ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ.
*ಪ್ರಧಾನಿ ಉತ್ತರ*
ಗೌರವಾನ್ವಿತ ನ್ಯಾಯಾಧೀಶ ಸಾಹೇಬ್, ನೀವು ಸಾರ್ವಜನಿಕರಿಂದ ಈ ಕೆಳಗಿನ ಸೂಚನೆಗಳನ್ನು ಹೊಂದಿದ್ದೀರಿ..
1:- ಎಲ್ಲಾ ನ್ಯಾಯಮೂರ್ತಿಗಳು 10 ಗಂಟೆಗೆ ಬರುತ್ತಾರೆ – ಊಟ – 2 ರಿಂದ 3 ಗಂಟೆಯ ನಡುವೆ, ನಂತರ 4 ಗಂಟೆಗೆ ಮನೆಗೆ ಹಿಂತಿರುಗುತ್ತಾರೆ. ಇದು ಎಷ್ಟು ಕಾಲ ನಡೆಯುತ್ತದೆ ??
2:- ಬೆಳಿಗ್ಗೆ 9 ಗಂಟೆಗೆ ಬಂದು ವೈದ್ಯರು, ಇಂಜಿನಿಯರ್‌ಗಳು, ಪೊಲೀಸರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಜಗತ್ತಿನ ಜನರಂತೆ ಸಂಜೆ 6 ರವರೆಗೆ ಕೆಲಸ ಮಾಡುತ್ತಾರೆ..
3:- ಅನೇಕ ವೈದ್ಯರು ಮತ್ತು ಕೆಲವು ಅಧಿಕಾರಿಗಳು ಮಾಡುವಂತೆಯೇ ಶನಿವಾರ ಮತ್ತು ಭಾನುವಾರದಂದು ಕೆಲಸ ಮಾಡಿ.
4:- 1947 ನೇ ಇಸವಿಯಿಂದ, ಜೂನ್ 1 ರಿಂದ ಜೂನ್ 30 ರವರೆಗೆ, ನೀವು ಬೇಸಿಗೆ ರಜೆಯನ್ನು ಆನಂದಿಸುತ್ತೀರಿ. ಇಡೀ SC ಕೇಂದ್ರೀಕೃತ AC ಆಗಿರುವಾಗ ಜೂನ್‌ನಲ್ಲಿ ಬೇಸಿಗೆ ರಜೆ ಏಕೆ ??
5:- ಪ್ರತಿ ನ್ಯಾಯಾಧೀಶರು ವರ್ಷದಲ್ಲಿ ಕೇವಲ 15-20 ದಿನಗಳ ರಜೆ ತೆಗೆದುಕೊಳ್ಳುತ್ತಾರೆ.
6:- ಜಲ್ಲಿಕಟ್ಟು, ದಹಿಹಂಡಿಯಂತಹ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡುವುದೇಕೆ??
7:- ಕೆಲವು ವೃತ್ತಿಪರರು ಸಲ್ಲಿಸಿರುವ ನೂರಾರು ಅನುಪಯುಕ್ತ ಪಿಐಎಲ್‌ಗಳನ್ನು ಕೇಳಿ ನಿಮ್ಮ ಸಮಯವನ್ನು ಏಕೆ ವ್ಯರ್ಥ ಮಾಡುತ್ತಿದ್ದೀರಿ??
8:- EPFO vs ಪಿಂಚಣಿದಾರರು, ನೀವು ಅನೇಕ ಪ್ರಕರಣಗಳಲ್ಲಿ 3 ನ್ಯಾಯ ಪೀಠಗಳನ್ನು ಮತ್ತು ನಂತರ 5 ನ್ಯಾಯ ಪೀಠಗಳನ್ನು ಏಕೆ ಮಾಡುತ್ತೀರಿ?
9:- ದೇಶದ್ರೋಹಿಗಳಿಗೆ ಪರಾಮರ್ಶೆ, ನಂತರ ತಿದ್ದುಪಡಿಗೆ ಮನವಿ? ಸಮಯವಿಲ್ಲದ ಬಡವರಿಗಾಗಿ ರಾತ್ರಿಯಾದರೂ ನ್ಯಾಯಾಲಯವನ್ನು ಏಕೆ ತೆರೆಯುತ್ತೀರಿ ???
10:- ನೀವು ತೆರಿಗೆದಾರರಿಂದ ಕೋಟಿಗಟ್ಟಲೆ ಸಂಬಳ ಮತ್ತು ಸೌಲಭ್ಯಗಳನ್ನು ಪಡೆಯುತ್ತೀರಿ ಆದರೆ ಸಾರ್ವಜನಿಕರಿಗೆ ಶೂನ್ಯ ಹೊಣೆಗಾರಿಕೆ.
11:- ನೀವು ಎಸಿ ಬಂಗಲೆಗಳಲ್ಲಿ ವಾಸಿಸುತ್ತಿದ್ದೀರಿ, ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದೀರಿ, ಸಾರ್ವಜನಿಕ ವೆಚ್ಚದಲ್ಲಿ ವಿಸ್ತಾರವಾದ ಭದ್ರತೆಯನ್ನು ಹೊಂದಿದ್ದೀರಿ, ಹಾಗಾದರೆ ನೀವು ಏಕೆ ಕಷ್ಟಪಟ್ಟು ಕೆಲಸ ಮಾಡಬಾರದು?
12:- ನಿಮ್ಮೆಲ್ಲರಿಗೂ ಕ್ಯಾಬಿನೆಟ್ ಮಂತ್ರಿ ಸೌಲಭ್ಯಗಳು ಸಿಗುತ್ತವೆ.
ವಯಸ್ಸಾಗುವ ಅಗತ್ಯವಿಲ್ಲ. SC ಸುಪ್ರೀಂ ಕೋರ್ಟ್‌ನ ಕೆಲಸದ ದಿನಗಳನ್ನು ಕನಿಷ್ಠ 300 ದಿನಗಳಿಗೆ ಹೆಚ್ಚಿಸಬೇಕು, ಅದು ವರ್ಷದಲ್ಲಿ 168 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತದೆ.
ನ್ಯಾಯಾಧೀಶರು 300 ದಿನ ಕೆಲಸ ಮಾಡಲು ಯಾವುದೇ ತೊಂದರೆ ಇರಬಾರದು ಆದರೆ ಪ್ರಧಾನಿ 365 ದಿನ ಕೆಲಸ ಮಾಡಬಹುದು.
ಬಡ ದೇಶಪ್ರೇಮಿಗಳು ಇನ್ನು ಮುಂದೆ ಸಹಿಸಲಾರರು.
ನ್ಯಾಯಾಂಗ ಕೊಳೆತು ಹೋಗಿದೆ. ಅದನ್ನು ಸುಧಾರಿಸುವ ತುರ್ತು ಮತ್ತು ತುರ್ತು ಅವಶ್ಯಕತೆ ಇದೆ.
*ಕನಿಷ್ಠ ಐದು ಗುಂಪುಗಳನ್ನು ಕಳುಹಿಸಿ*
*ಕೆಲವರು ಕಳುಹಿಸುವುದಿಲ್ಲ*
*ಆದರೆ ನೀವು ಖಂಡಿತವಾಗಿಯೂ ಕಳುಹಿಸುತ್ತೀರಿ ಎಂದು ನನಗೆ ಖಾತ್ರಿಯಿದೆ*
80 ವರ್ಷಗಳ ಹಿಂದೆ……
1942 – ಬ್ರಿಟೀಷರೇ ಭಾರತ ಬಿಟ್ಟು ತೊಲಗಿ…..
ಕ್ವಿಟ್ ಇಂಡಿಯಾ……
2022……
ಭ್ರಷ್ಟಾಚಾರಿಗಳೇ – ಜಾತಿವಾದಿಗಳೇ, ಧರ್ಮಾಂಧರೇ,
ಮತಾಂಧರೇ,
ಸಂವಿಧಾನ ವಿರೋಧಿಗಳೇ..
ನೀವು ಬದಲಾಗಿ – ಐಕ್ಯವಾಗಿ ಇಲ್ಲವೇ ದೇಶ ಬಿಟ್ಟು ತೊಲಗಿ.
ದಯವಿಟ್ಟು ಯಾವುದೇ ಕಾರಣಕ್ಕೂ ನಮಗೆ ತೊಂದರೆ ಕೊಡಬೇಡಿ. ನಾವು ಸಾಮಾನ್ಯ ಜನ. ನೀವು ಬದುಕಿ ನಮ್ಮನ್ನು ಬದುಕಲು ಬಿಡಿ……
ಹಾಗಾದರೆ ಯಾರು ಬದಲಾಗಬೇಕು ಮತ್ತು ಹೇಗೆ ಬದಲಾಗಬೇಕು……
1) ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಅಧಿಕಾರಿಗಳು ಮೊದಲು ಬದಲಾಗಬೇಕಿದೆ.
ಅದರಲ್ಲೂ ಮುಖ್ಯವಾಗಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯಗಳ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ಉನ್ನತ ಅಧಿಕಾರದಲ್ಲಿರುವವರು, ಎಲ್ಲಾ ಗೆಜೆಟೆಡ್ ಶ್ರೇಣಿಯ ಅಧಿಕಾರಿಗಳು ಭ್ರಷ್ಟ ಮುಕ್ತರಾಗಿ ಸಂವಿಧಾನಾತ್ಮಕ ಅಧಿಕಾರ ಬಳಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದು ಕ್ರಾಂತಿಯೇ ಸಂಭವಿಸಬಹುದು. ಇದರಿಂದ ಸಹಜವಾಗಿಯೇ ಕೆಳಹಂತದ ಅಧಿಕಾರಿಗಳು ಬದಲಾಗುತ್ತಾರೆ. ಇಲ್ಲಿ ಪೋಲೀಸರು, ಶಿಕ್ಷಕರು, ಡಾಕ್ಟರುಗಳು, ನೋಂದಣಿ ಅಧಿಕಾರಿಗಳು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು.
2) ಜನ ಪ್ರತಿನಿಧಿಗಳು.
ಇಲ್ಲಿಯೂ ಮುಖ್ಯವಾಗಿ ಮಂತ್ರಿಗಳು, ಶಾಸಕರು ಮತ್ತು ಸಂಸತ್ತಿನ ಸದಸ್ಯರು ಬದಲಾಗಬೇಕು. ಸಂಖ್ಯೆಗಳ ಆಧಾರದಲ್ಲಿ ಇವರ ಸಂಖ್ಯೆ ಸುಮಾರು 5000 ಮಾತ್ರ ಇರಬಹುದು. ಇಷ್ಟು ಕಡಿಮೆ ಜನ ಆತ್ಮಾವಲೋಕನ ಮಾಡಿಕೊಂಡು ಬದಲಾದರೆ ಬಹುತೇಕ ವ್ಯವಸ್ಥೆ ಸರಿಯಾಗುತ್ತದೆ.
3) ಎಲ್ಲಾ ಧರ್ಮಗಳ ಮುಖ್ಯಸ್ಥರು.
ಇಲ್ಲಿಯೂ ಮುಖ್ಯವಾಗಿ ಮಂದಿರ ಮಸೀದಿ ಚರ್ಚುಗಳಲ್ಲಿ ಧರ್ಮ ಭೋದನೆ ಮಾಡುವವರು ಧರ್ಮದ ಮೂಲಕವೇ ಸಂವಿಧಾನದ ಆಶಯಗಳನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರೆ ಬಹುದೊಡ್ಡ ಬದಲಾವಣೆ ಸಾಧ್ಯ. ಧರ್ಮದ ಮುಂದುವರೆದ ಮತ್ತು ಸುಧಾರಿತ ಅಂಶಗಳೇ ಸಂವಿಧಾನ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ಹೇಳಬೇಕು.
4) ಎಲ್ಲಾ ರೀತಿಯ ಮಾಧ್ಯಮಗಳವರು.
ಕಾಲದಿಂದ ಕಾಲಕ್ಕೆ ಮಾಧ್ಯಮಗಳ ಸ್ವರೂಪ ಮತ್ತು ತಾಂತ್ರಿಕತೆಯಲ್ಲಿ ವ್ಯತ್ಯಾಸಗಳಾದರು ಇಂದಿಗೂ ಮಾಧ್ಯಮವೇ ಜನರ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯ ಬಹುದೊಡ್ಡ ವೇದಿಕೆ. ಬಹುತೇಕ ಜನರ ಅನೇಕ ವಿಷಯಗಳ ಅಭಿಪ್ರಾಯ ರೂಪಗೊಳ್ಳುವುದೇ ಮಾಧ್ಯಮಗಳ ಸುದ್ದಿಯ ಪ್ರಭಾವದಿಂದಾಗಿ. ಅವರುಗಳು ಎಲ್ಲಾ ಸ್ಪರ್ಧೆಗಳ ನಡುವೆಯೂ ಮೌಲ್ಯಯುತ ಮತ್ತು ವಿವೇಚನಾಯುಕ್ತ ಸುದ್ದಿಗಳನ್ನು ಪ್ರಸಾರ ಮಾಡಿದರೆ ಖಂಡಿತವಾಗಿ ಸಮಾಜ ಬದಲಾವಣೆಯ ಹಾದಿಗೆ ಮರಳುತ್ತದೆ.
5) ವಕೀಲರು ಮತ್ತು ನ್ಯಾಯಾಲಯಗಳು
ವೃತ್ತಿ ಧರ್ಮ ಮತ್ತು ಬದುಕಿನ ಅನಿವಾರ್ಯತೆಯ ಜೊತೆಗೆ ನೈತಿಕ ಮೌಲ್ಯಗಳನ್ನು ಕಾನೂನಿನ ಅರ್ಥೈಸುವಿಕೆಯಲ್ಲಿ ಅಳವಡಿಸಿಕೊಂಡು ಮತ್ತಷ್ಟು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಈ ಸಮಾಜದ ಬದಲಾವಣೆ ಸಾಧ್ಯವಿದೆ. ಕಾನೂನಿನ ಒಳಸುಳಿಗಳ ದುರುಪಯೋಗದಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದೆ ಎಂಬುದು ವಾಸ್ತವ. ಅದರ ನಿಯಂತ್ರಣ ನ್ಯಾಯಾಂಗ ವ್ಯವಸ್ಥೆಯಿಂದ ಮಾತ್ರ ಸಾಧ್ಯ.
6) ಚುನಾವಣಾ ಆಯೋಗ, ಸಿಬಿಐ, ಇಡಿ ಮುಂತಾದ ಸ್ವತಂತ್ರ ಸಂಸ್ಥೆಗಳು
ಜನರ ತೆರಿಗೆ ಹಣದಿಂದಲೇ ಬದುಕುತ್ತಿರುವ ಈ ಇಲಾಖೆಗಳ ಅಧಿಕಾರಿಗಳು ದೇಶದ ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಂಡು ಯಾರಿಗೂ ಹೆದರದೆ ನ್ಯಾಯದ ಪರವಾಗಿ ಕೆಲಸ ಮಾಡಿದರೆ ವ್ಯವಸ್ಥೆಯ ಶಿಸ್ತು ಬದ್ಧ ಬದಲಾವಣೆಯ ಎಲ್ಲಾ ಸಾಧ್ಯತೆಗಳು ಇವೆ.
ಈ ರೀತಿಯ ಮುಖ್ಯ ಸ್ಥಾನದಲ್ಲಿ ಇರುವವರು ಪರಿವರ್ತನೆ ಹೊಂದಿದರೆ ಸಾಮಾನ್ಯ ಜನ ನಿಧಾನವಾಗಿ ಇವರನ್ನು ಅನುಸರಿಸುತ್ತಾರೆ.
ಇವರುಗಳು ಈಗಾಗಲೇ ಆರ್ಥಿಕವಾಗಿ ಬಹುತೇಕ ಸದೃಢವಾಗಿರುವವರು. ಕೇವಲ ಮಾನಸಿಕವಾಗಿ ದೇಶ ಮತ್ತು ದೇಶದ ಜನರ ಮೇಲೆ ಪ್ರೀತಿ ಅಭಿಮಾನ ಬೆಳೆಸಿಕೊಂಡು ತಮ್ಮ ಸಹಜ ಕರ್ತವ್ಯ ನಿರ್ವಹಿಸಿದರೆ ಸಾಕು. ಸುಧಾರಣೆ ಬಹುಬೇಗ ಸಾಧ್ಯವಾಗುತ್ತದೆ.
ಕ್ವಿಟ್ ಇಂಡಿಯಾ ಚಳವಳಿಯ 80 ನೆಯ ವರ್ಷದ ನೆನಪಿನ ಸಂದರ್ಭದಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ. ದಯವಿಟ್ಟು ಪ್ರತಿಯೊಬ್ಬರು ಕನಿಷ್ಠ ಸ್ವಲ್ಪಮಟ್ಟಿಗೆ ಇರುವುದರಲ್ಲಿ ಪ್ರಾಮಾಣಿಕರಾದರೆ ನೆಮ್ಮದಿಯ ನಾಳೆಗಳು ಸಾಧ್ಯ.
ಧನ್ಯವಾದಗಳು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಕೃಪೆ
ವಿವೇಕಾನಂದ ಹೆಚ್.ಕ