ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಜಾಲ ಭೇದಿಸಿರುವ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು

ಭ್ರೂಣ ಲಿಂಗ ಪತ್ತೆಗೆ ಆಲೆಮನೆಯಲ್ಲಿ ಸ್ಕ್ಯಾನಿಂಗ್

ಗರ್ಭಿಣಿಯನ್ನು ಕಾರಿನಲ್ಲಿ ಮಂಡ್ಯಕ್ಕೆ ಕರೆದೊಯ್ಯುತ್ತಿದ್ದ ಆರೋಪಿಗಳ ಬಂಧನ

ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಜಾಲ ಭೇದಿಸಿರುವ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಮೈಸೂರಿನ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೊಳೇನಹಳ್ಳಿಯ ನಯನ್‌ ಕುಮಾರ್‌, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್ ಕುಮಾರ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕರ, ಗ್ರಾಮದ ಟಿ.ಎಂ.ವೀರೇಶ್‌ ಬಂಧಿತರು, ಪ್ರಕರಣದ ಇತರ ಆರೋಪಿಗಳಾದ ಸುನಂದಾ ಮತ್ತು ಸಿದ್ದೇಶ್, ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ.

ಭ್ರೂಣ ಲಿಂಗ ಪತ್ತೆ ದಂಧೆ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಪಡೆದಿದ್ದ ಬೈಯ್ಯಪ್ಪನಹಳ್ಳಿ ಠಾಣೆ ಸಿಬ್ಬಂದಿ ಹಳೆ ಮದ್ರಾಸ್ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಕಾರಿನಲ್ಲಿ ಅದೇ ಮಾರ್ಗವಾಗಿ ಬಂದಿದ್ದರು. ಪೊಲೀಸರು ಅನುಮಾನ ದಿಂದ ಆ ಕಾರನ್ನು ತಡೆಯಲು ಮುಂದಾದಾಗ ಚಾಲಕ ವಾಹನ ನಿಲ್ಲಿಸಿರಲಿಲ್ಲ, ನಂತರ ಬೆನ್ನಟ್ಟಿ ತಡೆದು ವಿಚಾರಣೆ ನಡೆಸಿದಾಗ ಭ್ರೂಣ ಲಿಂಗ ಪತ್ತೆ ದಂಧೆಯ ಸಂಗತಿ ಬಯಲಾಗಿದೆ ಎಂದು ಹಿರಿಯ

ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿನಲ್ಲಿ ಗರ್ಭಿಣಿಯನ್ನು ಕೂರಿಸಿಕೊಂಡಿದ್ದ ಆರೋಪಿಗಳು, ಭ್ರೂಣ ಲಿಂಗ ಪತ್ತೆ ಮಾಡಿಸಲು ಮಂಡ್ಯಕ್ಕೆ ಹೋಗುತ್ತಿರುವುದಾಗಿ ಹೇಳಿದ್ದರು. ಸಿಬ್ಬಂದಿ ಈ ಸುಳಿವಿನ ಜಾಡು ಹಿಡಿದು ಮಂಡ್ಯ ಜಿಲ್ಲೆಯ ಹಾಡ್ಯ ಎಂಬಲ್ಲಿ ದಂಧೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದರು. ಆರೋಪಿಗಳು ಗರ್ಭಿಣಿಯರನ್ನು ಕರೆ ದೊಯ್ದು ಹಾಡ್ಯಾದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಮೂಲಕ ಭ್ರೂಣ ಲಿಂಗ ಪತ್ತೆ ಮಾಡಿಸುತ್ತಿದ್ದರು.

ಆರೋಪಿಗಳಿಂದ ಸ್ಕ್ಯಾನಿಂಗ್ ಉಪಕರಣ, 20 ಸಾವಿರ ರೂ. ನಗದು, ಕಾರು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

3ವರ್ಷದಿಂದ ದಂಧೆ: ಬಂಧಿತರು ಸುಮಾರು 3

ವರ್ಷಗಳಿಂದ ಭ್ರೂಣಲಿಂಗ ಪತ್ತೆ ದಂಧೆ ನಡೆಸು ತ್ತಿದ್ದರು. ದಂಧೆಯ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದ ಶಿವನಂಜೇಗೌಡ ಮತ್ತು ಸುನಂದಾ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಪರ್ಕ ಸಾಧಿಸಿ ಗರ್ಭಿಣಿಯರನ್ನು ಮಂಡ್ಯಕ್ಕೆ ಕರೆಸಿಕೊಂಡು ಭ್ರೂಣ ಲಿಂಗ ಪತ್ತೆ ಮಾಡಿಸುತ್ತಿದ್ದರು. ಮಗು ಹೆಣ್ಣೆಂದು ಗೊತ್ತಾದರೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಕ ಗರ್ಭಪಾತ ಮಾಡಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೀರೇಶ್, ತನ್ನ ಚಿಕ್ಕಪ್ಪ ನ ಡಾ.ಮಲ್ಲಿಕಾರ್ಜುನ್ ನೆರವಿನಿಂದ ಈ ದಂಧೆ ನಡೆಸುತ್ತಿದ್ದ, ಭ್ರೂಣ ಲಿಂಗ ಪತ್ತೆ ಪ್ರಕರಣ ಸಂಬಂಧ 2022ರಲ್ಲಿ ಮಲ್ಲಿಕಾರ್ಜುನ್‌ನನ್ನು ಬಂಧಿಸಲಾಗಿತ್ತು. ಬಳಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮಲ್ಲಿಕಾರ್ಜುನ್, ದಂಧೆಗೆ ಮತ್ತೆ ಕೈಜೋಡಿಸಿದ್ದ. ಆರೋಪಿಗಳು ಭ್ರೂಣ ಲಿಂಗ ಪತ್ತೆಗೆ 15 ಸಾವಿರದಿಂದ ಮ 20 ಸಾವಿರ ರೂ. ಪಡೆಯುತ್ತಿದ್ದರು ಎಂದು ಪೊಲೀಸ್ ಕರ ಮೂಲಗಳು ಹೇಳಿವೆ.

Related Posts