ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ (ಲ.) ಬೆಂಗಳೂರು, ನಗರ್ತರ ಪೇಟೆOcs: 30.10.2023ಪ್ರಕಟಣೆ:ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಷ್ಠಿತ ಶ್ರೀ ಗಂಗಾ ವಿದ್ಯಾಸಿರಿ ಯೋಜನೆ ಅನುಷ್ಠಾನವನ್ನು ಪ್ರಶಸ್ತಿ ವರ್ಷ 2023 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಆದರಂತೆ: ರಾಜ್ಯದ 30 ಜಿಲ್ಲೆಗಳಿಂದ ಆರ್ಥಿಕವಾಗಿ ನೆರವಿನ ಆವಶ್ಯಕತೆ ಇರುವ ಪ್ರತಿ ಜಿಲ್ಲೆಯಿಂದ ಗಂಗಾಮತ ಕೋಲಿ, ಕಬ್ಬಲಿಗೆ/ ಸುಣಗಾರ/ ಅಂಬಿಗ ಕಛೇರಿ/ ಬೆಸ್ತರು, ಮೊಗವೀರ ಮತ್ತಿತರೇ ಗಂಗಾಮತ ಪರ್ಯಾಯ ಉಪ ಪಂಗಡಗಳಿಗೆ ಸೇರಿದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಯಂತೆ ಆರ್ಥಿಕವಾಗಿ ಪುರಸ್ಕರಿಸಲು ಉದ್ದೇಶಿಸಲಾಗಿದೆ. MBBS/ DENTAL/ BAMS/ BE/ 85e.agri ಓದುತ್ತಿರುವ ವಿದ್ಯಾರ್ಥಿಗಳು ಮತ್ತು KAS IAS ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಆರ್ಥಿಕ ಪುರಸ್ಕಾರದ ಪ್ರಯೋಜನ ಪಡೆಯಬಹುದಾಗಿದೆ. ಪುರಸ್ಕಾರದ ಹಣವನ್ನು ಸಂಘದಿಂದ ಚೆಕ್ ನೇರ ವರ್ಗಾವಣೆ ಮೂಲಕ ಸಂದಾಯ ಮಾಡಲಾಗುವುದು. ಈ ಅರ್ಹ ಅಭ್ಯರ್ಥಿಗಳು ಆಯಾ ಜಿಲ್ಲೆಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳಿಂದ ಆರ್ಥಿಕವಾಗಿ ಬಡತನದ ಬಗ್ಗೆ ದೃಡೀಕರಣ ಪಡೆದು ದಿನಾಂಕ: 15.11.2023 ರೊಳಗೆ ಈ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಬೇಕು. ಈ ಪುರಸ್ಕಾರ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ತಾವು ಓದುತ್ತಿರುವ ಪದವಿ ಬಗ್ಗೆ ದೃಢೀಕರಣ ಪತ್ರವನ್ನು ಓದುತ್ತಿರುವ ಸಂಸ್ಥೆಯಿಂದ ಪಡೆದು ವಾಸಸ್ಥಳದ ವಿವರ, ಬಿ.ಪಿ.ಎಲ್. ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರದ ಪ್ರತಿಗಳೊಂದಿಗೆ ಸಲ್ಲಿಸಬೇಕು. ತಡವಾಗಿ ಬಂದ ಮನವಿಗಳನ್ನು ಸ್ವೀಕರಿಸುವುದಿಲ್ಲ.ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೇರ್ ಆಫ್
: ಕರ್ನಾಟಕ ರಾಜ್ಯ ಗಂಗಾಮತ ಸಂಘದ ಕಛೇರಿ, ರಾಮಶೆಟ್ಟಿ ಗಲ್ಲಿ, ಓ.ಟಿ.ಸಿ. ರಸ್ತೆ, ನಗರ್ತ ಪೇಟೆ, Lorida-560002ವಾರ್ಡನ್: ರೇವಣ ಸಿದ್ದಪ್ಪ 6363811852ಶಿವಮೊಗ್ಗ ಜಿಲ್ಲಾಗಂಗಾಮತ ಸಂಘ, ಬಾಪೂಜಿನಗರ ಮುಖ್ಯ ರಸ್ತೆ, ಶಿವಮೊಗ್ಗ 21 9844784986