ಜಾತಿ, ಧರ್ಮ ಯಾವುದೇ ಆಗಿರಲಿ, ವಯಸ್ಸು (Age) ಎಷ್ಟೇ ಆಗಿರಲಿ ಮದುವೆ ಆಗದ ಮಗಳು ತನ್ನ ತಂದೆ-ತಾಯಿಯಿಂದ ಜೀವನಾಂಶ ಪಡೆಯುವ ಹಕ್ಕು ಹೊಂದಿದ್ದಾಳೆ ಎಂದು ಅಲಹಾಬಾದ್ ಹೈಕೋರ್ಟ್ (High court) ತಿಳಿಸಿದೆ.ಇನ್ನೂ ನೈಮುಲ್ಲಾ ಶೇಖ್ ಎಂಬುವವರ ಮೂವರು ಹೆಣ್ಣುಮಕ್ಕಳು ಈ ಕಾಯ್ದೆಯ ಅಡಿಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ತಂದೆ ಮತ್ತು ಮಲತಾಯಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಮಧ್ಯಂತರ ಜೀವನಾಂಶವನ್ನು (Intermittent sustenance) ಮೂವರು ಹೆಣ್ಣುಮಕ್ಕಳಿಗೆ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯವು ಆದೇಶಿಸಿತ್ತು.ಈ ಆದೇಶವನ್ನು ಶೇಖ್ ಅವರು ಪ್ರಶ್ನಿಸಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೆಣ್ಣುಮಕ್ಕಳಿಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ, ಅವರು ಹಣಕಾಸಿನ ವಿಚಾರವಾಗಿ (Financial matters) ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದರು.
ಆದರೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹೆಣ್ಣುಮಕ್ಕಳು ಜೀವನಾಂಶ ಕೇಳುವಂತೆ ಇಲ್ಲ ಎಂಬ ವಾದವನ್ನು (Argument) ಒಪ್ಪಲು ಆಗದು ಎಂದು ಜನವರಿ 10ರಂದು ನೀಡಿರುವ ಆದೇಶದಲ್ಲಿ ಹೈಕೋರ್ಟಹೇಳಿದೆ.
ಮದುವೆಯಾಗದ ಹೆಣ್ಣುಮಗಳು ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ, ಆಕೆಯ ವಯಸ್ಸು ಎಷ್ಟೇ ಆಗಿರಲಿ, ಆಕೆಗೆ ಜೀವನಾಂಶ ಪಡೆಯುವ ಹಕ್ಕು ಇದೆ ಎಂಬುದರಲ್ಲಿ ಅನುಮಾನವೇ ಇಲ್ಲ.