ಬೆಂಗಳೂರು ಭಾವನಾತ್ಮಕ ಸಂಬಂಧದ ಬ್ರಾಂಡ್ ಆಗಿದೆ. ನಮ್ಮ ನಗರ ಅನೇಕ ಸಮಸ್ಯೆಗಳನ್ನು ಹೊಂದಿದ್ದರೂ, ತನ್ನ ಜ್ಞಾನ ಹಾಗೂ ಉದ್ಯಮ ಕೌಶಲ್ಯಕ್ಕೆ ಹೆಸರುವಾಸಿಯಾಗಿದೆ. ನಮ್ಮ ನಗರ ಎಲ್ಲರನ್ನೂ ತನ್ನವರೆಂದು ಗೊಳ್ಳುವ ಅವಕಾಶ ಕಲ್ಪಸುತ್ತದೆ.

ಆಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್ ಗಳ ಜೊತೆ ವೈರ್ ಲೆಸ್ ಸಂಪರ್ಕ, ಋತುಸ್ರಾವ ಮಹಿಳೆಯರ ಅನುಕೂಲಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ, ಸಮಾರಂಭಗಳಲ್ಲಿ ಬಳಸಿದ ಹೂವು ಮತ್ತು ಆಹಾರ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಜಾರಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾ‌ರ್ ಅವರು ತಿಳಿಸಿದರು.

ನಾನಿಲ್ಲಿ ಭಾಷಣ ಮಾಡುವುದಕ್ಕಿಂತ ಮಕ್ಕಳ ಆಲೋಚನೆ ಆಲಿಸಿ, ಅದನ್ನು ಜಾರಿಗೆ ತರಲು ಬಂದಿದ್ದೇನೆ. ಬೆಂಗಳೂರು ಯೋಜಿತ ನಗರವಲ್ಲ. ಈ ನಗರಕ್ಕೆ ದೂರದೃಷ್ಟಿ ಆಲೋಚನೆಗಳು, ನೀತಿಗಳು ಬಹಳ ಮುಖ್ಯ. ಸಂಚಾರ ದಟ್ಟಣೆ, ಕಸ ವಿಲೇವಾರಿ ಪ್ರಮುಖ ಸಮಸ್ಯೆಗಳಾಗಿವೆ. ಇವಕ್ಕೆ ಮಕ್ಕಳು ತಮ್ಮ ಆಲೋಚನೆಗಳ ಮೂಲಕ ಪರಿಹಾರ ನೀಡಲು ಮುಂದಾಗಿದ್ದಾರೆ.

ಬೆಂಗಳೂರಿನ ನಿಜವಾದ ಸಂಪತ್ತು, ಶಕ್ತಿ ಎಂದರೆ ಇಲ್ಲಿನ ಹವಾಮಾನ, ಸಂಸ್ಕೃತಿ ಹಾಗೂ ಮಾನವ ಸಂಪನ್ಮೂಲ. ಬೆಂಗಳೂರಿನ ಹಸಿರು ರಕ್ಷಣೆಗೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಲಾ ಮಕ್ಕಳಿಂದ ಗಿಡ ನೆಟ್ಟು, ಬೆಳೆಸುವ ಜವಾಬ್ದಾರಿ ನೀಡಲಾಗುವುದು. ಇದಕ್ಕಾಗಿ ಆಪ್ ಸಿದ್ಧಪಡಿಸಿದ್ದು ಮಕ್ಕಳು ತಮ್ಮ ಗಿಡದ ಬೆಳವಣಿಗೆ ಮಾಹಿತಿಯನ್ನು ಅಪ್ಲೋಡ್ ಮಾಡಬಹುದಾಗಿದೆ. ನಗರದ ಉದ್ಯಾನವನಗಳ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ನಾಗರೀಕರಿಗೆ ವಹಿಸಲು ನಿರ್ಧರಿಸಿದ್ದೇವೆ.



ಬ್ರಾಂಡ್; ಐಶ್ವರ್ಯ ಡಿಕೆಎಸ್‌ ಹೆಗ್ಡೆ:

ನಗರದ ಸಮಸ್ಯೆ, ಸವಾಲುಗಳ ಬಗ್ಗೆ ಮಾತ್ರ ಚರ್ಚೆ ಮಾತ್ರವಲ್ಲದೇ ಸಕಾರಾತ್ಮಕ ಬದಲಾವಣೆಗೆ ಯುವಕರ ಆಲೋಚನೆ, ಪರಿಕಲ್ಪನೆಗಳ ಅನ್ವೇಷಣೆ ಉದ್ದೇಶದೊಂದಿಗೆ ನಾವಿಂದು ಸೇರಿದ್ದೇವೆ.

ಬೆಂಗಳೂರು ನಮ್ಮ ಪಾಲಿಗೆ ಭಾವನಾತ್ಮಕ ಸಂಬಂಧದ ಬ್ರಾಂಡ್ ಆಗಿದೆ. ನಮ್ಮ ನಗರ ಅನೇಕ ಸಮಸ್ಯೆಗಳನ್ನು ಹೊಂದಿದ್ದರೂ, ತನ್ನ ಜ್ಞಾನ ಹಾಗೂ ಉದ್ಯಮ ಕೌಶಲ್ಯಕ್ಕೆ ಹೆಸರುವಾಸಿಯಾಗಿದೆ. ನಮ್ಮ ನಗರ ಎಲ್ಲರನ್ನೂ ತನ್ನವರೆಂದು ಗೊಳ್ಳುವ ಅವಕಾಶ ಲ್ಪಸುತ್ತದೆ.

Related Posts