ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||

ಅಶ್ವತ್ಥಮರದಮಹತ್ವ
ನಮ್ಮ ಹಿಂದೂ ಸಂಸ್ಕೃತಿಯ ಆಚಾರ-ವಿಚಾರಗಳಿಗೆ ತನ್ನದೇ ಆದ ಶ್ರೇಷ್ಠತೆ ಹಾಗೂ ಹಿನ್ನೆಲೆಗಳಿವೆ. ಅಲ್ಲದೆ ಕೆಲವು ಗಿಡ ಮರಗಳಿಗೆ ಆಧ್ಯಾತ್ಮಿ ಶಕ್ತಿ ಇರುವುದನ್ನು ಸಹ ನಾವು ಕಾಣಬಹುದು. ಅಂತಹವುಗಳಲ್ಲಿ #ಅಶ್ವತ್ಥ ಮರವೂ ಒಂದು. ಈ ಮರದಲ್ಲಿ #ದೇವತೆಗಳು #ವಾಸಿಸುತ್ತಾರೆ. ಹಾಗಾಗಿ ಎಲ್ಲಾ ಸಮಯದಲ್ಲೂ ಈ ಮರದ ಬಳಿ ಇರಬಾರದು ಎನ್ನುವ ಪ್ರತೀತಿ ಇದೆ.
ಹಿಂದೂ ಧರ್ಮಿಯರಿಗೆ ಅಶ್ವತ್ಥ(#ಅರಳಿ) ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ #ಪೂಜೆ ಹಾಗೂ #ಹವನಗಳಿಗೂ ಬಳಸಲಾಗುತ್ತದೆ. #ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ #ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

ಬ್ರಹ್ಮ_ಪುರಾಣದ ಪ್ರಕಾರ, ದುಷ್ಟ ಶಕ್ತಿಗಳು ಆಗಾಗ ದೇವತೆಗಳ ವಿರುದ್ಧ ದಂಗೆ ಏಳುತ್ತಿದ್ದವು. ದುಷ್ಟ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ, ಭಗವಂತನಾದ #ವಿಷ್ಣುವು ಎಲ್ಲಾ ದೇವತೆಗಳಿಗೆ ಅಶ್ವತ್ಥ ಮರದ ಹಿಂದೆ ಅಡಗಿ ಕೊಳ್ಳಲು ಹೇಳಿದನು. ವಿಷ್ಣುವಿನ ಮಾತಿನಂತೆ ಎಲ್ಲಾ ದೇವತೆಗಳು ಮರದ ಒಂದೊಂದು ಭಾಗದಲ್ಲಿ ಒಬ್ಬೊಬ್ಬರಂತೆ ಅವಿತು ಕುಳಿತರು.

ಆದರೆ #ಲಕ್ಷ್ಮಿ ಮಾತ್ರ ಮರದ ಬುಡದಲ್ಲಿ ಕುಳಿತಳು. ಹಾಗಾಗಿಯೇ ಈ ಮರದ ಆರಾಧನೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತದೆ. ಶಾಸ್ತ್ರವು ಅಶ್ವತ್ಥ ಮರದ ಬಳಿ ಹೋಗುವುದು ಮತ್ತು ಅದರ ಪೂಜೆ ಮಾಡುವುದಕ್ಕೆ ನಿಗದಿತ ಸಮಯವನ್ನು ಹೇಳುತ್ತದೆ.

ಪದ್ಮ_ಪುರಾಣದ ಪ್ರಕಾರ ಸೂರ್ಯೋದಯಕ್ಕಿಂತ ಮುಂಚೆ ಅಶ್ವತ್ಥ ಮರದ ಬಳಿ ಹೋಗಬಾರದು. ಹಾಗೊಮ್ಮೆ ಹೋದರೆ ಜೀವನದಲ್ಲಿ ಬಡತನ ಎದುರಾಗುವುದು. ಈ ಮರದ ಪೂಜೆಗೆ ಸೂಕ್ತ ಕಾಲವೆಂದರೆ #ಸೂರ್ಯೋದಯದ #ನಂತರದ ಕಾಲ. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಇಲ್ಲಿಯೇ ನೆಲೆಸುತ್ತಾಳೆ. ಆ ವೇಳೆ ಪೂಜಿಸಿದವರಿಗೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.

ಋಷಿ ಮುನಿಗಳ ನಡುವೆ ನಾರದ ಮಹರ್ಷಿಗಳು ಇರುವಂತೆ, #ಶ್ರೀಕೃಷ್ಣನು ಅಶ್ವತ್ಥಮರದಲ್ಲಿ ನೆಲೆಸಿದ್ದಾನೆ. ಹಾಗಾಗಿ ಈ ಮರವನ್ನು ಆರಾಧಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು.
ಈ ಮರದ ಆರಾಧನೆ ಕೇವಲ ಕಲ್ಪನೆ ಅಥವಾ ನಂಬಿಕೆಗೆ ಸೀಮಿತವಾಗಿಲ್ಲ. ಇದರ ಆರಾಧನೆಯಿಂದ #ಆರೋಗ್ಯ ಮತ್ತು ಇತರ ಒಳ್ಳೆಯ ಪ್ರಯೋಜನಗಳು ಉಂಟಾಗುವುದು ಎನ್ನಲಾಗುತ್ತದೆ.
|| ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||
ॐ #ಶ್ರೀವಿಷ್ಣುವೇನಮಃ

Related Posts