*ಓಂ ಶ್ರೀ ಗುರುಭ್ಯೋ ನಮಃ*
ಕರುನಾಡಿನ ಸಮಸ್ತ ಜನತೆಗೆ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಮ್ಮ ಕನ್ನಡ ನಾಡು, ಶ್ರೀಗಂಧದ ಬೀಡು, ಕನ್ನಡಾಂಬೆಯ ನಾಡು, ಹಚ್ಚಹಸುರಿನ ಸುಂದರ ಬೆಟ್ಟಗಳ ಗೂಡು, ಕಾವೇರಿ, ತುಂಗಭದ್ರೆ ನದಿಗಳು ಹರಿಯುವ ಸಾಧು-ಸಂತರು, ದಾಸರು, ಶಿವ-ಶರಣರು ಕವಿ-ಸಾಹಿತಿಗಳ ಕಲ್ಪನೆಯಲ್ಲಿ ಮಿನುಗುತ್ತಿರುವ ನಮ್ಮ ಕನ್ನಡ ನಾಡು ಹೆಸರಿನಲ್ಲಿ ಒಂದು ಅದ್ಭುತ ಚೈತನ್ಯ ಶಕ್ತಿ ಅಡಗಿದೆ. ಇಂತಹ ನಾಡಲ್ಲಿ ಹುಟ್ಟಿರುವುದು ನಮ್ಮ ಅದೃಷ್ಟವೇ ಸರಿ. ನವಂಬರ್ ಒಂದರಂದು ಅತ್ಯಂತ ಸಡಗರ ಸಂಭ್ರಮದಿಂದ ಎಲ್ಲಾ ಜಾತಿ ಮತ ಧರ್ಮಗಳ ಜನರು ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ನಾವು ಕೇವಲ ನವಂಬರ್ ಕನ್ನಡಿಗರಾಗದೆ *ನಂಬರ್ ಒನ್ ಕನ್ನಡಿಗ*ರಾಗಿರೋಣ. ನಾವು ಕನ್ನಡ ನಾಡಿನ ಜವಾಬ್ದಾರಿ ಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ಪ್ರತಿನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಕನ್ನಡ ನುಡಿ ಸಂಸ್ಕೃತಿ ಕರುನಾಡಿನ ಪರಂಪರೆಯನ್ನು ಉಳಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ಪ್ರಮಾಣ ಮಾಡೋಣ. ಬನ್ನಿ ನಾವೆಲ್ಲರೂ ಶ್ರೀಗಂಧದ ಗುಡಿಯನ್ನು ಉಳಿಸಿ, ಚಂದದ ನುಡಿಯನ್ನು ಬಳಸಿ, ಕನ್ನಡಕ್ಕಾಗಿ ಪ್ರತಿ ನಿಮಿಷವು ಮಿಡಿದು ಪ್ರತಿಯೊಬ್ಬರ ಮನೆಮನೆಗಳಲ್ಲಿ ಕನ್ನಡ ದೀಪವನ್ನು ಹಚ್ಚೋಣ.
*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*
ಶ್ರೀಮತಿ ಶೋಭಾಮುರುಳಿ ಕೃಷ್ಣ
ಬೆಂಗಳೂರು