ಮನೆಯಲ್ಲಿ ಜಗಳ ಮತ್ತು ಪರಿಣಾಮ

ಮನೆಯಲ್ಲಿ ಜಗಳ ಮತ್ತು ಪರಿಣಾಮ

ದಂಪತಿಗಳು ..

೧. ಮನೆಯಲ್ಲಿ ಬೆಳಗ್ಗೆ ಜಗಳವಾಡಿದರೆ : ಜೀವನದಲ್ಲಿ ಜಿಗುಪ್ಸೆ, ಮನೆ ಬಿಟ್ಟು ಹೋಗೋ ಮನಸ್ಸು, ಜೀವನ ಸಾಕು ಅನ್ನೋ ಅಷ್ಟು ಬೇಸರವಾಗುತ್ತದೆ..

೨. ಮಧ್ಯಾಹ್ನ ಜಗಳವಾಡಿದರೆ : ಉಗ್ರ ಕೋಪವಂತರಾಗುವರು, ವಿಚ್ಛೇದನ ಸಮಸ್ಯೆ ಉಂಟಾಗುತ್ತದೆ.., ಗಂಡ ಹೆಂಡತಿ ದೂರವಾಗಬಹುದು..

೩. ಸಂಜೆ ಹೊತ್ತು ಜಗಳವಾಡಿದರೆ : ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ ..ಮಹಾಲಕ್ಷ್ಮಿಯು ಮನೆ ಬಿಟ್ಟು ಹೋಗಲೂ ಬಹುದು, ದಾರಿದ್ರ್ಯ ಜೀವನ ಅನುಭವಿಸುವಿರಿ..

೪. ರಾತ್ರಿ ಹೊತ್ತು ಜಗಳವಾಡಿದರೆ : ಸಂಸಾರದಲ್ಲಿ ವಿರಸ, ದುರಾಭ್ಯಾಸಗಳು ಜಾಸ್ತಿಯಾಗುತ್ತದೆ , ಅಶಾಂತಿಯ ವಾತಾವರಣ, ಮಕ್ಕಳು ದಾರಿ ತಪ್ಪುವರು..
ಇದರ ಅರ್ಥ ಜಗಳವಾಡಲೇಬಾರದೆಂದಲ್ಲ ದಂಪತಿಗಳನ್ನು ಲಕ್ಷ್ಮೀನಾರಾಯಣ ರಿಗೆ ಹೋಲಿಸುತ್ತಾರೆ.. ಮನೆಯಲ್ಲಿ ನಾರಾಯಣ ಮುನಿಸಿದರೆ “ಲಕ್ಷ್ಮಿ” ಸಮಾಧಾನ ಮಾಡಬಹುದು.. ಆದರೆ “ಲಕ್ಷ್ಮೀ ” ಮುನಿಸಿಕೊಂಡರೆ ಸಮಾಧಾನ ಮಾಡೋದು ತುಂಬಾ ಕಷ್ಟ.. “ಲಕ್ಷ್ಮೀದೇವಿಗೆ ಸ್ವಲ್ಪ ಕೋಪ ಜಾಸ್ತಿ”..

ಸಂಸಾರದಲ್ಲಿ ಜಗಳ ಬಂದಾಗ ಯಾರಾದರೂ ಒಬ್ಬರು ಸುಮ್ಮನೆ ಆಗ್ಬಿಡಿ, ಸೋತುಬಿಡಿ, ಏನೂ ತಪ್ಪಿಲ್ಲ.., ಎಷ್ಟೋ ಸಂಸಾರಗಳು ಚಿಕ್ಕ ಚಿಕ್ಕ ವಿಚಾರಕ್ಕೆ ದೂರವಾಗಿವೆ..

ಮನೆಯ ಗೃಹಿಣಿ ನೊಂದು ಏನಾದರೂ ಅಂದರೆ ಅದು ಖಂಡಿತಾ ಶಾಪವಾಗುತ್ತದೆ. ಆದ್ದರಿಂದ ಸ್ತ್ರೀಯನ್ನು ಗೌರವಿಸಿ.., ಚೆನ್ನಾಗಿ ನೋಡಿಕೊಳ್ಳಿ. ತಪ್ಪಿದ್ದರೆ ಹೇಳಿ, ತಿದ್ದಿಕೊಳ್ಳುವ ಹಾಗೆ ಮಾಡಿ..

ಸ್ತ್ರೀ ಗೆ ಒಂದು ಕಿವಿಮಾತು.. ಮನೆಯ ಹೆಣ್ಣುಮಗಳು..

೧. ಬೆಳಗ್ಗೆ ಮನೆಯಲ್ಲಿ ಕಣ್ಣೀರು ಹಾಕಿದರೆ, ಗಂಡನಿಗೆ ರೋಗಭಯ, ಅಪಘಾತ ಭಯ, ಆರೋಗ್ಯಕ್ಕೆ ಕುತ್ತು..

೨. ಮಧ್ಯಾಹ್ನ ಕಣ್ಣೀರು ಹಾಕಿದರೆ : ಅತ್ತೆ ಸೊಸೆ ಜಗಳ, ಅತ್ತೆಗೆ ಪ್ರೀತಿ ಕಮ್ಮಿಯಾಗುತ್ತದೆ.. ಅವಮಾನ ಅನುಭವಿಸುವಿರಿ.., ಗಂಡನಿಗೆ ಅವಮಾನವಾಗಿ, ಅಪವಾದಗಳು ಬರುತ್ತವೆ..

೩. ಸಂಜೆ ಕಣ್ಣೀರು ಹಾಕಿದರೆ : ಗಂಡನ ಉದ್ಯೋಗಕ್ಕೆ ಕುತ್ತು, ಮನೆಯಲ್ಲಿ ಹಣಕಾಸಿಗೆ ದಾರಿದ್ರ್ಯ, ಸಂಸಾರ ಒಡೆದುಹೋಗಬಹುದು..

೪. ರಾತ್ರಿ ಕಣ್ಣೀರು ಹಾಕಿದರೆ : ದಾಂಪತ್ಯದಲ್ಲಿ ವಿರಸ, ಸುಖಕ್ಕೆ ಕುತ್ತು , ಗಂಡನಿಗೆ ಅನಾರೋಗ್ಯ.. ಮಕ್ಕಳು ದಾರಿ ತಪ್ಪುವರು..

೫. ದೇವರ ಪೂಜೆ ಮಾಡುವಾಗ ಕಣ್ಣೀರು ಹಾಕಿದರೆ : ಗಂಡನಿಗೇ ಕುತ್ತು , ಮಾಂಗಲ್ಯಕ್ಕೆ ಕುತ್ತು.. , ದುಷ್ಟಕರ ಬೆಳವಣಿಗೆಗಳು ಆಗುತ್ತವೆ..

೬. ಊಟ ಮಾಡುವಾಗ ಕಣ್ಣೀರು ಹಾಕಿದರೆ : ಆ ಮನೆಯು ಎಷ್ಟೇ ಸಿರಿವಂತರಾದರೂ, ಆ ಮನೆಯು ದಾರಿದ್ರ್ಯದ ಮನೆಯಾಗುತ್ತದೆ.. ಗಂಡನ ಉದ್ಯೋಗ ನಷ್ಟವಾಗುತ್ತೆ.. ಸಂಸಾರ ಛಿದ್ರವಾಗಬಹುದು..

ಅಳಲೇಬಾರದು ಎಂದಲ್ಲ ” ಸ್ತ್ರೀ” ಕಣ್ಣೀರು ಹಾಕಿದರೆ, ಎಂದಿದ್ದರೂ ಅದು ಶಾಪವೇ…!

Related Posts