲ್ಲಿ ಅಧಿಕ ಶಾಖ ಉತ್ಪತ್ತಿಯಾಗಿ ಶರೀರವು ಶಿಶುವಿನ ಭ್ರೂಣವನ್ನು ಬಾಹ್ಯವಸ್ತುವನ್ನಾಗಿ ಪರಿಗಣಿಸುವುದು.

ಗರ್ಭಧರಿಸಲು ಯೋಚಿಸುತ್ತಿರುವ ಸ್ತ್ರೀಯು ಬೇವನ್ನು ಸೇವಿಸಬಾರದು ಏಕೆಂದರೆ, ಅದರಿಂದ ಹೆಚ್ಚಿನ ಶಾಖ ಉತ್ಪತ್ತಿಯಾಗುತ್ತದೆ
ಶಾಖವು ಹೆಚ್ಚಾದರೆ, ಶರೀರದಲ್ಲಿ ಕೆಲವು ನಿರ್ದಿಷ್ಟವಾದ ಬದಲಾವಣೆಗಳಾಗುವುದು – ಪುರುಷರಿಗಿಂತಲೂ ಸ್ತ್ರೀಯರಿಗೆ ಇದರ ಹೆಚ್ಚು ಅರಿವಾಗುತ್ತದೆ. ಉಷ್ಣವು ಶರೀರದ ಸಾಮಾನ್ಯ ಕ್ರಿಯೆಗಳ ಮೇಲೆ ಪರಿಣಾಮ ಬೀರಿದರೆ ನಾವು ಸಾಮಾನ್ಯವಾಗಿ ಉಷ್ಣವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುತ್ತೇವೆ. ಆದರೆ ಸಾಧನೆ ಮಾಡುವವರಿಗಾಗಿ ಸಾಮಾನ್ಯವಾಗಿ ನಾವು ಬೇವನ್ನು ವರ್ಜಿಸಲು ಅಪೇಕ್ಷಿಸುವುದಿಲ್ಲ. ಅವರಿಗೆ ಸ್ವಲ್ಪ ಪ್ರಮಾಣದ ಉಷ್ಣವು ಅಗತ್ಯವಾಗಿರುತ್ತದೆ. ಕೆಲವು ಸ್ತ್ರೀಯರು ಬೇವನ್ನು ಪ್ರತಿದಿನ ಸೇವಿಸುತ್ತಿದ್ದರೆ ಅವರ ಋತುಚಕ್ರದ ಅವಧಿಯು ಕಡಿಮೆಯಾಬಹುದು. ಹಾಗೆ ಆದಲ್ಲಿ ಅವರು ಹೆಚ್ಚು ನೀರನ್ನು ಕುಡಿಯಬೇಕು. ಉಷ್ಣವನ್ನು ಕಡಿಮೆ ಮಾಡಲು ಕೇವಲ ನೀರು ಸಾಲದಿದ್ದರೆ, ಒಂದು ನಿಂಬೆಹಣ್ಣಿನ ಚೂರು ಅಥವಾ ½ ನಿಂಬೆಹಣ್ಣಿನ ರಸವನ್ನು ನೀರಿಗೆ ಸೇರಿಸಬೇಕು. ಅದೂ ಸಾಲದಿದ್ದಲ್ಲಿ ಒಂದು ಲೋಟದಷ್ಟು ಬೂದುಗುಂಬಳಕಾಯಿಯ ರಸವನ್ನು ಸೇವಿಸಬೇಕು. ಅದು ತಂಪನ್ನು ನೀಡುತ್ತದೆ. ಮತ್ತೊಂದು ಆಯ್ಕೆ ಎಂದರೆ ಹರಳೆಣ್ಣೆ. ಅದನ್ನು ಸ್ವಲ್ಪ ನಿಮ್ಮ ಹೊಕ್ಕಳಿಗೆ, ಅನಾಹತದಲ್ಲಿ (ಶ್ವಾಸಕೋಶದ ಎಲುಬುಗಳು ಎದೆಯಲ್ಲಿ ಸೇರುವ ಸ್ವಲ್ಪ ಕೆಳಗೆ ಇರುವ ಕುಳಿ), ಗಂಟಲ ಕುಳಿಯಲ್ಲಿ ಮತ್ತು ಕಿವಿಗಳ ಹಿಂದೆ ಸವರಿದರೆ ಅದು ಶರೀರವನ್ನು ತಂಪಾಗಿಸುತ್ತದೆ.
ಹೇಳುತ್ತಾ ಹೋದರೆ ಇದು ಮುಗಿಯದ ಅಧ್ಯಯ ಶರಣಾರ್ಥಿಗಳೊಂದಿಗೆ ಶ್ರೀಶೈಲ ಪೂಜಾರಿ

Related Posts