ಏನು ಮಾಡಿದರೆ ವಿವಾಹ ಯೋಗ ಬರಬಹುದು

ವಿವಾಹವಾಗಬೇಕೆನ್ನುವ ಬಯಕೆ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಕಂಕಣ ಬಲ ಬೇಗ ಕೂಡಿ ಬಂದರೆ, ಇನ್ನೂ ಕೆಲವರಿಗೆ ವಯಸ್ಸು ದಾಟಿದರೂ ಕಂಕಣ ಬಲ ಕೂಡಿ ಬರುವುದಿಲ್ಲ. ಶೀಘ್ರ ಕಂಕಣ ಬಲ ಕೂಡಿ ಬರಲು ಹುಡುಗರು ಏನು ಮಾಡಬೇಕು.. ಹುಡುಗಿಯರು ಏನು ಮಾಡಬೇಕು.. ಕಳೆದ ವರ್ಷ ಕೆಲವು ಕಾರಣಗಳಿಂದ ನೀವು ಮದುವೆಯಾಗದಿದ್ದರೆ, ಮದುವೆಯಾಗಲು ಹಲವು ಅಡೆತಡೆಗಳಿವೆ ಎಂದು ನೀವು ಭಾವಿಸುತ್ತಿದ್ದರೆ, ನೀವು ಖಂಡಿತವಾಗಿ ವಿವಾಹವಾಗಲೇಬೇಕೆಂದು ಬಯಸುತ್ತಿದ್ದರೆ ಈ ಕೆಳಗಿನ ಪರಿಹಾರಗಳನ್ನು ತೆಗೆದುಕೊಳ್ಳಬಹುದು.
‌ ‌ ‌ ‌ ‌ ಹುಡುಗನ ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದರೆ ದಾಂಪತ್ಯದಲ್ಲಿ ಅಡೆತಡೆಗಳು ಮತ್ತು ಹುಡುಗಿಯ ಜಾತಕದಲ್ಲಿ ಗುರು ಬಲಹೀನನಾಗಿದ್ದರೆ ದಾಂಪತ್ಯದಲ್ಲಿ ಅಡೆತಡೆಗಳು ಉಂಟಾಗುತ್ತವೆ. ನೀವು ಶೀಘ್ರದಲ್ಲೇ ಮದುವೆಯಾಗಲು ಬಯಸಿದರೆ ಈ ಪ್ರಯತ್ನಗಳು ಒಮ್ಮೆ ಪ್ರಯತ್ನಿಸಿ ಕಂಕಣ ಬಲ ಕೂಡಿ ಬರಲೂಬಹುದು.

ಹುಡುಗಿಯರಿಗೆ ಕಂಕಣ ಬಲ ಕೂಡಿ ಬರಲು ಹೀಗೆ ಮಾಡಿ:
‌ 1. ಮೊಲಗಳಿಗೆ ಆಹಾರವನ್ನು ನೀಡಿ.

  1. ಗುರುವಾರ ಉಪವಾಸ ವ್ರತವನ್ನು ಆಚರಿಸಿ ವಿಷ್ಣು ಮತ್ತು ಗುರುವನ್ನು ಧ್ಯಾನಿಸಿ.
  2. ದೇವಸ್ಥಾನದಲ್ಲಿ ಹಳದಿ ವಸ್ತುಗಳನ್ನು ದಾನ ಮಾಡಿ.
  3. ಗುರುವಾರದಂದು ಆಲದ ಮರಕ್ಕೆ, ಅರಳಿ ಮರಕ್ಕೆ ಮತ್ತು ಬಾಳೆ ಮರಕ್ಕೆ ನೀರನ್ನು ಅರ್ಪಿಸಿ.
  4. ಪ್ರತಿದಿನ ಹಣೆಗೆ ಕುಂಕುಮ ಅಥವಾ ಶ್ರೀಗಂಧದ ತಿಲಕವನ್ನು ಹಚ್ಚಿ, ತುಳಸಿ ಮಾಲೆಯನ್ನು ಧರಿಸಿ.
  5. ಹೆಚ್ಚಿನ ಸಂದರ್ಭಗಳಲ್ಲಿ ಹಳದಿ ಬಟ್ಟೆಗಳನ್ನು ಧರಿಸಿ.
  6. ಮನೆಯಲ್ಲಿ ಕರ್ಟನ್ ಮತ್ತು ಶೀಟ್ ಗಳ ಬಣ್ಣವನ್ನು ಗುಲಾಬಿ ಬಣ್ಣದಲ್ಲಿ ಇರಿಸಿ.
  7. ಗುರುವಾರದಂದು ಅರಳಿ ಮರದ ಕೆಳಗೆ ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ.
  8. ಹುಡುಗಿಯ ತಂದೆ ಅಥವಾ ಸಹೋದರನು ವಿವಾಹ ಸಂಬಂಧದ ಬಗ್ಗೆ ಮಾತನಾಡಲು ಮನೆಯಿಂದ ಹೊರಗೆ ಹೋದಾಗ, ಆ ಹುಡುಗಿಯು ಅವರು ಹಿಂತಿರುಗುವವರೆಗೂ ತನ್ನ ಕೂದಲನ್ನು ತೆರೆದಿರಬೇಕು.

ಹುಡುಗರಿಗೆ ಕಂಕಣ ಬಲ ಕೂಡಿ ಬರಲು ಹೀಗೆ ಮಾಡಿ:

  1. ಶುಕ್ರವಾರದಂದು ಉಪವಾಸ ವ್ರತವನ್ನು ಆಚರಿಸಬೇಕು.
  2. ಹುಡುಗರು 21 ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕುಳಿತು ಪೂಜೆ ಮಾಡಿ – ಸೀತಾ ರಾಮರ ಪಾದಗಳಿಗೆ ಸಿಂಧೂರವನ್ನು ಅರ್ಪಿಸಬೇಕು.
  3. ಪ್ರತಿ ಗುರುವಾರದಂದು ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಬೇಕು.
  4. ಶುಕ್ಲ ಪಕ್ಷದ ಪ್ರತಿ ಸೋಮವಾರದಂದು ಉಪವಾಸವನ್ನು ಇಟ್ಟುಕೊಳ್ಳಿ ಮತ್ತು ಎಕ್ಕದ ಎಂಟು ಎಲೆಗಳನ್ನು ಪೂಜಿಸಿ, ಏಳು ಎಲೆಗಳಿಂದ ತಟ್ಟೆಯನ್ನು ಮಾಡಿ ಎಂಟನೇ ಎಲೆಯ ಮೇಲೆ ನಿಮ್ಮ ಹೆಸರನ್ನು ಬರೆದು ಶಿವನಿಗೆ ಅರ್ಪಿಸಿ.
  5. ಮನೆಯ ದಕ್ಷಿಣ ಭಾಗದಲ್ಲಿ ಬೇವಿನ ಮರವನ್ನು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸಿ.
  6. ಮದುವೆಗೆ ಮೊದಲು ಕುಂಭ ವಿವಾಹ ಮಾಡಿ.
  7. ಕಣ್ಣುಗಳಿಗೆ ಬಿಳಿ ಬಣ್ಣದ ಕಾಜಲ್‌ನ್ನು ಹಚ್ಚಬೇಕು. ಒಂದು ವೇಳೆ ಬಿಳಿ ಬಣ್ಣದ ಕಾಜಲ್‌ ಲಭ್ಯವಿಲ್ಲದಿದ್ದರೆ ಕಪ್ಪು ಬಣ್ಣದ ಕಾಜಲ್‌ನ್ನು ಕೂಡ ಹಚ್ಚಿಕೊಳ್ಳಬಹುದು.
  8. ಮನೆಯಲ್ಲಿ ವಾಸ್ತು ದೋಷವಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ವಾಸ್ತು ದೋಷವಿದ್ದರೆ ಅದನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಿ.

ಸೂಚನೆ: ಈ ಪರಿಹಾರ ಕ್ರಮಗಳನ್ನು ಕೇವಲ ಮಾಹಿತಿಗಾಗಿ ನೀಡಲಾಗಿದೆ. ವಿವಾಹ ವಿಳಂಬಕ್ಕೆ ಜಾತಕದಲ್ಲಿ ಬೇರೆ ಕಾರಣಗಳು ಸಹ ಇರಬಹುದು. ಆದ್ದರಿಂದ, ನಿಮ್ಮ ಜಾತಕವನ್ನು ಅರ್ಹ ಜ್ಯೋತಿಷಿಗಳಿಗೆ ಅಥವಾ ತಜ್ಞರಿಗೆ ತೋರಿಸಿ ನಂತರವೇ ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು.

Related Posts