ತಾಯಿಯ ವಶದಲ್ಲಿ ಇದ್ದ ಮಗುವನ್ನು ತಂದೆ ಕರೆದುಕೊಂಡು ಹೋದರೆ ಅದನ್ನು ಅಪಹರಣ ಎಂದು ಹೇಳಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗುರ ಪೀಠ ಮಹತ್ವದ ತೀರ್ಪು ನೀಡಿದೆ.🌹🌹🌹🙏
ಪರಿತ್ಯಕ್ತ ಪತ್ನಿಯ ಆರೈಕೆ ಮತ್ತು ಪೋಷಣೆಯಲ್ಲಿ ಇದ್ದ ಮೂರು ವರ್ಷದ ಮಗುವನ್ನು ಕರೆದೊಯ್ದ ಆರೋಪದ ಮೇಲೆ ಪತಿಯ ವಿರುದ್ದ ಪತ್ನಿ ಅಪಹರಣ ಪ್ರಕರಣದ ದೂರನ್ನು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 363 (ಅಪಹರಣ)ರ ಅಡಿ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಕೋರಿ ಅರ್ಜಿದಾರರಾದ ಆರೋಪಿ ಆಶೀಶ್ ಅನಿಲ್ ಕುಮಾರ್ ಮುಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿನಯ್ ಜೋಷಿ ಮತ್ತು ನ್ಯಾ. ವಾಲ್ಮೀಕಿ ಎಸ್.ಎ. ಮೆನೆಜೆಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅರ್ಜಿಯನ್ನು ಪುರಸ್ಕರಿಸಿದೆ.
ವಿಭಾಗೀಯ ಪೀಠ ತೀರ್ಪಿನಲ್ಲಿ ಹೇಳಿದೆ.
ಅಲ್ಲದೆ, ಯಾವುದೇ ನ್ಯಾಯಾಲಯ ಅಪ್ರಾಪ್ತ ಮಗುವನ್ನು ಕಾನೂನುಬದ್ಧವಾಗಿ ತಾಯಿಯ ವಶಕ್ಕೆ ನೀಡಿದ ಪ್ರಕರಣವಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿದೆ.
ಪ್ರಕರಣ: ಆಶೀಶ್ ಅನಿಲ್ ಕುಮಾರ್ ಮುಳೆ Vs ಮಹಾರಾಷ್ಟ್ರ ಬಾಂಬೆ ಹೈಕೋರ್ಟ್(ನಾಗುರ ಪೀಠ)