*ಡಿಸೆಂಬರ್ 31ರ ಆಚರಣೆ*
ನಮ್ಮ ದೇಶ ಭಾರತ ನಮ್ಮ ಧರ್ಮ ಹಿಂದೂ ಸನಾತನ ಧರ್ಮ ನಮ್ಮ ಮಕ್ಕಳು ಭವಿಷ್ಯ ಭಾರತದ ಕನಸುಗಳು ಮತ್ತು ಅತ್ಯುನ್ನತ ಪ್ರಜೆಗಳು ಮಕ್ಕಳನ್ನು ದೇಶದ ಆಸ್ತಿಯಂದೇ ಹೇಳುತ್ತೇವೆ. ಆದರೆ ಇತ್ತೀಚೆಗೆ ಟಿವಿ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿರುವ ಹೆಣ್ಣು ಮಕ್ಕಳ ಮೇಲಿನ ಹಲ್ಲೆಗಳು ಅತ್ಯಾಚಾರಗಳು ದರೋಡೆಗಳು ನಮ್ಮನ್ನು ದಿಗ್ ಮೂಡರನ್ನಾಗಿ ಮಾಡಿದೆ.

ನಾವು ಮಾನಸಿಕವಾಗಿ ಭಯದ ನಡುವೆ ಜೀವನ ಸಾಗಿಸುತ್ತಿದ್ದೇವೆ ಅನ್ನಿಸುತ್ತದೆ. ನಮ್ಮ ಸಂಸ್ಕಾರ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ತುಲನಾತ್ಮಕವಾಗಿ ಚಿಂತನೆ ಮಾಡಬೇಕಿದೆ. ನಮ್ಮ ಸಂಪ್ರದಾಯ ಆಚರಣೆಗಳ ಬಗ್ಗೆ ಒಂದಿಷ್ಟು ಅವಲೋಕಿಸಬೇಕಿದೆ. ಮಕ್ಕಳು ಸಾಗಬೇಕಾದ ಭವಿಷ್ಯದ ಹಾದಿ ತಪ್ಪಾದಲ್ಲಿ ಅದನ್ನು ತಿದ್ದುವುದು ಮತ್ತು ಸಕಾರಾತ್ಮಕ ಚಿಂತೆಗಳನ್ನು ಬೆಳೆಸಬೇಕಾದದ್ದು ಹೆತ್ತವರ ಕರ್ತವ್ಯ.

ಪ್ರತಿಯೊಂದು ಹಬ್ಬ ಹರಿದಿನಗಳಿಗೆ ತನ್ನದೇ ಆದ ಹಿನ್ನೆಲೆಗಳಿಗೆ ಮೋಜು-ಮಸ್ತಿಗಾಗಿ ಇರುವ ಆಚರಣೆಗಳ ಬಗ್ಗೆ ಇಂದು ಯೋಚಿಸಬೇಕಾದ ಸಂದರ್ಭಗಳು ಇವೆ. ಅದರಲ್ಲಿ ಡಿಸೆಂಬರ್ 31ರ ರಾತ್ರಿ ಕೂಡ ಒಂದು.
ಡಿಸೆಂಬರ್ 31ರ ರಾತ್ರಿ ಹೊಸ ವರ್ಷ ಆಚರಣೆ ಯ ಸಂದರ್ಭದಲ್ಲಿ ಯುವಕ ಯುವತಿಯರು ಒಂದೆಡೆ ಸೇರಿಕೊಂಡು ಹರೇ ಬರೆ ಬಟ್ಟೆ ಧರಿಸಿ ಕುತ್ತಿಗೆ ಮಟ್ಟ ಕುಡಿದು ಮನಸಾ ಇಚ್ಛೆ ಕುಣಿದು ಕುಪ್ಪಳಿಸಿ ಮಿತಿ ಮೀರಿದ ವರ್ತನೆ ಮಾಡುತ್ತಾ ನಮ್ಮ ಭರತ ಖಂಡದ ಸಂಸ್ಕೃತಿ ಸಂಸ್ಕಾರಗಳನ್ನು ಹಾಳು ಮಾಡುತ್ತಿರುವುದು ಶೋಚನೀಯ ಸಂಗತಿಯೇ ಸರಿ.

ಯುವಕ ಯುವತಿಯರು ಹೊರದೇಶದ ಸಂಸ್ಕೃತಿಗೆ ಮಾರು ಹೋಗಿರುವುದು ಇದಕ್ಕೆಲ್ಲ ಮೂಲ ಕಾರಣ ಎನ್ನಬಹುದು. ಮತ್ತು ಹೊರದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ, ದುಡಿಯಲು ವಲಸೆ ಬಂದಿರುವವರ ಜೊತೆ ಅತಿಯಾದ ಒಡನಾಟದಿಂದ ಅವರ ಆಚಾರ-ವಿಚಾರಗಳನ್ನು ಅನುಸರಿಸುತ್ತಿದ್ದಾರೆಯೇ ವಿನಃ ನಮ್ಮ ದೇಶದ, ರಾಜ್ಯದ ಸುಸಂಸ್ಕೃತಿಯನ್ನು ಅವರಿಗೆ ಧಾರೆ ಎರೆಯುತ್ತಿಲ್ಲ. ಕಾರಣ ನಮ್ಮ ನಮ್ಮ ಮನೆಗಳಲ್ಲಿ ಹಿರಿಯರಿಲ್ಲದೆ ಅನಾಥವಾಗಿರುವ ಕುಟುಂಬಗಳು ಗಂಡು ಹೆಣ್ಣು ಎಂಬ ಭೇದವಿಲ್ಲದೆ ಮಧ್ಯಪಾನ ಮತ್ತು ಮಾದಕ ವ್ಯಸನಿಗಳಾಗಿ ಮೈಮೇಲೆ ಪ್ರಜ್ಞೆ ಇಲ್ಲದೆ ಮರ್ಯಾದೆ ಗೆಟ್ಟ ರೀತಿಯ ವರ್ಷಾಚರಣೆಗಳು ನಮಗೆ ಬೇಕಾಗಿಲ್ಲ, ಪಶ್ಚಿಮಾತ್ಯರ ಸಂಸ್ಕೃತಿಯ ಆಚರಣೆಗಳಿಂದ ನಮ್ಮ ಸಂಸ್ಕೃತಿ ಸಂಪ್ರದಾಯ ಆಚಾರ-ವಿಚಾರಗಳು ಮತ್ತು ಉಡುಗೆ ತೊಡುಗೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅದಕ್ಕಾಗಿ ನಮ್ಮ ಮಕ್ಕಳನ್ನು ಬಲಿಕೊಡುವುದು ಬೇಡ ಸಂಸ್ಕೃತಿ ಸಂಸ್ಕಾರಗಳು ನಮ್ಮ *ಹೃದಯ*ವಿದ್ದಂತೆ ಹೃದಯವನ್ನು ಜೋಪಾನ ಮಾಡುವಂತೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಜೋಪಾನ ಮಾಡಬೇಕಾಗಿದೆ. ನಮ್ಮ ನಮ್ಮ ಮನೆಗಳಲ್ಲಿ ಮಕ್ಕಳಿಗೆ ಇದರ ಅರಿವನ್ನು ಮೂಡಿಸಿ ಆಗುವ ದುಷ್ಪರಿಣಾಮಗಳನ್ನು ತಪ್ಪಿಸುವ ಜವಾಬ್ದಾರಿ ನಮ್ಮದು. ಆಗುವ ಅನಾಹುತಕ್ಕೆಲ್ಲ ಸರ್ಕಾರ, ಜನಪ್ರತಿನಿಧಿಗಳು, ಅಬಕಾರಿ ಇಲಾಖೆಯವರು, ಆರಕ್ಷಕರು ಗಳನ್ನು ದೂರವ ಬದಲು ಪ್ರಜ್ಞಾವಂತ ನಾಗರೀಕರಾದ ನಾವು ನೀವೆಲ್ಲರೂ ಚಿಂತನೆ ಮಾಡಿ ಅಸಭ್ಯ ರೀತಿಯ ವರ್ಷಾಚರಣೆ ಗಳನ್ನು ನಿರಾಕರಿಸಿ ಇದರಿಂದ ಸಮಾಜದ ಮೇಲೆ ಆಗುವ ತೊಂದರೆಗಳನ್ನು ತಡೆದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಸಮಾಜದ ಬಗ್ಗೆ ಕಾಳಜಿ ಇರುವ ನಾವು ನೀವುಗಳೆಲ್ಲರೂ ಟೊಂಕ ಕಟ್ಟಿ ನಿಲ್ಲಬೇಕಾಗಿದೆ.
ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತದೆ ಅಷ್ಟೇ ಅದಕ್ಕೆ ಬೆಲೆ ಇರುವುದಿಲ್ಲ ಮಕ್ಕಳಿಗೆ ಹೆತ್ತವರ ಪರಿಶ್ರಮದ ಬೆಲೆಯನ್ನು ತಿಳಿಸದಿದ್ದರೆ ಮುಂದೊಂದು ದಿನ ಹಾದಿ ಬೀದಿಯಲ್ಲಿ ಅವರಿಗಾಗಿ ಮಾಡಿದ ತ್ಯಾಗಗಳನ್ನು ನೆನೆಸಿಕೊಂಡು ಹುಚ್ಚರಾಗಿ ಅಥವಾ ಮನೋರೋಗಿಗಳಾಗಿ ಅಲೆದಾಡುವ ಪರಿಸ್ಥಿತಿಯನ್ನು ಎದುರಿಸಬೇಕಾದೀತು. ಕೆಟ್ಟ ರೀತಿಯ ಆಲೋಚನೆಗಳನ್ನು ದೂರ ಮಾಡಿ ನಮ್ಮ ಮಕ್ಕಳನ್ನು (ಸುಶಿಕ್ಷಿತ) ಸುಸಂಸ್ಕೃತರನ್ನಾಗಿಸೋಣ ನಮ್ಮ ನಮ್ಮ ದುಡಿಮೆಗನುಸಾರವಾಗಿ ಸುಖವನ್ನೇ ಪಡೋಣ.

ಲೇಖನ- ಶ್ರೀಮತಿ ಶೋಭಾಮುರುಳಿಕೃಷ್ಣ
ಬೆಂಗಳೂರು

ಲೇಖನ- ಶ್ರೀಮತಿ ಶೋಭಾಮುರುಳಿಕೃಷ್ಣ
ಬೆಂಗಳೂರು

Related Posts