Shoba: ಕರುನಾಡ ಸಿರಿ ಸೇವಾ ಪ್ರಶಸ್ತಿ ಪ್ರಧಾನ | ಡಾ. ಎಚ್.ಎಲ್.ಪುಷ್ಪ ಹೇಳಿಕೆ
*ಅಶಕ್ತರಿಗೆ ಆಸರೆಯಾಗಿ ಸಂಘಟನೆ ಬೆಳೆಸಿ*
*ಬೆಂಗಳೂರು :* ಸಮಾಜದಲ್ಲಿ ನೈಜತೆಯ ಆಧಾರದ ಮೇಲೆ ಮೌಲ್ಯಗಳನ್ನು ಇಟ್ಟುಕೊಂಡು ಸಂಘ ಸಂಸ್ಥೆಗಳು ನಿರಂತರವಾಗಿ ಕೆಲಸ ನಿರ್ವಹಿಸಬೇಕಾಗಿದೆ. ನೊಂದವರಿಗೆ, ಅಬಲರಿಗೆ, ನಿರಾಶ್ರಿತರಿಗೆ, ಅಶಕ್ತರಿಗೆ ಆಸರೆಯಾಗಿ ಸಂಘ ಸಂಸ್ಥೆಗಳು ನಿಲ್ಲಬೇಕು ಎಂದು ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪ ಕರೆ ನೀಡಿದರು.
ಮಹಾನಗರದ ನಯನ ಸಭಾಂಗಣದಲ್ಲಿ ಡಿ.13 ರಂದು ಜ್ಞಾನಸ್ಪಂದನ ಚಾರಿಟಬಲ್ ಟ್ರಸ್ಟ್ ವತಿಯಿಂದ ಜರುಗಿದ 68ನೇ ಕನ್ನಡ ರಾಜ್ಯೋತ್ಸವ ಮತ್ತು ಸುವರ್ಣ ಕರ್ನಾಟಕ ಸಂಭ್ರಮೋತ್ಸವದ ನಿಮಿತ್ತವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾನ್ವಿತರಿಗೆ *ಕರುನಾಡ ಸಿರಿ ಸೇವಾ ಪ್ರಶಸ್ತಿ* ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಂತ್ವನ ಎನ್ನುವುದು ನೊಂದವರಿಗೆ ಪ್ರೀತಿಯಿಂದ ಕೊಡುವ ಸ್ಪಂದನೆ, ಕಣ್ಣೀರು ಹಾಕುವುದಲ್ಲ. ಕಣ್ಣು ಇರುವುದು ಕನಸುಗಳನ್ನು ಕಾಣಲು ಆ ಕನಸುಗಳನ್ನು ನನಸು ಮಾಡಲು ನಿರಂತರ ಶ್ರಮ ಅವಶ್ಯಕ ಎಂದರು.
ಮುಖ್ಯ ಅತಿಥಿಯಾಗಿದ್ದ ಹೃದಯ ರೋಗ ತಜ್ಞೆ ಡಾ, ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡಿ, ಸಂಘ-ಸಂಸ್ಥೆಗಳು ಬೆಳೆಯಬೇಕಾದರೆ ಸೇವಾ ಮನೋಭಾವ ಇರುವಂತಹ ದಾನಿಗಳು ಜೊತೆಯಾಗಿ ನಿಲ್ಲಬೇಕು ಎಂದರು. ರಾಜ್ಯ ನೇಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಎಂ ಡಿ ಲಕ್ಷ್ಮಿ ನಾರಾಯಣ್ ಅವರು,
ಈ ದೇಶದಲ್ಲಿ ಮೊಟ್ಟ ಮೊದಲು ಬುದ್ಧ ಮಹಿಳೆಯರಿಗೆ ತನ್ನ ಸಂಘದಲ್ಲಿ ಸ್ಥಾನಮಾನ ಕೊಟ್ಟರು. ನಂತರ ಶರಣರು ಮಹಿಳೆಯರಿಗೆ ವಿವಿಧ ಆಯಾಮಗಳಲ್ಲಿ ಸ್ವಾತಂತ್ರ ಕೊಟ್ಟರು. ಕಾನೂನಿನಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಆಗಬೇಕು. ಪ್ರಕೃತಿಯ ದೃಷ್ಟಿಯಲ್ಲಿ ಗಂಡು-ಹೆಣ್ಣು ಎರಡು ಕಣ್ಣುಗಳಿದ್ದಂತೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸಂಗಮೇಶ್ ತಿಳಿಸಿದರು.
ಇಂತಹ ಸಂಘ ಸಂಸ್ಥೆಗಳು ಉತ್ತಮ ಕಾರ್ಯವನ್ನು ನಿರ್ವಹಿಸಲು ಎಲ್ಲರೂ ನೆರವಾದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ವಕೀಲರಾದ ಮಂಜುನಾಥ್ ತಿಳಿಸಿದರು.
ಇತಿಹಾಸ ಸಾಕ್ಷ ಚಿತ್ರ ನಿರ್ಮಾಪಕ ಆಗುಂಬೆ ನಟರಾಜ್ ರವರು ಕೃಷ್ಣಮೂರ್ತಿರವರು ದಿಲ್ಸೇ ದಿಲೀಪ್ ರವರು ತಮ್ಮ ವಿಚಾರಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷೆ ಸಾವಿತ್ರಮ್ಮನವರು ಟ್ರಸ್ಟ್ ಉದ್ಘಾಟನೆಯಾಗಲು ಮತ್ತು ಈ ಸಮಾರಂಭಕ್ಕೆ ಸಹಾಯ ಸಹಕಾರ ನೀಡಿದವರಿಗೆ ಧನ್ಯತೆಯನ್ನು ಅರ್ಪಿಸಿ ನಿಮ್ಮೆಲ್ಲರ ಸಹಕಾರದಿಂದ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಮಣ್ಣ ಹಂಪರಗುಂದಿ, ಎ,ಪಿ ನಾಗರಾಜ್, ಆಗುಂಬೆ ನಟರಾಜ್, ಲಕ್ಷ್ಮಿಕಾಂತ್ ಜೋಳದ, ರವಿಕುಮಾರ್, ವೆಂಕಟೇಶ್, ಮನೀಶ್, ಮಂಜುಳಾಕ್ಷಿ, ಪರಮ್ಮ ಕುಮಾರಿ ಸಾತ್ವಿಕ್ ರಾಜೇಶ್ ಮತ್ತು ನಾಗತಿಹಳ್ಳಿ ಮಂಜುನಾಥ್ ರವರುಗಳಿಗೆ *ಕರುನಾಡ ಸಿರಿ ಸೇವಾ* ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ರಾಮಾಚಾರ್, ವಸ್ತ್ರದಾತ ಮಾಸಪತ್ರಿಕೆ ಸಂಪಾದಕ ರಾಮಸ್ವಾಮಿ, ಸಾಹಿತಿ ಮತ್ತು ಕಿರುತೆರೆ ಕಲಾವಿದ ರವಿ ಶಿಕಾರಿಪುರ, ಡಾ, ಶೈನಿ ಗ್ರೇಸಿ, ಮೈಕೋ ಶಿವು ನಿರ್ದೇಶಕ ಪಿಳ್ಳೆಗೌಡ್ರು, ಮುರುಳಿಕೃಷ್ಣರವರು ಕಾಂಗ್ರೆಸ್ ಮುಖಂಡರಾದ ಬಸವರಾಜ ಕೋಕಟನೂರ, ಶ್ರೀಧರ್, ಲಲಿತಮ್ಮ, ದಾನಮ್ಮ, ತಾರಾಮತಿ ವಾಸಣ್ಣವರ, ಹೊಸದುರ್ಗದ ಡಿ,ಟಿ ಚಂದ್ರಶೇಖರ್, ಪತ್ರಕರ್ತ ವಿನಯ್ ಕುಮಾರ್ ರವರುಗಳು ಆಗಮಿಸಿ ಶೋಭೆ ತಂದರು.
ಸಂಗೀತ ನಿರ್ದೇಶಕ, ಗಾಯಕ ಸುರೇಶ್ ನಾಡಗೀತೆ ಹಾಡಿದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಶಂಕರ್ ಹೂಗಾರ ಪ್ರಸ್ತಾವಿತವಾಗಿ ಮಾತನಾಡಿದರು. ಟ್ರಸ್ಟಿ ಶೋಭಾ ಮುರುಳಿಕೃಷ್ಣ ನಿರೂಪಿಸಿದರು. ಕಾರ್ಯದರ್ಶಿ ಕಾಚಾಪುರ ರಂಗಪ್ಪ ಸ್ವಾಗತಿಸಿದರು.
ನಂತರ ನೀಲಿ ಚಲನಚಿತ್ರ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಎಲ್ಲರಿಗೂ ಸಂತಸ ನೀಡಿತು.
ವರದಿ – ಶ್ರೀಮತಿ ಶೋಭಾ ಮುರುಳಿ ಕೃಷ್ಣ ಬೆಂಗಳೂರು
ಅಶಕ್ತರಿಗೆ ಆಸರೆಯಾಗಿ – ಡಾ, ಎಚ್ ಎಲ್ ಪುಷ್ಪ
ಸಮಾಜದಲ್ಲಿ ನೈಜತೆಯ ಆಧಾರದ ಮೇಲೆ ಮೌಲ್ಯಗಳನ್ನು ಇಟ್ಟುಕೊಂಡು ಸಂಘ ಸಂಸ್ಥೆಗಳು ನಿರಂತರವಾಗಿ ಕೆಲಸ ನಿರ್ವಹಿಸಬೇಕಾಗಿದೆ. ನೊಂದವರಿಗೆ, ಅಬಲರಿಗೆ, ನಿರಾಶ್ರಿತರಿಗೆ, ಅಶಕ್ತರಿಗೆ ಆಸರೆಯಾಗಿ ಸಂಘ ಸಂಸ್ಥೆಗಳು ನಿಲ್ಲಬೇಕು ಎಂದು ಖ್ಯಾತ ಲೇಖಕಿ ಹಾಗೂ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ, ಎಚ್ ಎಲ್ ಪುಷ್ಪ ಕರೆ ನೀಡಿದರು.
*ಜ್ಞಾನಸ್ಪಂದನ ಚಾರಿಟಬಲ್ ಟ್ರಸ್ಟ್* ನ ವತಿಯಿಂದ ದಿನಾಂಕ 13-12-2023ರ ಬುಧವಾರ ಮಧ್ಯಾಹ್ನ 2:30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಮತ್ತು 50ರ ಸುವರ್ಣ ಕರ್ನಾಟಕ ಸಂಭ್ರಮೋತ್ಸವದ ನಿಮಿತ್ತವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕರುನಾಡ ಸಿರಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನುಗ್ಗೆಹಳ್ಳಿ ಪಂಕಜ ರವರನ್ನು ಸ್ಮರಿಸಿಕೊಂಡಿದ್ದು ಶ್ಲಾಘನೀಯ.
ಹಗುರಾದ ಮನಸ್ಸು ಕೆಸರೆಲ್ಲದ ಮನ ಕೇಡಿಲ್ಲದ ನಡೆ ನುಡಿ ಬೇಕು ಮತ್ತು ಸಾಂತ್ವಾನ ಎನ್ನುವುದು ನೊಂದವರಿಗೆ ಪ್ರೀತಿಯಿಂದ ಕೊಡುವ ಸ್ಪಂದನೆ. ಕಣ್ಣೀರುವುದು ಕಣ್ಣೀರು ಹಾಕುವುದಕಲ್ಲ ಕಣ್ಣಿರುವುದು ಕನಸುಗಳನ್ನು ಕಾಣಲು ಆ ಕನಸುಗಳನ್ನು ನನಸು ಮಾಡಲು ನಿರಂತರ ಶ್ರಮ ಅವಶ್ಯಕ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಹೃದಯ ರೋಗ ತಜ್ಞೆ ಡಾ, ವಿಜಯಲಕ್ಷ್ಮಿ ಬಾಳೆಕುಂದ್ರಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಒಂದು ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ತನ್ನದೇ ಆದ ವೈಚಾರಿಕತೆಗಳಿದ್ದರೆ ಸೇವಾ ಮನೋಭಾವ ಇರುವಂತಹ ದಾನಿಗಳು ಈ ತರಹದ ಸಂಘ ಸಂಸ್ಥೆಗಳಿಗೆ ಜೊತೆಯಾಗಿ ನಿಲ್ಲುತ್ತಾರೆ ಎಂದು ಜನಪರ ಕಾಳಜಿಯುಳ್ಳ ಶ್ರೀಯುತ ಎಂ ಡಿ ಲಕ್ಷ್ಮಿ ನಾರಾಯಣ್ ರವರು ಸಲಹೆ ನೀಡಿದರು.
ಈ ದೇಶದಲ್ಲಿ ಮೊಟ್ಟ ಮೊದಲು ಬುದ್ಧ ಮಹಿಳೆಯರಿಗೆ ತನ್ನ ಸಂಘದಲ್ಲಿ ಸ್ಥಾನಮಾನ ಕೊಟ್ಟರು ನಂತರ ಶರಣರು ಮಹಿಳೆಯರಿಗೆ ವಿವಿಧ ಆಯಾಮಗಳಲ್ಲಿ ಸ್ವಾತಂತ್ರ ಕೊಟ್ಟರು ಕಾನೂನು ರೂಪಿಸುವಲ್ಲಿ ಶೇಕಡ 50ರಷ್ಟು ಭಾಗ ಮೀಸಲಾತಿ ಆಗಬೇಕು ಪ್ರಕೃತಿಯ ದೃಷ್ಟಿಯಲ್ಲಿ ಗಂಡು ಹೆಣ್ಣು ಎರಡು ಕಣ್ಣುಗಳು ಇದ್ದಂತೆ ಮಾತೃ ಸ್ಥಾನದಲ್ಲಿ ಸಂಘ ಸಂಸ್ಥೆಗಳು ತಮ್ಮ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಲಿ ಎಂಬುದಾಗಿ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಶ್ರೀ ಸಂಗಮೇಶ್ ಅವರು ತಿಳಿಸಿದರು.
ಇಂತಹ ಸಂಘ ಸಂಸ್ಥೆಗಳು ಉತ್ತಮ ಕಾರ್ಯವನ್ನು ನಿರ್ವಹಿಸಲು ನಿರ್ವಹಿಸಲು ನಮ್ಮಂತಹವರು ನೆರವಾದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಖ್ಯಾತ ವಕೀಲರಾದ ಶ್ರೀಯುತ ಮಂಜುನಾಥ್ ರವರು ತಿಳಿಸಿದರು.
ಇತಿಹಾಸ ಸಾಕ್ಷ ಚಿತ್ರ ನಿರ್ಮಾಪಕ ಆಗುಂಬೆ ನಟರಾಜ್ ರವರು ಕೃಷ್ಣಮೂರ್ತಿರವರು ದಿಲ್ಸೇ ದಿಲೀಪ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷೆಯಾದ ಶ್ರೀಮತಿ ಸಾವಿತ್ರಮ್ಮನವರು ಟ್ರಸ್ಟ್ ಉದ್ಘಾಟನೆಯಾಗಲು ಮತ್ತು ಈ ಸಮಾರಂಭಕ್ಕೆ ಸಹಾಯ ಸಹಕಾರ ನೀಡಿದವರಿಗೆ ಧನ್ಯತೆಯನ್ನು ಅರ್ಪಿಸಿ ನಿಮ್ಮೆಲ್ಲರ ಸಹಕಾರದಿಂದ ನಾನು ಸದೃಢ ಸಮಾಜವನ್ನು ನಿರ್ಮಾಣ ಮಾಡಲು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಾಧಕರುಗಳಾದ ಶ್ರೀ ರಾಮಣ್ಣ ಹಂಪರಗುಂದಿ, ಶ್ರೀ ಎ,ಪಿ ನಾಗರಾಜ್, ಶ್ರೀ ಆಗುಂಬೆ ನಟರಾಜ್, ಶ್ರೀ ಲಕ್ಷ್ಮಿಕಾಂತ್ ಜೋಳದ, ಶ್ರೀ ರವಿಕುಮಾರ್, ಶ್ರೀ ವೆಂಕಟೇಶ್, ಶ್ರೀ ಮನೀಶ್, ಶ್ರೀಮತಿ ಮಂಜುಳಾಕ್ಷಿ, ಶ್ರೀಮತಿ ಪರಮ್ಮ, ಕುಮಾರಿ ಸಾತ್ವಿಕ್ ರಾಜೇಶ್ ಮತ್ತು ನಾಗತಿಹಳ್ಳಿ ಮಂಜುನಾಥ್ ರವರುಗಳಿಗೆ *ಕರುನಾಡ ಸಿರಿ ಸೇವಾ* ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತರಾದ ಶ್ರೀ ರಾಮಾಚಾರ್ ರವರು, ವಸ್ತ್ರದಾತ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ರಾಮಸ್ವಾಮಿಯವರು, ಸಾಹಿತಿ ಮತ್ತು ಕಿರುತೆರೆ ಕಲಾವಿದರಾದ ಶ್ರೀ ರವಿ ಶಿಕಾರಿಪುರ ರವರು, ಡಾ, ಶೈನಿ ಗ್ರೇಸಿರವರು, ಮೈಕೋ ಶಿವು ನಿರ್ದೇಶಕರಾದ ಪಿಳ್ಳೆಗೌಡ್ರು, ಕಾಂಗ್ರೆಸ್ ಮುಖಂಡರಾದ ಬಸವರಾಜ ಕೊಕಟನೂರ ರವರು, ಶ್ರೀಧರ್, ಶ್ರೀಮತಿ ಲಲಿತಮ್ಮನವರು ಶ್ರೀಮತಿ ದಾನಮ್ಮನವರು, ಹುಬ್ಬಳ್ಳಿಯ ತಾರಾಮತಿಯವರು, ಹೊಸದುರ್ಗದ ಡಿ,ಟಿ ಚಂದ್ರಶೇಖರ್ ರವರು, ಪತ್ರಕರ್ತರಾದ ವಿನಯ್ ಕುಮಾರ್ ರವರು, ಪತ್ರಕರ್ತರು ಮಾಧ್ಯಮ ಮಿತ್ರರು ಮತ್ತು ಕನ್ನಡದ ಅಭಿಮಾನಿಗಳು ಗಣ್ಯ ಮಾನ್ಯರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿ ಸಮಾರಂಭಕ್ಕೆ ಶೋಭೆ ತಂದರು.
ರಾಗ ಸಂಯೋಜಕ ಸಂಗೀತ ನಿರ್ದೇಶಕ ಗಾಯಕ ಶ್ರೀ ಸುರೇಶ್ ರವರು ನಾಡಗೀತೆ ಹಾಡಿ ಎಲ್ಲರ ಮನ ಸೆಳೆದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಶಂಕರ್ ಹೂಗಾರ್ ಅವರು ತಮ್ಮ ಪ್ರಸ್ತಾವನೆ ಭಾಷಣ ಮಾಡಿದರು.
ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಟ್ರಸ್ಟಿ ಯಾದ ಶ್ರೀಮತಿ ಶೋಭಾ ಮುರುಳಿಕೃಷ್ಣರವರು ನಿರ್ವಹಿಸಿದರು.
ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಕಾಚಾಪುರ ರಂಗಪ್ಪನವರು ಸ್ವಾಗತಿಸಿದರು. ಆಗಮಿಸಿದ್ದ ಎಲ್ಲರಿಗೂ ಗೌರವ ಸಮರ್ಪಿಸುವುದರೊಂದಿಗೆ ವೇದಿಕೆ ಕಾರ್ಯಕ್ರಮವನ್ನು ಸಮಾರೋಪ ಗೊಳಿಸಲಾಯಿತು.
ನಂತರ ನೀಲಿ ಚಲನಚಿತ್ರ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಮಾರು ರಾತ್ರಿ 8:30ರ ವರೆಗೂ ನಡೆದಿದ್ದು ಎಲ್ಲರಿಗೂ ಮನೋಲಾಸ ನೀಡಿತ್ತು.
ವರದಿ – ಶ್ರೀಮತಿ ಶೋಭಾ ಮುರುಳಿ ಕೃಷ್ಣ
ಬೆಂಗಳೂರು