ನೀವು ಒಳ್ಳೆಯದನ್ನು ಮಾಡುತ್ತಿದ್ದೀರೋ ಅಥವಾ ಕೆಟ್ಟದ್ದೋ ಎಂದು ಜನರು ಹೇಗಾದರೂ ನಿಮ್ಮನ್ನು ನಿರ್ಣಯಿಸುತ್ತಾರೆ. 
ಸಿಟ್ಟು ಬರಲು ಹೆಚ್ಚು ಸಮಯ ಬೇಡ. ಅದು ಬೇಗನೆ ಬಂದು ಗರಿಷ್ಠ ಹಾನಿಯನ್ನು ಮಾಡುತ್ತದೆ. ಅದು ನಿಮ್ಮದಲ್ಲದ ತಪ್ಪಿಗೆ ನಿಮಗೆ ಶಿಕ್ಷೆ ನೀಡುತ್ತದೆ. ಆದ್ದರಿಂದ ಸಿಟ್ಟು ಬರದಂತೆ ಕಾಪಾಡುವುದರಲ್ಲಿ ನಿಮ್ಮ ಯಶಸ್ಸು ಅಡಗಿದೆ. ನಿರೀಕ್ಷೆಗಳು ನಿಜವಾಗಿಯೂ ನೋವುಂಟುಮಾಡುತ್ತವೆ. ಸಮಯವು ನಿಷ್ಠೆಯನ್ನು ಸಾಬೀತುಪಡಿಸುವುದಿಲ್ಲ, ಸಂದರ್ಭಗಳು ಸಾಬೀತುಪಡಿಸುತ್ತವೆ.

ಸಿಟ್ಟು ನಿಮ್ಮನ್ನು…
ಸಿಟ್ಟು ನಿಮ್ಮನ್ನು ನಿಯಂತ್ರಿಸುವ ಮುನ್ನ ನೀವು ಸಿಟ್ಟನ್ನು ನಿಯಂತ್ರಿಸಿ


ಸಿಟ್ಟು ನಿಮ್ಮನ್ನು ನಿಯಂತ್ರಿಸುವ ಮುನ್ನ ನೀವು ಸಿಟ್ಟನ್ನು ನಿಯಂತ್ರಿಸಿ


ಕೋಪ ಬರುವುದು ಸಹಜ. ನಮೆಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಕೋಪ ಬರುತ್ತದೆ. ಆದರೆ ಅದು ನಿಯಂತ್ರಣ ಮೀರಿ ಹೋದಾಗ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತು ಇತರರ ಜತೆಗೆ ನಿಮ್ಮ ಸಂಬಂಧಗಳಿಗೆ ಹಾನಿ ಮಾಡಲಿದೆ. ಕೋಪ ಹೃದಯಾಘಾತ, ಹೃದಯ ರೋಗ, ರಕ್ತದೊತ್ತಡ ಇತ್ಯಾದಿಯನ್ನು ಏರಿಸುತ್ತದೆ. ಕೋಪ ಹೊಂದಿರುವ ವ್ಯಕ್ತಿಗಳೂ ಸಾಮಾಜಿಕ ಸಂಪರ್ಕ ನಿಭಾಯಿಸುವಲ್ಲಿ ಅತೀ ದುರ್ಬಲರು. ಏಕೆಂದರೆ ಅವರು ಇತರರ ಉದ್ದೇಶಗಳನ್ನು ತಪ್ಪು ತಿಳಿದುಕೊಳ್ಳುತ್ತಾರೆ. ನೀವೂ ಹೀಗೆ ಸಹನೆಯನ್ನು ಕಳೆದುಕೊಳ್ಳುವವರಾಗಿದ್ದಲ್ಲಿ ನಿಮ್ಮೊಳಗಿನ ಕೋಪವನ್ನು ಅಡಗಿಸಲು ಇಲ್ಲಿ ಕೆಲವು ಸಲಹೆಗಳಿವೆ.

► ಇತರರಿಗೆ ಇಷ್ಟವಾಗದ ಅಥವಾ ಕೋಪ ತರಿಸುವ ವಿಷಯಗಳನ್ನು ಹೇಳುವ ಮೊದಲು ನಿಮ್ಮ ಯೋಚನೆಗಳನ್ನು ವಿಶ್ಲೇಷಿಸಿಕೊಳ್ಳಿ.

► ನಿಮ್ಮ ಕೋಪದ ಚಿಹ್ನೆಗಳನ್ನು ಗುರುತಿಸಿ. ನಿಮಗೆ ಕೋಪ ಬಂದಾಗ ನಿಮ್ಮ ಹೃದಯದ ಬಡಿತ ವೇಗವಾಗುತ್ತದೆ ಮತ್ತು ನೀವು ಬೇಗ ಬೇಗ ಉಸಿರಾಡಲಾರಂಭಿಸುತ್ತೀರಿ. ಈ ಸವಾಲನ್ನು ಮೀರಿ ಬೆಳೆಯಲು ಪ್ರಯತ್ನಿಸಿ.

► ಸ್ವತಃ ಸಮಾಧಾನಗೊಳ್ಳಲು ಪ್ರಯತ್ನಿಸಿ. ಅತಿಯಾಗಿ ಕೋಪವಿದ್ದರೆ 10ರವರೆಗೆ ಅಥವಾ ಹೆಚ್ಚು ಎಣಿಕೆ ಮಾಡಿ. ಅದರಿಂದ ಶಾಂತಗೊಳ್ಳಲು ನಿಮಗೆ ಸ್ವಲ್ಪ ಸಮಯ ಸಿಗಲಿದೆ. ಅದರಿಂದ ನಿಮ್ಮ ಕೋಪ ನಿಯಂತ್ರಣ ಮೀರುವುದರಿಂದಲೂ ತಪ್ಪಿಸಿಕೊಳ್ಳಬಹುದು.

► ಒಮ್ಮೆ ಶಾಂತಗೊಂಡ ಮೇಲೆ ನಿಮ್ಮ ಕೋಪವನ್ನು ಸಕಾರಾತ್ಮಕ ಸಂಘರ್ಷಾತ್ಮಕವಲ್ಲದ ದಾರಿಯಲ್ಲಿ ವ್ಯಕ್ತಪಡಿಸಿ. ಇದರಿಂದ ನೀವು ನಿಮ್ಮ ಹತಾಶೆಯನ್ನು ಇತರರಿಗೆ ನೋವು ಮಾಡದೆ ಸ್ಪಷ್ಟವಾಗಿ ವ್ಯಕ್ತಪಡಿಸಬಹುದು.

► ನಿಧಾನವಾಗಿ ಉಸಿರಾಡಿ ಮತ್ತು ರಿಲ್ಯಾಕ್ಸ್ ಮಾಡಿ. ಕೋಪವನ್ನು ದೂರ ಮಾಡಲು 3-4 ಬಾರಿ ದೀರ್ಘವಾಗಿ ಉಸಿರಾಡಿ. ಹೀಗೆ ಉಸಿರಾಡುತ್ತಲೇ 3ರವರೆಗೆ ಎಣಿಸಿ. 3 ಸೆಕೆಂಡುಗಳ ಕಾಲ ಉಸಿರಾಟ ನಿಲ್ಲಿಸಿ ಮತ್ತು ಮರಳಿ 3ರವರೆಗೆ ಎಣಿಸಿ.

► ಪ್ರತೀ ರಾತ್ರಿ ಸಾಕಷ್ಟು ನಿದ್ದೆ ಮಾಡಿ. ನಿದ್ದೆಯಿಂದ ದೂರವಾಗುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬರಬಹುದು. ಒಂದು ಉತ್ತಮ ರಾತ್ರಿ ನಿದ್ದೆಯು ನಿಮ್ಮ ಮೂಡನ್ನು ಸುಧಾರಿಸಬಹುದು ಮತ್ತು ಕೋಪವನ್ನು ಕಡಿಮೆ ಮಾಡಬಹುದು

ಕೃಪೆ. ಮಾಹಿತಿ ಸಂಗ್ರಹ.

Related Posts