ಕೆಲವರು ಬಂದು ಮುಹೂರ್ತ ನೋಡಿ ಕೊಟ್ಟು ಬಿಡಿ ಅನ್ನುತಾರೆ, ಅವರ ಪ್ರಕಾರ, ಇದು ಬಹಳ ಸುಲಭದ ಕೆಲಸ, ದಯವಿಟ್ಟು ಇದು ಅತ್ಯಂತ ಸುಲಭದ ವಿಷಯ ಎಂದು ಭಾವಿಸದಿರಿ
ಕಲಿತ ಜ್ಯೋತಿಷಿಗಳಿಗೆ ಗೌರವ ನೀಡಿ
ಇದು ಫಲ ಜ್ಯೋತಿಷದ ಭಾಗವಲ್ಲ
೧. ಮೊದಲು ಉತ್ತರಾಯಣ ಮತ್ತು ದಕ್ಷಿಣಾಯನ ನೋಡಬೇಕು
೨. ಉಕ್ತ ಮಾಸಗಳನ್ನು ನೋಡಬೇಕು – ಮಾಘಾದಿ
೩. ಕೆಲವು ಕಾರ್ಯಕ್ರಮಗಳಿಗೆ ಋತು ಯಾವುದು ನೋಡಬೇಕು
೪. ಉಕ್ತ ತಿಥಿ ಇರಬೇಕು, ರಿಕ್ತ, ಪಕ್ಷಚ್ಛಿದ್ರ, ಪರ್ವ ಇರಬಾರದು
೫. ಉಕ್ತ ನಕ್ಷತ್ರ ನೋಡಬೇಕು
೬. ಉಕ್ತನಕ್ಷತ್ರದ ದಿನ ಯಜಮಾನನಿಗೆ ತಾರಾ ಬಲ ಇದೆಯೇ ನೋಡಬೇಕು
೭. ಉಕ್ತವಾರ ನೋಡಬೇಕು
೮. ಉಕ್ತ ಲಗ್ನ ನೋಡಬೇಕು
೯. ಲಗ್ನಕ್ಕೆ ಚಂದ್ರ, ಸೂರ್ಯ, ರಾಹು, ಕೇತುಗಳ ಸಂಪರ್ಕ ಅಥವಾ ದೃಷ್ಟಿ ಇರಬಾರದು
೧೦. ಲಗ್ನಕ್ಕೆ ಸಪ್ತಮ ಮತ್ತು ಅಷ್ಟಮ ಸ್ಥಾನ ಶುದ್ಧವಿರಬೇಕು
೧೧. ಕೆಲವು ಲಗ್ನಗಳಿಗೆ ಆರಂಭ, ಕೆಲವಕ್ಕೆ ಮಧ್ಯಭಾಗ ಮತ್ತು ಕೆಲವಕ್ಕೆ ಅಂತ್ಯ ಭಾಗ ಅರ್ಧಗಳಿಗೆ ಬಿಡಬೇಕು ಇದರ ಜ್ಞಾನವಿರಬೇಕು
೧೨. ಲಗ್ನದ ಬಲಾಬಲ ನಿರ್ಣಯ ಗೊತ್ತಿರಬೇಕು
೧೩. ಚರ, ಸ್ಥಿರ, ದ್ವಿಸ್ವಭಾವಕ್ಕೆ ಅನುಗುಣವಾಗಿ ಶುಭಕಾರ್ಯದ ಅರಿವಿರಬೇಕು. ಕೆಲವಕ್ಕೆ ಕೀಟ ಲಗ್ನ ಕೂಡದು
೧೪. ಲಗ್ನ ನಿರ್ಣಯಕ್ಕೆ ರಾಹುಕಾಲ, ಗುಳಿಕ ಕಾಲ, ಯಮಗಂಡಕ ಕಾಲ, ಅರ್ಧಪ್ರಹರ ಕಾಲಗಳ ನಿರ್ಣಯ ತಿಳಿದಿದ್ದು, ಲಗ್ನ ಕಾಲದಲ್ಲಿ ಈ ಕಾಲಗಳು ಇರಬಾರದು.
೧೫. ಲಗ್ನಕ್ಕೆ ವ್ಯತೀಪಾತ, ಕುಹೂಯೋಗ ಮುಂತಾದ ಬಾಧೆ ಇಲ್ಲದೆ ಇರುವುದನ್ನು ನೋಡಬೇಕು
೧೬. ಮುಹೂರ್ತ ವು ಅಗ್ನಿ, ರಾಜ, ಮೃತ್ಯು ಮುಂತಾದ ಪಂಚಕಗಳಿಂದ ಕೂಡಿರಬಾರದು
೧೭. ಗುರು, ಶುಕ್ರರು ಅಸ್ತರಾಗಿರಬಾರದು. ಅದರ ಜ್ಞಾನವಿರಬೇಕು
೧೮. ಚಂದ್ರಬಲ ನೋಡಬೇಕು
೧೯. ಲಗ್ನ ಸಂಧಿ, ತಿಥಿ ಸಂಧಿಕಾಲ ಇರಬಾರದು
೨೦. ದೇವರ ಕೃಪೆಯಿಂದ ಸಾಧ್ಯವಾಗುತ್ತದೆ ಎನ್ನುವ ಪರಮ ವಿಶ್ವಾಸ ವಿರಬೇಕು.
೨೧. ಅನಿವಾರ್ಯದಲ್ಲಿ ಶಾಂತಿ ಸೂಚಿಸುವ ಜ್ಞಾನವಿರಬೇಕು.
ಇದು
ಸುಲಭ ಸಾಧ್ಯವೇ ಗಮನಿಸಿ
ಸಮಯವಿಲ್ಲದೆ
ಇದು ಸಾಧ್ಯವಾಗುವುದಿಲ್ಲ
#KrishnaGG