!!ಪುರಾಣಗಳಲ್ಲಿ ಅಕ್ಷಯ ತೃತೀಯದ ದಿನದ ಮಹತ್ವ!!
-~-~-~-~-~-~-~-~-~-~-~-~-~-~-~-~-~-~-~-~-~-~-
🔯 ವಿಷ್ಣುವಿನ ಅವತಾರವಾದ ಪರಶುರಾಮ ಅವತಾರ ಅಕ್ಷಯ ತೃತೀಯದ ದಿನವೇ ಆಗಿತ್ತು.

🔯 ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನಿಗೆ, ನೀಡಿದ ಅಕ್ಷಯವಾದಂತಹ ಐಶ್ವರ್ಯ ಪ್ರಾಪ್ತಿಗಳು..

🔯 ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಸುಮುಹೂರ್ತವೇ ಅಕ್ಷಯ ತೃತೀಯ.

🔯 ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಅವತರಿಸಿದ ದಿನವೂ ಅಕ್ಷಯ ತೃತಿಯ.ಈ ದಿನವು ತ್ರೇತಾಯುಗದ ಆರಂಭವನ್ನು ಸೂಚಿಸುತ್ತದೆ.

🔯 ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು,

🔯 ದಾನಶೂರ ಕರ್ಣನು ಜನಿಸಿದ್ದು,

🔯 ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ಸಂಯೋಜಿಸಲಾರಂಭಿಸಿದ್ದು.

🔯 ಕಾಯಕ ಯೋಗಿ ಬಸವಣ್ಣನವರು ಜನಿಸಿದ್ದು.

🔯 ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಷ್ಟೈಶ್ವರ್ಯವ ಪ್ರಾಪ್ತಿ ಪಡೆದದ್ದು🔯

“ಅಕ್ಷಯ ತೃತಿಯದ ಹೇಗೆ ಆಚರಿಸಬೇಕು ? ಹಾಗೂ ಅದರ ಫಲಗಳೇನು ?” 🤔

ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದುಕೊಳ್ಳ ಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ.

ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬಹುದು ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳನ್ನು ದೇವರ ದರ್ಶನ ವನ್ನು ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರವಾಗಬಹುದು.

ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗುತ್ತದೆ.

ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ.

ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.

ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ.

ಬೆಳಿಗ್ಗೆ ಗೋಮಾತೆಗೆ ಪೂಜೆ ಪುನಸ್ಕಾರ ಗಳನ್ನು ಮಾಡಿˌ ಗೋಧಿˌ ಬೆಲ್ಲ ಬಾಳೆ ಹಣ್ಣು ತಿನ್ನಿಸುವುದರಿಂದ ಮಹಾಲಕ್ಷ್ಮಿ
ಯ ಕೃಪಾಕಟಾಕ್ಷ ಪಾತ್ರವಾಗುತ್ತದೆ.

ಅಕ್ಷಯೋ ಭವತು ಸರ್ವೇಷಾಮ್
ಆರೋಗ್ಯಾಯುಷ್ಯ ಸಂಪದಃ..
ಪುಣ್ಯಂತು ವರ್ಧತಾಂ ನಿತ್ಯಂ
ಭಕ್ತಿ ಜ್ಞಾನಾದಿ ಸಂಪದಃ…..

🥀🙏॥ಶ್ರೀಕೃಷ್ಣಾರ್ಪಣಮಸ್ತು॥🙏🥀

🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🙏🙏🙏🙏

Related Posts