ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಎಂಟು ರೈಲುಗಳನ್ನು ಸೂಪರ್‌ಫಾಸ್ಟ್ ದರ್ಜೆಗೆ ಹೆಚ್ಚಿಸಲಾಗುತ್ತಿದೆ. ಎರಡು ನಗರಗಳ ನಡುವೆ ಸಂಚರಿಸುವ 20 ರೈಲುಗಳ ವೇಗವು ಹೆಚ್ಚಾಗಲಿದೆ.

: ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಿಂದ ಮೈಸೂರಿಗೆ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆಯು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತಿದೆ. ಎರಡು ನಗರಗಳ ನಡುವೆ ಸಂಚರಿಸುವ 20 ರೈಲುಗಳ ವೇಗವು ಹೆಚ್ಚಾಗಲಿದೆ. ಈ ಪೈಕಿ ಎಂಟು ರೈಲುಗಳನ್ನು ಸೂಪರ್‌ಫಾಸ್ಟ್ ಎಂದು ಮರುವಿನ್ಯಾಸಗೊಳಿಸುವುದಕ್ಕೆ ಭಾರತೀಯ ರೈಲ್ವೆ ತೀರ್ಮಾನ ಕೈಗೊಂಡಿದೆ.



ನೈಋತ್ಯ ರೈಲ್ವೆಯ ಪ್ರಕಟಣೆಯ ಪ್ರಕಾರ ವೇಗವನ್ನು ಹೆಚ್ಚಿಸಿದ ರೈಲುಗಳು ಯಾವುವು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ಬೆಂಗಳೂರು-ಮೈಸೂರು ರೈಲುಗಳ ವೇಗ ಹೆಚ್ಚಳ: ಮೊದಲ ಪಟ್ಟಿ
ವೇಗ ಹೆಚ್ಚಿಸಿಕೊಂಡ ಬೆಂಗಳೂರು-ಮೈಸೂರು ರೈಲಿನ ಮೊದಲ ಪಟ್ಟಿ
* ಹೌರಾ-ಮೈಸೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

* ಸಾಯಿನಗರ-ಶಿರಡಿ ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌

* ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್

* ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್

* ಹುಬ್ಬಳ್ಳಿ-ಮೈಸೂರು ಎಕ್ಸ್‌ಪ್ರೆಸ್

ಬೆಂಗಳೂರು-ಮೈಸೂರು ರೈಲುಗಳ ವೇಗ ಹೆಚ್ಚಳ: 2ನೇ ಪಟ್ಟಿ
ವೇಗ ಹೆಚ್ಚಿಸಿಕೊಂಡ ಬೆಂಗಳೂರು-ಮೈಸೂರು ರೈಲಿನ 2ನೇ ಪಟ್ಟಿ
* ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್

* ಅಜ್ಮೀರ್-ಮೈಸೂರು ಪಾಕ್ಷಿಕ ಎಕ್ಸ್‌ಪ್ರೆಸ್

* SMVT ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್

* ಚಾಮರಾಜನಗರ-ತುಮಕೂರು ದೈನಂದಿನ ಪ್ಯಾಸೆಂಜರ್

* ಮೈಸೂರು ಯಶವಂತಪುರ ಎಕ್ಸ್‌ಪ್ರೆಸ್


ಮರುವಿನ್ಯಾಸಗೊಂಡ ಎಂಟು ರೈಲುಗಳು
……………. ಸೂಪರ್‌ಫಾಸ್ಟ್ ಆಗಿ 8 ರೈಲುಗಳ ಮರುವಿನ್ಯಾಸ
ಎಸ್‌ಡಬ್ಲ್ಯೂಆರ್ ಎಂಟು ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್‌ಫಾಸ್ಟ್ ಎಂದು ಮರುವಿನ್ಯಾಸಗೊಳಿಸಿದೆ. ಇದು ಮೈಸೂರು ಮತ್ತು ಬೆಂಗಳೂರು ನಡುವೆ ಚಲಿಸುವ ರೈಲುಗಳ ಪರಿಷ್ಕೃತ ಸಂಖ್ಯೆಯನ್ನು ಈ ಮುಂದೆ ನೀಡಲಾಗಿದೆ. ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ ಮತ್ತು ಮೈಸೂರು ಸಾಯಿಂಗಾರ್ ಶಿರಡಿ ಎಕ್ಸ್‌ಪ್ರೆಸ್‌ಗೆ ಸಂಬಂಧಿಸಿದಂತೆ ರೈಲು ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

* ಸಂಖ್ಯೆ 16557 (ಪರಿಷ್ಕೃತ ಸಂಖ್ಯೆ 20659),

* 16558 (ಪರಿಷ್ಕೃತ 20660),

* 16023 (ಪರಿಷ್ಕೃತ 20623),

* 16024 (ಪರಿಷ್ಕೃತ 20624)

* ಮೈಸೂರು-ಮೈಲಾಡುತುರೈ ಎಕ್ಸ್‌ಪ್ರೆಸ್ (16231 ಮತ್ತು 16232) ಮತ್ತು

* ಮೈಸೂರು ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ 16217 ಮತ್ತು 16218


ಬೆಂಗಳೂರಿನಿಂದ ಮೈಸೂರಿಗೆ ಪ್ರತಿನಿತ್ಯ 23 ರೈಲುಗಳು ಸಂಚರಿಸುತ್ತವೆ. ಈ ಪೈಕಿ ಪ್ಯಾಸೆಂಜರ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳೂ ಸೇರಿವೆ. ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು, ಬೆಂಗಳೂರು-ಮೈಸೂರು ಮೆಮೋ ರೈಲು, ಕಾವೇರಿ ಎಕ್ಸ್‌ಪ್ರೆಸ್, ಚಾಮರಾಜನಗರ ಎಕ್ಸ್‌ಪ್ರೆಸ್, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್, ಹಂಪಿ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್, ಮೈಸೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಗೋಲ್-ಗುಂಬಜ್ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್, ಬೆಂಗಳೂರು-ಮೈಸೂರು ಮೆಮೋ ಎಕ್ಸ್‌ಪ್ರೆಸ್, ಮೈಸೂರು ರಾಜ್ಯರಾಣಿ ಎಕ್ಸ್‌ಪ್ರೆಸ್, ಮಾಲ್ಗುಡಿ ಎಕ್ಸ್‌ಪ್ರೆಸ್, ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ತುಮಕೂರು-ಚಾಮರಾಜನಗರ ಪ್ಯಾಸೆಂಜರ್ ರೈಲು, ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್, ಚಾಮುಂಡಿ ಎಕ್ಸ್‌ಪ್ರೆಸ್, ಬೆಂಗಳೂರು-ಮೈಸೂರು ಮೆಮೋ ಸ್ಪೆಷಲ್, ಮೈಸೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತವೆ.












Related Posts