ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ ಮತ್ತು ಫಲಗಳು
“ಶ್ರೀ ಮಹಾಲಕ್ಷ್ಮೀ ಅಷ್ಟೋತ್ತರ” ಓದುವವರು ಬೇಳಗ್ಗೆ ಸ್ನಾನದ ನಂತರ ಗಣಪತಿ ಪೂಜೆ, ಮನೆದೇವರ ಪೂಜೆ ಮಾಡಿ ನಂತರ ಓದಬೇಕು..!
ಪೂಜೆಯ ನಂತರ ದೇವಿಯ ಪ್ರೀತಿಗಾಗಿ ಪಾನಕ, ಕೋಸಂಬರಿ, ಹಣ್ಣು ನೈವೇದ್ಯ ಮಾಡಿ ತಾಂಬೂಲದೊಡನೆ ಸುಮಂಗಲಿಯರಿಗೆ ದಾನ ಮಾಡಬೇಕು..!
“ಶ್ರೀ ಮಹಾಲಕ್ಷ್ಮೀ” ಪೂಜೆಯನ್ನು ಮಾಡುವ ಸ್ತ್ರೀಯರು “ತೆಂಗಿನಕಾಯಿ” ಯನ್ನು ಪುರುಷರಿಂದ ಒಡೆಸಿ, ನೀವು ಬೇಡ..!
“ತೆಂಗಿನಕಾಯಿ” ಯನ್ನು ತಾಂಬೂಲದೊಡನೆ ದಾನ ಮಾಡಿದರೆ , ಅಷ್ಟನಿಧಿ ನವನಿಧಿಗಳು ಪ್ರಾಪ್ತಿಯಾಗುತ್ತದೆ..!
“ಪ್ರತಿದಿವಸ ” ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರದಿಂದ ತಮ್ಮ ಕುಲದೇವರಿಗೆ ಅಭಿಷೇಕವನ್ನು ಮಾಡಿದರೆ ಎಲ್ಲ ತರಹದ “ಸ್ತ್ರೀ ದೋಷ, ಸ್ತ್ರೀ ಶಾಪ, ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..!
” ಶುಕ್ರವಾರದ ದಿವಸ “ಶ್ರೀ ಮಹಾಲಕ್ಷ್ಮೀ ” ಯನ್ನು ಪೂಜೆ ಮಾಡಿ, “ಮೊಸರನ್ನ” ಮತ್ತು ನೆಲ್ಲಿಕಾಯಿಯ ಗೊಜ್ಜು ಅಥವಾ ಮೊರಬ್ಜ ನೈವೇದ್ಯ ಮಾಡಿ, “ಗೋವು ” ಪೂಜೆಯನ್ನು ಮಾಡಿ, ಬ್ರಾಹ್ಮಣ ದಂಪತಿಗಳಿಗೆ ದಾನ ಮಾಡಿದರೆ “ನಿತ್ಯ ದಾರಿದ್ರ್ಯ” , ಅನ್ನದಾರಿದ್ರ್ಯ, ವಸ್ತ್ರದಾರಿದ್ರ್ಯ, ಧನದಾರಿದ್ರ್ಯ ನಿವಾರಣೆಯಾಗುತ್ತದೆ..!
“ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರದಿಂದ “ಶ್ರೀ ಮಹಾಲಕ್ಷ್ಮಿ” ಯನ್ನು ಪೂಜಿಸಿ “ತಾವರೇ” ಹೂವಿನಿಂದ ಪೂಜಿಸಿದರೆ ..
ಸತ್ಸಂತಾನ ಭಾಗ್ಯವಾಗುತ್ತದೆ. ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ.. ಮಕ್ಕಳು ಹೇಳಿದ ಮಾತು ಕೇಳಿ ದೈವಭಕ್ತಿ ಜಾಸ್ತಿ ಇದ್ದು ಗುಣವಂತರಾಗುತ್ತಾರೆ..!”
“ಸಾಲದಭಾದೆ ನಿವಾರಣೆ”: ಪ್ರತಿದಿನ ಮನೆಯನ್ನು ” ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರ ಹೇಳಿ , ಅರಿಸಿನ ಹಾಕಿದ ನೀರಿನಿಂದ ಸಾರಿಸಿದರೆ ..“ಸಾಲದ ಭಯ ಇರುವುದಿಲ್ಲ..”!
ಸಾಲದ ಹಣ ಬಹಳ ಬೇಗ ತಿರುಗಿ ಬರುತ್ತದೆ..!
ನಿಮಗೆ ಯಾರಾದರೂ ಹಣವನ್ನು ಕೊಡಬೇಕಿದ್ದರೆ ಬಹಳ ಬೇಗ ತಂದುಕೊಡುತ್ತಾರೆ..”!
ಎಚ್ಚರಿಕೆ : ನೆಲ ಒರೆಸಿದ ನಂತರ ಪೂರ್ಣವಾಗಿ ಒಣಗುವವರೆಗೂ ಯಾರೂ ನೆಲವನ್ನು ತುಳಿಯಬಾರದು..!”
“ಶ್ರೀ ಮಹಾಲಕ್ಷ್ಮೀ” ಪೂಜೆ ಮಾಡುವವರು, ಅಥವಾ ಯಾರೇ ಆಗಲಿ “ಬೇರೆಯವರ ಮನೆಯಲ್ಲಿ ” ತಾಂಬೂಲ” ಕೊಟ್ಟಾಗ, ಅದನ್ನು ಮನೆಗೆ ತರದೇ ಬೇರೆಯವರಿಗೆ ಕೊಟ್ಟರೆ..
ನಿಮಗೆ ಬರಬೇಕಾದ ಹಣ ಸಕಾಲದಲ್ಲಿ ಬರುವುದಿಲ್ಲ..
ನಿಮ್ಮ ಸಂಪತ್ತು ಕಡಿಮೆಯಾಗುತ್ತದೆ..!
ಆದ್ದರಿಂದ ನಿಮಗೆ ಕೊಟ್ಟ ತಾಂಬೂಲವನ್ನು ಯಾರಿಗೂ ಕೊಡದೆ ಮನೆಗೆ ತಂದು ದೇವರಿಗೆ ಅರ್ಪಿಸಬೇಕು..
ನಂತರ ಬೇಕಾದರೆ ಕೊಡಬಹುದು..!
“ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರ ಪೂಜೆಯನ್ನು “ಬಿಲ್ವದಳ” ದಿಂದ ಪೂಜಿಸಿದರೆ ಬಹಳ ಬೇಗ “ಶ್ರೀಮಂತರಾಗುತ್ತಾರೆ..”!
” ವಿಗ್ರಹವಿಲ್ಲದೇ “ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರ ವನ್ನು ವೀಳ್ಯದೆಲೆಯಲ್ಲಿ ಅರ್ಚಿಸುವವರು..
ಒಂದು ವೀಳ್ಯದೆಲೆಯಲ್ಲಿ ಅರ್ಚಿಸಬಾರದು..! ಅರ್ಚಿಸಿದರೆ ನಿತ್ಯದಾರಿದ್ರ್ಯ ಅನುಭವಿಸಬೇಕಾಗುತ್ತದೆ..
ಆದ್ದರಿಂದ ಎರಡು ವೀಳ್ಯದೆಲೆಯಲ್ಲಿ ಅರ್ಚಿಸಬೇಕು..!
“ಕುಂಕುಮ” ಅರ್ಚನೆ ಮಾಡಿದ “ವೀಳ್ಯದೆಲೆ”ಯನ್ನು ಯಾರಿಗೂ ಕೊಡಬಾರದು, ಬಿಸಾಕಬಾರದು..!
ಬಿಸಾಕಿದರೆ , ಬೇರೆಯವರಿಗೆ ಕೊಟ್ಟರೆ ಧನದಾರಿದ್ರ್ಯ, ಉಂಟಾಗುತ್ತದೆ..!
” ಆ ವೀಳ್ಯದೆಲೆ “ಯನ್ನು ಪೂಜೆಯಾದ ಮಾರನೇ ದಿನ ” ಮನೆಯ ಯಜಮಾನರು, ಅಥವಾ ಹಿರಿಯ ದಂಪತಿಗಳು, ಮಾತ್ರ ಎಲೆ ಅಡಿಕೆ ಹಾಗೂ ಸುಣ್ಣದ ಸಮೇತ ತಾಂಬೂಲ ಹಾಕಿಕೊಂಡರೆ, ನಿಮಗೆ ಬಹಳ ಬೇಗ “ಶ್ರೀ ಮಹಾಲಕ್ಷ್ಮೀ” ಅನುಗ್ರಹವಾಗುತ್ತದೆ..!
“ಶ್ರೀ ಮಹಾಲಕ್ಷ್ಮೀ” ಅನುಗ್ರಹ ಎಲ್ಲರಿಗೂ ದೊರಕಲಿ..
ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರ ಪಾರಾಯಣ ಲಕ್ಷ್ಮೀ ಪ್ರೀತಿಕರ ಮತ್ತು ಸರ್ವಾಭೀಷ್ಠ ಫಲಪ್ರದವೆಂದು ನಂಬಿಕೆ
ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಸ್ತೋತ್ರ
ದೇವ್ಯುವಾಚ
ದೇವದೇವ! ಮಹಾದೇವ! ತ್ರಿಕಾಲಙ್ಞ! ಮಹೇಶ್ವರ!
ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ||
ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ||
ಈಶ್ವರ ಉವಾಚ
ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ |
ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ||
ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ |
ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ||
ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ |
ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ||
ಸಮಸ್ತ ದೇವ ಸಂಸೇವ್ಯಮ್ ಅಣಿಮಾದ್ಯಷ್ಟ ಸಿದ್ಧಿದಮ್ |
ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ||
ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು |
ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ||
ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ |
ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ||
ಧ್ಯಾನಮ್
ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ
ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ |
ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ
ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ||
ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಙ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಮ್ ||
ಓಂ
ಪ್ರಕೃತಿಂ ವಿಕೃತಿಂ ವಿದ್ಯಾಂ ಸರ್ವಭೂತ ಹಿತಪ್ರದಾಮ್ |
ಶ್ರದ್ಧಾಂ ವಿಭೂತಿಂ ಸುರಭಿಂ ನಮಾಮಿ ಪರಮಾತ್ಮಿಕಾಮ್ || 1 ||
ವಾಚಂ ಪದ್ಮಾಲಯಾಂ ಪದ್ಮಾಂ ಶುಚಿಂ ಸ್ವಾಹಾಂ ಸ್ವಧಾಂ ಸುಧಾಮ್ |
ಧನ್ಯಾಂ ಹಿರಣ್ಯಯೀಂ ಲಕ್ಷ್ಮೀಂ ನಿತ್ಯಪುಷ್ಟಾಂ ವಿಭಾವರೀಮ್ || 2 ||
ಅದಿತಿಂ ಚ ದಿತಿಂ ದೀಪ್ತಾಂ ವಸುಧಾಂ ವಸುಧಾರಿಣೀಮ್ |
ನಮಾಮಿ ಕಮಲಾಂ ಕಾಂತಾಂ ಕಾಮಾಕ್ಷೀಂ ಕಮಲ ಸಂಭವಾಮ್ || 3 ||
ಅನುಗ್ರಹಪರಾಂ ಬುದ್ಧಿಂ ಅನಘಾಂ ಹರಿವಲ್ಲಭಾಮ್ |
ಅಶೋಕಾಂ ಅಮೃತಾಂ ದೀಪ್ತಾಂ ಲೋಕಶೋಕ ವಿನಾಶಿನೀಮ್ || 4 ||
ನಮಾಮಿ ಧರ್ಮನಿಲಯಾಂ ಕರುಣಾಂ ಲೋಕಮಾತರಮ್ |
ಪದ್ಮಪ್ರಿಯಾಂ ಪದ್ಮಹಸ್ತಾಂ ಪದ್ಮಾಕ್ಷೀಂ ಪದ್ಮಸುಂದರೀಮ್ || 5 ||
ಪದ್ಮೋದ್ಭವಾಂ ಪದ್ಮಮುಖೀಂ ಪದ್ಮನಾಭಪ್ರಿಯಾಂ ರಮಾಮ್ |
ಪದ್ಮಮಾಲಾಧರಾಂ ದೇವೀಂ ಪದ್ಮಿನೀಂ ಪದ್ಮಗಂಧಿನೀಮ್ || 6 ||
ಪುಣ್ಯಗಂಧಾಂ ಸುಪ್ರಸನ್ನಾಂ ಪ್ರಸಾದಾಭಿಮುಖೀಂ ಪ್ರಭಾಮ್ |
ನಮಾಮಿ ಚಂದ್ರವದನಾಂ ಚಂದ್ರಾಂ ಚಂದ್ರಸಹೋದರೀಮ್ || 7 ||
ಚತುರ್ಭುಜಾಂ ಚಂದ್ರರೂಪಾಂ ಇಂದಿರಾಂ ಇಂದುಶೀತಲಾಮ್ |
ಆಹ್ಲಾದ ಜನನೀಂ ಪುಷ್ಟಿಂ ಶಿವಾಂ ಶಿವಕರೀಂ ಸತೀಮ್ || 8 ||
ವಿಮಲಾಂ ವಿಶ್ವಜನನೀಂ ತುಷ್ಟಿಂ ದಾರಿದ್ರ್ಯ ನಾಶಿನೀಮ್ |
ಪ್ರೀತಿ ಪುಷ್ಕರಿಣೀಂ ಶಾಂತಾಂ ಶುಕ್ಲಮಾಲ್ಯಾಂಬರಾಂ ಶ್ರಿಯಮ್ || 9 ||
ಭಾಸ್ಕರೀಂ ಬಿಲ್ವನಿಲಯಾಂ ವರಾರೋಹಾಂ ಯಶಸ್ವಿನೀಮ್ |
ವಸುಂಧರಾಂ ಉದಾರಾಂಗಾಂ, ಹರಿಣೀಂ ಹೇಮಮಾಲಿನೀಮ್ || 10 ||
ಧನಧಾನ್ಯಕರೀಂ ಸಿದ್ಧಿಂ ಸ್ರೈಣಸೌಮ್ಯಾಂ ಶುಭಪ್ರದಾಮ್ |
ನೃಪವೇಶ್ಮಗತಾನಂದಾಂ ವರಲಕ್ಷ್ಮೀಂ ವಸುಪ್ರದಾಮ್ || 11 ||
ಶುಭಾಂ ಹಿರಣ್ಯಪ್ರಾಕಾರಾಂ ಸಮುದ್ರತನಯಾಂ ಜಯಾಮ್ |
ನಮಾಮಿ ಮಂಗಳಾಂ ದೇವೀಂ ವಿಷ್ಣು ವಕ್ಷಃಸ್ಥಲ ಸ್ಥಿತಾಮ್ || 12 ||
ವಿಷ್ಣುಪತ್ನೀಂ ಪ್ರಸನ್ನಾಕ್ಷೀಂ ನಾರಾಯಣ ಸಮಾಶ್ರಿತಾಮ್ |
ದಾರಿದ್ರ್ಯ ಧ್ವಂಸಿನೀಂ ದೇವೀಂ ಸರ್ವೋಪದ್ರವ ವಾರಿಣೀಮ್ || 13 ||
ನವದುರ್ಗಾಂ ಮಹಾಕಾಳೀಂ ಬ್ರಹ್ಮ ವಿಷ್ಣು ಶಿವಾತ್ಮಿಕಾಮ್ |
ತ್ರಿಕಾಲಜ್ಞಾನ ಸಂಪನ್ನಾಂ ನಮಾಮಿ ಭುವನೇಶ್ವರೀಮ್ || 14 ||
ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಮ್ |
ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಮ್ ||
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವದ್-ಬ್ರಹ್ಮೇಂದ್ರ ಗಂಗಾಧರಾಮ್ |
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ || 15 ||
ಮಾತರ್ನಮಾಮಿ! ಕಮಲೇ! ಕಮಲಾಯತಾಕ್ಷಿ!
ಶ್ರೀ ವಿಷ್ಣು ಹೃತ್-ಕಮಲವಾಸಿನಿ! ವಿಶ್ವಮಾತಃ!
ಕ್ಷೀರೋದಜೇ ಕಮಲ ಕೋಮಲ ಗರ್ಭಗೌರಿ!
ಲಕ್ಷ್ಮೀ! ಪ್ರಸೀದ ಸತತಂ ಸಮತಾಂ ಶರಣ್ಯೇ || 16 ||
ತ್ರಿಕಾಲಂ ಯೋ ಜಪೇತ್ ವಿದ್ವಾನ್ ಷಣ್ಮಾಸಂ ವಿಜಿತೇಂದ್ರಿಯಃ |
ದಾರಿದ್ರ್ಯ ಧ್ವಂಸನಂ ಕೃತ್ವಾ ಸರ್ವಮಾಪ್ನೋತ್-ಯಯತ್ನತಃ |
ದೇವೀನಾಮ ಸಹಸ್ರೇಷು ಪುಣ್ಯಮಷ್ಟೋತ್ತರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 17 ||
ಭೃಗುವಾರೇ ಶತಂ ಧೀಮಾನ್ ಪಠೇತ್ ವತ್ಸರಮಾತ್ರಕಮ್ |
ಅಷ್ಟೈಶ್ವರ್ಯ ಮವಾಪ್ನೋತಿ ಕುಬೇರ ಇವ ಭೂತಲೇ ||
ದಾರಿದ್ರ್ಯ ಮೋಚನಂ ನಾಮ ಸ್ತೋತ್ರಮಂಬಾಪರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 18 ||
ಭುಕ್ತ್ವಾತು ವಿಪುಲಾನ್ ಭೋಗಾನ್ ಅಂತೇ ಸಾಯುಜ್ಯಮಾಪ್ನುಯಾತ್ |
ಪ್ರಾತಃಕಾಲೇ ಪಠೇನ್ನಿತ್ಯಂ ಸರ್ವ ದುಃಖೋಪ ಶಾಂತಯೇ |
ಪಠಂತು ಚಿಂತಯೇದ್ದೇವೀಂ ಸರ್ವಾಭರಣ ಭೂಷಿತಾಮ್ || 19 ||
ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ಸಂಪೂರ್ಣಮ್