ಗುರುಬಲ ಹೆಚ್ಚಾಗಲು ಸಂಕಷ್ಟಹರ ಚತುರ್ಥಿಯ ದಿನ ಈ ರೀತಿ ಮಾಡಿ

🌻 ಯಾವುದೇ ಮಾಸ ಆಗಲಿ ಗುರುವಾರ ಹಾಗೂ ಮಂಗಳವಾರ ಏನಾದರೂ ಸಂಕಷ್ಟಹರ ಚತುರ್ಥಿ ಬಂತು ಎಂದರೆ ಈ ಚಿಕ್ಕ ಕೆಲಸ ಮಾಡಿದ್ದೇ ಆದಲ್ಲಿ ವರ್ಷ ಪೂರ್ತಿ ಅಖಂಡ ವಿಜಯ ಎನ್ನುವುದು ನಿಮಗೆ ಪ್ರಾಪ್ತಿ ಆಗುತ್ತದೆ. ನಿಮ್ಮ ಸಾಲಗಳು ತೀರಬೇಕು ಹಣಕಾಸು ಚೆನ್ನಾಗಿ ಕೈಯಲ್ಲಿ ಓಡಾಡಬೇಕು ಕೊಟ್ಟ ಹಣ ಕೈ ಸೇರಬೇಕು ವಿಶೇಷವಾಗಿ ಎಲ್ಲಾ ಖರ್ಚು ಕಡಿಮೆ ಆಗಿ ಜೀವನದಲ್ಲಿ ನವಗ್ರಹಗಳಲ್ಲಿ ಅದರಲ್ಲಿಯೂ ಕೂಡ ಗುರು ಬಲ ಹೆಚ್ಚಾಗಬೇಕು ಎಂದರೆ ಸಂಕಷ್ಟಹರ ಚತುರ್ಥಿ ದಿನ ಈ ಕೆಲಸ ಮಾಡಬೇಕು.
🌻 ಗುರುವಾರಕ್ಕೆ ಅಧಿಪತಿ ದೇವಗುರು ಬೃಹಸ್ಪತಿ ಆಗಿರುವುದರಿಂದ ಅಂತಹ ದಿನ ಹರಿದ್ರಾ ಗಣಪತಿ ಪೂಜೆಯನ್ನು ಸಲ್ಲಿಸಬೇಕು ಅಂದು ಒಂದು ವೀಳ್ಯದೆಲೆ ಮೇಲೆ ಅರಿಶಿನದಿಂದ ಮಾಡಿದ ಗಣೇಶನನ್ನು ವೀಳ್ಯದೆಲೆ ಮೇಲೆ ಇಡಬೇಕು.
🌻 ಈ ಗಣೇಶನಿಗೆ ಕುಂಕುಮದ ಬೊಟ್ಟು ಇಟ್ಟು ನಮಸ್ಕಾರ ಮಾಡಬೇಕು, ಸಂಕಲ್ಪ ಮಾಡಿಕೊಳ್ಳಬೇಕು. ಕೈಯಲ್ಲಿ ಅಕ್ಷತೆ ಇಟ್ಟುಕೊಂಡು ವೀಳ್ಯದೆಲೆ ಮೇಲೆ ಇರುವ ಅನುಷ್ಠಾನ ಮಾಡಿರುವ ಅರಿಶಿಣ ಗಣಪತಿಗೆ 21 ಬಾರಿ ಅಕ್ಷತೆ ಹಾಕುತ್ತಾ ಓಂ ಹೇರಂಭ ಎನ್ನುವ ಮಂತ್ರವನ್ನು ಹೇಳಿಕೊಳ್ಳಬೇಕು. ನಿಮಗೆ ಸಿಹಿ ನೈವೇದ್ಯ ಇಡಲು ಸಾಧ್ಯ ಆಗಿಲ್ಲ ಎಂದರೆ ಹಣ್ಣು ಹೂವು ಕಾಯಿ ಹಾಗೂ ಬೆಲ್ಲವನ್ನು ಇಟ್ಟು ಪೂಜೆಯನ್ನು ಮಾಡಬೇಕು ಬೆಳಗ್ಗೆ ಈ ರೀತಿಯಾಗಿ ಪೂಜೆ ಮಾಡಬಹುದು.
🌻 ಇನ್ನೂ ಪೂಜೆ ಆದ ನಂತರ ಗಣಪತಿಯನ್ನು ನಿಮ್ಮ ಕೈಯಾರೆ ತಗುಲಿಸಬೇಕು ನಂತರ ಗಣೇಶನನ್ನು ಮನೆಯ ಅಕ್ಕ ಪಕ್ಕ ದೊಡ್ಡದಾದ ಮರಗಳು ಇದ್ದರೆ ಆ ಮರದ ಬುಡಕ್ಕೆ ಗಣೇಶನನ್ನು ಇಟ್ಟು ಬರಬೇಕು. ಈ ರೀತಿಯಾಗಿ ಗುರುವಾರದ ದಿನ ಬಂದಿರುವ ಸಂಕಷ್ಟಹರ ಚತುರ್ಥಿ ಆಚರಣೆ ಮಾಡಬೇಕು. ಇನ್ನೂ ಮನೆಯ ಹತ್ತಿರ ಗಣೇಶನ ದೇಗುಲ ಇತ್ತು ಎಂದಾದರೆ ಅಥವಾ ಮನೆಯಲ್ಲಿ ಏನಾದರೂ ಗಣೇಶನ ವಿಗ್ರಹ ಇದ್ದರೆ ಆ ವಿಗ್ರಹಕ್ಕೆ ನೀವು ಎಳನೀರು ಅಥವಾ ತೆಂಗಿನಕಾಯಿ ನೀರಿನಿಂದ ಅಭಿಷೇಕ ಮಾಡಬೇಕು.
🌻 ಹೀಗೆ ಮಾಡಿದ್ದೆ ಆದಲ್ಲಿ ವಿಶೇಷವಾದ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ, ಗುರುಬಲ ಎನ್ನುವುದು ಹೆಚ್ಚಾಗುತ್ತದೆ. ಮನೆಯ ಹತ್ತಿರ ಇರುವ ದೇವಾಲಯದಲ್ಲಿ ಗಣೇಶನ ಆಲಯಗಳಲ್ಲಿ ತೆಂಗಿನಕಾಯಿಯಿಂದ ಅಭಿಷೇಕ ಮಾಡುವುದಾಗಿ ಹೇಳಿಕೊಂಡು ಬಂದಿರಬೇಕು ಆ ರೀತಿಯಾಗಿ ಹೇಳಿಕೊಂಡು ಸಂಜೆ ದೇವಸ್ಥಾನಕ್ಕೆ ಹೋಗಿ ತೆಂಗಿನಕಾಯಿಯಿಂದ ಅಭಿಷೇಕ ಮಾಡಿಸಿದ್ದೆ ಆದಲ್ಲಿ ಪುಣ್ಯ ಫಲಗಳು ಪ್ರಾಪ್ತಿ ಆಗುತ್ತದೆ.
🌻 ನಿಮ್ಮಲ್ಲಿ ತೆಂಗಿನಕಾಯಿಯ ನೀರಿನ ಅಭಿಷೇಕ ಮಾಡಿಸಲು ಸಾಧ್ಯ ಆಗಿಲ್ಲ ಎನ್ನುವವರು ಕೊನೆಯ ಪಕ್ಷ ಗಣೇಶನಿಗೆ ನೈವೇದ್ಯ ಮಾಡುವಾಗ ಈ ರೀತಿಯಾಗಿ ಹರಿದ್ರಾ ಗಣಪತಿ ಪೂಜೆ ಮಾಡಿದ್ದೆ ಆದಲ್ಲಿ ನೀವು ಅಂದುಕೊಂಡ ಕೆಲಸಗಳು ಈಡೇರುತ್ತದೆ. ವರ್ಷ ಪೂರ್ತಿ ನೀವು ಮಾಡುವ ಕೆಲಸದಲ್ಲಿ ಕೂಡ ಅಖಂಡ ಯಶಸ್ಸು ಪ್ರಾಪ್ತಿ ಆಗುತ್ತದೆ.

ಶ್ರೀ ವೆಂಕಟೇಶ್ ಜ್ಯೋತಿಷ್ಯರು

Related Posts