*ನವರಾತ್ರಿ – ನವ ದುರ್ಗೆಯರು

ದೇವಿಯನ್ನು ನವರಾತ್ರಿಯಂದು ನವದುರ್ಗೆಯಾಗಿ ಒಂಭತ್ತು ನಾಮ ರೂಪಗಳಲ್ಲಿ ಆರಾಧಿಸುತ್ತಾರೆ.

ಮೊದಲನೆಯ ದಿನದಿಂದ ಕೊನೆಯ ದಿನದವರೆಗೂ ಪಾಲಿಸುವ ಆರಾಧನೆಯ ಕ್ರಮವು ಹೀಗಿರುತ್ತದೆ.

*೧. ಶೈಲಪುತ್ರಿ
ಪರ್ವತರಾಜನ ಮಗಳಾದ ಶೈಲಪುತ್ರಿ ನಂದಿಯ ಮೇಲೆ ಕುಳಿತು ತ್ರಿಶೂಲ ಖಡ್ಗಗಳನ್ನು ಹಿಡಿದು ಆರಾಧಕರಿಗೆ ಸಕಲ ಮನೋರಥ ಅನುಗ್ರಹಿಸುತ್ತಾಳೆ.

*೨. ಬ್ರಹ್ಮಚಾರಿಣಿ
ಶಿವನನ್ನು ಒಲಿಸಲು ಪಾರ್ವತಿ ತೀವ್ರ ತಪಸ್ಸನ್ನು ಕೈಗೊಂಡಳು. ಜಪಮಾಲಾ, ಕಮಂಡಲುಧಾರಿಯಾದ ಬ್ರಹ್ಮಚಾರಿಣಿ ಸಾಧಕರಿಗೆ ಬ್ರಹ್ಮಜ್ಞಾನವನ್ನು ಕರುಣಿಸುತ್ತಾಳೆ.

*೩. ಚಂದ್ರಘಂಟಾ
ಶಿವನನ್ನು ವರಿಸಿದ ನಂತರ, ದುರ್ಗೆ ತಂಪಾದ ಚಂದ್ರನಂತೆ ಪ್ರಕಾಶಮಾನಳಾಗುತ್ತಾಳೆ. ದಶಾಭುಜಗಳುಳ್ಳ ಸಿಂಹವಾಹಿನಿ ಪರಮ ಶಾಂತಿ ಮತ್ತು ಕಲ್ಯಾಣಗಳನ್ನು ನೀಡುತ್ತಾಳೆ. ಸಾಧಕರ ಸಂಶಯ ನಿವಾರಣೆ, ಪಾಪವಿಮೋಚನೆ ಮತ್ತು ವಿಘ್ನ ನಿರ್ಮೂಲನೆ ಇವಳ ಪ್ರಥಮ ಕರ್ತವ್ಯಗಳು.

*೪. ಕುಷ್ಮಾಂಡಾ
ಆನಂದಭರಿತ ದೇವಿಯ ಮಂದಸ್ಥಿತದಿಂದ ಸೃಜನಿಸಿತು. ದಶಾಭುಜಳಾದ ಕುಷ್ಮಾಂಡಾ ರೋಗ ದುಃಖಗಳನ್ನು ನಿವಾರಿಸಿ, ಆರೋಗ್ಯ, ಬಾಗ್ಯ, ದೀರ್ಘಾಯಸ್ಸು, ಸರ್ವ ಖ್ಯಾತಿಗಳನ್ನು ಪ್ರಸಾದಿಸುತ್ತಾಳೆ.

*೫. ಸ್ಕಂದಮಾತಾ
ಸುಬ್ರಹ್ಮಣ್ಯನ ತಾಯಿ. ಚತುರ್ಭುಜ ಸಿಂಹವಾಹಿನಿ ಯಾದ ದೇವಿಯ ಮಡಿಲಲ್ಲಿ ಸ್ಕಂದ ವಿರಾಜಿಸುತ್ತಿದ್ದಾನೆ. ಈ ರೂಪವನ್ನು ಆರಾಧಿಸಿದರೆ, ನಮ್ಮಲ್ಲಿರುವ ದೈವತ್ವವನ್ನು ವೃದ್ಧಿಸುತ್ತಾಳೆ.

*೬. ಕಾತ್ಯಾಯನಿ
ನಿಷ್ಕಳಂಕಳು – ಮಹಿಷಾಸುರನನ್ನು ವಧಿಸಿದ ಚತುರ್ಭುಜ ಕಾತ್ಯಾಯನಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಕರುಣಿಸಿ ಕಾಪಾಡುತ್ತಾಳೆ.

*೭. ಕಾಲರಾತ್ರಿ
ಕಾಲವನ್ನು ಜಯಿಸಿದವಳು. ಈ ರೂಪದಲ್ಲಿ ನೋಡಲು ಭಯಂಕರವಾದ ದೇವಿಯು ನಮ್ಮನ್ನು ಕಾಲಚಕ್ರದಿಂದ ಬಿಡುಗಡೆ ಮಾಡುತ್ತಾಳೆ.

*೮. ಮಹಾಗೌರಿ
ಶಿವನ ಒಲವಿಂದ ಕಾಂತಿಯುತವಾದ ದೇವಿ. ನಂದಿಯ ಮೇಲೆ ಕುಳಿತು ನಮ್ಮ ಗೊಂದಲವನ್ನು ನಿವಾರಿಸುತ್ತಾಳೆ.

*೯. ಸಿದ್ಧಿಧಾತ್ರಿ
ಶಿವನ ಅರ್ಧಾಂಗಿಯಾದ ದೇವಿಯು ಭಕ್ತರಿಗೆ ಪರಿಪೂರ್ಣತೆಯನ್ನು ಕರುಣಿಸುತ್ತಾಳೆ.

ಶೈಲಪುತ್ರಿ

ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃ ತಶೇಖರಂ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಬ್ರಮ್ಹಚಾರಿಣೀ

ದಧಾನಾಂ ಕರಪದ್ಮಬ್ಯಾಂ ಅಕ್ಷಮಾಲಾ ಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಮ್ಹಚಾರಿಣ್ಯನುತ್ತಮಾ ||

ಚಂದ್ರಘಂಟಾ

ಪಿಣಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೆ ಮಹ್ಯಾಂ ಚಂದ್ರಘಂಟೆತಿ ವಿಶ್ರುತಾ ||

ಕೂಷ್ಮಾಂಡಾ

ಸುರಾಸಂಪೂರ್ಣ ಕಲಶಂ ರುಧಿರಾಪ್ಲುತಮೇವಚ |
ದಧಾನಾ ಹಸ್ತಪದ್ಮಾಭ್ಯಾಂ ಮೂಷ್ಮಾಂಡಾ ಶುಭದಾಸ್ತುಮೆ ||

ಸ್ಕಂದಮಾತಾ

ಸಿಂಹಾಸನಗತಾ ನಿತ್ಯಂ ಪದ್ಮಾಂಚಿತಕರಾದ್ವಯಾ |
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||

ಕಾತ್ಯಾಯನೀ

ಚಂದ್ರಹಾಸೊಜ್ವಲಕರಾ ಶಾರರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾತ್ ದೇವಿ ದಾನವಘಾತಿನೀ ||

ಕಾಲರಾತ್ರಿ

ಎಕವೇಣೀ ಜಪಾಕರ್ಣಪೂರಾ ನಗ್ನಾ ಸ್ವರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ ||
ವಾಮಪಾದೋಲ್ಲಸಲ್ಲೀಹಲತಾಕಂಟಕಭೂಷಣಾ |
ವರ್ಧನ್ಮೂರ್ಧಧ್ವಜಾ ಕೃಷ್ಣ ಕಾಲರಾತ್ರೀ ಭಯಂಕರೀ ||

ಮಹಾಗೌರಿ

ಶ್ವೆತೆ ವೃಶೆ ಸಮಾರೂಢಾ ಶ್ವೆತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ ||

ಸಿದ್ಧಿದಾಯಿನೀ

ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈರಮರೈರಪಿ |
ಸೆವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

Related Posts