ಅಹಿಂಸೆ ಅಮೃತ ಬಿಂದು… ಪರಮ ಪೂಜ್ಯ ಸೀದ್ದೆಶ್ವರ ಸ್ವಾಮಿಜಿ

🌷ಶ್ರೀವಾಣಿ 🌷
ಋಷಿ ಮುನಿಗಳೂ ಸತ್ಯದರ್ಶನದ, ಬ್ರಹ್ಮಾನುಭವದ ಅಸಂಖ್ಯ ಮಂತ್ರಗಳನ್ನು ಸಾವಿರಾರು ವರುಷಗಳ ಹಿಂದೆಯೇ ಈ ದೇಶದಲ್ಲಿ ಹರಿಸಿದರು. ಬುದ್ಧನು ನಿರ್ವಾಣದ ನುಡಿಗಳನ್ನು ಅಡಿಗಡಿಗೆ ಈ ನಾಡಿನಲ್ಲಿ ಹರಡಿದ. ಮಹಾವೀರನು ಅಹಿಂಸೆಯ ಅಮೃತ ಬಿಂದುಗಳನ್ನು ಸುರಿಸಿದನು. ಚೈತನ್ಯ ಮಹಾಪ್ರಭುಗಳಂತೂ ದೇಶದ ತುಂಬಾ ಹೋದ ಹೋದಲ್ಲಿ ಭಕ್ತಿಯ ಕುಸುಮಗಳನ್ನು ಸೂರಾಡಿದರು. ಮೀರಾದೇವಿಯವರು ಮಧುರಾ ಭಕ್ತಿಯ ಗೀತೆಯನ್ನು ಗಂಗೆಯಾಗಿ ನಾಡಿನಲ್ಲಿ ಹರಿಸಿಬಿಟ್ಟರು. ದಕ್ಷಿಣದಲ್ಲಿ ಸಂತರು, ಶರಣರು, ದಾಸರು, ಆಳ್ವಾರರು ಆತ್ಮಾನುಭವದ ಪದ-ಪದ್ಯಗಳ, ವಚನ-ಅಭಂಗಗಳ ಮಳೆಗರೆದರು. ಅಂಥ ಅನುಭಾವಿಗಳ ನುಡಿಗಳು ನಮ್ಮನ್ನು ಕತ್ತಲೆಯಿಂದ ಬೆಳಕಿನತ್ತ, ಅಸತ್ಯದಿಂದ ಸತ್ಯದತ್ತ, ಮೃತ್ಯುವಿನಿಂದ ಅಮೃತದತ್ತ ಕರೆದೊಯ್ಯುತ್ತವೆ. ಅಂಥ ಸಂತ-ಮಹಂತರ ಉಪದೇಶಾಮೃತವನ್ನು ಮನಸಾರೆ ಕೇಳುವುದೇ ಆನಂದ ಯೋಗದ ಪ್ರಥಮ ಸಾಧನ.
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆನಂದಯೋಗ ಪುಸ್ತಕದಿಂದ ಪುಟ ೧೯.

Related Posts