ಪುನೀತರಾಜ್ ಕುಮಾರ ಅವರ ಸಾವಿನಿಂದ ನಾವು ಕಲಿಯಬೇಕಾದದ್ದು ಬೆಟ್ಟ ದಷ್ಟು.
ಜೀವನದಲ್ಲಿ ಉತ್ತಮ ಆರೋಗ್ಯ ಸೂತ್ರ ಅಳವಡಿಸಿ ಕೋಡರೆ ಸಕಲ ಐಶ್ವರ್ಯ ಅನುಭವಿಸುವ ಭಾಗ್ಯ ದೊರೆಯುತ್ತದೆ. 💐
- ಆರೋಗ್ಯದಿಂದ್ ಸಕಲ ಐಶ್ವರ್ಯ ಲಭಿಸುತ್ತದೆ ಎಷ್ಟೇ ಹಣ, ಹೆಸರು, ಕೌಟುಂಬಿಕ ಹಿನ್ನೆಲೆ ಇದ್ದರೂ ಸಹ ಆರೋಗ್ಯವನ್ನು ನಾವು ನಿರ್ಲಕ್ಷ್ಯ ಮಾಡಿದರೆ, ಇರುವುದೆಲ್ಲವೂ ನಿರರ್ಥಕವಾಗುತ್ತದೆ.
- ಇನ್ನೂ ನಮ್ಮ ಬಳಿ ಬಹಳ ಸಮಯವಿದೆ ಎಂದು ಕಾಯುತ್ತ ಕೂರುವುದಕ್ಕಿಂತ, ಈಗಲೇ ಮಾಡಬೇಕೇನಿಸುವ ಸತ್ಕಾರ್ಯಗಳನ್ನು ಮಾಡಿ ಬಿಡಬೇಕು.
- ಯಾರಿಗಾದರೂ ಮನ ನೋಯುವಂತೆ ನಡೆದುಕೊಂಡಿದ್ದರೆ ಕ್ಷಮೆ ಕೇಳಿಬಿಡಬೇಕು.
- ನಾಳೆ ಎನ್ನದೇ ಈಗಿನಿಂದಲೇ ಮನೆಯವರು, ಬಂಧು ಬಾಂಧವರು ಸ್ನೇಹಿತರ ಹಾಗೂ ನೆರೆಹೊರೆಯವರ ಜೊತೆ ಉತ್ತಮ ಭಾಂಧವ್ಯ ಸೃಷ್ಟಿಸಿಕೊಂಡು ಬಿಡಬೇಕು.
- ನಾಳೆಯೇ ಸತ್ತು ಹೋಗುತ್ತೇನೇನೋ ಎಂಬಂತೆ ಬದುಕಿ ಬಿಡಬೇಕು.
6 ಸತ್ತಾಗ ಶವದ ಎದುರು ನಿಂತು ಹಾಡಿ ಹೊಗಳುವುದಕ್ಕಿಂತ, ಕಣ್ಣೀರು ಸುರಿಸುವದಕ್ಕಿಂತ ಈಗಲೇ ಒಳ್ಳೆಯ ಮಾತು ಹಾಗೂ ಒಂದಿಷ್ಟು ಸಮಯ ಕೊಟ್ಟು ಬಿಡಬೇಕು.
ಈ ಜಗತ್ತು ಮನುಷ್ಯನು ಉತ್ತಮವಾಗಿ ಬದುಕಿ ಸುಖ ಸಂತೋಷದಿಂದ ಬಾಳಲು ಇರುವ ಮಹಾನ್ ವೇದಿಕೆ.
ಸ್ವಾರ್ಥ, ದ್ವೇಷ, ಅಸೂಯೆ ಕೋಪ, ತಾಪ, ಶತ್ರುತ್ವ ಹಾಗೂ ಭವಿಷ್ಯದ ಬೇಡದ ಚಿಂತೆ ಎಲ್ಲವೂ, ನಮ್ಮ ಆನಂದದ ಬದುಕನ್ನು ಕಸಿಯಲು ಬಂದ ನಕಾರಾತ್ಮಕ ಅಂಶಗಳು.
ಮತ್ತೇ ಬೇಕು ಎಂದರೆ ಸಿಗದ, ಈ ಜನ್ಮ ವನ್ನು ನಾವೆಲ್ಲರೂ ಖುಷಿ ಖುಷಿಯಾಗಿ ಕಳೆಯೋಣ.
ಇಲ್ಲಿ ನಾವು ಕೇವಲ
ಅತಿಥಿಗಳು ಮಾತ್ರ ಜವರಾಯನ🛌🏻 ಕರೆ ಬಂದರೆ ಹೋಗಲೇ ಬೇಕು…!