ನನ್ನ ಜೀವನ ದೃಷ್ಠಿಯನ್ನೇ ಬದಲಿಸಿದ ಆ 6 ಮಾತುಗಳು,
- ತುಷಾರ್ ರಾಜೇಶ್
- ನಾವು ಬೇರೆಯವರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯಾ…?
- ಪೂರ್ಣಚಂದ್ರ ತೇಜಸ್ವಿ
- ನಾವು ಯಾವ ರೀತಿ ಬದುಕುದಿಲ್ಲವೋ, ಆ ರೀತಿ ಬೇರೆಯವರೂ ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ.
- ಪೂರ್ಣಚಂದ್ರ ತೇಜಸ್ವಿ
- ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ.
- ಪೂರ್ಣಚಂದ್ರ ತೇಜಸ್ವಿ
- ಸರಿಯಾಗಿ ಕಣ್ಣು ಬಿಟ್ಟು ನೋಡೋದನ್ನ ಕಲೀಬೇಕು ನಾವು.
- ಪೂರ್ಣಚಂದ್ರ ತೇಜಸ್ವಿ
- ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡ ಮಟ್ಟ ಕೀಳ ಬನ್ನಿ.
- ಕುವೆಂಪು
- ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ.
(ವಿಶ್ವಮಾನವ ಸಂದೇಶದ ಮೊದಲ ಸಾಲುಗಳು, ಕುವೆಂಪು)