ಜಾತಕದಲ್ಲಿ ಶುಕ್ರದೇವನ ದಶಾ..
ಸುಖ, ಸಂತೋಷ, ನೆಮ್ಮದಿ ಬಯಸುವುದು ಮಾನವನ ಸಹಜ ಧರ್ಮ. ಅದನ್ನು ಅವನಿಗೆ ಕರುಣಿಸುವ ಗ್ರಹಗಳಲ್ಲಿ ಅಗ್ರಮಾನ್ಯನೇ ಶುಕ್ರ. ಇಂಥ ಸರ್ವಜನ ಪ್ರೀತನಾದ ಶುಕ್ರನ ದಶಾ ವಿಚಾರಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರ ಗ್ರಂಥಗಳು ಬಹಳವಾಗಿ ತಿಳಿಸುತ್ತವೆ.
ರಾಜ ಪ್ರೀತಿಂಚ ಸೌಭಾಗ್ಯಂ ರಾಜತೋಂಬರ ಸಂಕುಲಮ್
ತತ್ಕಾಲೇ ಶ್ರೀಯಮಾಪ್ನೋತಿ ಭಾಗ್ಯ ಕರ್ಮೇಶ ಸಂಯುತೇ
ಎಂದು ಪರಾಶರ ಮಹರ್ಷಿಗಳು ತಮ್ಮ ಹೊರಾ ಶಾಸ್ತ್ರ ಗ್ರಂಥದಲ್ಲಿ ಬರೆದಂತೆ ಶುಕ್ರದೆಶೆಯಲ್ಲಿ ಸೌಭಾಗ್ಯದ ಉದಯವಾಗುತ್ತದೆ. ಸರ್ಕಾರ ಹಾಗೂ ಮಂತ್ರಿ ವರ್ಗಗಳಿಂದ ಲಾಭವಾಗುತ್ತದೆ. ಹಾಗೆಯೇ ದಶಾಕಾರಕ ಶುಕ್ರನು ಜಾತಕದಲ್ಲಿ ಭಾಗ್ಯಾಧಿಪತಿ ಹಾಗೂ ಕರ್ಮಾಧಿಪತಿಯೊಂದಿಗೆ ಇದ್ದರೆ ತತ್ಕಾಲದಲ್ಲಿ ಲಕ್ಷ್ಮೀ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಹಿಂದೆ ಕಳೆದುಕೊಂಡ ಹಣ ಪುನಃ ಸಿಗುತ್ತದೆ.
ಶುಕ್ರನು ವಿವಾಹಕಾರಕ ಗ್ರಹ. ಆದುದರಿಂದಲೇ ಅವಿವಾಹಿತರಿಗೆ ವಿವಾಹವನ್ನೂ ಮಾಡಿಸುತ್ತಾನೆ ಈ ಶುಕ್ರ. ಆದುದರಿಂದಲೇ ಏನೋ ವಿದ್ಯಾವಂತರಿಂದ ಪ್ರಾರಂಭಿಸಿ ಅವಿದ್ಯಾವಂತನ ತನಕ ಪ್ರತಿಯೊಬ್ಬರೂ ಆಸೆಯಿಂದ ಕಾಯುವುದು, ಬಯಸುವುದು ಈ ಶುಕ್ರದೆಶೆಯನ್ನು.
ಇಷ್ಟೆಲ್ಲಾ ಸದ್ಗುಣಗಳು ಇರುವುದರಿಂದ ಸಾಮಾನ್ಯವಾಗಿ ನಾವು ಶಾಲೆಗೆ ಹೋಗುವ ನಮ್ಮ ಮಕ್ಕಳಿಗೂ ಆ ಶುಕ್ರದೆಶೆ ಬರಲಿ ಎಂದು ಬಯಸುವುದು ಸಹಜ. ಆದರೆ ಮೇಲೆ ಹೇಳಿದ ಎಲ್ಲವೂ ಸಹ ನಾಣ್ಯದ ಒಂದು ಮುಖವೇ ಆಗಿರುತ್ತದೆ. ಅದಕ್ಕೆ ಕಾರಣಗಳು ಹಲವು.
ದೈವಜ್ಞ ಮಂತ್ರೇಶ್ವರರು ತಮ್ಮ ಫಲ ದೀಪಿಕಾ ಗ್ರಂಥದಲ್ಲಿ ಹೇಳಿದಂತೆ ಶುಕ್ರ ದೆಶೆಯಲ್ಲಿ ಪ್ರಮದಾ ಸುಖ ಸಂಪದ- ಅಂದರೆ ಸ್ತ್ರೀ ಸುಖವು ಲಭಿಸುತ್ತದೆ ಎಂದಿರುತ್ತಾರೆ. ಇದು ವಿದ್ಯಾರ್ಥಿ ಜೀವನದಲ್ಲಿ ಅನವಶ್ಯಕವಾಗಿರುತ್ತದೆ ಹಾಗೂ ಶುಕ್ರ ದೆಶೆಯಲ್ಲಿ ಬರುವ ಎಲ್ಲಾ ಭೋಗ ಸುಖ ಸೌಖ್ಯಗಳು ವಿದ್ಯಾರ್ಥಿಯನ್ನು ವಿದ್ಯೆಯಿಂದ ವಂಚಿತನಾಗಿ ಮಾಡುತ್ತದೆ. ಆದುದರಿಂದ ವಿದ್ಯಾರ್ಥಿ ದೆಸೆಯಲ್ಲಿರುವ ನಿಮ್ಮ ಮಕ್ಕಳ ಜಾತಕದಲ್ಲಿ ಶುಕ್ರದೆಸೆ ನಡೆಯುತ್ತಿದ್ದರೆ ಎಚ್ಚರ ವಹಿಸಿ.
ಇನ್ನು ವ್ಯಾಪಾರ ಮಾಡುವವರಿಗೆ ದಶಾಕಾರಕ ಶುಕ್ರ ಜಾತಕದಲ್ಲಿ ಲಗ್ನದಿಂದ 6, 8, 12ರಲ್ಲಿ ಇದ್ದರೆ ಚೋರಾದಿ ಭೀತಿ- ಕಳ್ಳರ ಭಯ ಇರುತ್ತದೆ ಹಾಗೂ ವ್ಯಾಪಾರದಲ್ಲಿ ನಷ್ಟ ಕಾಣುತ್ತಾರೆ. ಜಾತಕದಲ್ಲಿ 7ನೇ ಮನೆಯಲ್ಲಿ ಶುಕ್ರ ಇದ್ದರೆ, ಶುಕ್ರ ಮಹಾದೆಸೆ ಮುಗಿದು ರವಿ ಮಹಾದೆಸೆ ಪ್ರಾರಂಭ ಕಾಲದಲ್ಲಿ ಅಂದರೆ ಶುಕ್ರಾದಿತ್ಯ ಸಂಧಿ ಕಾಲದಲ್ಲಿ ವಿವಾಹದಲ್ಲಿ ವಿಘ್ನ ಅಥವಾ ವಿವಾಹ ವಿಚ್ಛೇದನ ಆಗುವುದು ಸಹಜ ಸಾಮಾನ್ಯ.
ಇನ್ನು ಜಾತಕದಲ್ಲಿ ಶುಕ್ರ ಲಾಭದಲ್ಲಿ, ಪಂಚಮದಲ್ಲಿ, ಸ್ವಕ್ಷೇತ್ರದಲ್ಲಿ ಅಥವಾ ಉಚ್ಚ ಸ್ಥಿತಿಯಲ್ಲಿ ಅನುಕೂಲವಾಗಿದ್ದ ಪಕ್ಷದಲ್ಲಿ ವಜ್ರಧಾರಣೆ ಅಥವಾ ಶಕ್ತಿ ಇಲ್ಲದವರು ಶ್ವೇತ ಪುಷ್ಯರಾಗ ರತ್ನವನ್ನು ತ್ರಿದಿನ ಪೂಜಿಸಿ ಧರಿಸಬಹುದು. ಆದರೆ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ನಿಮ್ಮ ಜಾತಕ ಪರಿಶೀಲನೆ ಅತಿಅವಶ್ಯ.
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್
ಧನ್ಯವಾದಗಳು 🙏