ಮತದಾರರ ಜಾಗೃತಿ ಸ್ಪರ್ಧೆ


ಮತದಾರರ ಜಾಗೃತಿ ಸ್ಪರ್ಧೆ ಪಾಲ್ಗೊಳ್ಳಲು ಅವಕಾಶ


ಮಡಿಕೇರಿ ಮಾ.23(ಕರ್ನಾಟಕ ವಾರ್ತೆ):-ಭಾರತ ಚುನಾವಣಾ ಆಯೋಗವು ಮಾರ್ಚ್, 31 ರವರೆಗೆ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ ಆಯೋಜಿಸಿದ್ದು, ಆಸಕ್ತರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದು ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ನನ್ನ ಮತ ನನ್ನ ಭವಿಷ್ಯ ಒಂದು ಮತ ಶಕ್ತಿ ಎಂಬ ಧ್ಯೇಯ ವಾಕ್ಯದೊಡನೆ ಮತದಾರರಿಗೆ ಜಾಗೃತಿ ನಡೆಸುವ ಸಲುವಾಗಿ ಭಾರತ ಚುನಾವಣಾ ಆಯೋಗವು ಗಾಯನ, ರಸಪ್ರಶ್ನೆ, ಭಿತ್ತಿಪತ್ರ ವಿನ್ಯಾಸ, ವೀಡಿಯೋ ತಯಾರಿಕೆ, ಘೋಷ ವಾಕ್ಯ ಬರಹ ಎಂಬ 5 ಸ್ಪರ್ಧೆಗಳನ್ನು ಆನ್‍ಲೈನ್ ಮೂಲಕ ಏರ್ಪಡಿಸಿದೆ.
ಪ್ರತಿ ಸ್ಪರ್ಧೆಯಲ್ಲಿ ಸಾಂಸ್ಥಿಕ, ವೃತ್ತಿಪರ ಹಾಗೂ ಹವ್ಯಾಸಿ ಎಂಬ 3 ವರ್ಗಗಳಿರುತ್ತವೆ. ಎಲ್ಲರೂ ಭಾಗವಹಿಸುವ ಅವಕಾಶವಿರುವುದರಿಂದ ಹೆಚ್ಚು ಜನರು ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಪಡೆಯಬಹುದು.
ವೀಡಿಯೊ ತಯಾರಿಕೆ ಸ್ಪರ್ಧೆಯಲ್ಲಿ ಸಾಂಸ್ಥಿಕ ವರ್ಗದಲ್ಲಿ ರೂ.2 ಲಕ್ಷ(ಪ್ರಥಮ), ರೂ.1 ಲಕ್ಷ(ದ್ವಿತೀಯ), ರೂ.75 ಸಾವಿರ(ತೃತೀಯ), 4 ಜನರಿಗೆ ರೂ.30 ಸಾವಿರ ಸಮಾಧಾನಕರ ಬಹುಮಾನವಿರುತ್ತದೆ.
ವೃತ್ತಿಪರ ವರ್ಗದಲ್ಲಿ ರೂ.50 ಸಾವಿರ(ಪ್ರಥಮ), ರೂ.30 ಸಾವಿರ(ದ್ವಿತೀಯ), ರೂ.20 ಸಾವಿರ(ತೃತೀಯ ಹಾಗೂ 3 ಜನರಿಗೆ 10 ಸಾವಿರ ಸಮಾಧಾನಕರ ಬಹುಮಾನ.
ಹವ್ಯಾಸಿ ವರ್ಗ ರೂ.30 ಸಾವಿರ(ಪ್ರಥಮ), ರೂ.20 ಸಾವಿರ(ದ್ವಿತೀಯ), ರೂ.10 ಸಾವಿರ(ತೃತೀಯ) ಹಾಗೂ 3 ಜನರಿಗೆ ರೂ.5 ಸಾವಿರ ಸಮಾಧಾನಕರ ಬಹುಮಾನ.
ಗಾಯನ ಸ್ಪರ್ಧೆಯಲ್ಲಿ ಸಾಂಸ್ಥಿಕ ವರ್ಗದಲ್ಲಿ ಪ್ರಥಮ ಬಹುಮಾನ ರೂ. 1 ಲಕ್ಷ, ದ್ವಿತೀಯ ರೂ.50 ಸಾವಿರ, ತೃತೀಯ ರೂ.20 ಸಾವಿರ ಹಾಗೂ 3 ಜನರಿಗೆ ರೂ.10 ಸಾವಿರ ಸಮಾಧಾನಕರ ಬಹುಮಾನ.
ಹವ್ಯಾಸಿ ವರ್ಗದಲ್ಲಿ ಮೊದಲನೇ ಬಹುಮಾನ ರೂ.20 ಸಾವಿರ, ಎರಡನೇ ಬಹುಮಾನ ರೂ.10 ಸಾವಿರ, ಮೂರನೇ ಬಹುಮಾನ ರೂ.7,500 ಹಾಗೂ 3 ಜನರಿಗೆ 3 ಸಾವಿರ ರೂ.ಗಳ ಸಮಾಧಾನಕರ ಬಹುಮಾನ.
ಭಿತ್ತಿಪತ್ರ ವಿನ್ಯಾಸ ಸ್ಪರ್ಧೆಯಲ್ಲಿ ಸಾಂಸ್ಥಿಕ ವರ್ಗದಲ್ಲಿ ಮೊದಲನೇ ಬಹುಮಾನ ರೂ.50 ಸಾವಿರ, ಎರಡನೇ ಬಹುಮಾನ ರೂ.30 ಸಾವಿರ, ಮೂರನೇ ಬಹುಮಾನ ರೂ.20 ಸಾವಿರ ಹಾಗೂ 4 ಜನರಿಗೆ ರೂ.10 ಗಳ ಸಮಾಧಾನಕರ ಬಹುಮಾನ. ವೃತ್ತಪರ ವರ್ಗದಲ್ಲಿ ಮೊದಲನೇ ಬಹುಮಾನ ರೂ.30 ಸಾವಿರ, ಎರಡನೇ ಬಹುಮಾನ ರೂ.20 ಸಾವಿರ, ಮೂರನೇ ಬಹುಮಾನ ರೂ.10 ಸಾವಿರ ಹಾಗೂ 3 ಜನರಿಗೆ 5 ಸಾವಿರ ರೂ.ಗಳ ಸಮಾಧಾನಕ ಬಹುಮಾನ.
ಹವ್ಯಾಸಿ ವರ್ಗದಲ್ಲಿ ಮೊದಲನೇ ಬಹುಮಾನ ರೂ.20 ಸಾವಿರ, ಎರಡನೇ ಬಹುಮಾನ ರೂ. 10 ಸಾವಿರ, ಮೂರನೇ ಬಹುಮಾನ ರೂ.7,500, ಹಾಗೂ 3 ಜನರಿಗೆ 3 ಸಾವಿರ ರೂ.ಗಳ ಸಮಾಧಾನಕರ ಬಹುಮಾನ.
ರಸಪ್ರಶ್ನೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ಮೆರ್ಚಂಡೈಸ್ ಹಾಗೂ 3 ನೇ ಹಂತವನ್ನು ಪೂರ್ತಿ ಮಾಡಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಇ-ಪ್ರಮಾಣಪತ್ರವನ್ನು ನೀಡಲಾಗುವುದು.
ಘೋಷವಾಕ್ಯ ಬರೆಯುವ ಸ್ಪರ್ಧೆಗೆ ಮೊದಲನೇ ಬಹುಮಾನ ರೂ.20 ಸಾವಿರ, ಎರಡನೇ ಬಹುಮಾನ ರೂ.10 ಸಾವಿರ, ಮೂರನೇ ಬಹುಮಾರ ರೂ.7,500 ಹಾಗೂ 50 ಸ್ಪರ್ಧಿಗಳಿಗೆ ತಲಾ 2,000 ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುವುದು.
ಸ್ಪರ್ಧಿಗಳು ವೆಬ್‍ಸೈಟ್ voter- contest@eci.gov.in ಮೂಲಕ ನಿಮ್ಮ ನಮೂದುಗಳನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ ecisveep.nic.in/contest ನಲ್ಲಿ ನೋಡಬಹುದು ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.

ಚಾನಲ್‌ಕೂರ್ಗ್/ಕೂರ್ಗ್ ಎಕ್ಸ್‌ಪ್ರೆಸ್

Related Posts