ರಿಗೆ,
ಮಾನ್ಯ ಸಂಪಾದಕರು / ವರದಿಗಾರರು (Print, TV and other Media’s)
ಆನ್ಲೈನ್ ಮೌಲ್ಯಮಾಪನ ಪ್ರಕ್ರಿಯೆ ರದ್ದತಿಗೆ ಮತ್ತು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿ. 07.07.2022 ರಂದು ಬೆಂಗಳೂರು ಚಲೋ ಹೋರಾಟ: ರಾಜ್ಯಾಧ್ಯಕ್ಷ ವಿಶ್ವರಾಧ್ಯ
-: ಪತ್ರಿಕಾ ಹೇಳಿಕೆ :-
ಬೆಂಗಳೂರು: – “ಕೋವಿಡ್ ಕಾಲದಲ್ಲಿ ನಾವೆಲ್ಲ ಕರೋನಾ ಸೇನಾನಿಗಳು ಮುಗಿದ ಮೇಲೆ ಬಿಕಾರಿಗಳು” ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಸಂಕಷ್ಟದಲ್ಲಿ ಹಗಲಿರುಳು ಶ್ರಮಿಸಿದ ಗುತ್ತಿಗೆ, ಹೊರಗುತ್ತಿಗೆ ನೌಕರರು ಆ ಸಂದರ್ಭದಲ್ಲಿ ರಜೆಯನ್ನು ಪಡೆಯದೆ ಕಡಿಮೆ ಸಂಬಳಕ್ಕೆ ದುಡಿದು ಸಾರ್ವಜನಿಕರ ಆರೋಗ್ಯ ಕಾಪಾಡಿದ ನೌಕರರನ್ನು, ಇಂದು ಪ್ರತಿ ಮೂರು ತಿಂಗಳಿಗೊಮ್ಮೆ ಓ.ಪಿ.ಎ.ಎಸ್ (OPAS – Online Performance Appraisal System) ಎಂಬ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡಿ ನೌಕರರ ಹಿತ ಕಾಯಬೇಕಾದ ಸರಕಾರದ ಅಧಿಕಾರಿಗಳು ನೌಕರರ ಆತ್ಮಸ್ಥೈರ್ಯ ಕುಗ್ಗಿಸುವ ಆದೇಶಗಳನ್ನು ನೀಡುತ್ತಿರುವುದು ಅತ್ಯಂತ ಖೇದಕರ ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ತಿಳಿಸಿದ್ದಾರೆ.
03 ತಿಂಗಳಿಗೊಮ್ಮೆ ಇರುವ ಮೌಲ್ಯಮಾಪನ ಕ್ರಮದಿಂದ ಆಗುವ ಅನಾಹುತಗಳು👇
- 15 ವರ್ಷದಿಂದ ಮಾಡಿದ ಸೇವೆ ನೀರಿನಲ್ಲಿ ಹೋಮ ಆದಹಾಗೆ ನಮ್ಮ ನೌಕರರು ಕೆಲಸ ಕಳೆದುಕೊಳ್ಳಬಹುದು.
- ಕೆಲಸ ಉಳಿಸಿಕೊಳ್ಳಲು ಅಡ್ಡದಾರಿ (ಬ್ರಷ್ಟಾಚಾರ) ಅನಿವಾರ್ಯ ಆಗಬಹುದು.
- ಮಹಿಳಾ ನೌಕರರ ಮೇಲೆ ದೌರ್ಜನ್ಯ ಆಗಬಹುದು,
- ಅಧಿಕಾರಿಗಳು ವಯಕ್ತಿಕ ದ್ವೇಷದಿಂದ ಸೇವೆಯಿಂದ ವಜಾ ಮಾಡಬಹುದು.
- ಗುಲಾಮಗಿರಿ ಪದ್ಧತಿ ಜೀವಂತ.
- ಇನ್ನು ಹಲವಾರು ಕಾರಣಗಳು ಅಗೋಚರ.
ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಅವಿಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆ ಎಂದು ಹೇಳಬಹುದು.
ಈ ಹಿಂದೆ ಅಧಿಕಾರಿಗಳು ಸೂಚಿಸಿದಂತೆ ರಜೆಯನ್ನು ಲೆಕ್ಕಿಸದೇ ನಿರಂತರ 24 ಗಂಟೆಗಳ ಕಾಲ ಹಗಲು ರಾತ್ರಿ ಕುಟುಂಬ ಯಾವುದನ್ನು ಲೆಕ್ಕಿಸದೆ ಜನರ ಆರೋಗ್ಯ ಕಾಪಾಡಿದ ನೌಕರರನ್ನು ಬೀದಿಗೆ ಬರುವ ಪರಿಸ್ಥಿತಿಯನ್ನು ತಂದಿದ್ದು ಯಾವ ಪುರುಷಾರ್ಥಕ್ಕೆ ಮಾನ್ಯ ಆರೋಗ್ಯ ಸಚಿವರ ಗಮನಕ್ಕೆ ತಂದರೆ ಅಧಿಕಾರಿಗಳ ಮಾತು ಕೇಳಿ ಅವರು ಕೂಡ ಹೇಳಿಕೆಗಳನ್ನು ನೀಡಿ ನೌಕರರನ್ನು ಗೊಂದಲಕ್ಕೆ ಎಡೆಮಾಡಿಕೊಟ್ಟ ಪರಿಸ್ಥಿತಿ ಇನ್ನೂ ಮಾಸಿಲ್ಲ ಅಂತಹ ಸ್ಥಿತಿಯಲ್ಲಿ ಆರೂವರೆ ಕೋಟಿ ಜನರ ಆರೋಗ್ಯ ಕಾಪಾಡಿದ ಜೀವಗಳು ಇಂದು ಬೀದಿಗೆ ಬಂದು ನಿಲ್ಲುವ ಸ್ಥಿತಿಗೆ ಬಂದಿದ್ದು ಇಂತಹ ಸಾಧನೆಗೆ ಕಾರಣಿಕರ್ತರು ಮಾನ್ಯ ಅಭಿಮಾನ ನಿರ್ದೇಶಕರು, NHM ಬೆಂಗಳೂರು ನೌಕರರ ಬಗ್ಗೆ ಕಾಳಜಿ ಇರಬೇಕಾದ ಅಧಿಕಾರಿಗಳೇ ಇಂತಹ ಅತಿರೇಕದ,ಅಸಂಬದ್ಧ ಆದೇಶಗಳನ್ನು ನೀಡುತ್ತಿರುವುದು ಸಮಂಜಸವೇ ಎಂದು ಪ್ರಶ್ನಿಸಿದ್ದಾರೆ.
ನೌಕರರು ನೆಮ್ಮದಿಯಿಂದ ಜನರ ಸೇವೆ ಮಾಡಬೇಕಾದರೆ, ಈ ತರಹದ ನೆಮ್ಮದಿಯನ್ನು ಕದಡುವ ಇಂತಹ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು ಇದು ಈ ನಮ್ಮ ಸಂಘದ ಸ್ಪಷ್ಟ ನಿರ್ಧಾರ. 24-2-2022 ರಂದು ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಸಚಿವವರೇ ಒಪ್ಪಿಕೊಂಡ ಹಾಗೆಯೇ ಬದ್ದರಾಗಿ ಕೂಡಲೇ ಬೇಡಿಕೆಗಳನ್ನು ಈಡೇರಿಸಿ ನೌಕರರ ಪರ ಎನ್ನುವುದನ್ನು ನಿರೂಪಿಸಿ ಕೊಡಬೇಕಾದದ್ದು ಮಾನ್ಯ ಸಚಿವರ, ಸರ್ಕಾರದ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಜವಾಬ್ದಾರಿ. ಸದರಿ ವಿಷಯವಾಗಿ ಈಗಾಗಲೇ ಸರ್ಕಾರಕ್ಕೆ ವಿವರವಾದ ಪತ್ರವನ್ನು ಬರೆದಿದ್ದು ಹೋರಾಟದ ರೂಪರೇಷೆ ಈ ಕೆಳಗಿನಂತಿರುತ್ತದೆ ಎಂದು ತಿಳಿಸಿದರು.
ದಿನಾಂಕ ಮತ್ತು ಹೋರಾಟದ ವೇಳಾಪಟ್ಟಿ ಈ ಕೆಳಗಿನಂತಿದೆ: –
- ದಿನಾಂಕ 30.06.2022 ರಂದು ತಮ್ಮ ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ CEO ರವರ ಮುಖಾಂತರ ಮೌಲ್ಯಮಾಪನ ಪ್ರಕ್ರಿಯೆ ಹಿಂಪಡೆಯಲು ಕೋರುವುದು.
- ದಿನಾಂಕ 07.07.2022 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
- “ಬೇಡಿಕೆಗಳು ಈಡೆರಬೇಕು, ಮೌಲ್ಯಮಾಪನ ರದ್ದಾಗಬೇಕು” – ಸಂಘದ ಮುಂದಿನ ನಿರ್ದೇಶನದವರೆಗೂ ಯಾವ ಗುತ್ತಿಗೆ ನೌಕರರು ಸಹ ಆನ್ಲೈನ್ ಮೌಲ್ಯಮಾಪನ ಪ್ರಕ್ರಿಯೆ ಮಾಡಬಾರದು ಎಂದು ನಿರ್ಣಯಿಸಲಾಗಿದೆ.
ಸರಕಾರಕ್ಕೆ ನೌಕರರ ಕುಂದುಕೊರತೆಗಳನ್ನು ಆಲಿಸುವ ಬದ್ಧತೆ ಇಲ್ಲವಾದಲ್ಲಿ ಹೋರಾಟವನ್ನು ಉಗ್ರರೂಪಕ್ಕೆ ಮುಂದುವರೆಸಬೇಕಾದ ಅನಿವಾರ್ಯತೆ ಇರುತ್ತದೆ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳೇ ಮಧ್ಯಸ್ಥಿಕೆ ವಹಿಸಿ ಪರಿಹರಿಸಿ ಕೊಡಬೇಕಾದ ಪರಿಸ್ಥಿತಿ ಬರಬಹುದು ಕೂಡಲೇ ಎಚ್ಚೆತ್ತುಕೊಂಡು ನೌಕರರ ಹಿತಕಾಯುವ ಆದೇಶಗಳನ್ನು ನೀಡಬೇಕು ವಿನಹ ಕಷ್ಟದಲ್ಲಿ ಕೈ ಹಿಡಿದವರನ್ನು ಬೀದಿಗೆ ತಂದು ನಿಲ್ಲಿಸುವಂತ ಹೇಯ ಕೃತ್ಯ ಮಾಡಬಾರದು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಪತ್ರಿಕಾ ಹೇಳಿಕೆ ಇವರಿಂದ:
ವಿಶ್ವರಾಧ್ಯ ಎಚ್. ವೈ.
(ರಾಜ್ಯ ಅಧ್ಯಕ್ಷರು)
&
ಶ್ರೀಕಾಂತ್ ಸ್ವಾಮಿ
(ರಾಜ್ಯ ಪ್ರಧಾನ ಕಾರ್ಯದರ್ಶಿ)
ಕ.ರಾ.ಆ.ಗು.ಹೊ.ನೌ.ಸಂಘ (ರಿ)ದ/ KSHCOEA (BMS)