ಅರೋಗ್ಯ ಸಂಪತ್ತುಕೋರಿಕೆಯ ಮೇರೆಗೆ
ತಾಯಿಯ ಎದೆಹಾಲು ವೃದ್ಧಿಸಲು ಸರಳ ವಿಧಾನಗಳು
ತಾಯಿಯಾದ ಸಮಯದಲ್ಲಿ ಮಗುವಿಗೆ ನಾನಾ ರೀತಿಯ ಕಾಳಜಿಯನ್ನು ಮಾಡ   ಬೇಕಾಗುತ್ತದೆ ಅವರ ಸ್ನಾನ ಬಟ್ಟೆಗಳನ್ನು ಸ್ವಶ್ಚವಾಗಿಡುವುದು  ಮಲಗುವ ಜಾಗ ಹೀಗೆ ತಾಯಂದಿರಿಗೆ ಹಲವಾರು ಕೆಲಸಗಳು ಇರುತ್ತವೆ ಇದರೊಂದಿಗೆ ಮಗುವಿನ ಆಹಾರದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ತನ್ನ ಮಗುವಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಅವಳಿಗೆ ಮಾತ್ರ ಗೊತ್ತು ಏಕೆಂದರೆ ತಾನು ಊಟಮಾಡುವ ಆಹಾರದಲ್ಲಿ ಬದಲಾವಣೆ ಯಾದರೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಮಗುವಿನ ಆಹಾರದ ವಿಷಯಕ್ಕೆ ಬಂದಾಗ ತಾಯಿಯ  ಎದೆಹಾಲು ಅಮೃತವಾಗಿರುತ್ತದೆ ಮಗು ಹುಟ್ಟಿ ಆರು ತಿಂಗಳ ವರೆಗೆ ಎದೆಹಾಲು ಕುಡಿಸಲೇ ಬೇಕು ತಾಯಿಯ ಎದೆಹಾಲಿನಲ್ಲಿ ಇರುವ ಪೋಷಕ ಸತ್ವಗಳು  ಮಗುವಿನ ಪೋಷಣೆಗೆ ಸಹಕಾರಿಯಾಗಿದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಮಗುವಿನಲ್ಲಿ ಹೆಚ್ಚಿಸುತ್ತದೆ
  ಹಲವಾರು ತಾಯಂದಿರಲ್ಲಿ ಸಾಮಾನ್ಯವಾಗಿ ಎದೆಹಾಲು ಉತ್ಪತ್ತಿ ಆಗದೆ ಇರುವುದು. ಇದರಿಂದ . ಮಗುವಿಗೆ ಸರಿಯಾಗಿ ಹಾಲು ಸಿಗದೆ ಇರುವಂತಹ ಸಂದರ್ಭದಲ್ಲಿ ಪೋಷಕಾಂಶಗಳ ಕೊರತೆ ಆಗುವುದು ಮಾತ್ರವಲ್ಲದೆ, ಅದು ಸರಿಯಾಗಿ ನಿದ್ರೆ ಕೂಡ ಮಾಡದೆ ಇರಬಹುದು. ಹೀಗಾಗಿ ಮೊದಲ ಆರು ತಿಂಗಳ ಕಾಲ ಮಗುವಿಗೆ ಎದೆಹಾಲು ಅತೀ ಅಗತ್ಯವಾಗಿರುವುದು.
ಎದೆಹಾಲು ಅತಿಯಾದರೂ ಅದರಿಂದ ಬಾಣಂತಿಯರಿಗೆ ಅದನ್ನು ಮಗುವಿಗೆ ಕೊಟ್ಟು ಹೊರಗೆ ಹಾಕಲು ಸಮಸ್ಯೆ ಆಗಬಹುದು. ಇದರಿಂದ ಎದೆ ಹಾಲು ಸಮತೋಲಿತವಾಗಿರಬೇಕು. ಕಡಿಮೆಯೂ ಇರಬಾರದು ಮತ್ತು ಅತಿಯಾಗಿಯೂ ಇರಬಾರದು.  ಎದೆಹಾಲನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದಾದ ಒಂದಿಷ್ಟು ಆಹಾರಗಳು ಹೀಗಿದೆ
ಮೆಂತ್ಯೆ
ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಗೊಗ್ಸ್ ಎನ್ನುವ ಅಂಶವಿದ್ದು, ಇದು ಎದೆಹಾಲು ಉತ್ಪತ್ತಿ ಹೆಚ್ಚು ಮಾಡುವುದು. ಬಾಣಂತಿಯರು ಮೆಂತ್ಯೆಕಾಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ  ಮೆಂತೆ ಕಾಳನ್ನು ಸ್ವಲ್ಪ ಹುರಿದು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಮೆಣಸು ಸೇರಿದ ಪುಡಿಮಾಡಿ ಇಟ್ಟುಕೊಳ್ಳಿ ನೀವು ಸೇವಿಸುವ ಆಹಾರ ಮತ್ತು ತರಕಾರಿಗಳ ಮೇಲೆ ಸಿಂಪಡಣೆ ಮಾಡಿ ಅಥವಾ ಮೆಂತ್ಯೆ ಕಾಳನ್ನು ಹಾಗೆ ರಾತ್ರಿ ವೇಳೆ ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಎದ್ದು  ನೀರನ್ನು ಕುಡಿಯಿರಿ.ನೀರಿನಲ್ಲಿ ಮೆಂತ್ಯೆ ಕಾಳನ್ನು ಹಾಗೆ ಕುದಿಸಿ ಮತ್ತು ಇದನ್ನು ಸೋಸಿಕೊಂಡು ಅದರ ಬಳಿಕ ಕುಡಿಯಿರಿ.ಇಲ್ಲವೇ ಮೆಂತೆ ಕಾಳಿನ ಪುಡಿ ಬೆಲ್ಲ ಒಣಹಣ್ಣುಗಳನ್ನು ಸೇರಿಸಿ ಲಾಡು ತಯಾರಿಸಿ ಸೇವಿಸಿ  
ಸೋಂಪು
ಮೆಂತ್ಯೆ ಕಾಳಿನಂತೆ ಸೋಂಪಿನಲ್ಲಿ ಕೂಡ ಎದೆಹಾಲು ಹೆಚ್ಚಿಸುವ ಗುಣಗಳು ಇವೆ. ನಿಯಮಿತವಾಗಿ ಸೋಂಪು ಸೇವನೆ ಮಾಡಿದರೆ, ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಹಾಗೂ ಬಾಣಂತಿಯಲ್ಲಿ ಕಾಡುವ ಮಲಬದ್ಧತೆ ನಿವಾರಣೆ ಆಗುವುದು ಆಗಾಗಸೋಂಪನ್ನು ಜಗಿಯಿರಿ ಅಥವಾ ಹುರಿದು ತಿನ್ನಿ.ತರಕಾರಿ ಅಥವಾ ಯಾವುದೇ ಖಾದ್ಯಕ್ಕೆ ಇದನ್ನು ಬಳಸಬಹುದು.
ಬಳ್ಳೊಳ್ಳಿ
ಬೆಳ್ಳುಳ್ಳಿಯು ಚಿಕಿತ್ಸಕ ಮತ್ತು ಗಿಡಮೂಲಿಕೆ ಗುಣ ಹೊಂದಿದೆ. ಇದು ಬಾಣಂತಿಯರಲ್ಲಿ ಹಾಲಿನ ಉತ್ಪತ್ತಿ ಹೆಚ್ಚು ಮಾಡುವುದು. ಯಾವುದೇ ರೀತಿಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಿದರೂ ಅದರಿಂದ ಎದೆಹಾಲಿನ ಉತ್ಪತ್ತಿಯು ಹೆಚ್ಚಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.
ಹಾಲಿನ ಉತ್ಪತ್ತಿ ಹೆಚ್ಚಿಸಲು ಪ್ರತಿನಿತ್ಯ ಒಂದರಿಂದ ಎರಡು ಎಸಲು ಬೆಳ್ಳುಳ್ಳಿ ಸೇವಿಸಿ.ದಾಲ್, ಪಲ್ಯ ಮತ್ತು ಖಾದ್ಯಗಳಿಗೆ ಬೆಳ್ಳುಳ್ಳಿ ಬಳಕೆ ಹೆಚ್ಚಿಸಿ.
ಜೀರಿಗೆ
ಭಾರತೀಯರೆಲ್ಲರೂ ಪ್ರತಿಯೊಂದು ಅಡುಗೆಗೆ ಬಳಕೆ ಮಾಡುವಂತಹ ಜೀರಿಗೆ ಕೂಡ ಎದೆಹಾಲು ಹೆಚ್ಚಿಸುವುದು. ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡಿಸುವಲ್ಲಿ ಜೀರಿಗೆ ಕೂಡ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣಾಂಶವಿದ್ದು, ಇದು ದೇಹಕ್ಕೆ ಶಕ್ತಿ ನೀಡುವುದು.
ಜೀರಿಗೆ ಹುರಿದುಕೊಳ್ಳಿ ಮತ್ತು ಅದನ್ನು ಯಾವುದೇ ಖಾದ್ಯ, ಸಲಾಡ್ ಅಥವಾ ಪಲ್ಯಕ್ಕೆ ಬಳಕೆ ಮಾಡಿ.ಚಾಟ್, ಮಜ್ಜಿಗೆಗೆ ಕೂಡ ಇದನ್ನು ನೀವು ಹಾಕಬಹುದು.
ಎಳ್ಳು
ಬಿಳಿ ಹಾಗೂ ಕಪ್ಪು ಎಳ್ಳಿನಲ್ಲಿ ಅತ್ಯಧಿಕ ಪ್ರಮಾಣದ ಕ್ಯಾಲ್ಸಿಯಂ ಹಾಗೂ ತಾಮ್ರದ ಅಂಶವಿದೆ. ಇದರ ಹೊರತಾಗಿ ಇದರಲ್ಲಿ ಹಲವಾರು ರೀತಿಯ ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳಿದ್ದು, ತಾಯಿ ಹಾಗೂ ಮಗುವಿಗೆ ಲಾಭಕಾರಿ.
ಎಳ್ಳಿನ ಲಾಡು ಮಾಡಬಹುದು ಅಥವಾ ಇದನ್ನು ಬೆಲ್ಲದ ಜತೆಗೆ ಸೇರಿಸಿಕೊಂಡು ಸೇವನೆ ಮಾಡಬಹುದು.ಎಳ್ಳನ್ನು ಹುರಿದುಕೊಂಡು ಇದನ್ನು ಸಲಾಡ್ ಅಥವಾ ಪಲ್ಯಕ್ಕೆ ಹಾಕಿಕೊಂಡು ಸೇವನೆ ಮಾಡಬಹುದು.
ತರಕಾರಿಗಳು
ಸೋರೆಕಾಯಿ ಕುಟುಂಬಕ್ಕೆ ಸೇರಿದ ತರಕಾರಿಗಳು ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಉದ್ದ ಸೋರೆಕಾಯಿ, ಕಹಿ ಸೋರೆಕಾಯಿ, ತೊರಿ ಇತ್ಯಾದಿಗಳು ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವುದು. ಇವೆಲ್ಲದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಕೂಡ ಇವೆ.ಗೆಣಸು, ಕ್ಯಾರೇಟ್ ಮತ್ತು ಬೀಟ್ ರೂಟ್ ನಂತಹ ಅಧಿಕ ಕ್ಯಾರೋಟಿನ್ ಅಂಶವಿರುವ ತರಕಾರಿಗಳನ್ನು ಬಾಣಂತಿಯರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದು ಹಾಲು ಹೆಚ್ಚು ಮಾಡುವ ಜತೆಗೆ ಯಕೃತ್ ನ ಆರೋಗ್ಯ ಮತ್ತು ಬಾಣಂತಿಯರಲ್ಲಿ ಕಾಡುವಂತಹ ರಕ್ತಹೀನತೆ ನಿವಾರಣೆ ಮಾಡುವುದು.ಸಾಧ್ಯವಾದಷ್ಟು ತರಕಾರಿಗಳನ್ನು ಬಳಸಿ 
ಒಣ ಹಣ್ಣುಗಳನ್ನು ಸಿಹಿ ತಿಂಡಿಗಳು, ಖಾದ್ಯ ಮತ್ತು ಬೇರೆ ರೀತಿಯ ಆಹಾರದಲ್ಲಿ ಬಳಕೆ ಮಾಡಿಕೊಂಡು ಅದರ ಲಾಭ ಪಡೆಯಬಹುದು.
ತುಪ್ಪದಲ್ಲಿ ಒಣ ಹಣ್ಣುಗಳನ್ನು ಹುರಿದು ತಿನ್ನಿ ಅಥವಾ ಬಾದಾಮಿ ಹುಡಿ ಮಾಡಿಕೊಂಡು ಅದನ್ನು ವಿವಿಧ ರೀತಿಯಿಂದ ಬಳಸಬಹುದು.ಒಣ ಹಣ್ಣುಗಳನ್ನು ಸಿಹಿ ತಿಂಡಿ ಅಥವಾ ಹಲ್ವಾಗೆ ಬಳಕೆ ಮಾಡಬಹುದು
 ಒಣ ಕೊಬ್ಬರಿಇದನ್ನು ತುರಿದು ಬೆಲ್ಲ ಅಥವಾ ಸಕ್ಕರೆ ಒಣ ಹಣ್ಣುಗಳನ್ನು ಸೇರಿಸಿ ಲಾಡು ತಯಾರಿಸಿ ಸೇವಿಸಿ  ಇದು ತುಂಬಾ ಸಹಕಾರಿ 
ಬಾಣಂತಿಯರು ಎಲ್ಲಾ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು. ಮಾಂಸಾಹಾರಿ ಅಥವಾ ಧಾನ್ಯಗಳ ಆಹಾರ ಸೇವನೆಯಿಂದ ಹೊಟ್ಟೆ ಉಬ್ಬರ ಉಂಟಾಗುವುದು ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ಆದರೆ ಇದರಿಂದ ಪ್ರೋಟೀನ್ ಕಡಿಮೆ ಆಗುವುದು ಮತ್ತು ನಿಶ್ಯಕ್ತಿ ಕಾಡುವುದು.
ದಿನದಲ್ಲಿ 10-12 ಲೋಟ ನೀರು ಕುಡಿಯಿರಿ. ಎದೆಹಾಲಿನಲ್ಲಿ ಶೇ.80ರಷ್ಟು ಪ್ರಮಾಣದಲ್ಲಿ ನೀರು ಇರುವುದು ಎನ್ನುವುದು ನೆನಪಿರಲಿ.
ತುಪ್ಪ ಮತ್ತು ಸಕ್ಕರೆಯನ್ನು ಬಳಸಿದರೆ ಅದರಿಂದ ಹಾಲಿನ ಉತ್ಪತ್ತಿ ಹೆಚ್ಚಾಗದು, ಬದಲಿಗೆ ದೇಹ ತೂಕ ಹೆಚ್ಚಾಗುವುದು.
ಮಗುವಿಗೆ ಆಗಾಗ ಹಾಲುಣಿಸಿ. ಇದರಿಂದ ಹಾಲಿನ ಉತ್ಪತ್ತಿಯು ಹೆಚ್ಚಾಗುವುದು.

Related Posts