🕉️ ಓಂ ಶ್ರೀ ಗುರುಭ್ಯೋ ನಮಃ 🕉️ ಆದಿತ್ಯ ಹೃದಯ ಸ್ತೋತ್ರಮ್ ಆದಿತ್ಯ ಹೃದಯ ಸ್ತೋತ್ರವನ್ನು ಏಕೆ ಪಠಿಸಬೇಕು..? ಇದರ ಪ್ರಯೋಜನವೇನು..?
ಆದಿತ್ಯ ಹೃದಯ ಸ್ತೋತ್ರವನ್ನು ಜಪಿಸುವುದು ಎಷ್ಟು ಪರಿಣಾಮಕಾರಿ..? ಜನರು ದಿನಕ್ಕೆ ಒಮ್ಮೆಯಾದರೂ ಇದನ್ನು ಏಕೆ ಪಠಿಸಬೇಕು..? ಇದಲ್ಲದೆ, ಭಾನುವಾರದಂದು ಇದನ್ನು ಏಕೆ ವಿಶೇಷವಾಗಿ ಜಪಿಸಬೇಕು..?
ಹಿಂದೂ ಸಂಪ್ರದಾಯದ ಪ್ರಕಾರ ಭೂಮಿ, ಬೆಂಕಿ, ಗಾಳಿ ಮತ್ತು ಇತರ ನೈಸರ್ಗಿಕ ಶಕ್ತಿಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಸೂರ್ಯನೂ ಕೂಡ ಒಬ್ಬ. ಸೂರ್ಯನು ಅದಿತಿಯ ಮಗನಾದ ಕಾರಣ ಆತನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಸೂರ್ಯನು ಭೂಮಿಯ ಮೇಲಿನ ಜೀವಗಳ ಆತ್ಮದಂತೆ ಎಂದು ಹೇಳಲಾಗಿದೆ. ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಇದು ಸೂರ್ಯ ದೇವನಿಗೆ ಸಮರ್ಪಿತವಾಗಿದೆ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯ ಬಲ ಇಲ್ಲದ ರಾಶಿಯವರಿಗೆ ಈ ಸ್ತೋತ್ರ ಹೆಚ್ಚು ಪರಿಣಾಮಕಾರಿ.
ಪುರಾಣದಲ್ಲೂ ಕೂಡ ಆದಿತ್ಯ ಹೃದಯ ಸ್ತೋತ್ರದ ಬಗ್ಗೆ ಉಲ್ಲೇಖಿಸಲಾಗಿದೆ ಎಂದರೆ ನೀವು ಆಶ್ಚರ್ಯಚಕಿತಾರಾಗಬಹುದು..? ಕೆಲವು ಉತ್ತರಗಳನ್ನು ಪುರಾಣಗಳಲ್ಲಿ ಉತ್ತಮವಾಗಿ ಹೇಳಲಾಗಿದೆ. ಇದು ಪೌರಾಣಿಕದ ರಾಮಾಯಣ ಕಾಲದ ಬಗ್ಗೆ, ಹೆಚ್ಚು ನಿರ್ದಿಷ್ಟವಾಗಿ ರಾಮ ಮತ್ತು ರಾವಣನ ನಡುವಿನ ಅಂತಿಮ ಯುದ್ಧದ ಸಮಯದ ಬಗ್ಗೆ ತಿಳಿಸುತ್ತದೆ.
ರಾಮನಿಂದ ಆದಿತ್ಯ ಹೃದಯ ಪಠಣೆ
ಮೊದಲ ಹಂತದ ಯುದ್ಧದಲ್ಲಿ ರಾವಣನನ್ನು ಸೋಲಿಸುವ ಶ್ರೀ ರಾಮನ ಪ್ರಯತ್ನ ವಿಫಲವಾಗುತ್ತದೆ. ತನ್ನ ಶತ್ರುವಾದ ರಾವಣನನ್ನು ಸೋಲಿಸುವ ಪ್ರಯತ್ನ ವ್ಯರ್ಥವಾಯಿತಲ್ಲ ಎಂಬ ಕೊರಗು ಶ್ರೀ ರಾಮನನ್ನು ಕಾಡುತ್ತದೆ. ಒಂದು ಹಂತದಲ್ಲಿ alpú ರಾಮನಿಗೆ ಉಳಿದಿದ್ದು ನಿರಾಶೆ ಮತ್ತು ಆಯಾಸ ಮಾತ್ರ. ಈ ಸಮಯದಲ್ಲಿ ನೊಂದ ರಾಮನು ದೀರ್ಘ ತಪ್ಪಸ್ಸು ಮಾಡುತ್ತಾನೆ. ಇದನ್ನು ಕಂಡ ಅಗಸ್ತ್ಯರು, ರಾಮನನ್ನು ಉತೇಜಿಸುತ್ತಾರೆ. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುತ್ತಾ ಸೂರ್ಯನಿಗೆ ತನ್ನ ಪ್ರಾರ್ಥನೆ ಸಲ್ಲಿಸುವಂತೆ ಅಗಸ್ತ್ಯ ಮಹಾ ಋಷಿಗಳು ಹೇಳಿಕೊಡುತ್ತಾರೆ. ರಾಮನು ಅಗಸ್ತ್ಯ ಮಹಾ ಋಷಿಗಳು ಹೇಳಿದ್ದಂತೆಯೇ ಶ್ರೀ ರಾಮನು ಮಾಡುತ್ತಾನೆ. ಇದನ್ನು ಮಾಡುತ್ತಿದ್ದಂತೆ ರಾಮನು ಅತ್ಯಂತ ಶಕ್ತಿದಾಯದ ಮತ್ತು ನಿರ್ಣಾಯಕ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಆದಿತ್ಯ ಹೃದಯ ಸ್ತೋತ್ರ ಪಠಣದಿಂದ ನೀವು ಅಂದುಕೊಂಡ ಕೆಲಸ ಕಾರ್ಯ ಪೂರ್ಣಗೊಳಿಸಿಕೊಳ್ಳಬಹುದು. ಅದಕ್ಕಾಗಿಯೇ ಶ್ರೀ ರಾಮನೂ ಕೂಡ ಯುದ್ಧಕ್ಕೆ ಮುನ್ನ ಸ್ತೋತ್ರವನ್ನು ಪಠಿಸುತ್ತಾನೆ.
ನಿರ್ದಿಷ್ಟವಾಗಿ ಭಾನುವಾರವೇ ಏಕೆ ಪಠಿಸಬೇಕು.?
ಜ್ಯೋತಿಷ್ಯದ ಪ್ರಕಾರ, ವಾರದ ಪ್ರತಿ ದಿನವೂ ಒಂದು ದೇವರು ಅಥವಾ ಒಂದು ಗ್ರಹಕ್ಕೆ ಅರ್ಪಿತವಾಗಿರುತ್ತದೆ. ಶನಿವಾರದಂದು ಶನಿ ದೇವನಿಗಾಗಿ ಮತ್ತು ಮಂಗಳವಾರ ಹನುಮಂತನಿಗೆ. ಹಾಗೆಯೇ, ಭಾನುವಾರ ಭಗವಾನ್ ಸೂರ್ಯನಿಗೆ ಅರ್ಪಿಸಲಾಗಿದೆ. ಭಾನುವಾರ ಸೂರ್ಯನಿಗೆ ಅರ್ಪಿಸಲಾಗಿರುವುದರಿಂದ ಅವನನ್ನು ಕುರಿತು ಪ್ರಾರ್ಥಿಸಲು ಅದಕ್ಕಿಂತ ಬೇರೆ ಶುಭ ದಿನ ಉಂಟೆ…? ನೀವು ಪ್ರತಿನಿತ್ಯ ನಿಮ್ಮದೇ ಕೆಲಸದಲ್ಲಿ ಮಗ್ನರಾಗಿರುತ್ತೀರಿ. ಬೆಳಗ್ಗೆ ಎದ್ದರೆ ಕಚೇರಿಯ ಒತ್ತಡ ಮೊದಲಾದ ಕಾರ್ಯಗಳ ಬಗ್ಗೆ ನಿಮಗೆ ಗಮನ ಇರುತ್ತದೆ. ಭಾನುವಾರ ನೀವು ಬಿಡುವಾಗಿರುವ ಕಾರಣ ಆ ದಿನ ನೀವು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬಹುದಾಗಿದೆ.
ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದಾಗುವ ಪ್ರಯೋಜನಗಳು
ನಮಗೆ ಏನಾದರೂ ಪ್ರಯೋಜನವಾಗುವವರೆಗೆ ನಾವು ಎಂದಿಗೂ ಯಾವುದರ ಬಗ್ಗೆಯೂ ಆಸಕ್ತಿ ವಹಿಸುವುದಿಲ್ಲ. ಆದಿತ್ಯ ಹೃದಯ ಸ್ತೋತ್ರವು ಅಸಂಖ್ಯಾತ ವಿಶ್ವಾಸಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅಂತಹ ಪ್ರಯೋಜನಗಳು ಇಲ್ಲಿವೆ.
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||
- ಭಗವಾನ್ ಸೂರ್ಯನ ಆಶೀರ್ವಾದದಿಂದ ನಿಮ್ಮ ಕಾರ್ಯಗಳು ಮತ್ತು ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಸ್ತೋತ್ರವು ನಿಮಗೆ ಸಹಾಯ ಮಾಡುತ್ತದೆ.
- ಇದು ನಿಮ್ಮಲ್ಲಿನ ಆತಂಕಗಳನ್ನು ತೆಗೆದುಹಾಕುತ್ತದೆ.
- ಇದು ನಿಮ್ಮ ಜೀವನದ ಹಾದಿಗೆ ಧೈರ್ಯವನ್ನು ತರುತ್ತದೆ.
- ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ಕಷ್ಟದ ದಿನಗಳಲ್ಲಿ ನಿಮ್ಮನ್ನು ಉನ್ನತೀಕರಿಸಲಾಗುತ್ತದೆ ಮತ್ತು ಆಳವಾದ ಅತೃಪ್ತಿಯಿಂದ ನಿಮ್ಮನ್ನು ಉಳಿಸುತ್ತದೆ.
- ನಿಮ್ಮ ಪಾಪಗಳನ್ನು ನಾಶಮಾಡುವುದರ ಜೊತೆಗೆ ಅದು ನಿಮ್ಮನ್ನು ಸ್ವಯಂ ಅನುಮಾನಗಳಿಂದ ದೂರ ಮಾಡುತ್ತದೆ.
- ಆದಿತ್ಯ ಹೃದಯ ಸ್ತೋತ್ರವು ಜೀವನದಲ್ಲಿ ಸಮೃದ್ಧಿ ಮತ್ತು ಸ್ಪಷ್ಟತೆಯನ್ನು ತರುತ್ತದೆ.
- ಸ್ತೋತ್ರವು ನಿಮ್ಮನ್ನು ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.
- ಈ ಸ್ತೋತ್ರವು ನಿಮ್ಮನ್ನು ರೋಗ ಮುಕ್ತವಾಗಿರಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಆದಿತ್ಯ ಹೃದಯ ಸ್ತೋತ್ರ ಪಠಿಸುವ ವಿಧಾನ
ಪ್ರಾರಂಭದಲ್ಲಿ ಇದು ಸ್ವಲ್ಪ ಕಷ್ಟ ಆಗಬಹುದು. ಆದರೆ ಒಮ್ಮೆ ನೀವು ನಿರಂತರವಾಗಿ ಅಭ್ಯಾಸ ಮಾಡಿದರೆ ಅದರ ಸೆಳವನ್ನು ಎಂದಾದರೂ ಅನುಭವಿಸಬಹುದು. ಭಗವಾನ್ ಸೂರ್ಯನಿಗೆ ನಿಮ್ಮ ಕೃತಜ್ಞತೆಯನ್ನು ಅರ್ಪಿಸಿ. ಕೇಳುವಾಗ ನಿಮ್ಮ ಸ್ವಾರ್ಥವನ್ನು ಪಕ್ಕಕ್ಕಿಡಿ. ಪ್ರಪಂಚದ ಒಳಿತಿಗಾಗಿ ಸ್ವಲ್ಪ ಪ್ರಾರ್ಥಿಸಿ. ಪ್ರತಿ ದಿನ ನಿಮ್ಮ ದಿನದ ಹತ್ತು ನಿಮಿಷಗಳನ್ನು ಭಗವಾನ್ ಸೂರ್ಯನಿಗೆ ಕೊಡುವುದು ಮತ್ತು ಈ ದೈವಿಕ ಸ್ತೋತ್ರವನ್ನು ಪಠಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಯಾವುದಕ್ಕೂ ಕಾಯಬೇಡಿ. ಭಾನುವಾರವನ್ನು ಸೂರ್ಯನಿಗಾಗಿ ಅರ್ಪಿಸಿ. ನಿಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಆರಂಭಿಸಿ. ಆದಿತ್ಯ ಹೃದಯ ಸ್ತೋತ್ರಮ್ :
ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||
ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||
ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||
ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್
🙏🙏