ಭಾರತದ ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಸಮರ್ಪಣೆ, ಸಹಾನುಭೂತಿ ಮತ್ತು ಪರಿಶ್ರಮ ಬ್ರಿಟಿನ್ ಮೂಲದ ಅನ್ನಿ ರೈಟ್ ಭಾರತದ ಅತ್ಯಂತ ಪ್ರಮುಖ ವನ್ಯಜೀವಿ ಸಂರಕ್ಷಕರ ಕೊಡುಗೆ ಅಪಾರ.

ಬ್ರಿಟಿನ್ ಮೂಲದ ಅನ್ನಿ ರೈಟ್ ಭಾರತದ ಅತ್ಯಂತ ಪ್ರಮುಖ ವನ್ಯಜೀವಿ ಸಂರಕ್ಷಕರಲ್ಲಿ ಒಬ್ಬರೆನಿಸಿದ್ದಾರೆ. ಬ್ರಿಟನ್ ಜೀವಾದರೂ ಭಾರತವನ್ನು ತನ್ನ ತವರಿನಂತೆ ಪ್ರೀತಿಸಿ, ಇಲ್ಲಿನ ವನ್ಯಜೀವಿಗಳ ಸಂರಕ್ಷಣೆಗಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಡಯತ್ತಾರೆ.ಮಧ್ಯ ಪ್ರಾಂತ್ಯಗಳ ಕಾಡುಗಳಲ್ಲಿ ಪ್ರಾರಂಭವಾದ ಇವರ ವನ್ಯಜೀವಿ ಕ್ಷೇತ್ರದ ಪ್ರಯಾಣ, ಭಾರತದ ವಿವಿಧ ಅರಣ್ಯ ಪ್ರದೇಶದ ಸಸ್ಯ ಮತ್ತು ವನ್ಯಜೀವಿ ಸಂಪತ್ತಿನ ಆಳವಾದ ಜ್ಞಾನ ಪಡೆಯುವ ತನಕ, ಇಲ್ಲಿನ ಕಾಡು ಹಾಗೂ ಕಾಡುಪ್ರಾಣಿಗಳ ಸಂರಕ್ಷಣೆಗೆ ಕಾನೂನಾತ್ಮಕ ಬಲ ನೀಡುವ ತನಕ ನಿಲ್ಲಲಿಲ್ಲ.ಆಕೆಯ ಕ್ಷೇತ್ರಮಟ್ಟದ ಸಂರಕ್ಷಣಾ ಪ್ರಯತ್ನಗಳು 1966-67ರ ಬಿಹಾರದ ಮಹಾ ಕಾಮದ ಸಮಯದಲ್ಲಿ ಕೋಲ್ಕತ್ತಾದಲ್ಲಿ ಹುಲಿ, ಚಿರತೆಯಂತಹ ದೊಡ್ಡ ಮಾರ್ಜಾಲದ ಪ್ರಾಣಿಗಳ ಚರ್ಮದ ಸ್ಮಗ್ಲಿಂಗ್ ವನ್ನು ಪತ್ತೆಹಚ್ಚಿ ತಡೆಯುವ ಮೂಲಕ ಪ್ರಾರಂಭವಾಗುತ್ತವೆ.ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾದ ವನ್ಯಜೀವಿಗಳ ಚರ್ಮದ ವ್ಯಾಪಾರದ ಕುರಿತು ಅವರ ಪ್ರಭಾವಶಾಲಿ ಲೇಖನವು 1970ರ ದಶಕದಲ್ಲಿ ಭಾರತದಲ್ಲಿ ಹುಲಿ ಬೇಟೆಯನಿಷೇಧಕ್ಕೆ ಕಾರಣವಾಯಿತು.ಅನ್ನಿ ವಕಾಲತ್ತು ಅಲ್ಲಿಗೇ ನಿಲ್ಲಲಿಲ್ಲ. ‘ಪ್ರಾಜೆಕ್ಟ್ ಟೈಗರ್’ ಮೂಲಕ ಭಾರತದಲ್ಲಿ ಮೊದಲ ಹುಲಿ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಕರಡು ರಚನೆಗೆ ಅನ್ನಿ ಕೊಡುಗೆ ನೀಡಿದರು ಮತ್ತು ಡಾಲ್ಮಾ ವನ್ಯಜೀವಿ ಅಭಯಾರಣ್ಯ, ಬಲ್ಪಾಕ್ರಂ ರಾಷ್ಟ್ರೀಯ ಉದ್ಯಾನವನ ಮತ್ತು ನಿಯೋರಾ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ವಿವಿಧ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಲು ಸಹಾಯ ಮಾಡಿದರು.ಅನ್ನಿ ಅವರು 94 ನೇ ವಯಸ್ಸಿನಲ್ಲಿ ಅಕ್ಟೋಬರ್ 4, 2023 ರಂದು ನಿಧನರಾದರು. ಭಾರತದ ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಅವರ ಸಮರ್ಪಣೆ, ಸಹಾನುಭೂತಿ ಮತ್ತು ಪರಿಶ್ರಮ ಬಹಳಷ್ಟು ಕೊಡುಗೆ ನೀಡಿದೆ.Thanks toThe better india

Related Posts